ನನ್ನರಸಿ ರಾಧೆ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗ!

By Shriram Bhat  |  First Published Jul 20, 2024, 5:07 PM IST

ಕರಿಮಣಿ ಸೇರಿದಂತೆ ಹಲವಾರು ಧಾರಾವಾಹಿ ನಿರ್ದೇಶನ ಮಾಡಿದ್ದ ವಿನೋದ್ ದೋಂಡಾಲೆ ಇಂದು (20 ಜುಲೈ 2024ರಂದು) ನೇಣಿಗೆ ಶರಣಾಗಿದ್ದಾರೆ. ಹೊಸ ಸಿನಿಮಾ ನಿರ್ದೇಶನ ಮಾಡಲು ಸಹ ವಿನೋದ್ ದೋಂಡಾಲೆ ಮುಂದಾಗಿದ್ದರು ಎನ್ನಲಾಗುತ್ತಿದೆ. 


ಕರಿಮಣಿ ಸೇರಿದಂತೆ ಹಲವಾರು ಧಾರಾವಾಹಿ ನಿರ್ದೇಶನ ಮಾಡಿದ್ದ ವಿನೋದ್ ದೋಂಡಾಲೆ ಇಂದು (20 ಜುಲೈ 2024ರಂದು) ನೇಣಿಗೆ ಶರಣಾಗಿದ್ದಾರೆ. ಸುಮಾರು ಎರಡು ಕೋಟಿ ಸಾಲ ಮಾಡಿಕೊಂಡಿದ್ದ ನಿರ್ದೇಶ ವಿನೋದ್ ದೋಂಡಾಲೆ ಸಾಲಗಾರರ ಕಾಟ ತಾಳಲಾಗದೇ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಸಿನಿಮಾ ನಿರ್ದೇಶನ ಹಾಗೂ ನಿರ್ಮಾಣಕ್ಕೆಂದು ಸಾಲ ಮಾಡಿಕೊಂಡಿದ್ದರಂತೆ. ಸಾಲ ಕೊಟ್ಟವರ ಕಾಟ ಜಾಸ್ತಿಯಾಗಿತ್ತು. ಹೀಗಾಗಿ ಇಂದು ಬೆಳಗ್ಗೆ 11.30 ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕರಿಮಣಿ ಸೀರಿಯಲ್, ಗಂಗೆ ಗೌರಿ ಸೀರಿಯಲ್ ಗಳ ಜೊತೆ ಅಶೋಕ ಬ್ಲೇಡ್ ಚಿತ್ರಗಳ ನಿರ್ದೇಶನದ ಜೊತೆಗೆ ನಿರ್ಮಾಣ ಮಾಡುತ್ತಿದ್ದರು ವಿನೋದ್ ದೋಂಡಾಲೆ. 

Tap to resize

Latest Videos

ಕರಿಮಣಿ ಸೀರಿಯಲ್ ನಿರ್ದೇಶಕ ವಿನೋದ್ ದೋಂಡಾಲೆ ನೇಣಿಗೆ ಶರಣು; ಕಾರಣ ನಿಗೂಢವೇ!

ಹೊಸ ಸಿನಿಮಾ ನಿರ್ದೇಶನ ಮಾಡಲು ಸಹ ವಿನೋದ್ ದೋಂಡಾಲೆ ಮುಂದಾಗಿದ್ದರು ಎನ್ನಲಾಗುತ್ತಿದೆ. ಅದಕ್ಕಾಗಿ ಈ ವೇಳೆ  ಎರಡರಿಂದ ಮೂರು ಕೋಟಿ  ಸಾಲ ಮಾಡಿಕೊಂಡಿದ್ದರು, ಸಾಲದ ಸಮಸ್ಯೆ ತಾಳಲಾಗದೇ ಆತ್ಮಹತ್ಯಗೆ ಶರಣಾಗಿದ್ದಾರೆ ವಿನೋದ್ ದೋಂಡಾಲೆ ಎನ್ನಲಾಗಿದೆ. 

ತಮ್ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟಿರುವ ನಿರ್ದೇಶಕ ವಿನೋದ್, ಡೆತ್ ನೋಟ್ ನಲ್ಲಿ ತನ್ನ ಸಾವಿಗೆ ಯಾರು ಕಾರಣ ಅಲ್ಲಾ , ನನಗೆ ಯಾರಿಂದಲೂ ಒತ್ತಡ ಇಲ್ಲಾ ಎಂದು ಬರೆದಿದ್ದಾರೆ ಎನ್ನಲಾಗಿದೆ. ಮನೆಯ  ಟೆರಸ್‌ನಲ್ಲಿ ಇರುವ ವಾಶ್ ರೂಮ್ ಗೆ ಸ್ನಾನಕ್ಕೆ ಹೋಗಿದ್ದ ವಿನೋದ್, ಅಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಸಮಯದಲ್ಲಿ ನಡೆದಿರುವ ಘಟನೆ ಇದಾಗಿದೆ. 

ಎನೋ ಸೀಕ್ರೆಟ್ ಹೇಳ್ಬಿಟ್ರು ಬಿಗ್ ಬಾಸ್ ಖ್ಯಾತಿ ಚೈತ್ರಾ ವಾಸುದೇವನ್; ಚಿಕ್ಕ ವಯಸ್ಸಲ್ಲೇ ಇಷ್ಟೊಂದ್ ಅನುಭವ?

ಘಟನೆ ಬಳಿಕ ಸ್ಥಳೀಯ ಆಸ್ಪತ್ರೆಗೆ ಕುಟುಂಬದವರು ದಾಖಲು ಮಾಡಿಸಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲು ಮಾಡುವ ಮೊದಲೇ ಅವರ ಸಾವು ಸಂಭವಿಸಿತ್ತು ಎನ್ನಲಾಗಿದೆ. ಸದ್ಯ ವಿನೋದ್ ದೋಂಡಾಲೆ ಡೈರೆಕ್ಷನ್‌ನಲ್ಲಿ ಅಶೋಕ ಬ್ಲೇಡ್ ಚಿತ್ರವು ಅಂತಿಮ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿತ್ತು ಎನ್ನಲಾಗಿದೆ.

click me!