ಸೀರಿಯಲ್​ ತಾರೆಯರ ಯುಗಾದಿ ಸಂಭ್ರಮದ ಶೂಟಿಂಗ್​ ಹೇಗಿತ್ತು? ತೆರೆಮರೆಯ ಝಲಕ್​ ಇಲ್ಲಿದೆ ನೋಡಿ...

Published : Apr 09, 2024, 07:15 PM IST
ಸೀರಿಯಲ್​ ತಾರೆಯರ ಯುಗಾದಿ ಸಂಭ್ರಮದ ಶೂಟಿಂಗ್​ ಹೇಗಿತ್ತು? ತೆರೆಮರೆಯ ಝಲಕ್​  ಇಲ್ಲಿದೆ ನೋಡಿ...

ಸಾರಾಂಶ

ಸೀರಿಯಲ್​ ತಾರೆಯರ ಯುಗಾದಿ ಸಂಭ್ರಮದ ಶೂಟಿಂಗ್​ ಹೇಗಿತ್ತು? ತೆರೆಮರೆಯ ಝಲಕ್​  ಇಲ್ಲಿದೆ ನೋಡಿ...  

ಹೊಸ ವರ್ಷ ಯುಗಾದಿಗೆ ಮುನ್ನುಡಿ ಬರೆದಾಗಿದೆ. ಹೊಸ ವರ್ಷ ಆರಂಭವಾದರೂ ಸೀರಿಯಲ್​ಗಳಲ್ಲಿ ಇನ್ನೂ ಕೆಲವು ದಿನಗಳವರೆಗೆ ಈ ವರ್ಷದ ಹರ್ಷ ನಡೆಯುತ್ತಲೇ ಇರುತ್ತದೆ. ವಿಶೇಷ ಸಂದರ್ಭಗಳಲ್ಲಿ ಹಾಗೂ ಹಬ್ಬ-ಹರಿದಿನಗಳಲ್ಲಿ ವಾಹಿನಿಗಳು ಸೀರಿಯಲ್​ ಮೂಲಕ ನೂತನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಹಲವು ಸೀರಿಯಲ್​ಗಳ ಮೂಲಕ ಹಬ್ಬದ ಮಹತ್ವ, ಆಚರಣೆ, ಸಂಪ್ರದಾಯ ಎಲ್ಲವನ್ನೂ ಹೇಳುವ ಸಣ್ಣ ಪ್ರಯತ್ನವೂ ನಡೆಯುತ್ತದೆ. ಇಂದಿನ ಪೀಳಿಗೆಯ ಮಕ್ಕಳಿಗೆ ಮಾತ್ರವಲ್ಲದೇ ಸಂಪ್ರದಾಯದ ಅರಿವೇ ಇಲ್ಲದ ಕೆಲವು ಜನರಿಗೂ ಧಾರಾವಾಹಿಗಳು ಅವುಗಳ ಬಗ್ಗೆ ತಿಳಿಸುವ ಕುರಿತು ವ್ಯಾಪಕ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಮಾತ್ರವಲ್ಲದೇ ನಗರ, ಪಟ್ಟಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೇ ಹಳ್ಳಿಗಾಡುಗಳಲ್ಲಿಯೂ ಇಂದು ಹಲವು ಸಂಪ್ರದಾಯಗಳು ಮರೆಯಾಗುತ್ತಿರುವ ಈ ಸಮಯದಲ್ಲಿ ಕೆಲವು ಸೀರಿಯಲ್​ಗಳಲ್ಲಿ ಹಳ್ಳಿಯ ಸೊಗಡನ್ನೂ ಹಬ್ಬಗಳ ಸಮಯದಲ್ಲಿ ತೋರಿಸಲಾಗುತ್ತಿದೆ.

ಇವೆಲ್ಲ ವೀಕ್ಷಕರಿಗೆ ತಲುಪಬೇಕು ಎಂದರೆ ಇದರ ಹಿಂದೆ ಸೀರಿಯಲ್​ ತಾರೆಯರು ಹಾಗೂ ಇಡೀ ತಂಡದ ಶ್ರಮ ಸಾಕಷ್ಟು ಇರುತ್ತದೆ.  ಉರಿ ಬಿಸಿಲಿನಲ್ಲಿಯೂ ಭಾರಿ ಮೇಕಪ್​  ಮಾಡಿಕೊಂಡು ದಿನಪೂರ್ತಿ ಶೂಟಿಂಗ್​ ಸೆಟ್​ನಲ್ಲಿ ಇರುವುದು ಎಂದರೂ ಅದೇನೂ ಸುಲಭದ ಮಾತಲ್ಲ. ಆದರೂ ವೀಕ್ಷಕರನ್ನು ರಂಜಿಸಲು, ಇತರ ಸೀರಿಯಲ್​ಗಳಿಗೆ ಪೈಪೋಟಿ ನೀಡಲು ಇಡೀ ಧಾರಾವಾಹಿ ತಂಡಕ್ಕೆ ಇದು ಅನಿವಾರ್ಯ ಕೂಡ. ಇದೇ ರೀತಿ ಇದೀಗ ಯುಗಾದಿ ಸಂಭ್ರಮವನ್ನು ಜನರಿಗೆ ನೀಡಲು ಜೀ ಕನ್ನಡ ವಾಹಿನಿಯ ಸೀರಿಯಲ್​ ತಂಡ ಹೇಗೆಲ್ಲಾ ಶ್ರಮ ವಹಿಸಿ ಶೂಟಿಂಗ್​ ಮಾಡಿತ್ತು ಎಂಬ ಬಗ್ಗೆ ವಿಡಿಯೋ ಒಂದನ್ನು ವಾಹಿನಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದೆ.

ಕರ್ಮ​ ರಿಟರ್ನ್ಸ್​ ಎನ್ನೋದು ಇದಕ್ಕೇ ಅಲ್ವಾ? ಶಾರ್ವರಿ ಬಂಡವಾಳ ತುಳಸಿ ಮುಂದೆ ಬಯಲಾಗುತ್ತಾ?

ಇದರಲ್ಲಿ ವಿವಿಧ ಸೀರಿಯಲ್​ಗಳ ನಾಯಕ-ನಾಯಕಿಯರನ್ನು ನೋಡಬಹುದು. ಅವರೆಲ್ಲರೂ ಯುಗಾದಿ ಸಂಭ್ರಮಕ್ಕಾಗಿ ಹೇಗೆಲ್ಲಾ ರೆಡಿಯಾಗಿದ್ದರು, ಶೂಟಿಂಗ್​ ಸೆಟ್​ ಹೇಗಿತ್ತು, ಅದಕ್ಕಾಗಿ ಅವರು ಹೇಗೆ ತಯಾರಿ ನಡೆಸಿದ್ದರು ಎಂಬ ಬಗ್ಗೆ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಹೊಸಪರ್ವದ, ಹೊಸ ನೋಟವನ್ನು ನಿಮ್ಮ ಮುಂದೆ ತರಲು ತೆರೆಯ ಹಿಂದೆ ನಡೆದ ಸಿದ್ಧತೆಯ ಝಲಕ್ ಶೀರ್ಷಿಕೆಯೊಂದಿಗೆ ಇದರ ಪ್ರೊಮೋ ರಿಲೀಸ್​​ ಮಾಡಲಾಗಿದೆ. 

ಇದರಲ್ಲಿ ಮಹಾನಟಿ ರಿಯಾಲಿಟಿ ಷೋನ್​ನ ತೀರ್ಪುಗಾರರಾಗಿರುವ ನಟ ರಮೇಶ್​ ಹಾಗೂ ಷೋನ ತಂಡ, ಪುಟ್ಟಕ್ಕನ ಮಕ್ಕಳು, ಸತ್ಯ, ಶ್ರೀರಸ್ತು-ಶುಭಮಸ್ತು, ಸೀತಾರಾಮ, ಭೂಮಿಗೆ ಬಂದ ಭಗವಂತ, ಶ್ರಾವಣಿ ಸುಬ್ರಹ್ಮಣ್ಯ ಸೇರಿದಂತೆ ಇತರ ಸೀರಿಯಲ್​ಗಳ ನಾಯಕ-ನಾಯಕಿ ಡ್ರಾಮಾ ಜ್ಯೂನಿಯರ್ಸ್​ ತಂಡ ಸೇರಿದಂತೆ ಹಲವರು ಹೇಗೆಲ್ಲಾ ಶ್ರಮ ವಹಿಸಿ ಇದಕ್ಕಾಗಿ ಕೆಲಸ ಮಾಡಿದ್ದಾರೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ. ಅಮೃತಧಾರೆಯ ಗೌತಮ್​ ಮತ್ತು ಭೂಮಿಕಾ ಪ್ರೊಮೋದಲ್ಲಿ ಮಿಸ್​ ಆಗಿದ್ದು ಅವರೆಲ್ಲಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. 

ಸ್ನಾನ ಸ್ಕಿಪ್​ ಮಾಡುವ ಸೀಕ್ರೇಟ್​ ಹೇಳಿದ ನಟಿ ತಮನ್ನಾ ಭಾಟಿಯಾ: ಏನಿದು ಮಿಲ್ಕಿ ಬ್ಯೂಟಿಯ ಸಂಡೇ ಗುಟ್ಟು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?
ಏನೂ ಮಾಡದೆ ಸ್ಪಂದನಾ ಸೋಮಣ್ಣ Bigg Boss ಮನೇಲಿ ಇರೋದು ಹೇಗೆ? ಕಿಚ್ಚ ಸುದೀಪ್‌ ಬಿಚ್ಚಿಟ್ಟ ಸತ್ಯ ಏನು?