ಭಾರ್ಗವಿಗೆ ಶುರುವಾಯ್ತು ಅಕ್ಕನ ಆತ್ಮದ ಕಾಟ! ನಡುರಾತ್ರಿಯಲಿ ವಿಲನ್​ ಮೈಯೊಳಗೆ ಪ್ರೇತಾತ್ಮ...

Published : Jul 23, 2024, 05:06 PM IST
ಭಾರ್ಗವಿಗೆ ಶುರುವಾಯ್ತು ಅಕ್ಕನ ಆತ್ಮದ ಕಾಟ! ನಡುರಾತ್ರಿಯಲಿ ವಿಲನ್​ ಮೈಯೊಳಗೆ ಪ್ರೇತಾತ್ಮ...

ಸಾರಾಂಶ

ಭಾರ್ಗವಿಗೆ ಶುರುವಾಯ್ತು ಅಕ್ಕನ ಆತ್ಮದ ಕಾಟ! ನಡುರಾತ್ರಿಯಲಿ ವಿಲನ್​ ಮೈಯೊಳಗೆ ಪ್ರೇತಾತ್ಮ... ಸೀತಾರಾಮದಲ್ಲಿ ಇದೇನಿದು ಟ್ವಿಸ್ಟ್​?  

ಸೀತಾರಾಮ ಸೀರಿಯಲ್​ನಲ್ಲಿ ಇತ್ತ ಸೀತಾ ಮತ್ತು ರಾಮ ಒಂದಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರೆ, ಅತ್ತ ಭಾರ್ಗವಿಯ ಪುತ್ರ ಅನಿಕೇತ್​ ಸಿಹಿಯ ಹಿಂದೆ ಬಿದ್ದಿದ್ದಾನೆ. ಹೇಗಾದರೂ ಮಾಡಿ ಆಕೆಯ ಪ್ರಾಣಕ್ಕೆ ಸಂಚಕಾರ ತರುತ್ತಲೇ ಇದ್ದಾರೆ. ಅದೇ ಇನ್ನೊಂದೆಡೆ ಭಾರ್ಗವಿಯ ತಂತ್ರಗಳೆಲ್ಲವೂ ಫೇಲ್​ ಆಗುತ್ತಿದೆ. ಸೀತಾ ರಾಮರನ್ನು ಬೇರ್ಪಡಿಸಬೇಕು ಎಂದು  ಆಕೆ ಪಟ್ಟ ಶ್ರಮ ಎಲ್ಲವೂ ವ್ಯರ್ಥವಾಗಿವೆ. ಈಗ ಅವಳ ಟಾರ್ಗೆಟ್​ ಸಿಹಿ. ಅಮ್ಮನ ತಕ್ಕ ಮಗನಾಗಿದ್ದಾನೆ ಅನಿಕೇತ್​. ಇವೆಲ್ಲವುಗಳ ನಡುವೆಯೇ ಆಸ್ತಿಗಾಗಿ ಅಕ್ಕನನ್ನೇ ಕೊಲೆ ಮಾಡಿಸಿದ್ದ ಭಾರ್ಗವಿಗೆ ಅಕ್ಕ ವಾಣಿಯ ಆತ್ಮ ಕಾಡುತ್ತಿದೆ. ಇದಕ್ಕೂ ಮುನ್ನವೇ ಹಲವಾರು ಬಾರಿ ಸೀತಾ ಈ ಮನೆಗೆ ಸೊಸೆಯಾಗಿ ಬರುತ್ತಾಳೆ, ನಿನ್ನನ್ನು ಸರ್ವನಾಶ ಮಾಡುತ್ತಾಳೆ ಎಂದಿದ್ದಳು. 

ಇದೇ ಕಾರಣಕ್ಕೆ ಸೀತಾಳನ್ನು ಸೊಸೆಯಾಗಿ ಮನೆತುಂಬಿಸಿಕೊಳ್ಳಬಾರದು ಎಂದು ಭಾರ್ಗವಿ ಇನ್ನಿಲ್ಲದ ಶ್ರಮ ಪಟ್ಟಿದ್ದಳು. ಆದರೆ ಎಲ್ಲವೂ ವ್ಯರ್ಥವಾಯಿತು. ಆದರೆ ವಿಚಿತ್ರ ಎಂದರೆ ಈಕೆ ವಿಲನ್​ ಎನ್ನುವುದು ಇನ್ನೂ ಯಾರಿಗೂ ತಿಳಿದುಬಂದಿಲ್ಲ. ಇದೀಗ ಹೇಗಾದರೂ ಮಾಡಿ ರಾಮ್​ ಮತ್ತು ಸೀತಾರನ್ನು ಮನೆ ಬಿಟ್ಟು ಓಡಿಸುವ ಪ್ಲ್ಯಾನ್ ಮಾಡಿದ್ದಾಳೆ. ಅದಕ್ಕಾಗಿ ಗುಟ್ಟಾಗಿ ರಾಮ್​ನಿಂದ ಯಾವುದೋ ದಾಖಲೆಗೆ ಸಹಿ ಹಾಕಿಸಿಕೊಂಡಿದ್ದಾಳೆ. ಅದನ್ನು ಓದಿ ಸಹಿ ಮಾಡು ಎಂದು ಸೀತಾ ಹೇಳಿದರೂ ಚಿಕ್ಕಮ್ಮನ ಮೇಲಿನ ಭರವಸೆಯಿಂದಾಗಿ ರಾಮ್​ ನೋಡದೇ ಸಹಿ ಹಾಕಿದ್ದಾನೆ.

ಪ್ರೇಮಲೋಕ ಸೃಷ್ಟಿಸಿದ ಸೀತಾರಾಮ ಸಿಹಿ- ಅನಿಕೇತ್​: ಪುಟಾಣಿಗಳಿಂದ ಇಂಥ ರೀಲ್ಸಾ? ನೆಟ್ಟಿಗರ ಅಸಮಾಧಾನ

ಇಷ್ಟಾಗುತ್ತಿದ್ದಂತೆಯೇ ರಾತ್ರಿ ಮತ್ತೆ ವಾಣಿ ಭಾರ್ಗವಿಗೆ ಕಾಣಿಸಿಕೊಂಡಿದ್ದಾಳೆ. ನಿನ್ನ ಆಟ ಮುಗಿಯಲಿದೆ ಎಂದಿದ್ದಾಳೆ. ಈ ಧ್ವನಿ ಕೇಳುತ್ತಲೇ ಭಾರ್ಗವಿ ಕಂಗಾಲಾಗಿದ್ದಾಳೆ. ಟೆರೇಸ್​ ಮೇಲೆ ಬಂದು ನಿಂತು ಮೈಮೇಲೆ ಪ್ರೇತಾತ್ಮ ಬಂದ ರೀತಿಯ ಆಡುತ್ತಿದ್ದಾಳೆ. ಆಕೆಯ ಗಂಡನಿಗೆ ಭಾರ್ಗವಿಯನ್ನು ಕಂಡು ಹೆದರಿಕೆ ಆಗಿದೆ. ಇದೆನೇ ಇದು, ಬೆಳಿಗ್ಗೆ ಎಲ್ಲರನ್ನೂ ಆಟವಾಡಿಸ್ತಿ, ರಾತ್ರಿಯಾದ್ರೆ ನೀನೇ ಹೀಗೆ ಆಟವಾಡುತ್ತಿಯಲ್ಲ ಎಂದು ತಮಾಷೆ ಮಾಡಿದ್ದಾನೆ. ಆದರೆ ಮೈಮೇಲೆ ದೆವ್ವ ಬಂದವರಂತೆ ಭಾರ್ಗವಿ ನಗುತ್ತಿದ್ದಾಳೆ. ಯಾರೂ ತನಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾಳೆ. ಮುಂದೇನಾಗುತ್ತದೆಯೋ ನೋಡಬೇಕಿದೆ. 

ಇನ್ನು ಇನ್ನೊಂದೆಡೆ, ಸಿಹಿ ಅನಿಕೇತ್​ನ ಫ್ರೆಂಡ್​ಷಿಪ್​ ಮಾಡಿಕೊಳ್ಳಲು ಹವಣಿಸುತ್ತಿದ್ದಾಳೆ. ಅದರೆ ಅನಿ ಮಾತ್ರ ಸಿಹಿ ಬರುವ ಜಾಗದಲ್ಲಿ ಗೋಲಿ ಇಟ್ಟು ಅವಳನ್ನು ಬೀಳಿಸಿದ್ದಾನೆ. ಈಗ ಇಬ್ಬರೂ ಸ್ನೇಹಿತರಾಗಬೇಕು ಎಂದರೆ ನಾನು ಹೇಳಿದ ಹಾಗೆ ನೀನು ಮಾಡಬೇಕು ಎಂದಿದ್ದಾನೆ. ಅದಕ್ಕೆ ಸಿಹಿ ಒಪ್ಪಿದ್ದಾಳೆ. ಬಾಲಕ ಟೆರೇಸ್​ ಮೇಲೆ ಏಣಿ ಮೂಲಕ ಕರೆದುಕೊಂಡು ಹೋಗಿ ತಾನು ಕೆಳಕ್ಕೆ ಇಳಿದು, ಏಣಿಯನ್ನು ಅಲ್ಲಿಂದ ತೆಗೆದಿದ್ದಾನೆ. ಸಿಹಿ ಕೆಳಗೆ ಬರಲಾಗದೇ ಒದ್ದಾಡಿ ಕೊನೆಗೆ ಅವಳನ್ನು ಇಳಿಸಲಾಯಿತು. ಆದರೂ ಆಕೆ ಅನಿಯ ಹೆಸರನ್ನು ಬಹಿರಂಗಪಡಿಸಲಿಲ್ಲ. 
 ಅವಾರ್ಡ್​ ಸ್ವೀಕರಿಸುತ್ತಲೇ ನಟಿ ಸೋನಿಯಾಗೆ ಹೃದಯಾಘಾತ! ಆಸ್ಪತ್ರೆಯಲ್ಲಿ ನರಳುವ ವಿಡಿಯೋ ವೈರಲ್​
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?
Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ