ಅಶ್ಲೀಲ ವಿಡಿಯೋ ವೈರಲ್ ಕೇಸ್ ಬೆನ್ನಲ್ಲಿಯೇ ನಟಿ ಜ್ಯೋತಿ ರೈ, ಆ ವಿಡಿಯೋ ವೈರಲ್ ಮಾಡಿದ ವ್ಯಕ್ತಿಗಳಿಗೆ ನೇರಾ ನೇರಾ ಸವಾಲ್ ಹಾಕುವಂಥ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು (ಮೇ.10): ಕನ್ನಡದ ಪ್ರಖ್ಯಾತ ಸೀರಿಯಲ್ ನಟಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಜ್ಯೋತಿ ರೈ ಇನ್ನಷ್ಟು ಆಕ್ಟೀವ್ ಆಗಿದ್ದಾರೆ. ಅಕ್ಷಯ ತೃತೀಯ ದಿನದಂದು ಕೆಲವೊಂದು ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ತಮ್ಮ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವ್ಯಕ್ತಿಗಳಿಗೆ ನೇರಾ ನೇರ ಸವಾಲ್ ಎನ್ನುವಂತೆ ಮಾತುಗಳನ್ನು ಬರೆದುಕೊಂಡಿದ್ದಾರೆ. 'ಈ ವೀಡಿಯೊವನ್ನು ವೈರಲ್ ಮಾಡುವ ಧೈರ್ಯ ನಿಮ್ಮಲ್ಲಿ ಇದ್ಯಾ? ಇದು ನಿಜವಾದ ವಿಡಿಯೋ' ಎಂದು ಅವರು ಬರೆದುಕೊಂಡಿದ್ದಾರೆ. ಇನ್ನು ಈ ಕೆಳಗಿನ ಸಾಲು ಕೆಲವು ಹತಾಶ, ಕೆಲಸವಿಲ್ಲದ ಅಶಿಕ್ಷಿತ ಟೈಂಪಾಸ್ ಚಿಲ್ರೆ ವ್ಯಕ್ತಿಗಳಿಗಾಗಿ - “ ಜಗತ್ತು ಶಾಡೋಗಳನ್ನು ಎಸೆದಾಗ, ನಾನು ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತೇನೆ. ಕತ್ತಲೆ ನನ್ನ ಬೆಳಕಿಗೆ ಇಂಧನ ತುಂಬಿಸುತ್ತದೆ. ನಿರಾಶಾವಾದದ ಬೂದಿಯಿಂದ ಸಾಧ್ಯತೆಯ ಫೀನಿಕ್ಸ್ ಏರುತ್ತದೆ. ನಕಾರಾತ್ಮಕ ಶಕ್ತಿಯು ಕೇವಲ ಮೆಟ್ಟಿಲು; ನಾನು ಅದರ ಮೇಲೆ ಸಕಾರಾತ್ಮಕತೆಯ ದಿಗಂತದ ಕಡೆಗೆ ಹಾರುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಜ್ಯೋತಿ ರೈ ಹಂಚಿಕೊಂಡಿರುವ ವಿಡಿಯೋ ಏನೆಂದರೆ, ಇತ್ತೀಚೆಗೆ ಹಣಕಾಸು ಸಮಸ್ಯೆಯಿಂದ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಕಿನ್ನಾರ ಮೊಗಳಯ್ಯ ಅವರಿಗೆ ಜ್ಯೋತಿ ರೈ ಧನಸಹಾಯ ಮಾಡಿದ್ದಾರೆ. ಈ ಕುರಿತಾದ ವಿಡಿಯೋವನ್ನು ಅವರು ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. 'ಅಕ್ಷಯ ತೃತೀಯದ ಶುಭ ದಿನದಂದು, ಖ್ಯಾತಿಯ ಹೊರತಾಗಿಯೂ, ವೈಯಕ್ತಿಕ ಮತ್ತು ವೃತ್ತಿಪರವಾಗಿ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿರುವ ಶ್ರೀ ಪದ್ಮಶ್ರೀ ಕಿನ್ನೇರ ಮೊಗಲಯ್ಯ ಅವರಿಗೆ ₹ 50,000 ಆರ್ಥಿಕ ನೆರವು ನೀಡಿದ್ದೇನೆ. ನಿನ್ನೆ ಪತ್ರಿಕಾಗೋಷ್ಠಿ ನಡೆಸಿದ ಅವರ ಹೋರಾಟದ ಬಗ್ಗೆ ನನ್ನ ಪಿಆರ್ ನನಗೆ ಮಾಹಿತಿ ನೀಡಿದ್ದರು. ನಾನೂ ಕೂಡ ಪ್ರಸ್ತುತ ಸವಾಲಿನ ಅವಧಿಯನ್ನು ಎದುರಿಸುತ್ತಿದ್ದೇನೆಯಾದರೂ, ನನ್ನೊಳಗಿನ ಬೆಳಕು ಅವರನ್ನು ತಕ್ಷಣವೇ ತಲುಪಲು ಪ್ರೇರೇಪಿಸಿತು. ಊಟದ ವ್ಯವಸ್ಥೆ ಮಾಡಿ ದೇಣಿಗೆ ನೀಡಿದ್ದೆ. ಅವರ ಕಲೆಗೆ ಬೆಂಬಲವನ್ನೂ ನೀಡುತ್ತಿದ್ದೇನೆ. ನಾನು ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ. ಆದರೆ, ಈಗ ನನ್ನ ಕೈಲಾದಷ್ಟು ಮಾಡಿದ್ದೇನೆ. ಬೇರೆ ಯಾರಾದರೂ ಅವರನ್ನು ಬೆಂಬಲಿಸಲು ಬಯಸಿದರೆ, ನಾವು ಒಟ್ಟಾಗಿಯೇ ಸಹಾಯ ಮಾಡೋಣ' ಎಂದು ಬರೆದುಕೊಂಡಿದ್ದಾರೆ.
ಖ್ಯಾತ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಲೀಕ್ ಮಾಡಿದ್ಯಾರು? ಉದ್ದೇಶವೇನು..
ಮೊಗಳಯ್ಯ ಅವರ ಕುಟುಂಬವನ್ನು ಭೇಟಿ ಮಾಡಿ ಅವರಿಗೆ ಹಣ ಸಹಾಯ ಮಾಡಿದ ವಿಡಿಯೋವನ್ನೂ ಕೂಡ ಜ್ಯೋತಿ ರೈ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಹಂಚಿಕೊಳ್ಳುವ ವೇಳೆಯಲ್ಲೇ, ಇದು ರಿಯಲ್ ವಿಡಿಯೋ ಇದನ್ನು ವೈರಲ್ ಮಾಡೋ ಧೈರ್ಯ ನಿಮ್ಮಲ್ಲಿದ್ಯಾ ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಕಿರುತೆರೆ ಸ್ಟಾರ್ ನಟಿಯ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್