
ನಟಿ ವೈಷ್ಣವಿ ಗೌಡ ಈ ಹಿಂದೆ ಅಗ್ನಿಸಾಕ್ಷಿ ಸೀರಿಯಲ್ನಲ್ಲಿ ಸನ್ನಿಧಿ ಎಂದೇ ಫೇಮಸ್ ಆದವರು. ಇದೀಗ ಸನ್ನಿಧಿಯ ಜಾಗವನ್ನು ಸೀತೆ ಪಡೆದುಕೊಂಡಿದ್ದಾಳೆ. ಸೀತಾರಾಮ ಸೀರಿಯಲ್ನ ವೈಷ್ಣವಿ ಅವರ ಸೀತಾಳ ಪಾತ್ರ ಮನೆಮಾತಾಗಿದೆ. ನಿಜ ಜೀವನದಲ್ಲಿ ಮದ್ವೆಯಾಗದಿದ್ರೂ ಸೀರಿಯಲ್ನಲ್ಲಿ ಸಿಹಿ ಎಂಬ ಪುಟಾಣಿಯ ತಾಯಿಯಾಗಿರುವ ಸೀತೆಯ ಪಾತ್ರಧಾರಿ ವೈಷ್ಣವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಆಗಾಗ್ಗೆ ಸಕತ್ ಪೋಸ್ ಕೊಟ್ಟು ಫೋಟೋ, ವಿಡಿಯೋ ಶೂಟ್ಗಳನ್ನು ಮಾಡಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಟ್ರೋಲ್ ಕೂಡ ಆಗುತ್ತಾರೆ. ಸೀತಾ ಪಾತ್ರಕ್ಕೆ ಅದರದ್ದೇ ಆದ ಗಾಂಭೀರ್ಯ ಇರುವ ಹಿನ್ನೆಲೆಯಲ್ಲಿ, ಮಿನಿ, ಷಾರ್ಟ್ಸ್, ಅರೆಬರೆ ಡ್ರೆಸ್ ಇಂಥವುಗಳಲ್ಲಿ ಕೆಲವು ಅಭಿಮಾನಿಗಳು ವೈಷ್ಣವಿ ಅವರನ್ನು ನೋಡಲು ಇಷ್ಟಪಡುವುದಿಲ್ಲ. ಅದಕ್ಕಾಗಿಯೇ ಬೇಸರವನ್ನೂ ವ್ಯಕ್ತಪಡಿಸುವುದು ಇದೆ.
ಆದರೆ ಇದ್ಯಾವುದಕ್ಕೂ ವೈಷ್ಣವಿ ಜಗ್ಗುವುದಿಲ್ಲ. ಸೀತಾಳೇ ಬೇರೆ, ವೈಷ್ಣವಿಯೇ ಬೇರೆ ಎನ್ನುವುದು ಅವರ ಮಾತು. ಇದೀಗ ಮಿನಿ ಫ್ರಾಕ್ ಧರಿಸಿರುವ ವೈಷ್ಣವಿ ಮೇಲಿನಿಂದ ಹಾರುತ್ತಾ ರೀಲ್ಸ್ ಒಂದನ್ನು ಮಾಡಿದ್ದಾರೆ. ಇವರ ಫ್ರಾಕ್ ಸಂಪೂರ್ಣ ಮೇಲಕ್ಕೆ ಹೋಗಿರುವುದನ್ನು ಗಮನಿಸಿರುವ ನೆಟ್ಟಿಗರು, ಹಾರಿಸುತ್ತಾ ಹಾರಿಸುತ್ತಾ ಏನನ್ನು ತೋರಿಸಲು ಇಚ್ಛಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ರೀತಿಯ ಡ್ರೆಸ್ ನಿಮಗೆ ಶೋಭೆ ತರುವುದಿಲ್ಲ ಎಂದೂ ಕೆಲವರು ಹೇಳುತ್ತಿದ್ದಾರೆ.
ಹನಿಮೂನ್ ಸಡಗರದಲ್ಲಿ ಗೌತಮ್- ಭೂಮಿಕಾ: ಪತ್ನಿಗೆ ಭರ್ಜರಿ ಗಿಫ್ಟ್- ಆತಂಕದಲ್ಲಿ ಫ್ಯಾನ್ಸ್
ಇನ್ನು ವೈಷ್ಣವಿ ಅವರ ಕುರಿತು ಹೇಳುವುದಾದರೆ, ವೈಷ್ಣವಿ ಕಿರುತೆರೆ ಕಲಾವಿದೆ ಮಾತ್ರವಲ್ಲದೇ ಹಲವು ಉತ್ಪನ್ನಗಳ ರಾಯಭಾರಿಯೂ ಹೌದು. ಇವರು ಕಿರುತೆರೆ ಪ್ರವೇಶಿಸಿದ್ದರ ಬಗ್ಗೆಯೂ ಹಿಂದೊಮ್ಮೆ ಹೇಳಿಕೊಂಡಿದ್ದರು. ಇವರು ಒಂದು ದಿನ ತಮ್ಮ ತಾಯಿಯೊಂದಿಗೆ ಮಂದಿರಕ್ಕೆ ಹೋದಾಗ ಸಹಾಯಕ ನಿರ್ದೇಶಕರೊಬ್ಬರು ನೋಡಿ ತಮ್ಮ ಸೀರಿಯಲ್ ದೇವಿಯಲ್ಲಿ ನಟಿಸಲು ಆಫರ್ ನೀಡಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದರು. ಹೀಗೆ ಜೀ ಕನ್ನಡದ `ದೇವಿ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿರೋ ವೈಷ್ಣವಿ, `ಪುನರ್‌ವಿವಾಹ'ದಲ್ಲಿ ನಟಿಸಿದರು. `ಅಗ್ನಿಸಾಕ್ಷಿ' ಸೀರಿಯಲ್ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಇದೀಗ ಸೀತೆಯಾಗಿ ಜನರನ್ನು ರಂಜಿಸುತ್ತಿದ್ದಾರೆ.
ಇವರ ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಸೀರಿಯಲ್ಗಳ ಬಿಜಿಯಿಂದಾಗಿ ಪದವಿ ಅರ್ಧಕ್ಕೆ ಬಿಟ್ಟರು. ನಂತರ ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದರು. ಭರತನಾಟ್ಯ, ಕೂಚಿಪುಡಿ ಪರಿಣತೆಯಾಗಿರುವ ವೈಷ್ಣವಿ ಬೆಲ್ಲಿ ಡ್ಯಾನ್ಸ್ನಲ್ಲಿಯೂ ಮಿಂಚುತ್ತಿದ್ದಾರೆ. ದೊಡ್ಡ ಪರದೆ ಮೇಲೆಯೂ ಇವರಿಗೆ ನಟಿಸುವ ಅವಕಾಶ ಸಿಕ್ಕಿತ್ತು.`ಗಿರಿಗಿಟ್ಲೆ' ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಿರೂಪಕಿಯಾಗಿಯೂ ಹೆಸರು ಮಾಡಿರುವ ಇವರು, `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ಹಾಗೂ `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಿದ್ದಾರೆ. ಬಿಗ್ಬಾಸ್ನಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದ ವೈಷ್ಣವಿ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಕರೀನಾ ಹೆಸರಿನ ಟ್ಯಾಟೂ ಅಳಿಸಿ ಹಾಕಿದ ಸೈಫ್! ಮೂರನೇ ಮದ್ವೆಗೆ ರೆಡಿನಾ ಕೇಳ್ತಿದ್ದಾರೆ ನೆಟ್ಟಿಗರು...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.