Jodi No.1: ಪತ್ನಿ ಪಿರಮಿಡ್​ ಕಟ್ಟೋದ್​ ಬಿಡಂಗಿಲ್ಲ, ಪತಿ ಓಡೋದ್​ ನಿಲ್ಸಂಗಿಲ್ಲ! ಲಾವಣ್ಯ-ಶಶಿಗೆ ಇದೆಂಥ ಶಿಕ್ಷೆ?

By Suvarna News  |  First Published Jan 4, 2024, 3:53 PM IST

ಲಾವಣ್ಯ ಪಿರಮಿಡ್​ ಕಟ್ಟೋತನಕ ಶಶಿಗೆ ಓಡುವ ಶಿಕ್ಷೆ; ಜೋಡಿ ನಂಬರ್​ 1 ಷೋನಲ್ಲಿ ಪತಿ-ಪತ್ನಿಗೆ ಇದೆಂಥ ಶಿಕ್ಷೆ? ಪ್ರೊಮೋ ರಿಲೀಸ್​...
 


ಪತ್ನಿ ಟೀ ಕಪ್​ನಿಂದ ಪಿರಮಿಡ್​ ಕಟ್ಟಬೇಕು. ಪಿರಮಿಡ್​ ಸರಿಯಾಗಿ ಕಟ್ಟಿ ಮುಗಿಯುವವರೆಗೂ ಪತಿ ಟ್ರೆಡ್​ಮಿಲ್​ನಲ್ಲಿ ಓಡ್ಲೇಬೇಕು. ಪತಿ ಸುಸ್ತಾಗಿ ಉಸಿರು ಬಿಡ್ತಿದ್ದಂತೆ ಪತ್ನಿಯ ಕೈ ನಡುಗಿ ಪಿರಮಿಡ್​ ಎಲ್ಲಾ ಉರುಳಿ ಹೋಗುತ್ತೆ, ಪಿರಮಿಡ್​ ಉರುಳಿದರೆ ಪತಿ ಇನ್ನಷ್ಟು ಓಡಬೇಕು... ಇವಳದ್ದು ಆಗಲ್ಲ, ಅವನು ಬಿಡೋಂಗಿಲ್ಲ... ಉಸ್ಸಪ್ಪಾ ಉಸ್ಸು...

ಹೀಗೊಂದು ಜೋಡಿ ನಂಬರ್​ 1 ಪ್ರೊಮೋ ರಿಲೀಸ್​ ಆಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಜೋಡಿ ನಂಬರ್​-1 ರಿಯಾಲಿಟಿ ಷೋನಲ್ಲಿ ಶ್ರೀರಸ್ತು ಶುಭಮಸ್ತು ಪೂರ್ಣಿ ಅಂದ್ರೆ ಲಾವಣ್ಯ ಅವರು ತಮ್ಮ ರಿಯಲ್​ ಲೈಫ್​ ಪತಿ ಶಶಿ ಜೊತೆ ಕಳೆದ ಕೆಲ ವಾರಗಳಿಂದ ಆಡುತ್ತಿದ್ದು, ಇದೀಗ ಪಿರಮಿಡ್​ ಕಟ್ಟುವ ಟಾಸ್ಕ್​ನಲ್ಲಿ ಸುಸ್ತಾಗಿ ಹೋಗಿದ್ದಾರೆ. ಇನ್ನೇನು ಪಿರಮಿಡ್​​ ಕಟ್ಟಿ ಮುಗಿಯುತ್ತೆ ಎಂದುಕೊಳ್ಳುವಷ್ಟರಲ್ಲಿ ಶಶಿಯವರು ಖುಷಿಯಾಗಿದ್ದರು. ಆದರೆ ಲಾವಣ್ಯ ಅವರು ಕಟ್ಟಿದ ಪಿರಮಿಡ್​ ಬಿದ್ದು ಬಿಡೋದಾ? ಅವರು ಸರಿಯಾಗಿ ಕಟ್ಟುವವರೆಗೂ ಶಶಿ ಟ್ರೆಡ್​ಮಿಲ್​ನಲ್ಲಿ ಓಡಲೇಬೇಕು. ಓಡಿ ಓಡಿ ಸುಸ್ತಾದ ಅವರು ಉಸಿರು ಬಿಟ್ಟಾಗ ಹೀಗೆ ಮಾಡ್ಬೇಡಾ ಎಂದು ಲಾವಣ್ಯ ಮತ್ತಷ್ಟು ಗಾಬರಿಯಾಗಿ ಪಿರಮಿಡ್​ ಕೆಳಗೆ ಬೀಳಿಸಿದ್ರು. ಇಷ್ಟೇ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. 

Tap to resize

Latest Videos

10 ನಿಮಿಷ​ ಹಾರ್ಟ್​ಬೀಟ್​ ನಿಂತಿತ್ತು: ಶವವಾಗಿದ್ದವ ಮತ್ತೆ ಬದುಕಿದ್ದೇ ಪವಾಡ! ಭಯಾನಕ ಅನುಭವ ಹೇಳಿದ ನಟ ಶ್ರೇಯಸ್​

ಅಂದಹಾಗೆ ಲಾವಣ್ಯ ಅವರು ಇದಾಗಲೇ ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ ಎಲ್ಲರನ್ನೂ ಮೋಡಿ ಮಾಡುತ್ತಿರುವುದು ಗೊತ್ತೇ ಇದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಈ ಸೀರಿಯಲ್​ನಲ್ಲಿ  ಪೂರ್ಣಿ ಪಾತ್ರಧಾರಿಯ ನಟನೆ ಹಾಗೂ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಹೊಸದಾಗಿ ಮದುವೆಯಾಗಿ ಬಂದ ಅತ್ತೆ ತುಳಸಿಗೆ ಪೂರ್ಣಿ ತೋರುವ ಪ್ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಇದ್ದರೆ ಇಂಥ ಸೊಸೆ ಇರಬೇಕು ಎನ್ನುತ್ತಿದ್ದಾರೆ. ಸದಾ ಗಂಭೀರವಾಗಿ, ಗಂಟು ಮುಖ ಮಾಡಿಕೊಂಡಿರುವ ಪತಿ ಅವಿಯನ್ನೂ ಬದಲಿಸಿ, ಆತನಲ್ಲಿ ಪ್ರೇಮದ ಧಾರೆಯನ್ನೇ ಸುರಿಸಿದ್ದಾಳೆ ಪೂರ್ಣಿ. ಇವರು ಕೆಲ ವಾರಗಳಿಂದ ಪತಿ ಶಶಿ ಜೊತೆ ಜೋಡಿ ನಂಬರ್​ 1ನಲ್ಲಿ ಕಾಣಿಸಿಕೊಂಡಿದ್ದಾರೆ.  ಶಶಿ ಹಾಗೂ ಲಾವಣ್ಯ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.  

ಇದಾಗಲೇ ಕೆಲವು ವಾರಗಳಿಂದ ವಿವಿಧ ರೀತಿಯಲ್ಲಿ ಜೋಡಿ ನಂಬರ್‌ 1 ವೇದಿಕೆಯಲ್ಲಿ ಪ್ರೇಕ್ಷಕರ ಮನ ಗೆದ್ದಿದೆ ಈ ಜೋಡಿ. ಕೆಲ ದಿನಗಳ ಹಿಂದೆ ಶಶಿ ಮತ್ತು ಲಾವಣ್ಯ  ನೃತ್ಯದ ಮೂಲಕ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ್ದರು. ಕೆಲ ವಾರಗಳ ಹಿಂದೆ ಲಾವಣ್ಯ ಅವರ ಹುಟ್ಟಿನ ಕುರಿತು ಅವರ ಅಪ್ಪ ಭಯಾನಕ ಮಾಹಿತಿ ತಿಳಿಸಿದ್ದರು. ಅದೇನೆಂದರೆ,  ತಮ್ಮ ಪತ್ನಿ ಗರ್ಭಿಣಿಯಾಗಿದ್ದಾಗ ಅಂದರೆ ಲಾವಣ್ಯ ಹೊಟ್ಟೆಯಲ್ಲಿ ಇದ್ದಾಗ ಆಗಿನ ಸ್ಥಿತಿಯಲ್ಲಿ ಮಗು ಹುಟ್ಟುವುದು ಬೇಡವಾಗಿತ್ತು. ಅದಕ್ಕಾಗಿ ಪರಂಗಿ ಕಾಯಿ ತಿನ್ನಬೇಕೆಂದು ಆರೇಳು ಕಿಲೋಮೀಟರ್‌ ಪರಂಗಿ ಕಾಯಿ ಹುಡುಕಿ ಹೊರಟಿದ್ದು, ಕೊನೆಗೆ ಅದು ಸಿಗದೇ ಇದ್ದುದ ಬಗ್ಗೆ ತಿಳಿಸಿದ್ದರು! ಅಂದು ಪರಂಗಿ ಕಾಯಿ ಸಿಕ್ಕಿದ್ದರೆ ಲಾವಣ್ಯ ಹುಟ್ಟುತ್ತಿರಲಿಲ್ಲ ಎಂದು ಹೇಳಿದ್ದರು. ಇದೀಗ ಈ ಜೋಡಿ, ಜೋಡಿ ನಂಬರ್​ 1 ವೇದಿಕೆಯ ಮೇಲೆ ಸಕತ್​ ಸ್ಪರ್ಧೆ ಒಡ್ಡುತ್ತಿದೆ.  

ಆಮೀರ್​ ಖಾನ್​ ಮೊದಲ-ಎರಡನೇ ವಿಚ್ಛೇದಿತ ಪತ್ನಿಯಂದಿರಿಗೆ ಮದ್ವೆ ಮನೆಯಲ್ಲೇ ಕ್ಲ್ಯಾಷ್​: ವಿಡಿಯೋ ವೈರಲ್​

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!