ಸೀತಾಗೆ ರಾಮ್ ಏನ್ ಅಂತ ಹೆಸರಿಡ್ತಾನೆ? ಮುದ್ದು ಜೋಡಿ‌ ರೋಮ್ಯಾನ್ಸ್ ನೋಡಿ ನಾಚಿನೀರಾದ ವೀಕ್ಷಕರು

By Roopa Hegde  |  First Published Sep 4, 2024, 10:30 AM IST

ಸೀತಾರಾಮ ಸೀರಿಯಲ್ ಟಿಆರ್ ಪಿ ಗಿಟ್ಟಿಸಿಕೊಳ್ಳೋದ್ರಲ್ಲಿ ಯಶಸ್ವಿಯಾಗಿದೆ. ಸೀತಾ ಹಾಗೂ ರಾಮನ ಜೋಡಿ, ಸಿಹಿಯ ಮುದ್ದಾದ ಮಾತು ಅಭಿಮಾನಿಗಳಿ ಇಷ್ಟವಾಗಿದೆ. ಈಗ ಸೀತಾ ಹಾಗೂ ರಾಮನ ರೋಮ್ಯಾನ್ಸ್ ನೋಡಿ ವೀಕ್ಷಕರು ಬ್ಲಷ್ ಆಗಿದ್ದಾರೆ.


ಝೀ ಕನ್ನಡದ ಸೀತಾರಾಮ ಸೀರಿಯಲ್ (Zee Kannada Seetharama Serial) ನಲ್ಲಿ ಸೀತಾ ಮತ್ತು ರಾಮನ ಜೋಡಿ ಅಭಿಮಾನಿಗಳ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ. ಈ ಜೋಡಿಯ ರೋಮ್ಯಾನ್ಸ್ (Romance)  ನೋಡೋದು ಅಭಿಮಾನಿಗಳಿಗೆ ಇಷ್ಟ. ಅವರಿಬ್ಬರ ಪ್ರೀತಿ, ಮಾತುಕತೆಯನ್ನು ವೀಕ್ಷಕರು ತುಂಬಾ ಆಸಕ್ತಿಯಿಂದ ವೀಕ್ಷಿಸ್ತಾರೆ, ಸೀತಾ ರಾಮ ಪ್ರೀತಿ (Sita Rama Love) ಮಾಡುವಾಗಿಂದ ಹಿಡಿದು ಮದುವೆಯವರೆಗೆ ಒಂದು ಎಪಿಸೋಡ್ ಬಿಡದೆ ನೋಡಿದ ಜನರಿದ್ದಾರೆ. ಈಗ ಸೀತಾರಾಮ ಮತ್ತಷ್ಟು ಆಸಕ್ತಿ ಹುಟ್ಟಿಸಿದೆ. ಸಿಹಿ ಒಂದ್ಕಡೆಯಾದ್ರೆ ಸೀತಾರಾಮನ ಪ್ರೀತಿ ತುಂಬಿದ ದೃಶ್ಯಗಳು ಇನ್ನೊಂದ್ಕಡೆ.

ಈಗ ಸೀತಾ ತನಗೆ ಗಂಡ ಹೊಸ ಹೆಸರು ಇಡ್ಬೇಕು ಅಂತ ಬಯಸ್ತಿದ್ದಾಳೆ. ರಾಮ, ಪತ್ನಿಗೆ ಮುದ್ದಾದ ಹೆಸರನ್ನು ನಾಮಕರಣ ಮಾಡ್ಬೇಕು ಅನ್ನೋದು ಸೀತಾ ಆಸೆ. ಇದ್ರ ವಿಡಿಯೋವನ್ನು ಝೀ ಕನ್ನಡ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದ್ರಲ್ಲಿ ಡಾರ್ಲಿಂಗ್, ಹನಿ ಅಂತ ನನ್ನನ್ನು ಕರೆಯೋದೇನ್ ಬೇಡ. ಸೀತಾ ಬದಲು ಬೇರೆ ಏನಾದ್ರೂ ಹೆಸರನ್ನು ಕರಿಬಹುದಲ್ಲ ಅಂತ ಸೀತಾ, ರಾಮನಿಗೆ ಹೇಳ್ತಾಳೆ. ಇದನ್ನು ಕೇಳಿದ ರಾಮ್, ಇದನ್ನು ಮೊದ್ಲೇ ಹೇಳ್ಬೇಕಿತ್ತು. ಈ ಬಗ್ಗೆ ಡಿಸ್ಕಸ್ ಆಗ್ಬೇಕು ಎನ್ನುತ್ತಾನೆ. ಅದನ್ನು ಕೇಳಿದ ಸೀತಾ, ಕಾನ್ಫರೆನ್ಸ್ ಮೀಟಿಂಗ್ ಕರೆಯೋಣ ಅಂತ ರಾಮ್ ಕಾಲೆಳೆಯುತ್ತಾಳೆ. ಅದನ್ನು ಗಂಭೀರವಾಗಿ ತೆಗೆದ್ಕೊಂಡ ರಾಮ್, ಫೋನ್ ಕೈಗೆತ್ತಿಕೊಳ್ತಾನೆ. ನಂತ್ರ ಸೀತಾ ಹೇಳಿದ್ದು ತಮಾಷೆಗೆ ಅನ್ನೋದು ಗೊತ್ತಾಗುತ್ತೆ.

Tap to resize

Latest Videos

ಬಿಗ್ ಬಾಸ್ ಸ್ಪರ್ಧೆಗೆ ಬಂದು ಕಣ್ಣು ತಂಪು ಮಾಡ್ತಾರಾ ಜ್ಯೋತಿ ರೈ ? ನಟಿಯ ಸೌಂದರ್ಯ ಹಾಡಿಹೊಗಳಿದ ನಿರಂಜನ್, ಕೀರ್ತಿ

ಪತಿ, ಪತ್ನಿಗೆ ಹೆಸರಿಡಬೇಕು ಅಂದ್ರೆ ಅದಕ್ಕೆ ಬೇರೆಯವರು ಯಾಕೆ ಬೇಕು ಎನ್ನುವ ಸೀತಾ ಮಾತಿಗೆ ತಲೆಯಾಡಿಸುವ ರಾಮ್, ಮುದ್ದು ಅಂತ ಕರೀಲಾ ಅಂತಾನೆ. ಮುದ್ದು ಹೆಸರನ್ನು, ರಾಮ್, ಸಿಹಿಗೆ ಕರೆಯೋದ್ರಿಂದ ಇದನ್ನು ರಿಜೆಕ್ಟ್ ಮಾಡ್ತಾಳೆ ಸೀತಾ. ನಂತ್ರ ರಾಮ್, ಸೀತಾ ಸೀತಾ ಅಂತಾ ಪತ್ನಿ ಹೆಸರನ್ನು ಮೂರ್ ಬಾರಿ ಕರೆದು, ಇದೇ ಚೆನ್ನಾಗಿದೆ ಅಂತಾನೆ. ಇನ್ನು ಸೀತಾ ಕೂಡ, ಆ ರಾಮನಿಗಿಂತ ಈ ರಾಮನನ್ನೇ ನಾನು ಹೆಚ್ಚು ಕರೆಯೋದು ಅಂತ ಪ್ರೀತಿಯಿಂದ ಪತಿಯ ಮುಖ ನೋಡ್ತಾಳೆ.

ಈ ವಿಡಿಯೋಕ್ಕೆ 75 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದೆ. ನೂರಾರು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಕಿರುತೆರೆ ಮೇಲೆ ಸೀತಾರಾಮರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವೈಷ್ಣವಿ (Vaishnavi) ನಟನೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಇಷ್ಟು ದಿನ ವೈಷ್ಣವಿ ಬರಿ ಸಿದ್ದುಗೆ ಸೂಟ್ ಆಗ್ತಾರೆ ಅಂದ್ಕೊಂಡಿದ್ವಿ. ಇಲ್ಲ, ರಾಮ್ ಜೊತೆ ಕೂಡ ವೈಷ್ಣವಿ ಚೆನ್ನಾಗಿ ನಟಿಸ್ತಾರೆ. ಈ ಜೋಡಿ ಕೂಡ ಮುದ್ದಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಸೀತಾ, ನಾಚಿ ನೀರಾದಾಗ, ಅವರನ್ನು ನೋಡುವ ಅಭಿಮಾನಿಗಳು ಕೂಡ ಬ್ಲಷ್ ಆಗ್ತಾರೆ ಅನ್ನೋದು ಅಭಿಮಾನಿಗಳ ಮಾತು. 

ಕಮೋಡ್ ಕೊಳ್ಳಲೂ ದರ್ಶನ್ ಟ್ರೆಂಡ್ ಸೆಟ್, ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಹವಾ!

ಸೀತಾರಾಮದಲ್ಲಿ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ವೃಷ್ಣವಿ, ಆರಂಭದಲ್ಲಿ ಯಾಕೆ ಸ್ಟೈಲಿಷ್ ಆಗಿಲ್ಲ ಎಂದುಕೊಂಡಿದ್ದ ಅಭಿಮಾನಿಯೊಬ್ಬರು, ಈಗ ಪಾತ್ರಕ್ಕೆ ತಕ್ಕಂತೆ ಸೀತಾ ರೆಡಿಯಾಗೋದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರಾತ್ರಿ 9.30 ಆದ್ರೆ ಸಾಕು ಅಂತಾ ಕಾಯ್ತಿರ್ತೇನೆ, ಅಗ್ನಿಸಾಕ್ಷಿ (Agnisakshi) ಪ್ರಸಾರವಾಗುವ ಸಂದರ್ಭದಲ್ಲೂ ಅಷ್ಟೇ ಕುತೂಹಲವಿತ್ತು. ವೈಷ್ಣವಿ ನಟನೆ ಅಧ್ಬುತ ಎಂದು ಅಭಿಮಾನಿಗಳು ಬರೆದಿದ್ದಾರೆ. ಇನ್ನು ಸೀತಾ ಸಾರಿ ಮೇಲೂ ಅನೇಕ ಅಭಿಮಾನಿಗಳ ಕಣ್ಣು ಬಿದ್ದಿದೆ. ಈ ಸಾರಿಯಲ್ಲಿ ಸೀತೆ ಸೌಂದರ್ಯ ದುಪ್ಪಟ್ಟಾಗಿದೆ ಎಂದಿರುವ ಅಭಿಮಾನಿಗಳು, ನಿಮಗೆ ದೃಷ್ಟಿ ಬೀಳದಿರಲಿ, ಹೀಗೆ ಇರಿ, ಸೀರಿಯಲ್ ನಲ್ಲಿ ನಿಮ್ಮ ರೋಮ್ಯಾನ್ಸ್ ಇನ್ನಷ್ಟು ನಮಗೆ ನೋಡಲು ಸಿಗ್ಲಿ ಅಂತ ಆಶಿಸಿದ್ದಾರೆ. ಇನ್ನೊಂದು ಮಗು ಬೇಕು ಅಂತ ಸಿಹಿ ಮಾತ್ರವಲ್ಲ ವೀಕ್ಷಕರೂ ಬೇಡಿಕೆ ಇಟ್ಟಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!