ಅಂತೂ ತುಳಸಿಗೆ ತುಂಬಿತು ಏಳು- ಛೀಮಾರಿ ಹಾಕಿದ ವೀಕ್ಷಕರು ಸೀಮಂತಕ್ಕೆ ರೆಡಿ! ಹೊಟ್ಟೆ ಮಾತ್ರ ಕಾಣೆ?

Published : Feb 26, 2025, 03:46 PM ISTUpdated : Feb 26, 2025, 04:19 PM IST
ಅಂತೂ ತುಳಸಿಗೆ ತುಂಬಿತು ಏಳು- ಛೀಮಾರಿ ಹಾಕಿದ ವೀಕ್ಷಕರು ಸೀಮಂತಕ್ಕೆ ರೆಡಿ! ಹೊಟ್ಟೆ ಮಾತ್ರ ಕಾಣೆ?

ಸಾರಾಂಶ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ತುಳಸಿ ಗರ್ಭಿಣಿಯಾದ ವಿಷಯಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು. ವಯಸ್ಸಾದ ಮೇಲೆ ತಾಯಿಯಾಗುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಆದರೆ, ತುಳಸಿ ತನ್ನ ಸೊಸೆಗಾಗಿ ಮಗುವನ್ನು ಹೆತ್ತುಕೊಡಲು ನಿರ್ಧರಿಸಿದ್ದಾಳೆ. ಆಕೆಯ ಮಕ್ಕಳು ಕೂಡ ಆಕೆಯನ್ನು ಬೆಂಬಲಿಸುತ್ತಿದ್ದಾರೆ. ವಯಸ್ಸಿಗೆ ತಾಯ್ತನದ ಸಂಭ್ರಮಕ್ಕೆ ಅಡ್ಡಿಯಿಲ್ಲ ಎಂಬ ಸಂದೇಶದೊಂದಿಗೆ ಧಾರಾವಾಹಿ ಮುಂದುವರೆಯುತ್ತಿದೆ. ಪ್ರೇಕ್ಷಕರು ಈಗ ಸೀಮಂತಕ್ಕೆ ಕಾತರದಿಂದ ಕಾಯುತ್ತಿದ್ದಾರೆ.

ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿ ಗರ್ಭಿಣಿ ಎನ್ನುವ ಸಂಚಿಕೆ ತೋರಿಸಿದಾಗಿನಿಂತಲೂ ತುಳಸಿಯ ವಿರುದ್ಧ ಮಾತ್ರವಲ್ಲದೇ ತುಳಸಿ ಪಾತ್ರಧಾರಿ ಸುಧಾರಾಣಿ ವಿರುದ್ಧವೂ ಒಂದಷ್ಟು ಮಂದಿ ಗರಂ ಆಗಿದ್ದಾರೆ. ಥೂ ಅಸಹ್ಯ... ಈ ವಯಸ್ಸಿನಲ್ಲಿ ಎಂದೆಲ್ಲಾ ಹೇಳುತ್ತಿದ್ದಾರೆ. ಸೀರಿಯಲ್​ ವಿರುದ್ಧ  ಕೆಟ್ಟ ಕೆಟ್ಟ ಪದಗಳ ಪ್ರಯೋಗ ಮಾಡುತ್ತಿದ್ದಾರೆ. ನಿರ್ದೇಶಕರ ವಿರುದ್ಧವೂ ಗರಂ ಆಗಿದ್ದಾರೆ. ಅಜ್ಜಿಯಾಗುವ ಕಾಲದಲ್ಲಿ ಅಮ್ಮ ಆಗುವುದು ಹೇಗೆ ಸಾಧ್ಯ ಎನ್ನುವುದು ಬಹುತೇಕ ಮಂದಿಯ ಅಭಿಮತ. ಇದೊಂದು ಅಸಹ್ಯ ಎಂದೂ ಹೇಳಿದ್ದಾರೆ ಹಲವರು. ತಮ್ಮ ನಡುವೆ ದೈಹಿಕ ಸಂಬಂಧ ಬೇಡ ಎಂದಿದ್ದ ತುಳಸಿ ಮತ್ತು ಮಾಧವ್​ ಹೀಗೆ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ ಹಲವರು.  ಕಮೆಂಟ್​ ಯಾವ ಮಟ್ಟಿಗೆ ಬಿರುಗಾಳಿ ಎಬ್ಬಿಸಿತ್ತು ಎಂದರೆ ಇದರ ಪ್ರೊಮೋ  ಇನ್ಸ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ ದಿನ,  ಕಮೆಂಟ್​ ಸೆಕ್ಷನ್​ ಆಫ್​ ಮಾಡುವ ದಿನವೂ ಬಂದುಬಿಟ್ಟಿತ್ತು. ಈಗ ಎಲ್ಲವೂ ತಣ್ಣಗಾಗಿದೆ. ತುಳಸಿಗೆ ಹೊಟ್ಟೆ ಎಲ್ಲಿ ಎಂದು ವೀಕ್ಷಕರು ಕೇಳುತ್ತಲೇ ಸೀರಿಯಲ್​ ನೋಡುವುದನ್ನು ಮುಂದುವರೆಸಿದ್ದಾರೆ.

ಇದೀಗ ತುಳಸಿಗೆ ಏಳು ತಿಂಗಳು ತುಂಬಿದ್ದು ಸೀಮಂತಕ್ಕೆ ರೆಡಿಯಾಗಿದ್ದಾಳೆ. ಆಕೆಯನ್ನು ಎಲ್ಲರೂ ಸೇರಿ ಸೀಮಂತಕ್ಕೆ ತಯಾರು ಮಾಡಿದ್ದಾರೆ. ತಾಯ್ತನದ ಖುಷಿಯೇ ಬೇರೆ, ಪ್ರತಿಯೊಂದು ಹೆಣ್ಣು ಬಯಸುವ ಅನನ್ಯ ಅನುಭವ ಅದು. ವಯಸ್ಸಾದರೇನು, ಅಮ್ಮ ಆಗಬಾರದೇ ಎನ್ನುವ ಒಂದಿಷ್ಟು ಉತ್ತಮ ಸಂದೇಶವನ್ನು ಹೊಂದುವ ಮೂಲಕ ತುಳಸಿಯನ್ನು ಗರ್ಭಿಣಿ ಮಾಡಲಾಗಿದೆ. ಜೊತೆಗೆ ಆಕೆಯ ಉದ್ದೇಶ ಮಕ್ಕಳಾಗದ ತನ್ನ ಸೊಸೆಗೆ ಆ ಮಗುವನ್ನು ಹೆತ್ತು ಕೊಡುವುದೇ ಆಗಿರುವುದರಿಂದ ಒಂದಷ್ಟು ಮಂದಿ ತುಳಸಿಯ ಬೆಂಬಲಕ್ಕೂ ನಿಂತಿದ್ದಾರೆ. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿರುವುದು, ಇಲ್ಲಿ ವಿಲನ್​ ವಿರುದ್ಧ ಎಲ್ಲರೂ ಒಂದಾಗಿರುವುದು, ಜೊತೆಗೆ ತುಳಸಿಯ ಎಲ್ಲ ಮಕ್ಕಳೂ ಒಂದಾಗಿ ತುಳಸಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದು, ಅಣ್ಣ-ತಮ್ಮಂದಿರು ಒಂದಾಗಿರುವುದು... ಒಟ್ಟಿನಲ್ಲಿ ಈಗ ತುಳಸಿಯ ಸೀಮಂತಕ್ಕೆ ಬೈದುಕೊಳ್ಳುತ್ತಲೇ ವೀಕ್ಷಕರು ರೆಡಿಯಾಗಿದ್ದಾರೆ. 

ಉಯಿ ಅಮ್ಮಾ.. ಎಂದು ಚಿಂದಿ ಉಡಾಯಿಸಿದ ಶ್ರೀರಸ್ತು ಶುಭಮಸ್ತು ಬೆಡಗಿಯರು: ಡಾನ್ಸ್‌ ನೋಡಿ ಫ್ಯಾನ್ಸ್‌ ಸುಸ್ತು!
  
ಅಷ್ಟಕ್ಕೂ ಹಿಂದೆ  ತುಳಸಿ ಮಗುವನ್ನು ಹೆತ್ತರೆ ಆಕೆಯ ಜೀವಕ್ಕೆ ಅಪಾಯವಿದೆ, ಮಗುವನ್ನು ತೆಗೆಸಬೇಕು ಎಂದು ವೈದ್ಯರು ಹೇಳಿದ್ದರು.  ಇದರ ಪ್ರೊಮೋ ಬಿಡುಗಡೆಯಾದಾಗ,  ನೆಟ್ಟಿಗರೆಲ್ಲಾ ಗೆಲುವಿನ ನಗೆ ಬೀರಿದ್ದರು. ತಾವು ಹಾಕಿದ ಕಮೆಂಟ್ಸ್​ಗೆ ನಿರ್ದೇಶಕರು ಹೆದರೇ ಬಿಟ್ಟರು. ತುಳಸಿಯ ಮಗುವನ್ನು ಅಬಾರ್ಟ್​ ಮಾಡಿಸುತ್ತಾರೆ. ಇನ್ನು ಮುಂದೆ ನೆಮ್ಮದಿಯಿಂದ ಸೀರಿಯಲ್​ ನೋಡಬಹುದು. ಅಂತೂ ತಮ್ಮ ಮಾತು ನಡೆಯಿತು ಎಂದೇ ಅಂದುಕೊಂಡರು. ಆದರೆ ಈಗ ಆಗಿದ್ದೇ ಬೇರೆ.  ಇದೀಗ ತುಳಸಿ ಮಗು ಹೆರಲುಮುಂದಾಗಿದ್ದಾಳೆ. ಆಕೆಗೆ ತನ್ನ ಪ್ರಾಣಕ್ಕಿಂತಲೂ ಮುಖ್ಯವಾಗಿದ್ದು ಪೂರ್ಣಿಯ ಮಡಿಲಿಗೆ ಕಂದನನ್ನು ಕೊಡುವುದು. ತಾನು ಮಗುವನ್ನು ಹೆತ್ತು ಅದನ್ನು ಪೂರ್ಣಿಯ ಮಡಿಲಿಗೆ ಹಾಕುವುದಾಗಿ ಹೇಳಿದ್ದಾಳೆ ತುಳಸಿ.

 ಕಮೆಂಟಿಗರು, ಪ್ರೇಕ್ಷಕರ ವಿರೋಧದ ಮಾತುಗಳಿಗೆ ನಿರ್ದೇಶಕರು ಸೀರಿಯಲ್​  ಮೂಲಕವೇ ಉತ್ತರ ಕೊಟ್ಟಿದ್ದಾರೆ. ತುಳಸಿ ಗರ್ಭಿಣಿಯಾಗಿರುವುದನ್ನು ಸಮರ್ಥ್​, ಸಿರಿ ಮತ್ತು ಸಂಧ್ಯಾ ಒಪ್ಪಿಕೊಂಡಿದ್ದಾರೆ. ಅಮ್ಮನ ಜೀವನ ಅವಳ ಇಷ್ಟ. ಅಮ್ಮ ನಮಗೆ ಏನು ಬೇಕೋ ಎಲ್ಲವನ್ನೂ ಕೊಟ್ಟಾಗಿದೆ. ಈಗ ಅವಳ ಆಸೆಯನ್ನು ಈಡೇರಿಸಿಕೊಳ್ಳಲು ಅವಳ ಪರವಾಗಿ ನಾವು ನಿಂತುಕೊಳ್ಳಬೇಕಲ್ವಾ ಎಂದು ಸಮರ್ಥ್​ ಪ್ರಶ್ನಿಸಿದ್ದಾನೆ. ಇಂಥ ಸಮಯದಲ್ಲಿ ಅಮ್ಮನನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಸಿರಿ ಹೇಳಿದ್ದಾಳೆ. ಇದಕ್ಕೆ ಸಂಧ್ಯಾ, ಅಮ್ಮ ಪ್ರೆಗ್ನೆಂಟ್​ ಆಗಿರೋದು ನನಗೇನೂ ಬೇಸರವಿಲ್ಲ ನನಗೂ ಖುಷಿನೇ ಎಂದಿದ್ದಾಳೆ.  ವಯಸ್ಸಾದ ಅಪ್ಪ-ಅಮ್ಮನನ್ನು ವೃದ್ಧಾಶ್ರಮಕ್ಕೆ ತಳ್ಳುವಾಗ ನಿಮಗೆ ವಯಸ್ಸಿನ ಯೋಚನೆ ಬರಲ್ಲ. ಆಗ ಬರದದ್ದು ಈಗ ಬರುತ್ತಾ? ಅವರೇನು ಅಕ್ರಮವಾಗಿ ಸಂಬಂಧ ಇಟ್ಟುಕೊಂಡು ಮಕ್ಕಳು ಮಾಡಿಕೊಂಡಿದ್ದಾರಾ ಇಲ್ಲವಲ್ಲ, ಅದು ಅವರ ಪವಿತ್ರ ಸಂಬಂಧಕ್ಕೆ ಸಾಕ್ಷಿಯಾಗಿದೆ ಎಂದಿದ್ದಾಳೆ ಸಿರಿ. ಒಟ್ಟಿನಲ್ಲಿ ಅಮ್ಮನಾಗುವ ಸಂಭ್ರಮಕ್ಕೆ ವಯಸ್ಸಿನ ಮಿತಿಯಿಲ್ಲ ಎನ್ನುವ ಸಂದೇಶವನ್ನು ಸಾರುತ್ತಲೇ ಸೀರಿಯಲ್​ ಮುಂದುವರೆದಿದೆ. 

ರಿಯಲ್​ ಲೈಫ್​ ಲವ್​ ಬಗ್ಗೆ ಕೊನೆಗೂ ಗುಟ್ಟು ಬಿಚ್ಚಿಟ್ಟ ಅಣ್ಣಯ್ಯ: ಲವರ್​ ವಿಷ್ಯ ಕೇಳಿ ಅಭಿಮಾನಿಗಳಿಗೆ ಶಾಕ್​!


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?