'ಶ್ರೀ ದೇವಿ ಮಹಾತ್ಮೆ' ಧಾರಾವಾಹಿಗೆ ವಿದಾಯ ಹೇಳಿದ Actor Arjun Ramesh; ಯಾಕೆ ಹೀಗೆ ಮಾಡಿದ್ರು?

Published : Jan 31, 2025, 11:23 AM ISTUpdated : Jan 31, 2025, 11:33 AM IST
'ಶ್ರೀ ದೇವಿ ಮಹಾತ್ಮೆ' ಧಾರಾವಾಹಿಗೆ ವಿದಾಯ ಹೇಳಿದ Actor Arjun Ramesh; ಯಾಕೆ ಹೀಗೆ ಮಾಡಿದ್ರು?

ಸಾರಾಂಶ

ಕನ್ನಡ ಕಿರುತೆರೆಯಲ್ಲಿ ಮೂರು ಬಾರಿ ಶಿವನ ಪಾತ್ರ ಮಾಡುವ ಅವಕಾಶ ಪಡೆದಿದ್ದ ಅರ್ಜುನ್‌ ರಮೇಶ್‌ ಈಗ ವೀಕ್ಷಕರಿಗೆ ಬೇಸರದ ಸುದ್ದಿ ಕೊಟ್ಟಿದ್ದಾರೆ. ಹೌದು, ʼಶ್ರೀ ದೇವಿ ಮಹಾತ್ಮೆʼ ಧಾರಾವಾಹಿಯಿಂದ ಅವರು ಹೊರಗಡೆ ಬಂದಿದ್ದಾರೆ.   

ಕನ್ನಡ ಕಿರುತೆರೆಯಲ್ಲಿ ಶಿವನ ಪಾತ್ರ ಮಾಡಿ ಗಮನಸೆಳೆದಿದ್ದ ನಟ ಅರ್ಜುನ್‌ ರಮೇಶ್‌ ಅವರು ಶಿವನ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಹೌದು, ಮೂರನೇ ಬಾರಿಗೆ ಶಿವನ ಪಾತ್ರ ಮಾಡಿದ್ದ ಅವರು ಈಗ ಧಾರಾವಾಹಿಗೆ ಗುಡ್‌ಬೈ ಹೇಳಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಸೋಶಿಯಲ್‌ ಮೀಡಿಯಾದಲ್ಲಿ ಏನಿದೆ? 
ಸಾರ್ಥಕತೆಯ ನೆಮ್ಮದಿ ಕನ್ನಡಿಯಲ್ಲೂ ಎದ್ದು ಕಾಣುತ್ತಿಹುದು....

ಶಿವ ಸಮಯ ಮುಗಿದಿದೆ. ಶಿವ ಪಾತ್ರಮಾಡಿದಷ್ಟು ಸಮಯಗಳ ಕಾಲ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರನ್ನು ಇನ್ನಷ್ಟು ಮನರಂಜಿಸಲು ಎದುರು ನೋಡುತ್ತಿದ್ದೇನೆ. ನನ್ನ ಪ್ರೊಡಕ್ಷನ್‌ ಟೀಂ, ಟೆಕ್ನಿಕಲ್‌ ಟೀಂ, ಕಲಾವಿದರಿಗೆ ಧನ್ಯವಾದಗಳು. ನನ್ನನ್ನು ನಂಬಿದ್ದಕ್ಕೆ ವಾಹಿನಿಗೆ ಧನ್ಯವಾದಗಳು. ನನ್ನ ಸಹಕಲಾವಿದರು ಎಲ್ಲರೂ ಪಾತ್ರಕ್ಕೆ ಸರಿಯಾಗಿ ಹೊಂದಿಕೆ ಆಗಿದ್ದು, ಚೆನ್ನಾಗಿ ನಟಿಸುತ್ತಿದ್ದಾರೆ. ಚೆನ್ನಾಗಿರಿ, ಒಳ್ಳೆಯದನ್ನು ಮಾಡಿ, ಪ್ರಾಮಾಣಿಕತೆಯಿಂದ ಇರಿ. 

ಮೈಮರೆತು ದುಪ್ಪಟ್ಟಾ ಮೇಲೆ ಕುಳಿತ ನಟಿ ಸೋನಲ್‌ ಮೊಂಥೆರೋ: ಮುಂದೇನಾಯ್ತು ವಿಡಿಯೋ ನೋಡಿ...

ಯಾಕೆ ಧಾರಾವಾಹಿ ಬಿಟ್ರು? 
ಅಂದಹಾಗೆ ಅರ್ಜುನ್‌ ರಮೇಶ್‌ ಅವರು ಯಾವ ಕಾರಣಕ್ಕೆ ಈ ಧಾರಾವಾಹಿ ಬಿಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅವರು ಪ್ರತಿಕ್ರಿಯೆ ನೀಡಬೇಕಿದೆ. ಅರ್ಜುನ್‌ ಅವರು ಯುಟ್ಯೂಬ್‌ ಚಾನೆಲ್‌ ಕೂಡ ಆರಂಭಿಸಿದ್ದು, ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರಾ ಎಂದು ಕಾದು ನೋಡಬೇಕಿದೆ. 

ಈ ಸೀರಿಯಲ್‌ ಕಥೆ ಏನು? 
ತಾಳ್ಮೆ ತ್ಯಾಗ ಮಾಡಿ ಹೆಸರುವಾಸಿಯಾಗಿರುವ ಪಾರ್ವತಿ ದೇವಿ, ಜಗನ್ಮಾತೆಯಾದಳು, ದುಷ್ಟ ಸಂಹಾರ ಮಾಡಿದ್ದಳು. ಈ ಬಗ್ಗೆ ʼಶ್ರೀದೇವಿ ಮಹಾತ್ಮೆʼ ಧಾರಾವಾಹಿ ಕಥೆ ಸಾಗುತ್ತಿದೆ. ಶಿವನಾಗಿ ಅರ್ಜುನ್ ರಮೇಶ್ ಅವರು ಬಣ್ಣ ಹಚ್ಚಿದ್ದರು.  ಇನ್ನು ಪಾರ್ವತಿಯಾಗಿ ಜೀವಿತ ವಸಿಷ್ಠ ಅಭಿನಯಿಸುತ್ತಿದ್ದಾರೆ. 


ಸೀರಿಯಲ್‌ಗಳಲ್ಲಿ ನಟನೆ
ಈ ಹಿಂದೆ  ʼಅಗ್ನಿಸಾಕ್ಷಿʼ ʼಇಂತಿ ನಿಮ್ಮ ಆಶಾʼ ಮತ್ತು ʼನಾಗಿಣಿʼ ಧಾರಾವಾಹಿಗಳಲ್ಲಿ ಅರ್ಜುನ್‌ ನಟಿಸಿದ್ದರು. ಇನ್ನು ʼಶನಿʼ, ʼಮಹಾಕಾಳಿʼ ಧಾರಾವಾಹಿಗಳಲ್ಲಿ ಅವರು ಶಿವನ ಪಾತ್ರ ಮಾಡಿದ್ದರು. ಪೌರಾಣಿಕ ಪಾತ್ರಗಳನ್ನು ಬಹಳ ಆರಾಮಾಗಿ ಮಾಡಿ ಹೆಸರುವಾಸಿಯಾಗಿದ್ದಾರೆ. ಅನೇಕರು ಅರ್ಜುನ್‌ ಅವರನ್ನು ಶಿವ ಎಂದು ಕರೆದಿದ್ದರಂತೆ, ಅಷ್ಟೇ ಅಲ್ಲದೆ ಕೈ ಮುಗಿದು ನಮಸ್ಕಾರ ಮಾಡಿದ್ದೂ ಇದೆ. 

ಹೆಂಡ್ತಿ ಇದ್ದವರ ಸರ್ವೆ ಮಾಡಿದ್ರೆ ಯುದ್ಧ ಶುರುವಾಗತ್ತೆ.. ಯಾಕೆಂದ್ರೆ... ಬಿಗ್‌ಬಾಸ್‌ ಅರ್ಜುನ್‌ ರಮೇಶ್‌ ಮಾತು ಕೇಳಿ..

ಆರಂಭದಲ್ಲಿ ಅರ್ಜುನ್ ರಮೇಶ್ ಅವರಿಗೆ ಶಿವನ ಮೇಲೆ ಅಷ್ಟು ನಂಬಿಕೆ ಇರಲಿಲ್ಲ, ಆದರೆ ಈ ಪಾತ್ರ ಮಾಡಿದ ಮೇಲೆ ಅವರು ಶಿವಭಕ್ತರಾದರು. ಅರ್ಜುನ್ ರಮೇಶ್ ಅವರು ಪ್ರಜ್ವಲ್‌ ದೇವರಾಜ್‌ ನಟನೆಯ ʼಜೆಂಟಲ್ ಮ್ಯಾನ್ʼ, ʼದೇವರ ಆಟ ಬಲ್ಲವರಾರುʼ, ʼಕೌಟಿಲ್ಯʼ ಸಿನಿಮಾಗಳಲ್ಲೂ ನಟಿಸಿದ್ದಾರೆ.

36 ಗಂಟೆಗಳ ಕಾಲ ನಿರಂತರ ಶೂಟಿಂಗ್ ಮಾಡಿ ʼದೇವರ ಆಟ ಬಲ್ಲವರಾರುʼ ಸಿನಿಮಾ ಗಿನ್ನೆಲ್ ದಾಖಲೆ ಮಾಡುವ ಪ್ರಯತ್ನವನ್ನೂ ಮಾಡಿತ್ತು. ಅರ್ಜುನ್ ರಮೇಶ್‌ ಅವರು ರಾಜಕಾರಣಿಯೂ ಆಗಿದ್ದಾರೆ. ಅಷ್ಟೇ ಅಲ್ಲದೆ ಅವರು ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುತ್ತಾರೆ. 

ಅರ್ಜುನ್ ರಮೇಶ್ ಅವರು ಕನ್ನಡದ ʼಬಿಗ್ ಬಾಸ್ʼ ಓಟಿಟಿ ಶೋನಲ್ಲಿ ಭಾಗವಹಿಸಿದ್ದರು. ಆಟ ಆಡುವಾಗ ಪೆಟ್ಟಾಗಿದ್ದರಿಂದ ಅವರು ಹೊರಗಡೆ ಬರುವ ಹಾಗೆ ಆಯ್ತು. ಆದರೆ ಅವರು ಉತ್ತಮ ಆಟ ಆಡಿದ್ದು, ಪೆಟ್ಟಾಗಿಲ್ಲ ಅಂದ್ರೆ ಇನ್ನೂ ಒಂದಿಷ್ಟು ದಿನಗಳ ಕಾಲ ಅವರು ಬಿಗ್‌ ಬಾಸ್‌ ಮನೆಯಲ್ಲಿ ಇರುತ್ತಿದ್ದರು. 

ಅರ್ಜುನ್ ರಮೇಶ್ ಅವರಿಗೆ ಇಬ್ಬರು ಪತ್ನಿಯರು. ಇಬ್ಬರು ಪತ್ನಿಯರಿಗೆ ಒಂದೊಂದು ಹೆಣ್ಣು ಮಗಳಿದ್ದಾಳೆ. ಅಂದಹಾಗೆ ಅರ್ಜುನ್‌ ಅವರು ಇಬ್ಬರು ಪತ್ನಿಯರ ಜೊತೆಗೆ, ಮಕ್ಕಳೊಂದಿಗೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಪತ್ನಿ, ಮಕ್ಕಳ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ
ಕಾಲುಂಗುರ ಧರಿಸಿದ ನಟಿ ರಜಿನಿ ಪತಿ…. ಪ್ರಶ್ನಿಸಿದವರಿಗೆ ಏನಂದ್ರು ನೋಡಿ