ಪುಟಾಣಿ ಸಿಹಿ ಮನೆಯಿಂದ ಹೊರಗೆ ಹಾಕೋದಕ್ಕೆ ಭಾರ್ಗವಿಗೆ ಸಿಕ್ತು ಬ್ರಹ್ಮಾಸ್ತ್ರ!

By Sathish Kumar KH  |  First Published Sep 12, 2024, 3:22 PM IST

ಸೀತಾ ಮತ್ತು ಪುಟಾಣಿ ಸಿಹಿಯನ್ನು ಮನೆಯಿಂದ ಹೊರಗೆ ಹಾಕಬೇಕೆಂದು ಕುತಂತ್ರ ರೂಪಿಸುತ್ತಿದ್ದ ಭಾರ್ಗವಿ ದೇಸಾಯಿಗೆ ಸೀತಾ ಬಾಡಿಗೆ ತಾಯಿ ಎಂಬ ಸುಳಿವು ಸಿಕ್ಕೇಬಿಡ್ತು.


ಬೆಂಗಳೂರು (ಸೆ.12): ಪುಟಾಣಿ ಸಿಹಿಯನ್ನು ರಾಮ ಹಾಗೂ ಸೀತೆಯಿಂದ ದೂರ ಮಾಡಿ ಮನೆಯಿಂದ ಹೊರಗೆ ಹಾಕಬೇಕು ಎಂದು ಕುತಂತ್ರ ಮಾಡುತ್ತಿದ್ದ ಭಾರ್ಗವಿ ದೇಸಾಯಿಗೆ ಸೀತಾ ಬಾಡಿಗೆ ತಾಯಿ ಎಂಬ ಸುಳಿವು ಸಿಕ್ಕೇಬಿಡ್ತು. ಈ ಬ್ರಹ್ಮಾಸ್ತ್ರವನ್ನು ಹಿಡಿದುಕೊಂಡು ಸಿಹಿಯನ್ನು ಮನೆಯಿಂದ ಹೊರಗೆ ಹಾಕಲು ಕುತಂತ್ರ ಹೆಣೆಯಲಿದ್ದಾಳೆ. ಆದರೆ, ಪುಟಾಣಿ ಸಿಹಿ ತಾಯಿ ಸೀತಾ ಮತ್ತು ಪ್ರೀತಿ ಕೊಡುವ ರಾಮನನ್ನು ಬಿಟ್ಟು ಹೋಗುತ್ತಾಳಾ? ಎಂಬ ಆತಂಕ ವೀಕ್ಷಕರ ಮನದಲ್ಲಿ ತೊಳಲಾಟವನ್ನು ಶುರುಮಾಡಿದೆ.

ಸೀತಾರಾಮ ಧಾರಾವಾಹಿಯಲ್ಲಿ  ಸಿಹಿಯ ಜನ್ಮರಹಸ್ಯದ ಕುರಿತು ಹಲವು ರೋಚಕ ತಿರುವುಗಳನ್ನು ಧಾರಾವಾಹಿ ಪಡೆದುಕೊಳ್ಳುತ್ತಿದೆ. ಡಾ.ಮೇಘಶ್ಯಾಮ ಹಾಗೂ ಶಾಲಿನಿ ದಂಪತಿಗೆ ತಮ್ಮ ಮಗಳು ಬದುಕಿದ್ದಾಳೆ ಎಂದು ಗೊತ್ತಾಗಿದೆ. ಸಿಹಿ ಮೇಘಶ್ಯಾಮನ ಮಗಳು ಎಂಬ ಸತ್ಯ ಸೀತಾಗೆ ತಿಳಿದಿದ್ದು, ಆತಂಕಕ್ಕೆ ಒಳಗಾಗಿದ್ದಾಳೆ. ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ ದೇಸಾಯಿ ಮುಂದೆ ಹೇಳಿದ್ದಾಳೆ. ಈ ವಿಚಾರ ಭಾರ್ಗವಿ ದೇಸಾಯಿಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಸೀತಾಳ ಗಂಡನನ್ನು ಹುಡುಕಲು ಎಷ್ಟೇ ಕಸರತ್ತು ಮಾಡಿದರೂ, ಯಾವುದೇ ಸುಳಿವು ಸಿಗದೇ ಪರದಾಡುತ್ತಿದ್ದ ಭಾರ್ಗವಿ ದೇಸಾಯಿಗೆ ಸೀತಾ ಬಾಡಿಗೆ ತಾಯಿ ಆಗಿರಬಹುದೇ ಎಂಬ ಅನುಮಾನ ಆರಂಭವಾಗಿದೆ. ಒಂದು ವೇಳೆ ಸೀತಾ ಬಾಡಿಗೆ ತಾಯಿ ಎಂಬ ಸತ್ಯಾಂಶ ತಿಳಿದರೆ, ಸಿಹಿಯನ್ನು ಸುಲಭವಾಗಿ ಮನೆಯಿಂದ ಹೊರಗೆ ಹಾಕಲಿದ್ದಾಳೆ.

Tap to resize

Latest Videos

undefined

ಸೀತಾರಾಮ: ಸಿಹಿ ಅಪ್ಪ ಅಮ್ಮನ ಪತ್ತೆಯಾಯ್ತು; ಸೀತಾ ಮಗುವನ್ನು ಬಿಟ್ಟು ಕೊಡಬೇಕೋ ಬೆಡ್ವಾ?

ಸೀತಾಳನ್ನೂ ಹೊರಗೆ ಹಾಕುವುದು ಸುಲಭ: ರಾಮನನ್ನು ಮದುವೆ ಮಾಡಿಕೊಂಡು ದೇಸಾಯಿ ಮನೆಯಲ್ಲಿ ರಾಣಿಯಂತೆ ಇರುವ ಸೀತಾ, ಸಿಹಿಗೆ ಬಾಡಿಗೆ ತಾಯಿ ಎಂಬ ಸತ್ಯಾಂಶ ಭಾರ್ಗವಿ ದೇಸಾಯಿಗೆ ತಿಳಿದರೆ ದೊಡ್ಡ ಅನಾಹುತವೇ ನಡೆದುಹೋಗುತ್ತದೆ. ಒಂದೆಡೆ ಪುಟಾಣಿ ಸಿಹಿಯನ್ನು ಡಾ. ಮೇಘಶ್ಯಾಮ ಮತ್ತು ಶಾಲಿನಿ ದಂಪತಿಗೆ ಒಪ್ಪಿಸಿದರೆ, ಮತ್ತೊಂದೆಡೆ ಸೀತಾ ಈ ದಂಪತಿಗೆ ಮೋಸ ಮಾಡಿದ್ದಾಳೆ ಎಂದು ಆಕೆಗೆ ಮೋಸಗಾತಿ ಎಂಬ ಪಟ್ಟವನ್ನು ಕಟ್ಟುತ್ತಾಳೆ. ಜೊತೆಗೆ, ರಾಮನನ್ನೂ ಮದುವೆ ಮಾಡಿಕೊಂಡಿರುವುದೂ ಮೋಸ ಮಾಡುವುದಕ್ಕೆ ಎಂಬ ಅಪಪ್ರಚಾರವನ್ನು ಮಾಡಿ, ಸುಲಭವಾಗಿ ಸೀತಾಳನ್ನು ಮನೆಯಿಂದ ಹೊರಗೆ ಹಾಕಲು ಸಂಚು ರೂಪಿಸುತ್ತಾಳೆ.

ಡಾ. ಮೇಘಶ್ಯಾಮನಿಗೆ ಮಗಳು ಹುಡುಕಲು ರಾಮ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾನೆ. ಆದ್ದರಿಂದ ಮೇಘಶ್ಯಾಮನಿಗೆ ತನ್ನ ಮಗಳು ಸಿಗುತ್ತಾಳೆ ಎಂಬ ಭರವಸೆ ಮೂಡಿದೆ. ಇದಕ್ಕೆ ವೇದಿಕೆ ಆಗುವಂತೆ ಗಣೇಶ ಹಬ್ಬಕ್ಕೆ ರಾಮನ ಮನೆಗೆ ಮೇಘಶ್ಯಾಮ ಮತ್ತು ಆತನ ಹೆಂಡತಿ ಶಾಲಿನಿ ಆಗಮಿಸಿದ್ದಾರೆ. ಸಿಹಿಯನ್ನು ತಮ್ಮ ಮಗಳು ಎಂಬಂತೆ ಮುದ್ದಾಡುತ್ತಾ, ತುಂಬಾ ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ಮೇಘಶ್ಯಾಮ ಮತ್ತು ಸಿಹಿ ಇಬ್ಬರ ಅಭಿರುಚಿಗಳು ಒಂದೇ ಆಗಿದ್ದು ಈ ಹೋಲಿಕೆಗಳಿಂದ ಸಿಹಿ ಅವರ ಮಗಳು ಆಗಿರಬಹುದು ಎಂಬ ಸಣ್ಣ ಸಣ್ಣ ಸುಳಿವು ಮನೆಯವರಿಗೆ ಲಭ್ಯವಾಗುತ್ತಿವೆ. ಇದು ಹೀಗೆಯೇ ಮುಂದುವರೆದರೆ ಸಿಹಿ ಸೀತಾಳ ಕೈತಪ್ಪಿ ಹೋಗುವುದು ನಿಶ್ಚಿತವಾಗಿದೆ.

Breaking: ವರುಣ್ ಆರಾಧ್ಯನಿಂದ ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋ ಬೆದರಿಕೆ; ದೂರು ದಾಖಲು

ಮಗುವನ್ನು ಪಡೆಯದೇ ನಿರಾಕರಿಸಿದ್ದ ಶಾಲಿನಿ: ಸೀತಾರಾಮ ಧಾರಾವಾಹಿಯಲ್ಲಿ ಮೇಘಶ್ಯಾಮನ ಹೆಂಡತಿ ಶಾಲಿನಿ ಕೂಡ ಮುಖ್ಯ ವಾನಿಹಿಗೆ ಬರುತ್ತಿದ್ದಾಳೆ. ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯುವಾಗ ವೈದ್ಯರ ಫೋನ್ ಕರೆ ಸ್ವೀಕರಿಸದೇ ಹಾಗೂ ಸೀತಾಳ ಪತ್ರಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಿದೇ ಮಗುವನ್ನು ಬೇಡವೆಂದು ನಿರಾಕರಿಸಿರುತ್ತಾಳೆ. ಜೊತೆಗೆ, ತಮ್ಮ ಮಗು ಸತ್ತು ಹೋಗಿದೆ ಎಂದು ಗಂಡನಿಗೆ ಸುಳ್ಳು ಹೇಳಿರುತ್ತಾಳೆ. ಹಲವು ಸತ್ಯವನ್ನು ಗಂಡನಿಂದ ಮುಚ್ಚಿಟ್ಟು ಮಗು ದೂರ ಮಾಡಿದ್ದರೂ, ಡಾ.ಅನಂತಲಕ್ಷ್ಮಿ ನಿಮ್ಮ ಮಗು ಜೀವಂತವಾಗಿದೆ ಎಂಬ ಮಾಹಿತಿಯನ್ನು ಮೇಘಶ್ಯಾಮನಿಗೆ ತಿಳಿಸಿದ್ದಾರೆ. ಈಗ ಮಗು ಹುಡುಕಾಟ ಆರಂಭವಾಗಿದ್ದು, ಶಾಲಿನಿ  ಮಾಡಿದ ಕುಕೃತ್ಯವನ್ನು ಮುಚ್ಚಿಡಲು ಹೆಣಗಾಡುತ್ತಿದ್ದಾಳೆ. ಜೊತೆಗೆ, ಬಾಡಿಗೆ ತಾಯಿಯೇ ತಮಗೆ ಮೋಸ ಮಾಡಿದ್ದಾಳೆಂದು ಭಾರ್ಗವಿ ದೇಸಾಯಿಗೆ ಹೇಳಿದ್ದಾಳೆ.

click me!