
ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಮಿಂಚಿದ ಚೆಲುವೆ ಕಾವ್ಯಾ ಗೌಡ (Kavya Gowda) ಸದ್ಯ ಸೀರಿಯಲ್ ಗಳಿಂದ ದೂರ ಉಳಿದು, ಗಂಡ, ಮಗು ಸಂಸಾರ ಎಂದು ಬ್ಯುಸಿಯಾಗಿದ್ದಾರೆ. ಇದೀಗ ಮಗಳು ಸಿಯಾ ಒಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂಭ್ರಮವನ್ನು ನಟಿ ಮಗಳ ಮುದ್ದಾದ ಕ್ಷಣಗಳ ವಿಡಿಯೋ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಕಾವ್ಯ ಗೌಡ ಗಂಡನ ಮನೆ ನಿಜಕ್ಕೂ ಯಾರಿಗೆ ಸೇರಿದ್ದು? ನೆಟ್ಟಿಗರ ಕೊಂಕು ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ನಟಿ!
ಕಳೆದ ವರ್ಷ ಜನವರಿ ತಿಂಗಳ 22ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ (Ayodhya Rama Pranaprathishta) ಜರುಗಿತು. ಅದೇ ದಿನ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಅವರು ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ಪ್ರಾಣ ಪ್ರತಿಷ್ಟೆ ದಿನ ಹುಟ್ಟಿದ ಮಗಳಿಗೆ ಕಾವ್ಯಾ ಗೌಡ ಸಿಯಾ ಎಂದು ಕರೆದಿದ್ದರು. ಕಾವ್ಯಾ ಗೌಡ ವರಮಹಾಲಕ್ಷ್ಮೀ ಹಬ್ಬದಂದು ಮೊದಲ ಬಾರಿಗೆ ಮಗಳ ವಿಶೇಷವಾದ ಫೋಟೋಶೂಟ್ ಮಾಡಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಏಳು ತಿಂಗಳ ಬಳಿಕ ಮಗಳ ಅದ್ಧೂರಿ ನಾಮಕರಣ ಮಾಡಿ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
3ನೇ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಳ್ಳುತ್ತಿರುವ ಕಾವ್ಯಾ ಗೌಡ; ಪತಿಗೆ ಬರೆದ ಪತ್ರ ವೈರಲ್!
ಇದೀಗ ಮುದ್ದು ಮಗಳು ಸಿಯಾಗೆ ಒಂದು ವರ್ಷ (first birthday of Siya) ತುಂಬಿದ ಹಿನ್ನೆಲೆಯಲ್ಲಿ ಮಗಳು ಹುಟ್ಟಿದಾಗಿನಿಂದ ಇಲ್ಲಿವರೆಗಿನ ಮುದ್ದಾದ ಕ್ಷಣಗಳ ಫೋಟೊ ಹಾಗೂ ವಿಡಿಯೋಗಳನ್ನು ಜೊತೆಯಾಗಿ ಸೇರಿಸಿ ವಿಡೀಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆ ಮಗಳಿಗಾಗಿ ಮುದ್ದಾದ ಬರಹವನ್ನು ಬರೆದಿದ್ದಾರೆ. ನನ್ನ ಅಮೂಲ್ಯ ಮಗಳು ಸಿಯಾಗೆ, 1 ನೇ ಹುಟ್ಟುಹಬ್ಬದ ಶುಭಾಶಯಗಳು. ಕಳೆದ ವರ್ಷವು ಪ್ರೀತಿ, ನಗು ಮತ್ತು ಹಲವು ಅಮೂಲ್ಯ ಕ್ಷಣಗಳಿಂದ ತುಂಬಿದ ಸುಂದರ ಪ್ರಯಾಣವಾಗಿದೆ. ನಾನು ನಿನ್ನನ್ನು ಮೊದಲ ಬಾರಿಗೆ ಹಿಡಿದಾಗಿನಿಂದ, ನೀನು ನನ್ನ ಜೀವನದಲ್ಲಿ ವರ್ಣಿಸಲಾಗದ ಸಂತೋಷವನ್ನು ತಂದಿದ್ದಿ. ನೀನು ಬೆಳೆಯುವುದನ್ನು ಹಾಗೂ ಜಗತ್ತನ್ನು ಎಕ್ಸ್ ಪ್ಲೋರ್ ಮಾಡೋದನ್ನು ನೋಡುವುದೇ ಚೆಂದ ಅನುಭವ.ನಿನ್ನ ತಾಯಿಯಾಗಿರೋದಕ್ಕೆ ತುಂಬಾನೆ ಕೃತಜ್ಞಳಾಗಿದ್ದೇನೆ. ನಿನ್ನ ನಗು ನನ್ನ ದಿನಗಳನ್ನು ಬೆಳಗಿಸುತ್ತದೆ, ಮತ್ತು ನಿನ್ನ ನಗು ನನ್ನ ಕಿವಿಗಳಿಗೆ ಅತ್ಯಂತ ಮಧುರವಾದ ರಾಗವಾಗಿದೆ. ನೀನು ತಲುಪಿದ ಪ್ರತಿಯೊಂದು ಮೈಲಿಗಲ್ಲು ನನ್ನ ಹೃದಯವನ್ನು ಹೆಮ್ಮೆ ಮತ್ತು ಸಂತೋಷದಿಂದ ತುಂಬುವಂತೆ ಮಾಡುತ್ತಿದೆ. ನೀನು ಮೊದಲ ಹೆಜ್ಜೆ ಇಟ್ಟಾಗ ಮತ್ತು ಮೊದಲ ಮಾತು ಆಡಿದಾಗ ಭಾವುಕಳಾದೆ. ಸಿಯಾ ನೀನು ನನ್ನ ಹೃದಯ ಮತ್ತು ಆತ್ಮ, ನನ್ನ ಬ್ರಹ್ಮಾಂಡದ ಕೇಂದ್ರ (center of the universe). ನಿನ್ನ ಮೇಲಿನ ನನ್ನ ಪ್ರೀತಿಗೆ ಮಿತಿಯಿಲ್ಲ ಮತ್ತು ದಿನ ಕಳೆದಂತೆ ಆಳವಾಗಿ ಬೆಳೆಯುತ್ತದೆ. ಪ್ರೀತಿಯಿಂದ ಅಮ್ಮ ಮತ್ತು ಪಪ್ಪಾ ಎಂದು ಕಾವ್ಯಾ ಗೌಡ ಬರೆದುಕೊಂಡಿದ್ದಾರೆ.
ಮಗಳ ನಾಮಕರಣದ ಸಂಭ್ರಮದಲ್ಲಿ ನಟಿ ಕಾವ್ಯಾ ಗೌಡ… ಮುದ್ದು ಸಿಯಾಗೆ ಹರಸಿ, ಆಶೀರ್ವದಿಸಿದ ಜನ
ಅಂದ ಹಾಗೇ ಕಾವ್ಯಾ ಗೌಡ ‘ರಾಧಾ ರಮಣ’ (Radha Ramana(, ‘ಗಾಂಧಾರಿ’ ಧಾರಾವಾಹಿಗಳಲ್ಲಿ ಹಾಗೂ, ‘ಬಕಾಸುರ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಬ್ಯುಸಿನೆಸ್ ಮ್ಯಾನ್ ಸೋಮಶೇಖರ್ (Somashekhar) ಅವರನ್ನು ವಿವಾಹವಾಗಿದ್ದು, ಸದ್ಯ ನಟನೆಯಿಂದ ದೂರ ಉಳಿದು, ಸಂಸಾರದ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಅದರಲ್ಲೂ ಮಗಳ ಜೊತೆ ಟ್ರಾವೆಲ್ ಮಾಡುತ್ತಾ ಎಂಜಾಯ್ ಮಾಡುತ್ತಿರುತ್ತಾರೆ ಕಾವ್ಯಾ ಗೌಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.