ಜಗತ್ತಿನ ಅತ್ಯಂತ ಕುಳ್ಳ ಕೋಟ್ಯಧಿಪತಿ ಗಾಯಕ, ಬಿಗ್​ಬಾಸ್​ ಖ್ಯಾತಿಯ ಅಬ್ದು ಮದ್ವೆ ಫಿಕ್ಸ್​: ಡಿಟೇಲ್ಸ್​ ಇಲ್ಲಿದೆ...

Published : May 10, 2024, 05:39 PM IST
ಜಗತ್ತಿನ ಅತ್ಯಂತ ಕುಳ್ಳ ಕೋಟ್ಯಧಿಪತಿ ಗಾಯಕ, ಬಿಗ್​ಬಾಸ್​ ಖ್ಯಾತಿಯ ಅಬ್ದು ಮದ್ವೆ ಫಿಕ್ಸ್​: ಡಿಟೇಲ್ಸ್​ ಇಲ್ಲಿದೆ...

ಸಾರಾಂಶ

ಜಗತ್ತಿನ ಅತ್ಯಂತ ಕುಳ್ಳ ಕೋಟ್ಯಧಿಪತಿ ಗಾಯಕ, ಬಿಗ್​ಬಾಸ್​ ಖ್ಯಾತಿಯ ಅಬ್ದು ಮದ್ವೆ ಫಿಕ್ಸ್​: ಡಿಟೇಲ್ಸ್​ ಇಲ್ಲಿದೆ...  

ಅಬ್ದು ರೋಜಿಕ್ ಹೆಸರು ಟಿ.ವಿ ವೀಕ್ಷಕರಿಗೆ ಹೊಸತೇನಲ್ಲ. ‘ಬಿಗ್ ಬಾಸ್’ (Bigg Boss) ಮೂಲಕ ಖ್ಯಾತಿ ಪಡೆದ ಜಗತ್ತಿನ ಅತಿ ಕುಳ್ಳ ಗಾಯಕ ಎಂದೇ ಫೇಮಸ್​ ಆಗಿದ್ದಾರೆ ಅಬ್ದು.  ಕೋಟ್ಯಧಿಪತಿಯೂ ಆಗಿರುವ ತಜಿಕಿಸ್ತಾನ್​ ದೇಶದ ಈ ಗಾಯಕ,   ಬಿಗ್ ಬಾಸ್​ನಲ್ಲಿ ಸಖತ್ ಸುದ್ದಿ ಆಗಿದ್ದರು. 20 ವರ್ಷ್ಗಳ ಅಬ್ದು ಈಗ ಸುದ್ದಿಯಲ್ಲಿರೋದು ಮದುವೆಯಿಂದಾಗಿ! ಹೌದು. 19 ವರ್ಷದ ಯುವತಿಯನ್ನು ಇವರು ವಿವಾಹವಾಗಲಿದ್ದು, ಈ ಬಗ್ಗೆ ಖುದ್ದು ಸೋಷಿಯಲ್​ ಮೀಡಿಯಾದಲ್ಲಿ ಅವರು ಶೇರ್​ ಮಾಡಿಕೊಂಡಿದ್ದಾರೆ. ನೋಡಲು  ಚಿಕ್ಕ ಹುಡುಗನಂತೆ ಕಾಣುವ 20 ವರ್ಷದ ಅಬ್ದು ಅವರ ಮದುವೆಯ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇನ್ನು ಅಬ್ದು ಅವರ ಕುರಿತು ಒಂದಿಷ್ಟು ಹೇಳುವುದಾದರೆ, ಇವರು,  ತಜಿಕಿಸ್ತಾನ್​ ದೇಶದ  ಗಾಯಕ. ಸಾಕಷ್ಟು ಜನಪ್ರಿಯತೆ ಪಡೆದಿರುವ  ಕೋಟ್ಯಧಿಪತಿ. ಇವರು   ಸೋಷಿಯಲ್ ಮೀಡಿಯಾ ಇನ್​ಫ್ಲ್ಯುಯೆನ್ಸರ್ ಕೂಡ ಹೌದು.  ಇನ್ಸ್ಟಾಗ್ರಾಮ್‌ ಖಾತೆಯಲ್ಲಿ 8 ಮಿಲಿಯನ್‌ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇನ್​ಸ್ಟಾದಲ್ಲಿ ಎಂಗೇಜ್​ಮೆಂಟ್​ ಉಂಗುರ ಹಿಡಿದುಕೊಂಡು ಮದುವೆಯ ಸುದ್ದಿಯನ್ನು ಹೇಳಿಕೊಂಡಿದ್ದಾರೆ. ಡೈಮಂಡ್ ರಿಂಗ್ ಹಿಡಿದುಕೊಂಡಿರೋ ಫೋಟೋನ ಅಬ್ದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಅವರು ಕ್ಯಾಪ್ಶನ್ ಕೂಡ ನೀಡಿದ್ದಾರೆ. ‘ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದಿದ್ದಾರೆ ರೋಜಿಕ್.

ಹನಿಮೂನಾ? ಕೊಲೆನಾ? ಮಧುಚಂದ್ರದ ನೆಪದಲ್ಲಿ ಗೌತಮ್​- ಭೂಮಿಕಾ ಮೇಲೆ ಸಾವಿನ ತೂಗುಗತ್ತಿ!

'ಗೆಳೆಯರೇ.. ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸುವ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ನಾನು ಇದನ್ನು ಊಹಿಸಿಯೂ ಇರಲಿಲ್ಲ. ಈ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್​ಪ್ರೈಸ್​ ಇದೆ' ಎಂದಿರುವ ಅಬ್ದು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ. ಇದೀಗ ಅಬ್ದು ರೋಜಿಕ್ ಮದುವೆ ಆಗುತ್ತಿರುವ ವಿಚಾರ ಹೊರ ಬಿದ್ದಿದ್ದು, ಅಬ್ದು ಕೈ ಹಿಡಿಯುವ ಲಕ್ಕಿ ಹುಡುಗಿ ಯಾರು ಎನ್ನುವ ಕುತೂಹಲ ಎಲ್ಲರಿಗಿದೆ. 
 
 ಜುಲೈ 7ರ ದಿನಾಂಕವನ್ನು ಸೇವ್‌ ಮಾಡಿಕೊಳ್ಳಿ ಎಂದಿದ್ದಾರೆ  ಅಬ್ದು ರೋಜಿಕ್. ಅಂದಹಾಗೆ ಅಬ್ದು ಅವರು, ಕಳೆದ ಫೆಬ್ರವರಿ ತಿಂಗಳಲ್ಲಿ ಅಬ್ದು ಸಾಕಷ್ಟು ಸುದ್ದಿ ಆಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅವರನ್ನು ವಿಚಾರಣೆ ಮಾಡಿದ್ದರು. ‘ಬಿಗ್ ಬಾಸ್ 16’ರ ಸ್ಪರ್ಧಿ ಶಿವ್ ಠಾಕ್ರೆ ಅವರ ಪ್ರಕರಣದಲ್ಲಿ ಅಬ್ದು ಸಾಕ್ಷಿ ಎನ್ನಲಾಗಿದೆ.

ನಿಗೂಢ ಸಾವನ್ನಪ್ಪಿದ ನಟಿ ಶ್ರೀದೇವಿಗೆ ಹೀಗೊಂದು ನಮನ: ಪಾಲಿಕೆಯಿಂದ ರಸ್ತೆಗೆ ನಟಿಯ ಹೆಸರು

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?