ಶ್ರೇಷ್ಠಾ ಮತ್ತು ತಾಂಡವ್ ಲಗ್ನಪತ್ರಿಕೆ ಭಾಗ್ಯಳ ಬ್ಯಾಗ್ನಲ್ಲಿ ಭದ್ರವಾಗಿದೆ. ಮೂರು ದಿನಗಳಲ್ಲಿ ತಾಂಡವ್-ಭಾಗ್ಯಳ ದಾಂಪತ್ಯದಲ್ಲಿ ರೋಚಕ ಟ್ವಿಸ್ಟ್ ಸಿಗಲಿದೆ. ಏನದು?
ತಾಂಡವ್ ಮತ್ತು ಶ್ರೇಷ್ಠಾ ಮದುವೆಗೆ ರೆಡಿಯಾಗಿದ್ದಾರೆ. ತಾಂಡವ್ಗೆ ಗೊತ್ತಿಲ್ಲದೇ ಶ್ರೇಷ್ಠಾ ಮದುವೆ ಪತ್ರವನ್ನೂ ರೆಡಿ ಮಾಡಿಸಿದ್ದಾಳೆ. ಅದರ ಮೇಲೆ ಫೋಟೋ ಕೂಡ ಹಾಕಿಸಿದ್ದಾಳೆ. ಆದರೆ ಅದು ಭಾಗ್ಯಳ ಕೈಸೇರಿದೆ. ಆದರೆ ಭಾಗ್ಯ ಅದನ್ನು ಗಮನಿಸಿಯೇ ಇಲ್ಲ, ಇನ್ವಿಟೇಷನ್ ಕಾರ್ಡ್ ಅನ್ನು ತನ್ನ ಬ್ಯಾಗ್ನಲ್ಲಿ ಹಾಕಿಕೊಂಡಿದ್ದಾಳೆ. ಆದರೆ ಅದನ್ನು ಅವಳು ಗಮನಿಸಿಲ್ಲ. ಅದರ ಬದಲು ಭಾಗ್ಯಳಿಗೆ ಇನ್ವಿಟೇಷನ್ ಕಾರ್ಡ್ ಸಿಕ್ಕಿರುವುದು ತಾಂಡವ್ ಮತ್ತು ಶ್ರೇಷ್ಠಾಳಿಗೆ ತಿಳಿದಿದೆ. ಆ ಕಾರ್ಡ್ ಅನ್ನು ಭಾಗ್ಯ ಯಾವುದೇ ಕಾರಣಕ್ಕೂ ಓಪನ್ ಮಾಡಬಾರದು ಎಂದು ತಾಂಡವ್ ಅದನ್ನು ಬ್ಯಾಗ್ನಿಂದ ತೆಗೆಯಲು ಪ್ಲ್ಯಾನ್ ರೂಪಿಸುತ್ತಿದ್ದಾನೆ.
ರಾತ್ರಿ ಎಲ್ಲರೂ ಮಲಗಿದ ಸಮಯದಲ್ಲಿ ಭಾಗ್ಯಳ ರೂಮ್ಗೆ ತಾಂಡವ್ ಬಂದಿದ್ದಾನೆ. ಆದರೆ ಗುಂಡನಿಗೆ ಶಬ್ದವಾಗಿ ಕಳ್ಳ ಕಳ್ಳ ಎಂದಿದ್ದಾನೆ. ತಾಂಡವ್ ಹೆದರಿ ಅಡಗಿಕೊಂಡಿದ್ದಾನೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಮೂರು ದಿನಗಳ ಮಹಾ ತಿರುವಿನ ಸಂಚಿಕೆ ಎಂದು ಇದನ್ನು ಹೇಳಲಾಗಿದೆ. ಇನ್ವಿಟೇಷನ್ ಕಾರ್ಡ್ ತೆಗೆಯುವಲ್ಲಿ ತಾಂಡವ್ ಸಕ್ಸಸ್ ಆಗ್ತಾನಾ ಅಥವಾ ಕಳ್ಳ ಸಿಕ್ಕಿ ಬೀಳ್ತಾನಾ ಎನ್ನುವುದು ಮುಂದಿರುವ ಪ್ರಶ್ನೆ. ಮೂರು ದಿನಗಳ ಮಹಾ ರೋಚಕ ಟ್ವಿಸ್ಟ್ ಎನ್ನುವ ಶೀರ್ಷಿಕೆ ಕೊಟ್ಟು ಇದರ ಪ್ರೊಮೋ ರಿಲೀಸ್ ಮಾಡಲಾಗಿದೆ.
ಅಂತೂ ಕರ್ನಾಟಕದ ಹಣೆಬರಹ ಇಲ್ಲಿ ತೋರಿಸ್ತಾ ಇದ್ದೀರಿ ಬಿಡಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್...
ಇನ್ನು, ಭಾಗ್ಯಲಕ್ಷ್ಮಿ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಭಾಗ್ಯ ಹಲವಾರು ಅಡೆತಡೆಗಳನ್ನು ಮೀರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾಳೆ. ಆದರೆ ನಂತರ ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಮಗಳು ತನ್ವಿ ನಿನ್ನ ಅಡುಗೆ ಸಕತ್ ರುಚಿಯಾಗಿರುತ್ತದೆ ಎಂದಿದ್ದಾಳೆ. ಹಾಗಿದ್ದರೆ ನಾನು ಯಾವುದಾದರೂ ಹೋಟೆಲ್ನಲ್ಲಿ ಅಡುಗೆಗೆ ಸೇರಿಕೊಳ್ಳಬೇಕು ಎಂದು ಭಾಗ್ಯ ಮನಸ್ಸು ಮಾಡುತ್ತಾಳೆ. ಧೈರ್ಯ ಮಾಡಿ ಒಂದು ಹೋಟೆಲ್ಗೆ ಹೋದಾಗ ಅವಳನ್ನು ಹೋಟೆಲ್ ಮಾಲೀಕ ಕೆಲಸ ಇಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಸಾಲದು ಎನ್ನುವುದಕ್ಕೆ ಆಕೆಗೆ ಅಲ್ಲಿ ಒಂದಿಷ್ಟು ಅವಮರ್ಯಾದೆಯೂ ಆಗುತ್ತದೆ.
ಕೊನೆಗೂ ಯಶಸ್ವಿಯಾಗಿ ಸ್ಟಾರ್ ಹೋಟೆಲ್ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಬ್ರೋಕರ್ ಯಾವುದೋ ಹೋಟೆಲ್ಗೆ ಹೋಗಲು ಹೇಳಿದ್ದರೆ ಭಾಗ್ಯ ಸ್ಟಾರ್ ಹೋಟೆಲ್ಗೆ ವಿಳಾಸ ತಪ್ಪಿ ಹೋಗಿದ್ದಳು. ಅಲ್ಲಿ ಇಂಗ್ಲಿಷ್ನಲ್ಲಿ ಸಂದರ್ಶನ ಮಾಡಿದರೂ ಹಾಗೋ ಹೀಗೋ ಅಲ್ಪ ಸ್ವಲ್ಪ ತಿಳಿವಳಿಕೆಯಲ್ಲಿ ಕನ್ನಡದಲ್ಲಿಯೇ ಉತ್ತರ ಕೊಟ್ಟು ಅಂತೂ ಸಂದರ್ಶನ ಗೆದ್ದಿದ್ದಾಳೆ. ಇತ್ತ ಅತ್ತೆ ಕುಸುಮಾಗೂ ಹೋಟೆಲ್ನಲ್ಲಿ ಉದ್ಯೋಗ ಸಿಕ್ಕಿದೆ. ಆದರೆ ಅತ್ತೆ- ಸೊಸೆ ಇಬ್ಬರೂ ತಮಗೆ ಕೆಲಸ ಸಿಕ್ಕಿರುವ ವಿಷಯವನ್ನು ಪರಸ್ಪರ ಹೇಳಿಕೊಂಡಿಲ್ಲ. ಇನ್ನು ದಾಂಪತ್ಯದ ವಿಷಯಕ್ಕೆ ಬರುವುದಾದರೆ ಇನ್ನೇನಾಗುತ್ತದೆಯೋ ಕಾದು ನೋಡಬೇಕಿದೆ.
ಐಶ್ವರ್ಯ- ಕತ್ರಿನಾ ಇಬ್ಬರಲ್ಲಿ ಸುಂದರಿಯರು ಯಾರು ಎಂದಾಗ ಮಾಜಿ ಲವರ್ ಸಲ್ಮಾನ್ ಖಾನ್ ಹೇಳಿದ್ದೇನು?