
ಸೀತಾ ರಾಮ ಸೀರಿಯಲ್ ಮೂಲಕ ಸಕತ್ ಫೇಮಸ್ ಆಗಿರುವವರು ಎಂದರೆ ಸೀತಾ ಮತ್ತು ರಾಮನ ಪಾತ್ರಧಾರಿಗಳಾಗಿರುವ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ. ಇನ್ನು ಗಗನ್ ಚಿನ್ನಪ್ಪ ಅವರ ಸೀರಿಯಲ್ ಲೈಫ್ ಟಿ.ವಿ.ವೀಕ್ಷಕರಿಗೆ ಗೊತ್ತೇ ಇದೆ. ಇದರಲ್ಲಿ ರಾಮ್ ದೊಡ್ಡ ಬಿಜಿನೆಸ್ಮೆನ್. ಆದರೆ ತನ್ನದೇ ಕಂಪೆನಿಯಲ್ಲಿ ಯಾರಿಗೂ ತಿಳಿಯದಂತೆ ಸಾಮಾನ್ಯ ನೌಕರನಂತೆ ಕೆಲಸ ಮಾಡುತ್ತಿದ್ದು ಇದೀಗ ಸಿಕ್ಕಿಬಿದ್ದಿದ್ದಾನೆ. ಭಗ್ನಪ್ರೇಮಿಯಾಗಿದ್ದ ಈತ ಸದ್ಯ ಮಗಳ ಜೊತೆ ಒಂಟಿಯಾಗಿರುವ ಸೀತಾಳ ಪ್ರೀತಿಯ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾನೆ. ಆದರೆ ಇದೀಗ ಸೀತಾಳಿಗೂ ಒಳಗೊಳಗೇ ಪ್ರೀತಿ ಚಿಗುರಿದೆ. ಪ್ರೇಮಿಗಳ ದಿನವಾದ ಇಂದು ಸೀತಾ, ರಾಮ್ಗೆ ಪ್ರಪೋಸ್ ಮಾಡಿದ್ದಳು. ಆದರೆ ಅಸಲಿಗೆ ಅದು ಕಾರಟಗಿಯಲ್ಲಿ ನಡೆದ ಪ್ರೇಮ ಸಂಗಮ ರಿಯಾಲಿಟಿ ಷೋನ ದೃಶ್ಯವಾಗಿತ್ತು. ಸೀರಿಯಲ್ನಲ್ಲೂ ಸೀತಾ ಮತ್ತು ರಾಮ್ ಮದ್ವೆಯಾಗಲಿ ಎಂದೇ ಹಾರೈಸಿದವರು ಹಲವರು.
ಇದೀಗ ಅಭಿಮಾನಿಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಈ ಕುರಿತು ಜೀ ಕನ್ನಡ ವಾಹಿನಿ ಪ್ರೊಮೋ ಬಿಡುಗಡೆ ಮಾಡಿದೆ. ಇದರಲ್ಲಿ ಸೀತಾ ಮತ್ತು ರಾಮ ಎಂಗೇಜ್ಮೆಂಟ್ ಆಗುವುದನ್ನು ತೋರಿಸಲಾಗಿದೆ. ಸಿಹಿ ಕುಣಿದು ಕುಣಿದು ಕುಪ್ಪಳಿಸುತ್ತಿದ್ದಾಳೆ. ಕಾರಟಗಿಯಲ್ಲಿ ನಡೆದ ಪ್ರೇಮ ಸಂಗಮ ರಿಯಾಲಿಟಿ ಷೋನಲ್ಲಿ ಸೀತಾ ಮಂಡಿಯೂರಿ ರಾಮನಿಗೆ ಪ್ರೇಮ ನಿವೇದಿಸಿದ್ದಳು. ಸೀತಾ ರಾಮ ಸೀರಿಯಲ್ನಲ್ಲಿಯೂ ಹೀಗೇ ಆಗಲಪ್ಪ ಎಂದು ಕೆಲವರು ಆಶಿಸುತ್ತಿದ್ದರೆ, ನೀವಿಬ್ಬರೂ ನಿಜ ಜೀವನದಲ್ಲಿಯೂ ಒಂದೇ ಆಗಿ ಅನ್ನುತ್ತಿದ್ದಾರೆ ಇನ್ನು ಕೆಲವರು. ಆದರೆ ಹೀಗೆ ನೀವು ಪ್ರಪೋಸ್ ಮಾಡಿಬಿಟ್ಟರೆ ಪ್ರಾರ್ಥನಾ ಕಥೆ ಏನು ಎಂದು ರಾಮ್ ಪಾತ್ರಧಾರಿ ಗಗನ್ ರಿಯಲ್ ಲೈಫ್ ಪ್ರೇಯಸಿಯ ಹೆಸರು ಹೇಳಿ ಕಾಲೆಳೆದಿದ್ದರು ವೀಕ್ಷಕರು.
ಹೆತ್ತಮನೆ v/s ಅತ್ತೆಮನೆ.... ಹೆಣ್ಣಿನ ಜೀವನ ಏಕಿಷ್ಟು ವಿಚಿತ್ರ ಅಂತಿದ್ದಾಳೆ ಭಾಗ್ಯ! ನಿಮಗೂ ಹೀಗೆ ಅನಿಸತ್ತಾ?
ಆದರೆ ಇದೀಗ ನೀನು ನನ್ನನ್ನು ಮದ್ವೆಯಾಗುವಿಯಾ ಎಂದು ಕೇಳಿರುವ ರಾಮ್, ಸೀತಾಳಿಗಾಗಿ ಉಂಗುರ ತಂದು ಸರ್ಪ್ರೈಸ್ ಮಾಡಿದ್ದಾನೆ. ನಂತರ ಉಂಗುರವನ್ನು ಸೀತಾಳ ಕೈಗೆ ಹಾಕಿದ್ದಾನೆ. ಇದು ನಿಜವಾದದ್ದೋ, ಕನಸೋ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ದಯವಿಟ್ಟು ಇದನ್ನು ಕನಸು ಎಂದು ಮಾಡಬೇಡಿ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಜೋಡಿಯನ್ನು ಒಟ್ಟಿಗೇ ನೋಡಲು ಎಷ್ಟು ಖುಷಿಯಾಗುತ್ತಿದೆ ಎನ್ನುತ್ತಿರುವ ಇನ್ನು ಕೆಲವರು, ಈ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಪ್ಪ ಎನ್ನುತ್ತಿದ್ದಾರೆ.
ಇನ್ನು ರಾಮ್ ಅಂದರೆ ಗಗನ್ ಅವರು ರಿಯಲ್ ಲೈಫ್ ಪ್ರೇಯಸಿಯ ಕುರಿತು ಹೇಳುವುದಾದರೆ ಅವರ ಹೆಸರು ಪ್ರಾರ್ಥನಾ. ಪ್ರಾರ್ಥನಾ ನಾಣಯ್ಯ ಅವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ನಟಿ ಶುಭ್ರಾ ಅಯ್ಯಪ್ಪ, ಶ್ವೇತಾ ಶ್ರೀವಾಸ್ತವ ಸೇರಿದಂತೆ ಅನೇಕ ನಟಿಯರಿಗೆ ಅವರು ಮೇಕಪ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. "ನನ್ನ ಹೃದಯಕ್ಕೆ ಖುಷಿ ತಂದೆ ವಿಶೇಷ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನಷ್ಟೇ, ನಿನ್ನ ನಗುವಿನಷ್ಟೇ ಈ ದಿನ ಸುಂದರವಾಗಿರಲಿ. ನೀನು ನೀಡಿದ ಎಲ್ಲ ನೆನಪಿನ ಬುತ್ತಿಗಳಿಗೂ ಧನ್ಯವಾದಗಳು. ನಮಗೆ ಎಷ್ಟೇ ವಯಸ್ಸಾದರೂ, ಎಷ್ಟೇ ಹುಟ್ಟುಹಬ್ಬವನ್ನು ಆಚರಿಸಿದರೂ ಕೂಡ ನಾನು ಸದಾ ನಿನ್ನ ಜೊತೆಗೆ ಇರುತ್ತೇನೆ. ಇದು ನಮ್ಮ ಮೊದಲ ಫೋಟೋ. ನಾನು, ನೀನು ಭೇಟಿಯಾಗಿ 5 ವರ್ಷ ಆಯ್ತು" ಎಂದು ಗಗನ್ ಚಿನ್ನಪ್ಪ 2022ರ ಫೆಬ್ರುವರಿ ತಿಂಗಳಿನಲ್ಲಿ ಪೋಸ್ಟ್ ಹಾಕಿದ್ದಾಗಲೇ ಇವರಿಬ್ಬರ ಸ್ನೇಹ ಸಂಬಂಧ ಗುಟ್ಟಾಗಿತ್ತು.
ಮಾಧುರಿ ದೀಕ್ಷಿತ್ಗೆ ಬಿಗ್ಬಾಸ್ ಅಂಕಿತಾ ಸೆಡ್ಡು- ಧಕ್ ಧಕ್ ಎಂದು ಕಿಚ್ಚು ಹೊತ್ತಿಸಿದ ಕಾಂಟ್ರವರ್ಸಿ ಕ್ವೀನ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.