ಒಬ್ಬ ಪ್ರವಾಸಿ ಕ್ರಷ್​, ಇನ್ನೊಬ್ಬಾಕೆ ಸ್ಪಿರಿಚುವಲ್​ ಕ್ರಷ್​- ಸೋಷಿಯಲ್​ ಮೀಡಿಯಾದ ಸ್ಟಾರ್​ಗಳಲ್ಲಿ ನಿಮಗ್ಯಾರಿಷ್ಟ?

By Suchethana D  |  First Published Jul 21, 2024, 11:08 AM IST

ದೇಶ-ವಿದೇಶ ಸುತ್ತುತ್ತಾ ಕನ್ನಡದ ಕಣ್ಮಣಿಯಾಗಿರುವ ಡಾ.ಬ್ರೋ ಹಾಗೂ ತಮ್ಮ ಹಾಡುಗಳಿಂದಲೇ ಯುವಕರಲ್ಲಿಯೂ ಧಾರ್ಮಿಕ ಮನೋಭಾವ ಬಿತ್ತುವ ಕೆಲಸ ಮಾಡುತ್ತಿರುವ ಶ್ರೀನವಲ್​ ಕಿಶೋರಿ. ಇಬ್ಬರಲ್ಲಿ ನಿಮಗ್ಯಾರಿಷ್ಟ?
 


ಸೋಷಿಯಲ್​ ಮೀಡಿಯಾ ವ್ಯಾಪಕವಾಗಿ ಬೆಳೆಯುತ್ತಿದ್ದಂತೆಯೇ ಮನೆ ಮನೆಗಳಲ್ಲಿಯೂ ಸ್ಟಾರ್​ಗಳು ಹುಟ್ಟಿಕೊಳ್ಳುತ್ತಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ರೀಲ್ಸ್​ ಮಾಡುವವರ ಬಹು ದೊಡ್ಡ ವರ್ಗವೇ ಇದೆ. ರೀಲ್ಸ್​ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಳ್ಳುವವರು ಅದೆಷ್ಟು ಮಂದಿ ಇಲ್ಲ! ಹುಡುಗರಿಗೆ ಹುಡುಗಿಯರನ್ನು ಅಟ್ರಾಕ್ಟ್​ ಮಾಡುವ ಆಸೆ, ಹುಡುಗಿಯರಿಗೆ ಲೈಕ್ಸ್​, ಕಮೆಂಟ್ಸ್​ಗಳ ಮೇಲಾಸೆ... ಒಟ್ಟಿನಲ್ಲಿ ಸೋಷಿಯಲ್​  ಮೀಡಿಯಾದಲ್ಲಿಯೂ ಬಹುತೇಕ ಯುವ ಜನತೆ ಮುಳುಗಿದೆ. ಅಸಭ್ಯ, ಅಶ್ಲೀಲತೆಯಿಂದಲೇ ರಾತ್ರೋರಾತ್ರಿ ಸ್ಟಾರ್​ ಆದವರೂ ಇದೇ ಸೋಷಿಯಲ್​ ಮೀಡಿಯಾದಲ್ಲಿ ಇದ್ದರೆ, ಕಠಿಣ ಪರಿಶ್ರಮದಿಂದ, ಜನರಿಗೆ ಅಗತ್ಯವಾದ ಮಾಹಿತಿಗಳನ್ನು ಕೊಟ್ಟೋ ಇಲ್ಲವೇ ತಮ್ಮ ಕಲಾ ಪ್ರತಿಮೆಯ ಪ್ರೌಢಿಮೆಯನ್ನು ಮೆರೆಯುತ್ತಲೋ ಸೋಷಿಯಲ್​ ಮೀಡಿಯಾ ಕ್ರಷ್​ ಆದವರೂ ಇದ್ದಾರೆ.

ಅದೇ ರೀತಿ ಇದೀಗ ಇಬ್ಬರು ಸೋಷಿಯಲ್​  ಮೀಡಿಯಾ ಕ್ರಷ್​ಗಳ ಬಗ್ಗೆ ಸಾಕಷ್ಟು ವೈರಲ್​ ಆಗುತ್ತಿದೆ. ಅದರಲ್ಲಿ ಒಬ್ಬರು ದೇಶ-ವಿದೇಶಗಳನ್ನು ಸುತ್ತುತ್ತಾ, ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿ ಆಗಿರುವ  ಡಾ.ಬ್ರೋ ಅರ್ಥಾತ್​ ಗಗನ್​ ಹಾಗೂ ಇನ್ನೊಬ್ಬಾಕೆ ಧಾರ್ಮಿಕತೆಯಿಂದ ಯುವ ಮನಸ್ಸುಗಳನ್ನು ಕದಿಯುತ್ತಿರುವ ಶ್ರೀನವಲ್​ ಕಿಶೋರಿ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡುತ್ತಾ, ವಿಭಿನ್ನ ಮೇಕಪ್​ ಮೂಲಕ ಎಲ್ಲರ ಚಿತ್ತ ಕದಿಯುತ್ತಿರುವ ಕಿಶೋರಿ ಈಕೆ. ಅಟೆನ್ಷನ್ ಸೀಕ್ ಮಾಡಲು ಏನೇನೋ ಮಾಡೋ ರೀಲ್ಸ್ ವೀರರ ಮುಂದೆ ಇವರಿಬ್ಬರದ್ದೂ  ವಿಭಿನ್ನ ವ್ಯಕ್ತಿತ್ವ. ತಮ್ಮದೇ ಟ್ಯಾಲೆಂಟ್​ಗಳಿಂದ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಇವರಿಬ್ಬರೂ  ಯಶಸ್ವಿಯಾಗಿದ್ದಾರೆ. 

Latest Videos

undefined

ನಂಬರ್‌ ಎಂದ್ರೆ ನಾನು, ನಾನೆಂದ್ರೆ ನಂಬರ್‌ ಎನ್ನುತ್ತಲೇ ಆರ್ಯವರ್ಧನ್‌ ಗುರೂಜಿ ಭರ್ಜರಿ ಸ್ಟೆಪ್‌! ತೀರ್ಪುಗಾರರೇ ಶಾಕ್‌

ಅಂದಹಾಗೆ ಡಾ.ಬ್ರೋ ಕುರಿತು ಹೇಳುವುದಾದರೆ,  ಅರ್ಚಕರ ಮಗನಾಗಿ   ಕುಟುಂಬದಲ್ಲಿ ಹುಟ್ಟಿ, ಪೌರೋಹಿತ್ಯ ಕಲಿತು, ಪೂಜಾ ಪುನಸ್ಕಾರ ಮಾಡುತ್ತ ಜೀವನ ಸಾಗಿಸುತ್ತಿದ್ದ ಸಾಮಾನ್ಯ ಹುಡುಗ ಇವರು.  ಇಂದು ಯೂಟ್ಯೂಬ್​ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. ದೇಶ-ವಿದೇಶಗಳಲ್ಲಿ ಸುತ್ತಾಡುತ್ತಾ, ಹಲವು ಸಮಯದಲ್ಲಿ ಸಾವಿನ ಭಯವನ್ನೂ ಬಿಟ್ಟು ಸಾವಿನ ಬಾಯೊಳಗೇ ಹೋಗುವ ಧೈರ್ಯ ತೋರಿಸುತ್ತಾ ಹೋದ ಕಡೆಗಳಲ್ಲೆಲ್ಲಾ ಕನ್ನಡದಲ್ಲಿಯೇ ಮಾತನಾಡುತ್ತಾ ಕನ್ನಡಿಗರ ಕಣ್ಮಣಿಯಾದವರೇ ಡಾ. ಬ್ರೋ. ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ  ನಮಸ್ಕಾರ​ ದೇವ್ರು... ಖ್ಯಾತಿಯ ಡಾ. ಬ್ರೋನೇ ಸಾಕ್ಷಿ. ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ. 

ಇನ್ನು ಕಿಶೋರಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಸಂಸ್ಕೃತ, ತಮಿಳು, ಕನ್ನಡ ಭಾಷೆಗಳಲ್ಲಿ ನಿರರ್ಗಳವಾಗಿ ಪಠಣ ಮಾಡಿದ್ದಾರೆ. ಕೆಲವೊಮ್ಮೆ ನಿಜಕ್ಕೂ ಇವರೇ ಈ ಹಾಡು ಹಾಡಿದ್ದು ಹೌದಾ ಎನ್ನುವಷ್ಟರ ಮಟ್ಟಿಗೆ ಕಾಣಿಸುವುದೂ ಇದೆ. ಈಕೆ ತುಂಬಾ ವಿಭಿನ್ನ ಎನಿಸಲು ಕಾರಣ, ವಿಭಿನ್ನ ರೀತಿಯ ಮೇಕಪ್​ ಹಾಗೂ ಹಾಡುವ ಶೈಲಿ. ಗಾಯನದಿಂದಲೇ ಪ್ರಸಿದ್ಧಿ ಪಡೆದಿರುವ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸೂರ್ಯಮಾಲಾ ಅವರನ್ನೇ ಹೋಲುವ, ಅವರ ದನಿಯನ್ನೇ ಹೋಲುವ ಅದ್ಭುತ ಪ್ರತಿಭೆ ಈಕೆಯದ್ದು. ಅತ್ಯಂತ ಸುಲಲಿತವಾಗಿ, ನಿರರ್ಗಳವಾಗಿ ನಗುಮೊಗದಿಂದ ಶ್ಲೋಕ ಪಠಣ, ಗಾಯಕ ಪ್ರಸ್ತುತ ಪಡಿಸುತ್ತಲೇ ಮೋಡಿ ಮಾಡುತ್ತಿದ್ದಾರೆ ಶ್ರೀನವಲ್​ ಕಿಶೋರಿ. ಕನ್ನಡದಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನೂ ಅತ್ಯಂತ ಸುಂದರವಾಗಿ ಹೇಳಿದ್ದಾರೆ. ಇದೀಗ ಈ ಇಬ್ಬರು ಸೋಷಿಯಲ್​ ಮೀಡಿಯಾ ಕ್ರಷ್​ಗಳಲ್ಲಿ ನಿಮಗ್ಯಾರು ಇಷ್ಟ ಎಂದು ಹೇಳಬೇಕಿದೆ. 

click me!