ಪ್ರತಾಪ್‌ಗೆ ಪ್ಯಾನಿಕ್ ಪಟ್ಟ ಕಟ್ಟಿದ ಸಂಗೀತಾ-ನಮ್ರತಾ; ಒಪ್ಪಿಕೊಂಡ ಪ್ರತಾಪ್ ರಿಯಾಕ್ಷನ್ ನೋಡಿ!

By Shriram Bhat  |  First Published Jan 4, 2024, 12:58 PM IST

ಪ್ರತಾಪ್ ಮಾತಿಗೆ ಸಂಗೀತಾ 'ನೀನು ಪ್ಯಾನಿಕ್ ಆಗಲ್ಲ ಎಂದು ನೀನು ನಿನ್ನನ್ನು ಸಮರ್ಥನೆ ಮಾಡ್ಕೋತೀಯಾ. ಆದ್ರೆ ನಿನ್ನನ್ನ ನೋಡೋ ಎಲ್ಲ್ರಿಗೂ ನೀನು ಪ್ಯಾನಿಕ್ ಆಗ್ತೀಯಾ ಎಂಬುದು ಗೊತ್ತಾಗುತ್ತದೆ' ಎಂದು ಹೇಳುವರು. 


ಮುಂದಿನ ಟಾಸ್ಕ್‌ನಲ್ಲಿ ಆಡುವ 6 ಸ್ಪರ್ಧಿಗಳು ಯಾರು? ಎಂದು ಬಿಗ್ ಬಾಸ್ ಕೇಳಲು ಸ್ಪರ್ಧಿಗಳು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. 'ಪ್ರತಾಪ್ ಬೇಡ, ಆಟದಲ್ಲಿ ಬ್ಯಾಲೆನ್ಸ್ ಮಾಡಲು ಬರಲ್ಲ' ಎಂಬ ಮಾತನ್ನು ಸಂಗೀತಾ ಮತ್ತು ನಮ್ರತಾ ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಾರೆ. ಆದರೆ, ಅದು ಡ್ರೋನ್ ಪ್ರತಾಪ್ ಅವರಿಗೆ ಕೇಳಿಸುತ್ತದೆ. ಅದಕ್ಕೆ ತಕ್ಷಣವೇ ರಿಯಾಕ್ಟ್ ಮಾಡುವ ಡ್ರೋನ್ ಪ್ರತಾಪ್ 'ನಾನು ಬೇಡ್ವಾ, ನಾನು ಪ್ಯಾನಿಕ್ ಆಗ್ತೀನಾ' ಎಂದು ಕೋಪದಿಂದ ಪ್ರಶ್ನಿಸುತ್ತಾನೆ. ಅದಕ್ಕೆ ಸಂಗೀತಾ ಮತ್ತು ನಮ್ರತಾ ಕೂಲ್‌ ಆಗಿಯೇ 'ಹೌದು, ನೀವು ಕೂಲ್ ಆಗಿರಲ್ಲ, ಹೇಳಿದ್ದು ಕೇಳಿಸ್ಕೊಳಲ್ಲ, ಪ್ಯಾನಿಕ್ ಆಗ್ತೀರಾ' ಎನ್ನುವರು. 

ಪ್ರತಾಪ್ ಮಾತಿಗೆ ಸಂಗೀತಾ 'ನೀನು ಪ್ಯಾನಿಕ್ ಆಗಲ್ಲ ಎಂದು ನೀನು ನಿನ್ನನ್ನು ಸಮರ್ಥನೆ ಮಾಡ್ಕೋತೀಯಾ. ಆದ್ರೆ ನಿನ್ನನ್ನ ನೋಡೋ ಎಲ್ಲ್ರಿಗೂ ನೀನು ಪ್ಯಾನಿಕ್ ಆಗ್ತೀಯಾ ಎಂಬುದು ಗೊತ್ತಾಗುತ್ತದೆ' ಎಂದು ಹೇಳುವರು. ಅದಕ್ಕೆ ಬೇಸರಗೊಂಡ ಪ್ರತಾಪ್ 'ಸರಿ ಬಿಡಿ, ನಾನು ಪ್ಯಾನಿಕ್ ಆಗ್ತೀನಿ, ಪ್ರೆಶರ್‌ ತಡೆದುಕೊಳ್ಳಲ್ಲ' ಎಂದು ಹೇಳುವಷ್ಟನ್ನು ಬಿಡುಗಡೆ ಆಗಿರುವ ಪ್ರೊಮೋದಲ್ಲಿ ನೋಡಬಹುದು. ಮುಂದೇನು ಆಗಿದೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬಹುದು. ಹಾಗಿದ್ದರೆ ಬಿಗ್ ಬಾಸ್ ನೀಡಿದ ಆ ಟಾಸ್ಕ್‌ನಲ್ಲಿ ಭಾಗವಹಿಸಿದ 6 ಜನ ಸ್ಪರ್ಧಿಗಳು ಯಾರು?

Tap to resize

Latest Videos

ಇರಾ ಖಾನ್ ಕೈ ಹಿಡಿದ ನೂಪರ್; ಫಿಟ್ನೆಸ್ ತರಬೇತುದಾರ ಯಾಕಿಷ್ಟು ಲೇಟ್ ಮಾಡಿದ್ರು?!

ಎಲ್ಲವನ್ನೂ ತಿಳಿಯಲು ಇಂದಿನ ಸಂಚಿಕೆ ನೋಡಬೇಕು. ಬಿಗ್ ಬಾಸ್ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈಗಾಗಲೆ 15ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಇನ್ನೊಂದೇ ವಾರದಲ್ಲಿ ಮುಗಿಯಬೇಕಿತ್ತು. ಆದರೆ, ಎರಡು ವಾರಗಳಷ್ಟು ಮುಂದಕ್ಕೆ ಹೋಗಿರುವುದರಿಂದ ಇದೇ ತಿಂಗಳು 27-28ರಂದು ಗ್ರಾಂಡ್ ಫಿನಾಲೆ ನಡೆಯಲಿದೆ. ಹೀಗಾಗಿ ಇನ್ನೊಂದಷ್ಟು ದಿನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದು ಆಡಬೇಕಿದೆ. ಕೊನೆಗೂ ಗೆಲ್ಲೋದು ಯಾರು ಎಂಬುದನ್ನು ಸದ್ಯಕ್ಕೆ ಊಹಿಸಲು ಸಾಧ್ಯವಿಲ್ಲ. ಎಲ್ಲರೂ ಗೆಲ್ಲಲಿಕ್ಕಾಗಿಯೇ ಆಡುತ್ತಿದ್ದಾರೆ. ಆದರೆ ಗೆಲ್ಲಲಿರುವುದು ಒಬ್ಬರೇ, ಅದ್ಯಾರು ಎಂಬ ಕುತೂಹಲಕ್ಕಾಗಿಯೇ ವೀಕ್ಷಕರು ಬಿಗ್ ಬಾಸ್ ಗೇಮ್ ಶೋ ನೋಡುತ್ತಿದ್ದಾರೆ. 

ಲೆಜೆಂಡ್ ಈಸ್ ಬ್ಯಾಕ್, ವಿಕ್ಟರಿ ಗ್ಯಾರಂಟಿ; ಸೈಂಧವ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ!

ಅಂದಹಾಗೆ, ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಬಹುದು. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದು. ಶನಿವಾರ-ಭಾನುವಾರದ ಸಂಚಿಕೆಗಳನ್ನು ರಾತ್ರಿ 9.00ಕ್ಕೆ ಕಲರ್ಸ್‌ ಕನ್ನಡದಲ್ಲಿ ನೋಡಬಹುದು.

 

 

click me!