ಹೊಸಹೊಸ ಕಥೆಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಮತ್ತೆ ಬರುತ್ತಿದೆ ಶಾಂತಂ ಪಾಪಂ ಶೋ. ಮನರಂಜನಾ ಚಾನೆಲ್ ಎಂದಮೇಲೆ ಮನರಂಜನೆ ಮೂಲಮಂತ್ರವಾಗಿದ್ದರೂ ಶಾಂತಂ ಪಾಪಂ ಶೋ ವಿಷಯದಲ್ಲಿ ಅದು ಅಷ್ಟು ಮಾತ್ರವೇ ಅಲ್ಲ ಎನ್ನಬಹುದು.
ಕಲರ್ಸ್ ಕನ್ನಡದಲ್ಲಿ ಮತ್ತೆ 'ಶಾಂತಂ ಪಾಪಂ' ಶುರುವಾಗುತ್ತಿದೆ. ಇದೇ ಸೋಮವಾರದಿಂದ (19 ಫೆಬ್ರವರಿ 20240), ರಾತ್ರಿ 10.30ಕ್ಕೆ ಪ್ರಸಾರವಾಗಲಿದೆ ಸೀಸನ್ 6 ಶಾಂತಂ ಪಾಪಂ. ಕಳೆದ ತಿಂಗಳು ಕೊನೆಯಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋವನ್ನು ಯಶಸ್ವಿಯಾಗಿ ಮುಗಿಸಿರುವ ಕಲರ್ಸ್ ಕನ್ನಡ, ಇದೀಗ 'ಶಾಂತಂ ಪಾಪಂ' ಹೊಸ ಸೀಸನ್ ಶುರು ಮಾಡಲಿದೆ. ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದ ಈ ಶೋ, ಇದೀಗ ಮತ್ತೆ ಪ್ರಸಾರ ಆಗಲಿದೆ.
ಮೊದಲ ಸೀಸನ್ ಬಂದಾಗಲೇ ಸಾಕಷ್ಟು ಸೆನ್ಸೇಷನ್ ಎಬ್ಬಿಸಿದ್ದ ಶೋ ಶಾಂತಂ ಪಾಪಂ, ಈಗ ಮತ್ತೆ ಕಿರುತೆರೆ ಲೋಕದಲ್ಲಿ ಮಿಂಚು ಹರಿಸಲಿರುವುದು ಪಕ್ಕಾ ಎನ್ನಲಾಗುತ್ತಿದೆ. ರಾತ್ರಿ 10.30ಕ್ಕೆ ಪ್ರಸಾರವಾಗಲಿರುವ ಈ ಶೋವನ್ನು ಹೆಚ್ಚಾಗು ಪುರುಷರೇ ನೋಡುತ್ತಾರೆ ಎಂಬ ಮಾತಿದೆ. ಶಾಂತಂ ಪಾಪಂ ವೀಕ್ಷಕರು ಯಾರು ಎನ್ನುವುದಕ್ಕಿಂತ ಹೆಚ್ಚಾಗಿ ಅದು ಪ್ರಸಾರವಾಗಲಿರುವ ವೇಳೆ ಮಹಿಳೆಯರು ಮತ್ತು ಮಕ್ಕಳಿಗೆ ಅಷ್ಟಾಗಿ ಸೂಕ್ತವಲ್ಲ ಎನ್ನಬಹುದೇನೋ!
ಕಾರಿನ ಪಕ್ಕದಲ್ಲಿದ್ದ ಮಕ್ಕಳ ಬಳಿ ಬಂದು 'ಚುಕ್ಕಿ ತಾರೆ' ಬರೆದ ಸಿಂಗರ್ ನವೀನ್ ಸಜ್ಜು!
ಹೊಸಹೊಸ ಕಥೆಗಳೊಂದಿಗೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಮತ್ತೆ ಬರುತ್ತಿದೆ ಶಾಂತಂ ಪಾಪಂ ಶೋ. ಮನರಂಜನಾ ಚಾನೆಲ್ ಎಂದಮೇಲೆ ಮನರಂಜನೆ ಮೂಲಮಂತ್ರವಾಗಿದ್ದರೂ ಶಾಂತಂ ಪಾಪಂ ಶೋ ವಿಷಯದಲ್ಲಿ ಅದು ಅಷ್ಟು ಮಾತ್ರವೇ ಅಲ್ಲ ಎನ್ನಬಹುದು. ಸಮಾಜದಲ್ಲಿ ನಡೆಯುತ್ತಿರುವ ನೈಜ ಘಟನೆ ಆಧಾರಿತ ಅಥವಾ ಕಾಲ್ಪನಿಕ ಕಥೆಗಳಲ್ಲಿ ಜನರಿಗೆ ಬಹಳಷ್ಟು ಬುದ್ದಿಮಾತುಗಳು ಹಾಗೂ ಕಿವಿಮಾತುಗಳು ಈ ಶೋನಿಂದ ದೊರಕುತ್ತವೆ ಎನ್ನಬಹುದು. ನೈಜ ಘಟನೆ ಆಧಾರಿತ ಕಥೆಗಳನ್ನೇ ತಿರುಚಿ, ಹೆಸರು ಬದಲಾಯಿಸಿ ಪ್ರಸಾರ ಮಾಡಲಾಗುವುದು ಎಂಬುದೂ ಕೂಡ ಸತ್ಯ ಸಂಗತಿಯೇ ಆಗಿರಬಹುದು.
ಪ್ರತಿ ಅಮಾವಾಸ್ಯೆಗೆ 15 ಮಕ್ಕಳ ನರಬಲಿ; ರವಿಶಂಕರ್ ಗುರೂಜಿ ಬಗ್ಗೆ ಹೇಳಿದ್ರಾ ಅಗ್ನಿ ಶ್ರೀಧರ್!?
ಒಟ್ಟಿನಲ್ಲಿ, ಮನರಂಜನೆ ಜೊತೆಗೆ ಸಮಾಜಕ್ಕೆ ಸಂದೇಶ ನೀಡುವ, ಸಮಾಜದಲ್ಲಿ ನಡೆಯುವ ಅನ್ಯಾಯ-ಅತ್ಯಾಚಾರಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶ ಈ ಶೋಗೆ ಇದೆ ಎನ್ನಲಾಗಿದೆ. ಅಪರಾಧ, ಕಾನೂನು, ಅನ್ಯಾಯ-ನ್ಯಾಯಗಳ ಬಗ್ಗೆ ಸಮಾಜಕ್ಕೆ ತಿಳುವಳಿಕೆ ನೀಡುವ ಉದ್ದೇಶ ಹೊಂದಿರುವ ಈ ಶೋ, ಇದೀಗ ಮತ್ತೆ 6ನೇ ಸೀಸನ್ ಮೂಲಕ ಕಿರುತೆರೆ ವೀಕ್ಷಕರ ಮುಂದೆ ಬರಲಿದೆ. ಈ ಸೀಸನ್ ಶಾಂತಂ ಪಾಪಂ ಯಾವ ರೀತಿಯಲ್ಲಿ ಮೊದಲಿನದಕ್ಕಿಂತ ಭಿನ್ನವಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.