
ಬೆಂಗಳೂರು (ಜ.4): ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ಮೂಲಗಳ ಪ್ರಕಾರ ಅವರಿಗೆ ಫುಡ್ ಪಾಯ್ಸನ್ ಆಗಿದೆ ಎನ್ನಲಾಗಿದೆ. ಅವರನ್ನು ರಾಜರಾಜೇಶ್ವರಿ ನಗರದ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಅನಾರೋಗ್ಯಕ್ಕೀಡಾದ ಪ್ರತಾಪ್ ಅವರನ್ನು ತಕ್ಷಣವೇ ಎಸ್ಎಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಿಗ್ಬಾಸ್ ಮನೆಯಲ್ಲಿ ತಮ್ಮನ್ನು ಕಡೆಗೆಣಿಸಿದ್ದಕ್ಕೆ ಪ್ರತಾಪ್ ಅಸಾಮಾಧಾನಗೊಂಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಕಡೆಗಣಿಸಿದ್ದಕ್ಕೆ ಪ್ರತಾಪ್ ಬೇಸರಗೊಂಡಿದ್ದರು. ಈ ವಿಚಾರವಾಗಿ ಬಿಗ್ಬಾಸ್ ಮನೆಯಲ್ಲಿ ಡ್ರೋಣ್ ಪ್ರತಾಪ್ ಕಣ್ಣೀರಿಟ್ಟಿದ್ದರು. ‘ನಿನಗೆ ಆಡಲು ಬರಲ್ಲ, ಪ್ಯಾನಿಕ್ ಆಗ್ತೀಯ’ ಎಂದು ಇತರ ಸ್ಪರ್ಧಿಗಳು ಹೀಯಾಳಿಸಿದ್ದರು. ಇದೇ ಕಾರಣಕ್ಕೆ ಪ್ರತಾಪ್ ಅವರನ್ನುಸ್ಪರ್ಧಿಗಳು ಟಾಸ್ಕ್‌ನಿಂದ ಹೊರಗಿಟ್ಟಿದ್ದರು. ಇತ್ತೀಚೆಗೆ ಬಿಗ್ ಬಾಸ್ ಮನೆಗೆ ಆಗಮಿಸಿದ್ದ ಸ್ವಾಮೀಜಿಯೊಬ್ಬರು ಮಾತನಾಡುವ ವೇಳೆ, ಪ್ರತಾಪ್ ಅವರು ಕುಟುಂಬದಿಂದ ದೂರವೇ ಇದ್ದರೆ ಒಳಿತಾಗುತ್ತದೆ ಎಂದು ಹೇಳಿದ್ದರು. ಅಂದಿನಿಂದ ಪ್ರತಾಪ್ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಅದರ ನಡುವೆ, ಮನೆಯಲ್ಲಿದ್ದ ಇತರ ಸ್ಪರ್ಧಿಗಳ ಹೀಯಾಳಿಕೆಯ ಮಾತಿನಿಂದ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ.
ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಮೂಲಗಳ ಪ್ರಕಾರ ಅವರು ಕೆಲವು ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ವರದಿಯಾಗಿದೆ.ಆದರೆ, ಯಾವ ಮಾತ್ರೆಗಳು ಎನ್ನುವುದು ಖಚಿತವಿಲ್ಲ. ಇನ್ನು ಬಿಗ್ ಬಾಸ್ ಮೂಲ ಹೇಳುವ ಪ್ರಕಾರ ಪ್ರತಾಪ್ ಅವರಿಗೆ ಫುಡ್ ಪಾಯ್ಸನ್ ಆಗಿದೆ ಎಂದಿದ್ದಾರೆ.ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಇತರ ಸ್ಪರ್ಧಿಗಳು ಪ್ರತಾಪ್ ಅವರನ್ನು ಹೀಯಾಳಿಸಿದ್ದು ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
ಪ್ರತಾಪ್‌ಗೆ ಪ್ಯಾನಿಕ್ ಪಟ್ಟ ಕಟ್ಟಿದ ಸಂಗೀತಾ-ನಮ್ರತಾ; ಒಪ್ಪಿಕೊಂಡ ಪ್ರತಾಪ್ ರಿಯಾಕ್ಷನ್ ನೋಡಿ!
ಪೊಲೀಸರು ಕೂಡ ಈ ಕುರಿತಾದ ಮಾಹಿತಿ ಕಲೆಹಾಕಲು ಸಿದ್ಧರಾಗಿದ್ದಾರೆ. ಇದು ಫುಡ್ ಪಾಯ್ಸನ್ ಪ್ರಕರಣವೇ ಅಥವಾ ಬೇರೆ ಯಾವುದಾದರೂ ಪ್ರಕರಣವೇ ಎನ್ನುವ ನಿಟ್ಟಿನಲ್ಲಿ ಮಾಹಿತಿ ಪಡೆಯುತ್ತಿದ್ದಾರೆ.ಆದರೆ, ಪ್ರತಾಪ್ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವುದು ಮಾತ್ರ ಖಚಿತಗೊಂಡಿದೆ.
ಕುಟುಂಬದಿಂದ ದೂರನೇ ಇರ್ಬೇಕಾ? ಗುರೂಜಿ ಭವಿಷ್ಯಕ್ಕೆ ಕಣ್ಣೀರಾದ ಡ್ರೋನ್ ಪ್ರತಾಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.