ಖಾಸಗಿ ವಾಹಿನಿಯಲ್ಲಿ ʼಕರಿಮಣಿʼ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯಲ್ಲಿ ಬ್ಲ್ಯಾಕ್‌ರೋಸ್ ಯಾರು?
'ಕರಿಮಣಿ'ಯ 'ಬ್ಲ್ಯಾಕ್ ರೋಸ್' ಪಾತ್ರ ಜನರಿಗೆ ಅತ್ಯಂತ ಕುತೂಹಲ ಹುಟ್ಟಿಸಿದ ನೆಗೆಟಿವ್ ಪಾತ್ರವಾಗಿದೆ. ಹೀರೋ ಕರ್ಣನನ್ನು ನಾಶ ಮಾಡುವ ಏಕೈಕ ಉದ್ದೇಶ ಇರೋ ಈ 'ಬ್ಲ್ಯಾಕ್ ರೋಸ್' ಯಾರು ಎನ್ನೋದು ದೊಡ್ಡ ಪ್ರಶ್ನೆ ಆಗಿತ್ತು. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಗಲಿದೆ. ಮಾರ್ಚ್ 24 ರಂದು ಸೋಮವಾರ ಸಂಜೆ 6 ಕ್ಕೆ ʼಕರಿಮಣಿ' ಧಾರಾವಾಹಿಯ ʼಬ್ಲ್ಯಾಕ್ ರೋಜ್' ಯಾರು ಎಂಬ ರಹಸ್ಯ ಬಯಲಾಗಲಿದೆ.
ಯಾರು ಈ 'ಬ್ಲ್ಯಾಕ್ ರೋಸ್'?
ಒಂದು ರೆಗ್ಯುಲರ್ ಚೌಕಟ್ಟಿನಲ್ಲಿಯೇ ಇರದ ವಿಭಿನ್ನವಾದ ಮನರಂಜನೆಗೆ ಮೋಸ ಮಾಡದ ಪಾತ್ರಗಳು ಇಲ್ಲಿವೆ. ಅದುವೇ ʼಬ್ಲ್ಯಾಕ್ ರೋಜ್' ಪಾತ್ರ. ಈ ಸೀರಿಯಲ್ ಶುರು ಆದಾಗಿನಿಂದ ಅವರಾರು ಎಂದು ರಿವೀಲ್ ಮಾಡಿಲ್ಲ. ಆದರೆ ಬ್ಲ್ಯಾಕ್‌ರೋಸ್ ಅಂದರೆ ಲೇಡಿ ಎಂದು ರಿವೀಲ್ ಮಾಡಲಾಗಿದೆ. ಇದರ ಹಿಂದೆ 'ಕರಿಮಣಿ' ಧಾರಾವಾಹಿ ಕಥೆಗಾರ ಕತೆಗಾರ ಸೋಮು ಹೊಯ್ಸಳ ಪಾತ್ರವೂ ಇದೆ. ಸೋಮು ಹೊಯ್ಸಳ ಸೃಷ್ಟಿಸಿದ ಈ ಪಾತ್ರ ಯಾರಿವನು ಡ್ರೀಮ್ ಬಾಯ್ ಅಂತೆಲ್ಲ ಯೋಚಿಸುವ ಪಾತ್ರವಲ್ಲ. ಹೀರೋ ಕರ್ಣನ ಕನಸುಗಳನ್ನು ನಾಶ ಮಾಡಲೇ ಹುಟ್ಟಿರುವ ಬ್ಯಾಡ್ ಬಾಯ್ ಪಾತ್ರವಾಗಿದೆ. ಗಂಡಿನ ಸ್ವರದಲ್ಲಿ ಮಾತಾಡುವ ʼಬ್ಲ್ಯಾಕ್ ರೋಜ್' ಹೆಣ್ಣಾಗಿರಬಾರದೇಕೆ ಎಂದೆಲ್ಲ 'ಕರಿಮಣಿ' ಧಾರಾವಾಹಿಯ ಕೆಲವು ಮಹಿಳಾಮಣಿಗಳ ವಾದ.
ಕರ್ಣನಿಗೆ ಕಾಟ ಕೊಡುತ್ತಿರುವ ಬ್ಲ್ಯಾಕ್ ರೋಸ್ ಅರುಂಧತಿಯೇ?! ವೀಕ್ಷಕರ ಊಹೆ ನಿಜವಾಗುತ್ತ?
ಸದಾ ಕಪ್ಪು ದಿರಿಸಿನಲ್ಲಿರುವ ಈ ಪಾತ್ರದ ಮುಖ ಜನರಿಗೆ ರಿವೀಲ್ ಆಗುವುದೇ ಇಲ್ಲ. ನೀಲಿ ಕಣ್ಣುಗಳು ಮಾತ್ರ ಜನರಿಗೆ ಕಾಣಿಸುತ್ತದೆ ಹೊರತು, ಯಾರು ಈ ಬ್ಲ್ಯಾಕ್ ರೋಸ್ ಅನ್ನುವುದು ಸಸ್ಪೆನ್ಸ್ ಆಗೇ ಉಳಿಯುತ್ತದೆ. ಕರ್ಣನ ಕುಟುಂಬದಲ್ಲಿಯೇ ಇರುವ ಅವನಿಗೆ ಹತ್ತಿರದ ಸಂಬಂಧಿಗಳಲ್ಲೇ ಒಬ್ಬರು - ಈ ʼಬ್ಲ್ಯಾಕ್ ರೋಜ್' ಆಗಿರಬಹುದು ಎಂದುಕೊಂಡಿರುವ ಪ್ರೇಕ್ಷಕನ ತಲೆಯಲ್ಲಿ - ಇವರಿರಬಹುದಾ ಅವರಿರಬಹುದಾ ಎಂಬ ಲೆಕ್ಕಾಚಾರ ನಡೆಯುತ್ತಲೇ ಇದೆ. ಅವರಲ್ಲಿ ಪ್ರಮುಖವಾಗಿ - ಕರ್ಣ ಎಂದರೆ ಆಗದೆ ಇರೋ ವನಜ ಆಗಿರಬಹುದಾ? ನಳಿನಿನಾ ? ಅಥವಾ ವೆಂಕಟೇಶ್ ಆಗಿರಬಹುದಾ ಎಂದು ಗೆಸ್ ಮಾಡುತ್ತಾ ಕೂತ ಪ್ರೇಕ್ಷಕರಿಗೆ ಉತ್ತರ ಸಿಗುವ ಸಮಯ ಬಂದಿದೆ. ಪದ್ಮನಾಭ ಭಟ್ ಶೇವ್ಕಾರ್ ಅವರ ಸೊಗಸಾದ ಸಂಭಾಷಣೆ ʼಕರಿಮಣಿ' ಧಾರಾವಾಹಿಗೆ ಚುರುಕು ತಂದಿದ್ದು "ವೃದ್ಧಿ ಪ್ರೊಡಕ್ಷನ್ಸ್'ನ ಹಲವು ಹೆಮ್ಮೆಯ ಸೀರಿಯಲ್ಗಳಲ್ಲಿ ಒಂದಾಗಿದೆ.
ಸೋಮವಾರದಿಂದ ಶುಕ್ರವಾರ ಪ್ರತಿ ಸಂಜೆ 6 ಕ್ಕೆ ಪ್ರಸಾರವಾಗುತ್ತಿರುವ 'ಕರಿಮಣಿ' ಧಾರಾವಾಹಿಯಲ್ಲಿ 'ಬ್ಲ್ಯಾಕ್ ರೋಜ್' ರಹಸ್ಯ ಬಯಲಾಗುವ ಸಂಚಿಕೆಗಳನ್ನು ಮರೆಯದೆ ನೋಡಿ.