
“ಇನ್ಮುಂದೆ ‘ಬಿಗ್ ಬಾಸ್ ಕನ್ನಡ’ ಶೋಗಳನ್ನು ನಿರೂಪಣೆ ಮಾಡೋದಿಲ್ಲ, ಸಿನಿಮಾ ಕಡೆಗೆ ಗಮನ ಕೊಡ್ತೀನಿ. ನಾನು ಇನ್ನೆಷ್ಟು ಜನರನ್ನು ತಿದ್ದಲಿ?” ಅಂತ ಕಿಚ್ಚ ಸುದೀಪ್ ಅವರು ಈಗಾಗಲೇ ಅಧಿಕೃತ ಹೇಳಿಕೆ ನೀಡಿದ್ದಾರೆ. ಹಾಗಾದರೆ ನಿಜಕ್ಕೂ ಮುಂದಿನ ಸೀಸನ್ ಯಾರು ನಿರೂಪಣೆ ಮಾಡ್ತಾರಾ?
ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ..!
ʼಗೋಲ್ಡನ್ ಸ್ಟಾರ್ʼ ಗಣೇಶ್ ಹಾಗೂ ರಮೇಶ್ ಅರವಿಂದ್ ಅವರನ್ನು ʼಬಿಗ್ ಬಾಸ್ʼ ನಿರೂಪಣೆ ಮಾಡಲು ಸಂಪರ್ಕಿಸಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದಾಡುತ್ತಿದೆ. ಈ ಹಿಂದೆಯೂ ಈ ಬಗ್ಗೆ ಪೋಸ್ಟ್ ಹರಿದಾಡಿತ್ತು. ಈ ಬಗ್ಗೆ ಗಣೇಶ್ ಅವರಾಗಲೀ, ರಮೇಶ್ ಅರವಿಂದ್ ಅವರಾಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಣ್ಣಾವ್ರು ಮನೆಲ್ಲಿ 'ತತ್ತಯ್ಯಾ' ಅಂತಿದ್ರು..; ಅದ್ನ ಅಪ್ಪು ಬಾಯಲ್ಲಿ ಕೇಳಿ, ಎಂಥಾ ಸೊಗಸು!
ಈ ಸೀಸನ್ ಕೊನೇ ದಿನ ಕಿಚ್ಚ ಸುದೀಪ್ ಏನಂದ್ರು?
ಕಿಚ್ಚ ಸುದೀಪ್ ಅವರು ʼಬಿಗ್ ಬಾಸ್ʼ ಶೋ ನಿರೂಪಣೆ ಮಾಡೋದಿಲ್ಲ ಅಂತ ಹೇಳಿಕೆ ನೀಡಿದ್ದಾರೆ. ಆದರೆ ಈ ಸೀಸನ್ ಕೊನೆಯ ದಿನ ಅವರು “ನನ್ನ ನಿರೂಪಣೆಯ ಕೊನೆಯ ಶೋ ಇದು, ನಾನು ಈ ಶೋಗೆ ವಿದಾಯ ಹೇಳ್ತಿದ್ದೀನಿ” ಎಂದೆಲ್ಲ ಅವರು ಹೇಳಲೇ ಇಲ್ಲ. “ಬಿಗ್ ಬಾಸ್ ಶೋಗೆ ಒಳ್ಳೆಯದಾಗಲಿ” ಎಂದು ಹೇಳಿ ಅವರು ಹೇಳಿದ್ದಾರೆ ಅಷ್ಟೇ. ಹಾಗಾದರೆ ಮುಂದೆ ಕಥೆ ಏನು?
ಡೈರೆಕ್ಟರ್ ಪ್ರಕಾಶ್ ಏನಂದ್ರು?
ಈ ಬಗ್ಗೆ ʼಬಿಗ್ ಬಾಸ್ʼ ಶೋ ಡೈರೆಕ್ಟರ್ ಪ್ರಕಾಶ್ ಅವರು ಮಾತನಾಡಿ, “ಕಿಚ್ಚ ಸುದೀಪ್ ಇಲ್ಲದೆ ಕನ್ನಡ ಬಿಗ್ ಬಾಸ್ ಇದ್ಯಾ? ಚಾನ್ಸ್ ಇಲ್ಲ. ಇನ್ನೂ ಸಮಯ ಇದೆ, ನಾವು ಕಿಚ್ಚ ಸುದೀಪ್ ಸರ್ ಅವರನ್ನು ಕನ್ವಿನ್ಸ್ ಮಾಡ್ತೀವಿ, ಸ್ವಲ್ಪ ಸಮಯ ಕೊಡಿ. ಹೊಸ ಸೀಸನ್ ಬರೋಕೆ ಇನ್ನೂ ಒಂದು ವರ್ಷ ಟೈಮ್ ಇದೆ” ಎಂದು ಹೇಳಿದ್ದರು.
ಬಿಗ್ ಬಾಸ್ ಟ್ರೋಫಿಯನ್ನು ಚಿಲ್ಲೂರು ಬಡ್ನಿ ಆಂಜನೇಯ ದೇವರ ಪಾದಕ್ಕಿಟ್ಟು ಪೂಜಿಸಿದ ಹನುಮಂತ ಲಮಾಣಿ!
ʼಬಿಗ್ ಬಾಸ್ʼ ನೋಡೋದು ಕಷ್ಟ!
ಕಲರ್ಸ್ ಕನ್ನಡ ವಾಹಿನಿ ಕನ್ವಿನ್ಸ್ ಮಾಡಿದರೂ ಕೂಡ ಕಿಚ್ಚ ಸುದೀಪ್ ಅವರು ಈ ಶೋಗೆ ನಿರೂಪಣೆ ಮಾಡಲು ಒಪ್ತಾರಾ? ಇಲ್ಲವಾ? ಎಂದು ಕಾದು ನೋಡಬೇಕಿದೆ. ಕಳೆದ ಹನ್ನೊಂದು ವರ್ಷಗಳ ಕಾಲ ಅವರು ಈ ಶೋ ನಿರೂಪಣೆ ಮಾಡಿಕೊಂಡು ಬಂದಿದ್ದರು. ಈಗ ಕಿಚ್ಚ ಸುದೀಪ್ ಇಲ್ಲದೆ ಬಿಗ್ ಬಾಸ್ ಶೋ ನೋಡೋದು ತುಂಬ ಕಷ್ಟ ಅಂತ ವೀಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ಅಂದಹಾಗೆ ʼಬಿಗ್ ಬಾಸ್ʼ ಶೋ ನನಗೆ ತಾಳ್ಮೆ ಕಲಿಸಿದೆ ಎಂದು ಕಿಚ್ಚ ಸುದೀಪ್ ಅವರೇ ಹೇಳಿದ್ದಾರೆ. ಇನ್ನು ಈ ಸೀಸನ್‌ಗಳ ಸ್ಪರ್ಧಿಗಳ ಜೊತೆ ಸುದೀಪ್ ಅವರು ಉತ್ತಮ ಸಂಬಂಧ ಹೊಂದಿದ್ದಾರೆ. ಸ್ಪರ್ಧಿಗಳ ಜೊತೆ ಕಾಂಟ್ಯಾಕ್ಟ್‌ನಲ್ಲಿದ್ದು, ಅವರಿಗೆ ಬೇಕಾದ ಸಲಹೆ-ಸೂಚನೆ ಕೊಡ್ತಾರೆ, ಅಷ್ಟೇ ಅಲ್ಲದೆ ಅವರ ಪ್ರಾಜೆಕ್ಟ್‌ಗಳಿಗೆ ಬೆಂಬಲ ಕೂಡ ನೀಡ್ತಾರೆ. ಇತ್ತೀಚೆಗೆ ʼಬಿಗ್ ಬಾಸ್ ಕನ್ನಡ 7ʼ ಸ್ಪರ್ಧಿ ದೀಪಿಕಾ ದಾಸ್, ವಾಸುಕಿ ವೈಭವ್, ಕಾರ್ತಿಕ್ ಮಹೇಶ್ ಅವರ ಪ್ರಾಜೆಕ್ಟ್‌ಗಳಿಗೆ ಕಿಚ್ಚ ಸುದೀಪ್ ಅವರು ಬೆಂಬಲ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.