ಅಲ್ಲಿ ಮೇಡಂ ಮೇಡಂ ಎನ್ನೋ ಸುಬ್ಬು, ಇಲ್ಲಿ ಶ್ರಾವಣಿಗೆ ಇಷ್ಟು ಹತ್ತಿರ ಹತ್ತಿರ ಬರೋದಾ? ಜೋಡಿಯ ಭರ್ಜರಿ ಸ್ಟೆಪ್​

Published : Jan 31, 2025, 02:56 PM ISTUpdated : Jan 31, 2025, 03:04 PM IST
ಅಲ್ಲಿ ಮೇಡಂ ಮೇಡಂ ಎನ್ನೋ ಸುಬ್ಬು, ಇಲ್ಲಿ ಶ್ರಾವಣಿಗೆ ಇಷ್ಟು ಹತ್ತಿರ ಹತ್ತಿರ ಬರೋದಾ? ಜೋಡಿಯ ಭರ್ಜರಿ ಸ್ಟೆಪ್​

ಸಾರಾಂಶ

ಜೀ ಕನ್ನಡದ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ಆಸಿಯಾ ಫಿರ್ದೋಸ್ ಮತ್ತು ಅಮೋಘ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕನ್ಯಾಕುಮಾರಿ ಧಾರಾವಾಹಿ ಖ್ಯಾತಿಯ ಆಸಿಯಾ ಈಗ ಶ್ರಾವಣಿಯಾಗಿ ಮಿಂಚುತ್ತಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ ಅಮೋಘ್‌ಗೆ ಇದು ಮೊದಲ ಮುಖ್ಯ ಪಾತ್ರ. ಇರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಶ್ರಾವಣಿಗೆ ಸುಬ್ರಹ್ಮಣ್ಯನ ಮೇಲೆ ಲವ್​. ಆದರೆ ಕೆಲಸದವನಾಗಿರುವ ಸುಬ್ರಹ್ಮಣ್ಯನಿಗೆ ಶ್ರಾವಣಿ ಮೇಡಂ ಅಷ್ಟೇ. ಸುಬ್ರಹ್ಮಣ್ಯ ತೋರುವ ಕಾಳಜಿಗೆ ಮನಸೋತಿರುವ ಶ್ರಾವಣಿಗೆ ಬೇರೆ ಮದುವೆಯಾಗಲು ಇಷ್ಟವಿಲ್ಲ. ಇದೇ ಕಾರಣಕ್ಕೆ ಮದುವೆ ಮಂಟಪದಲ್ಲಿಯೇ ಬೇರೊಂದು ತಾಳಿ ಕಟ್ಟಿಕೊಂಡು ಬಂದು ತನ್ನ ಮದುವೆಯಾಗಿದೆ ಎಂದು ತೋರಿಸಿದ್ದಾಳೆ. ಯಾರ ಜೊತೆ ಎಂದಾಗ ಸುಬ್ರಹ್ಮಣ್ಯನ ಹೆಸರು ಹೇಳಿಬಿಟ್ಟಿದ್ದಾಳೆ. ಇದನ್ನು ಕೇಳಿ ಸುಬ್ರಹ್ಮಣ್ಯ ಕಕ್ಕಾಬಿಕ್ಕಿಯಾಗಿದ್ದಾನೆ. ಆದರೆ ಶ್ರಾವಣಿ ಮಾತ್ರ ಆತನನ್ನು ಬಿಡಲೊಲ್ಲಳು.

ಇಂತಿಪ್ಪ ಸುಬ್ರಹ್ಮಣ್ಯ ಇದೀಗ ಶ್ರಾವಣಿಯ ಹತ್ತಿರ ಹತ್ತಿರ ಹೋಗಿ ಭರ್ಜರಿ ಸ್ಟೆಪ್​ ಹಾಕಿದ್ದಾನೆ! ಅದು ಜೀ ಕನ್ನಡದಲ್ಲಿ ಪ್ರಸಾರ ಆಗುವ ಶ್ರಾವಣಿ-ಸುಬ್ರಹ್ಮಣ್ಯ ಕಥೆಯಾದರೆ ಇದು ರಿಯಲ್​ ಕಥೆ. ಇದರಲ್ಲಿ ಶ್ರಾವಾಣಿ ಪಾತ್ರಧಾರಿಯ ಹೆಸರು ಆಸಿಯಾ ಫಿರ್ದೋಸ್. ಸುಬ್ಬು ಪಾತ್ರಧಾರಿ ಹೆಸರು ಅಮೋಘ್​. ಇನ್ನು ಆಸಿಯಾ ಕುರಿತು ಹೇಳುವುದಾದರೆ, ಇವರು  ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ಯಾಕುಮಾರಿ (Kanyakumari) ಧಾರಾವಾಹಿಯಲ್ಲಿ ಕನ್ನಿಕಾ ಆಗಿದ್ದರು. ಅಲ್ಲಿ  ಭಕ್ತಿ, ಮುಗ್ಧತೆ, ದೈವೀಕತೆಯ ಪ್ರತೀಕವಾಗಿದ್ದ ಪಾತ್ರದಲ್ಲಿ ಈಕೆ ಮಿಂಚಿದ್ದರು.  ಕನ್ಯಾಕುಮಾರಿ ಧಾರಾವಾಹಿಯಲ್ಲಿ ಆಸಿಯಾಗೆ ಜೋಡಿಯಾಗಿ ನಟಿಸಿದ್ದ ಯಶ್ವಂತ್ ಗೌಡ (Yashwanth Gowda) ಅವರು ತೆಲುಗು ಕಿರುತೆರೆಯಲ್ಲಿ ಗಟ್ಟಿಮೇಳ ಧಾರಾವಾಹಿ ನಾಯಕಿ ಅಮೂಲ್ಯ ಜೊತೆಗೆ ನಟಿಸಿದ್ದ ಅಮ್ಮಾಯಿಗಾರು ಧಾರಾವಾಹಿಯ ರಿಮೇಕ್ ಆಗಿರುವ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ದಲ್ಲಿ ಇದೀಗ ಶ್ರಾವಣಿಯಾಗಿ ಆಸಿಯಾ ನಟಿಸುತ್ತಿದ್ದಾರೆ.  

ಗಿಣಿರಾಮ, ಪಾಪ ಪಾಂಡು ನಟಿ ನಯನಾ ಧಾರಾವಾಹಿಗಳಿಂದ್ಲೇ ಬ್ಯಾನ್​: ಆತನ ವಿರುದ್ಧ ಮಾತಾಡಿದ್ದೇ ತಪ್ಪಾಯ್ತು!

ಶ್ರೀಮಂತ ಮನೆಯಲ್ಲಿ ಹುಟ್ಟಿದರೂ ಅಪ್ಪನ ಪ್ರೀತಿಗೆ ಹಂಬಲಿಸುವ ಮಗಳಾಗಿ ಆಸಿಯಾ ಅದ್ಭುತವಾಗಿ ನಟಿಸಿದ್ದಾರೆ. ಶ್ರಾವಣಿ ಪಾತ್ರದಲ್ಲಿ ಆಸಿಯಾ ಫಿರ್ದೋಸ್ ಮನೋಜ್ಞವಾಗಿ ನಟಿಸುತ್ತಿದ್ದು, ವೀಕ್ಷಕರಿಗೆ ಹತ್ತಿರವಾಗಿದ್ದಾರೆ.  ಕನ್ಯಾಕುಮಾರಿ ಬಳಿಕ ದ್ವಂದ್ವ ಎನ್ನುವ ಸಿನಿಮಾದಲ್ಲಿ, ಮಿಲನ ಎನ್ನುವ ವೆಬ್ ಸೀರಿಸ್​ನಲ್ಲಿಯೂ ಇವರು  ನಟಿಸಿದ್ದಾರೆ. ಇನ್ನು ಕೋಮಲ್ ಜೊತೆಗೆ ಕಾಲಾಯ ನಮಃ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಲಿದ್ದಾರೆ. ಇದರ ಮಧ್ಯೆ ಶ್ರಾವಣಿ ಸುಬ್ರಹ್ಮಣ್ಯ ಮೂಲಕ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ ಇವರು. All in one  Adda ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಇವರ ಈ ಫೋಟೋಗಳನ್ನು ಶೇರ್​ ಮಾಡಲಾಗಿದ್ದು, ಅದೀಗ ವೈರಲ್​ ಆಗಿದೆ.  

ಅಮೋಘ್ ಈ ಮೊದಲು 'ಸತ್ಯ', 'ಅಂತರಪಟ', 'ಲಕ್ಷ್ಮೀ ಟಿಫನ್ ರೂಮ್' ಎಂಬ ಧಾರಾವಾಹಿಗಳಲ್ಲಿ ಒಟ್ಟೊಟ್ಟಿಗೆ ನಟಿಸುತ್ತಿದ್ದರು. ಮೂರರಲ್ಲೂ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡಿದ್ದರು. ಆದರೆ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಗೆ ಲೀಡ್ ರೋಲ್ ಆಗಿ ಕರೆದಾಗ, ಆ 3 ಧಾರಾವಾಹಿಗಳ ಪ್ರೊಡಕ್ಷನ್ ಬಳಿ ಮನವಿ ಮಾಡಿದ್ದರಂತೆ. ನಂಗೆ ಲೀಡ್ ರೋಲ್ ಸಿಕ್ಕಿದೆ. ನನಗೆ ರಿಲೀವ್ ಮಾಡಿ ಎಂದು. ಶ್ರಾವಣಿ- ಸುಬ್ಬು ಮೊದಲ ಭೇಟಿ ಶ್ರಾವಣಿಯನ್ನ ಭೇಟಿ ಮಾಡಿದ್ದು ಮಾತ್ರ ಸೆಟ್‌ನಲ್ಲಿಯೇ ಎಂದಿರುವ ಅಮೋಘ್, ಈ ಮೊದಲು ಕಲರ್ಸ್ ಕನ್ನಡದಲ್ಲಿ ನೋಡಿದ್ದೆ. ಅವರು ಆಗ ಸೀರಿಯಲ್ ಒಂದರಲ್ಲಿ ಲೀಡ್ ರೋಲ್ ಮಾಡಿದ್ದರು. ನಾನು ಆಗಿನ್ನು ಹೊಸಬ. ಆಟಿಟ್ಯೂಡ್ ತೋರಿಸ್ತಾರೇನೋ ಎಂದುಕೊಂಡಿದ್ದೆ. ಆದರೆ ಸೆಟ್‌ಗೆ ಹೋದಾಗಲೇ ಗೊತ್ತಾಗಿದ್ದು, ಎಲ್ಲರ ಜೊತೆಗೂ ತುಂಬಾ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅಂತ' ಎಂದಿದ್ದಾರೆ. ಇನ್ನು  ಅಮೋಘ್ ಕುರಿತು ಹೇಳುವುದಾದರೆ, ಇವರು ಈ ಮೊದಲು 'ಸತ್ಯ', 'ಅಂತರಪಟ', 'ಲಕ್ಷ್ಮೀ ಟಿಫನ್ ರೂಮ್' ಎಂಬ ಧಾರಾವಾಹಿಗಳಲ್ಲಿ   ನಟಿಸಿದ್ದಾರೆ. ಆದರೆ ಎಲ್ಲಾ ಸೀರಿಯಲ್​ನಲ್ಲಿಯೂ ಸಪೋರ್ಟಿಂಗ್ ಕ್ಯಾರೆಕ್ಟರ್. ಇದೀಗ ಮೊದಲ ಬಾರಿಗೆ  'ಶ್ರಾವಣಿ ಸುಬ್ರಮಣ್ಯ'ದಲ್ಲಿ ಲೀಡ್​. ಈ ಸೀರಿಯಲ್​ಗೆ  ಲೀಡ್ ರೋಲ್ ಆಗಿ ಕರೆದಾಗ, ಆ ಮೂರು ಧಾರಾವಾಹಿಗಳ ಪ್ರೊಡಕ್ಷನ್ ಬಳಿ ಮನವಿ ಮಾಡಿದ್ದರಂತೆ. ನಂಗೆ ಲೀಡ್ ರೋಲ್ ಸಿಕ್ಕಿದೆ. ನನಗೆ ರಿಲೀವ್ ಮಾಡಿ ಎಂದು. ಅಂತೂ ಕೊನೆಗೂ ಅವರಿಗೆ ಈ ರೋಲ್ ಸಿಕ್ಕಿದೆ.

ರೀಲ್​ ಮತ್ತು ರಿಯಲ್​ ಅಮ್ಮನ ಜೊತೆ ಸೀತಾರಾಮ ಸಿಹಿಯ ಮೊದಲ ವಿಮಾನ ಪ್ರಯಾಣ ಹೀಗಿತ್ತು ನೋಡಿ...!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಮರಿಡುಮ್ಮ ಅಂದ್ರೆ ಸುಮ್ನೇನಾ? ಅಪ್ಪನ ಬಾಯಿಂದ್ಲೇ ಸತ್ಯ ಹೇಗೆ ಹೊರತರಿಸಿದ ನೋಡಿ!
Pregnancy in Serials : ಮದ್ವೆಗೂ ಮುನ್ನವೇ ಗರ್ಭಿಣಿಯಾದ ಕನ್ನಡ ಸೀರಿಯಲ್​ ನಾಯಕಿಯರು ಇವ್ರು! ಛೇ ಯಾಕೆ ಹೀಗೆ?