ಮಹಾಕುಂಭದ ಕಮಾಲ್​: ಸಿಹಿಗೆ ತೆರೆಯಿತು ಅದೃಷ್ಟದ ಬಾಗಿಲು- ಹನುಮಾನನಿಂದ ಸಿಕ್ಕೇ ಬಿಟ್ಟಿತು ವರದಾನ!

Published : Mar 21, 2025, 02:58 PM ISTUpdated : Mar 21, 2025, 04:47 PM IST
ಮಹಾಕುಂಭದ ಕಮಾಲ್​: ಸಿಹಿಗೆ ತೆರೆಯಿತು ಅದೃಷ್ಟದ ಬಾಗಿಲು-  ಹನುಮಾನನಿಂದ ಸಿಕ್ಕೇ ಬಿಟ್ಟಿತು ವರದಾನ!

ಸಾರಾಂಶ

ಸೀತಾರಾಮ ಧಾರಾವಾಹಿಯಲ್ಲಿ ಸುಬ್ಬಿ ಮತ್ತು ಸಿಹಿ ಪಾತ್ರದಲ್ಲಿ ರಿತು ಸಿಂಗ್ ದ್ವಿಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಮಹಾಕುಂಭದಲ್ಲಿ ಸಿಹಿಗೆ ವಿಶೇಷ ಶಕ್ತಿ ಬಂದಿದ್ದು, ಅದು ಸುಬ್ಬಿಗೆ ಸಹಾಯ ಮಾಡುತ್ತಿದೆ. ಭಾರ್ಗವಿಗೆ ಅನುಮಾನವಿದ್ದರೂ, ಸಿಹಿಯ ಸಹಾಯದಿಂದ ಸುಬ್ಬಿ ಸತ್ಯ ಮರೆಮಾಚುತ್ತಿದ್ದಾಳೆ. ರುದ್ರಪ್ರತಾಪ ಸುಬ್ಬಿಯನ್ನು ಅಪಹರಿಸಿ ಸತ್ಯ ತಿಳಿಯಲು ಪ್ರಯತ್ನಿಸುತ್ತಾನೆ. ಆಗ ಸಿಹಿ ಪ್ರತ್ಯಕ್ಷಳಾಗಿ ರುದ್ರಪ್ರತಾಪನಿಂದ ಸುಬ್ಬಿಯನ್ನು ರಕ್ಷಿಸುತ್ತಾಳೆ.

ಸೀತಾರಾಮ ಸೀರಿಯಲ್​ನಲ್ಲಿ ಸುಬ್ಬಿ ಮತ್ತು ಸಿಹಿ ಪಾತ್ರಗಳು ವೀಕ್ಷಕರನ್ನು ಸಕತ್​ ರಂಜಿಸುತ್ತಿದೆ. ಡಬಲ್​ ರೋಲ್​ನಲ್ಲಿ ಪುಟಾಣಿ ರಿತು ಸಿಂಗ್​ ಆ್ಯಕ್ಟಿಂಗ್​ ಸೂಪರೋ ಸೂಪರು. ಡಬಲ್​ ಆ್ಯಕ್ಟಿಂಗ್​ ಎಂದು ಹೇಳುವುದು ಕಷ್ಟ ಆಗುವಂತೆ ರಿತು ಆ್ಯಕ್ಟ್​ ಮಾಡಿದ್ದಾಳೆ. ಅತ್ತ ಸಿಹಿಯಾಗಿ, ಇತ್ತ ಸುಬ್ಬಿಯಾಗಿ ಅವಳು ಮಾಡ್ತಿರೋ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದಾಗಲೇ ತನ್ನ ನಟನೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ರಿತುಸಿಂಗ್​, ಈಗ ಡಬಲ್​ ರೋಲ್​ನಲ್ಲಿಯೂ ಆ್ಯಕ್ಟ್​ ಮಾಡುವ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾಳೆ. ನಿಜಕ್ಕೂ ಎದುರು ಬದುರು ಇರುವ ಸಿಹಿ ಮತ್ತು ಸುಬ್ಬಿ ಇಬ್ಬರೂ ಬೇರೆಯವರೋ ಎನ್ನುವಂತೆ ಆಕೆ ನಟಿಸುತ್ತಿದ್ದಾಳೆ. ಇದರಿಂದ ಸೀತಾರಾಮ ಸೀರಿಯಲ್​ ಮತ್ತೆ ಚಿಗುರುತ್ತಿದೆ. ಸಿಹಿಯ ಸಾವಿನಿಂದ ತಾವು ಸೀರಿಯಲ್​ ನೋಡಲ್ಲ ಎಂದು ಹೇಳುತ್ತಿದ್ದ ನೆಟ್ಟಿಗರೇ ಈಗ ಸಕತ್​ ಮಜಾ ಬರ್ತಿದೆ ಎನ್ನುತ್ತಿದ್ದಾರೆ. 

ಅದೇ ಇನ್ನೊಂದೆಡೆ, ಸೀತಾರಾಮ ಸೀರಿಯಲ್​ ಕಿರುತೆರೆಯಲ್ಲಿಯೇ ಹೊಸ ಪ್ರಯೋಗವನ್ನು ಮಾಡಿತ್ತು. ಮಹಾಕುಂಭಕ್ಕೆ ಸೀರಿಯಲ್​ ತಂಡ ಹೋಗಿತ್ತು. ಅಲ್ಲಿ ಸಿಹಿ ತನಗೆ ವಿಶೇಷ ಶಕ್ತಿ ನೀಡುವಂತೆ ಸಾಧುಗೆ ಕೇಳಿಕೊಂಡಿರುವಂತೆ ಸೀರಿಯಲ್​ನಲ್ಲಿ ತೋರಿಸಲಾಗಿತ್ತು. ಅದಕ್ಕೆ ಆ ನಾಗಾಸಾಧು ಹನುಮಾನ್​ ಚಾಲೀಸಾ ಪಠಣೆ ಮಾಡಿದರೆ ಹನುಮಾನ್​ ಒಲಿಯುತ್ತಾನೆ, ವಿಶೇಷ ಶಕ್ತಿ ಬರುತ್ತದೆ ಎಂದಿದ್ದರು. ಇದರ ವಿಶೇಷ ಎಪಿಸೋಡ್​ ಅನ್ನು ವಾಹಿನಿ ಪ್ರಸಾರ ಮಾಡಿತ್ತು. ಆದರೆ ಈ ಶಕ್ತಿ ಯಾವಾಗ ಬರುತ್ತದೆ ಎಂದು ವೀಕ್ಷಕರು ಕಾದು ಕುಳಿತಿದ್ದರು.

'ಯಜಮಾನ' ಸೀರಿಯಲ್​ ಮೊದಲರಾತ್ರಿ ಶೂಟಿಂಗ್​ನಲ್ಲಿ ತೆರೆಮರೆಯಲ್ಲಿ ನಡೆದದ್ದೇನು? ವಿಡಿಯೋ ವೈರಲ್​

ಅಂತೂ ಸೀರಿಯಲ್​ನಲ್ಲಿ ಆ ಶಕ್ತಿ ಬಂದೇ ಬಿಟ್ಟಿದೆ. ಸುಬ್ಬಿ ಸಿಹಿ ಅಲ್ಲ ಎನ್ನುವುದು ವಿಚಿತ್ರ ಎನ್ನುವಂತೆ ಇನ್ನೂ ಸೀತಾಳಿಗೆ ಗೊತ್ತಾಗಲಿಲ್ಲ. ಸುಬ್ಬಿ ಕೂಡ ಆಕೆಯ ಮಗಳೇ ಆಗಿದ್ದರೂ ಸಿಹಿ ಅವಳಲ್ಲ ಎನ್ನುವುದು ತಿಳಿಯದೇ ಇರುವುದು ಸೀರಿಯಲ್​ನಲ್ಲಿ ಮಾತ್ರ ಸಾಧ್ಯ ಬಿಡಿ. ಅದೇನೇ ಇದ್ದರೂ ಭಾರ್ಗವಿ ಇದರ ಬಗ್ಗೆ ಡೌಟ್​ ಶುರುವಾಗಿದೆ. ಆದ್ದರಿಂದ ವಿವಿಧ ರೀತಿಯಲ್ಲಿ ಆಕೆಯನ್ನು ಪರೀಕ್ಷೆ ಮಾಡಿದರೂ, ಎಲ್ಲರಿಗೂ ಅದೃಶ್ಯವಾಗಿರುವ ಸಿಹಿ, ಸುಬ್ಬಿಗೆ ಮಾತ್ರ ಕಾಣಿಸಿಕೊಂಡು ಎಲ್ಲಾ ಹೇಳಿಕೊಡುತ್ತಿರುವ ಕಾರಣ, ಅವಳು ಸಿಹಿ ಅಲ್ಲ ಎನ್ನುವುದು ತಿಳಿಯುತ್ತಲೇ ಇಲ್ಲ. 

ಆದರೆ ಇದೀಗ ರುದ್ರಪ್ರತಾಪ ಸುಬ್ಬಿಯನ್ನು ಕಿಡ್ನಾಪ್​ ಮಾಡಿದ್ದಾನೆ. ಆಕೆ ಯಾರು, ಅವಳ ಸತ್ಯ ಏನು ಎಂದು ತಿಳಿದುಕೊಳ್ಳಲು ಕಟ್ಟಿಹಾಕಿದ್ದಾನೆ. ನಿನ್ನ ಹೆಸರೇನು ಕೇಳಿದಾಗ ಆಕೆ ಸಿಹಿ ಎಂದಿದ್ದಾಳೆ. ಸತ್ಯ ಹೇಳದಿದ್ದರೆ, ನಾಲಿಗೆ ಕಟ್​ ಮಾಡುತ್ತೇನೆ ಎಂದು ಅದಕ್ಕೆ ಮುಂದಾದಾಗ, ಸುಬ್ಬಿ ಸಿಹಿ ಎಂದು ಜೋರಾಗಿ ಸಹಾಯಕ್ಕೆ ಕೂಗಿದ್ದಾಳೆ. ಆಗ ಸಿಹಿ ಅಲ್ಲಿಗೆ ಬಂದಿದ್ದಾಳೆ. ಮಹಾಕುಂಭದ ಎಫೆಕ್ಟ್​ ಈಗ ತೋರಿಸಲಾಗಿದೆ. ಸಿಹಿಗೆ ವಿಶೇಷ ಪವರ್​ ಬಂದುಬಿಟ್ಟಿದೆ. ಆಕೆ ರುದ್ರಪ್ರತಾಪನನ್ನು ನೂಕಿದ್ದಾಳೆ. ಆ ರಭಸಕ್ಕೆ ರುದ್ರಪ್ರತಾಪ ತತ್ತರಿಸಿ ಹೋಗಿದ್ದಾನೆ. ಒಟ್ಟಿನಲ್ಲಿ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಬಗೆ ಬಗೆ ತಂತ್ರವನ್ನು ಸೀರಿಯಲ್​ನಲ್ಲಿ ಮಾಡಲಾಗುತ್ತಿದೆ. 

ಬೀದಿಗೆ ಬಂದ ಡ್ರೋನ್​ ಪ್ರತಾಪ್​- ಎಲ್ಲವೂ ತಾಳಿ ಕಟ್ಟಿರೋ ಗಗನಾಗೋಸ್ಕರ! ಫ್ಯಾನ್ಸ್​ ಶಾಕ್​- ಅಷ್ಟಕ್ಕೂ ಆಗಿದ್ದೇನು?

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?
Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ