
ಬೆಂಗಳೂರು (ಜ.22): ಮನರಂಜನೆಗೆ ಮತ್ತೊಂದು ಹೆಸರೇ ಜೀ ಕನ್ನಡ. ಜನಪ್ರಿಯ ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಗಳಿಂದ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ಈಗ ಸಿನಿಪ್ರಿಯರಿಗೆ ಇಲ್ಲಿದೆ ನೋಡಿ ಮತ್ತೊಂದು ಗುಡ್ ನ್ಯೂಸ್. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅಭಿನಯದ, ನರ್ತನ್ ನಿರ್ದೇಶಿಸಿರುವ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ‘ಭೈರತಿ ರಣಗಲ್ ‘ ಚಿತ್ರವು ಇದೇ ಜನವರಿ 26ರಂದು ಸಂಜೆ 4:30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್‌ಗೆ ರುಕ್ಮಿಣಿ ವಸಂತ್ ಅವರು ಜೋಡಿಯಾಗಿದ್ದು ಇವರಿಬ್ಬರ ಜೋಡಿ ನಿಮಗೆ ಮತ್ತಷ್ಟು ಮನರಂಜನೆ ನೀಡಲಿದೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ತಂಗಿಯಾಗಿ ನಟಿ ಛಾಯಾ ಸಿಂಗ್ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಡಬಲ್ ಶೇಡ್‌ನಲ್ಲಿ ಮಿಂಚಿದ್ದು, ಫಸ್ಟ್ ಹಾಫ್‌ನಲ್ಲಿ ಕಾನೂನು ಕಾಯುವ ವಕೀಲನಾಗಿ, ಸೆಕೆಂಡ್ ಹಾಫ್‌ನಲ್ಲಿ ಕಾನೂನನ್ನೇ ಕೈಗೆತ್ತಿಕೊಳ್ಳುವ ಗ್ಯಾಂಗ್‌ಸ್ಟರ್ ಆಗಿ ಗಮನಸೆಳೆಯುತ್ತಾರೆ.
ಖಡಕ್ ಡೈಲಾಗ್‌ಗಳು, ಶಿವರಾಜ್‌ಕುಮಾರ್ ಅವರ ಉತ್ತಮವಾದ ನಟನೆ, ಶಬೀರ್, ರಾಹುಲ್ ಬೋಸ್ ಅವರಂತಹ ಖಳನಟರ ಸಖತ್ ಅಭಿನಯ ಸಿನಿಪ್ರಿಯರ ಮನಗೆಲ್ಲುವುದು ಗ್ಯಾರಂಟೀ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ಹಿರಿಯ ನಟ ದೇವರಾಜ್, ಬಾಬು ಹಿರಣಯ್ಯ ಮತ್ತು ಮಧು ಗುರುಸ್ವಾಮಿ ನಟಿಸಿದ್ದಾರೆ. ರೋಣಾಪುರದ ಜನರ ನೋವು, ಕಾರ್ಮಿಕರ ಸಂಕಷ್ಟಗಳ ಸುತ್ತ ಕಥೆ ಸಾಗುತ್ತದೆ. ಘಟ್ಟ ಎಂಬ ಸೈಕೋ ರಾಕ್ಷಸನ ಆರ್ಭಟವೂ ಇದೆ. ವಕೀಲನಾಗಿ ಜನರ ಪರ ನಿಲ್ಲುವ ರಣಗಲ್‌ಗೆ (ಡಾ. ಶಿವರಾಜ್ ಕುಮಾರ್) ಆ ಊರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆ ವೈಶಾಲಿ ಮೇಲೆ (ರುಕ್ಮಿಣಿ ವಸಂತ್) ಪ್ರೀತಿ ಹುಟ್ಟುತ್ತದೆ.
ಭೈರತಿ ರಣಗಲ್ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್: ಮಫ್ತಿ-2 ಬಗ್ಗೆ ಮಹತ್ವದ ಅಪ್‌ಡೇಟ್ ಕೊಟ್ಟ ಶಿವಣ್ಣ
ಭೈರತಿ ರಣಗಲ್ ತನ್ನದೇ ಮೈನಿಂಗ್ ಸಾಮ್ರಾಜ್ಯ ಕಟ್ಟುತ್ತಾನೆ. ಅಲ್ಲಿಂದ ಮುಂದೆ ಪರಾಡೆ ಹಾಗೂ ರಣಗಲ್ ನಡುವಿನ ಏಟು ಎದಿರೇಟು ಹೇಗೆ ಸಾಗುತ್ತದೆ ಎಂಬುವುದೇ ಈ ಚಿತ್ರದ ಸಾರಾಂಶ.ಒಬ್ಬ ಸಾಮಾನ್ಯ ವಕೀಲನಾಗಿದ್ದ ಭೈರತಿ ರಣಗಲ್ ಯಾಕೆ ಗ್ಯಾಂಗ್‌ಸ್ಟರ್ ಆದಾ ಎಂದು ತಿಳ್ಕೊಬೇಕಾ? ಹಾಗಿದ್ರೆ ವೀಕ್ಷಿಸಿ 'ಭೈರತಿ ರಣಗಲ್' ಇದೇ ಜನವರಿ 26 ರಂದು ಸಂಜೆ 4:30 ಕ್ಕೆ ಗಂಟೆಗೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.