ನೀ ಸನಿಹಕೆ ಬಂದರೆ... ಎನ್ನುತ್ತಲೇ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಸೀರಿಯಲ್ ಜೋಡಿ ಪೂರ್ಣಿ-ಜೀವಾ ಉರ್ಫ್ ಲಾವಣ್ಯ ಮತ್ತು ಶಶಿ ಹೆಗ್ಡೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಶ್ರೀರಸ್ತು ಶುಭಮಸ್ತು ಸೀರಿಯಲ್‌ನಲ್ಲಿ ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಅಂದಹಾಗೆ ಪೂರ್ಣಿಯ ನಿಜವಾದ ಹೆಸರು ಲಾವಣ್ಯ. ಇವರ ರಿಯಲ್ ಪತಿಯ ಹೆಸರು ಶಶಿ ಹೆಗ್ಡೆ. ಇವರು ಅಮೃತಧಾರೆ ಸೀರಿಯಲ್‌ನಲ್ಲಿ ನಾಯಕಿ ಭೂಮಿಕಾ ಸಹೋದರ ಜೀವನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಇವರು ಮಹಿಮಾ ಪತಿ.
ಶಶಿ ಹಾಗೂ ಲಾವಣ್ಯ ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ನೀ ಸನಿಹಕೆ ಬಂದರೆ... ಹಾಡಿಗೆ ವೇದಿಕೆ ಮೇಲೆ ಈ ಜೋಡಿ ಪ್ರೇಮದ ಕಿಚ್ಚು ಹೊತ್ತಿಸಿದೆ. ಅಷ್ಟಕ್ಕೂ ಈ ಸೀಸನ್ನಲ್ಲಿ ಶಶಿ ಹೆಗ್ಡೆ ಅವರು ಡಾನ್ಸ್ ಕರ್ನಾಟಕ ಡಾನ್ಸ್ನ ಸ್ಪರ್ಧಿಯಾಗಿದ್ದಾರೆ. ಇವರ ಡಾನ್ಸ್ ಮಾಡುವ ಸಮಯದಲ್ಲಿ ಪತ್ನಿ ಲಾವಣ್ಯ ಅವರನ್ನು ವೇದಿಕೆಯ ಮೇಲೆ ಕರೆಸಲಾಗಿದೆ. ದಂಪತಿ ಒಟ್ಟಿಗೇ ಇದ್ದಾಗ ಡ್ಯೂಯೆಟ್ ಮಾಡಿಬಿಡಿ ಎಂದು ಆ್ಯಂಕರ್ ಅನುಶ್ರೀ ಹೇಳಿದ್ದಾರೆ. ಅದಕ್ಕೆ ಈ ದಂಪತಿ ಪ್ರೇಮದ ಕಿಚ್ಚು ಹೊತ್ತಿಸುವ ಮೂಲಕ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.
ಗರ್ಭಕೋಶದ ಕ್ಯಾನ್ಸರ್ನಿಂದ 'ಸತ್ತ' ನಟಿ ಎದ್ದು ಬಂದಾಗ ಹೀಗೆಲ್ಲಾ ಆಯ್ತು ನೋಡಿ...
ಅಷ್ಟಕ್ಕೂ ಈ ಜೋಡಿಯ ಮದುವೆ ಕೂಡ ತುಂಬಾ ಇಂಟರೆಸ್ಟಿಂಗ್ ಆಗಿದೆ. ಇವರಿಬ್ಬರ ಲವ್ ಸ್ಟೋರಿ ಸ್ಟಾರ್ಟ್ ಆಗಿದ್ದೇ ಸೀರಿಯಲ್ ಸೆಟ್ ನಲ್ಲಿ (serial set). ಶಶಿ ಮತ್ತು ಲಾವಣ್ಯ ಇಬ್ಬರು ರಾಜಾ ರಾಣಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದರು. ಈ ಸೀರಿಯಲ್ ನಲ್ಲಿ ಇಬ್ಬರು ಅಣ್ಣ - ತಂಗಿಯಾಗಿ ನಟಿಸಿದ್ದರು. ಲಾವಣ್ಯ ಅವರು ಶಶಿ ಅವರನ್ನು ಬ್ರೋ ಎಂದೇ ಕರೆಯುತ್ತಿದ್ದರು. ‘ರಾಜಾ ರಾಣಿ’ ಮೂಲಕವೇ ಶಶಿ ಹೆಗ್ಡೆ ಮತ್ತು ಲಾವಣ್ಯ ಅವರಿಗೆ ಪರಿಚಯವಾಯಿತು. ಪರಿಚಯ ಸ್ನೇಹಕ್ಕೆ ತಿರುಗಿತು. ಆತ್ಮೀಯ ಸ್ನೇಹಿತರಾಗಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಮಧ್ಯೆ ಪ್ರೀತಿ ಚಿಗುರಿತು. ವರ್ಷಗಳಿಂದ ಪ್ರೀತಿಸುತ್ತಿದ್ದ ಶಶಿ ಹೆಗ್ಡೆ ಮತ್ತು ಲಾವಣ್ಯ ಕುಟುಂಬಸ್ಥರನ್ನು ಒಪ್ಪಿಸಿ ಮದ್ವೆನೂ ಆಗಿದ್ದಾರೆ.
ಮದುವೆಯಾಗಿ ವರ್ಷದ ಬಳಿಕ ಈ ಜೋಡಿ ಕಳೆದ ತಿಂಗಳಷ್ಟೇಮನಾಲಿಗೆ ಹೋಗಿ ಪ್ರವಾಸ ಮಾಡಿದ್ದು, ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದರು. ಲಾವಣ್ಯ ಕುರಿತು ಹೇಳುವುದಾದರೆ, ರಿಯಾಲಿಟಿ ಷೋ ಒಂದರಲ್ಲಿ ಇವರ ತಂದೆ, ಲಾವಣ್ಯ ಹುಟ್ಟಿದ ಬಗ್ಗೆ ತಿಳಿಸಿದ್ದರು. ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು!
ನಂಬರ್ ಎಂದ್ರೆ ನಾನು, ನಾನೆಂದ್ರೆ ನಂಬರ್ ಎನ್ನುತ್ತಲೇ ಆರ್ಯವರ್ಧನ್ ಗುರೂಜಿ ಭರ್ಜರಿ ಸ್ಟೆಪ್! ತೀರ್ಪುಗಾರರೇ ಶಾಕ್