ಅವಿ ಮತ್ತು ಅಭಿಯ ಮೇಲೆ ಅಮ್ಮ ತುಳಸಿ ಪ್ರೀತಿ ತೋರುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ ಸಮರ್ಥ್ಗೆ. ಆಕೆಯನ್ನು ಮನೆಗೆ ವಾಪಸ್ ಕರೆಯುತ್ತಿದ್ದಾನೆ. ಮುಂದೇನಾಗುತ್ತೆ?
ಒಂದು ಕಡೆ ಸಮರ್ಥ್, ಇನ್ನೊಂದು ಕಡೆ ಅವಿ ಮತ್ತು ಅಭಿ. ಒಬ್ಬಾತ ಹೆತ್ತ ಮಗ, ಇನ್ನಿಬ್ಬರು ಈಗ ತಾನೇ ಮಕ್ಕಳೆಂದು ಸ್ವೀಕೃತರಾದವರು. ಇದು ಶ್ರೀರಸ್ತು ಶುಭಮಸ್ತು ಸೀರಿಯಲ್ ತುಳಸಿಯ ಕಥೆ. ಹೆತ್ತವರಾಗಲೀ, ಸಾಕಿದವರಾಗಲೀ ತಾಯಿ ತಾಯಿಯೇ. ಎಲ್ಲರೂ ಆಕೆಗೆ ಮಕ್ಕಳ ಸಮಾನರು. ಆದರೆ, ಮಕ್ಕಳಿಗೆ ಈ ಭಾವನೆ ಬರಲು ಸಾಧ್ಯನಾ? ಎಲ್ಲಾ ಸಂದರ್ಭಗಳಲ್ಲಿಯೂ ಹೀಗೆಯೇ ಎನ್ನುವುದು ಕಷ್ಟವೇ. ಇದೇ ಪರಿಸ್ಥಿತಿ ಸಮರ್ಥ್ಗೆ ಆಗಿದೆ. ಶ್ರೀಮಂತರ ಮನೆಗೆ ಸೊಸೆಯಾಗಿ ಅಮ್ಮ ಹೋದಾಗಿನಿಂದಲೂ ಸಮರ್ಥ್ಗೆ ಅಮ್ಮನ ಮೇಲೆ ಕೋಪ. ಹಾಗಂತ ಪ್ರೀತಿ ಏನೂ ಕಮ್ಮಿಯಾಗಲಿಲ್ಲ. ಅಮ್ಮನನ್ನು ಆ ಮನೆಯವರೆಲ್ಲರೂ ಕನಿಷ್ಠವಾಗಿ ನೋಡುತ್ತಿದ್ದಾಗ, ಸಮರ್ಥ್ ಹೋಗಿ ರೇಗಾಡಿದ್ದಾನೆ, ಕೂಗಾಡಿದ್ದಾನೆ. ತನ್ನ ತಾಯಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ದುಃಖ ಪಟ್ಟಿದ್ದಾನೆ. ಆದರೆ ಈಗ?
ಈಗ ಹೊಸ ಮನೆಯಲ್ಲಿ ಎಲ್ಲರೂ ತುಳಸಿಯನ್ನು ಅಮ್ಮ ಎಂದು ಒಪ್ಪಿಕೊಂಡಿದ್ದಾರೆ. ತುಳಸಿ ಅಮ್ಮ ಎಲ್ಲರ ಮನೆ ಗೆದ್ದಿದ್ದಾಳೆ. ಅವಳ ಹೆಸರಿನಲ್ಲಿ ಮಕ್ಕಳು ಹೊಸ ಕಂಪೆನಿಯನ್ನೇ ಶುರು ಮಾಡಲು ಹೊರಟಿದ್ದಾರೆ. ವಿಲನ್ಗಳಾದ ದೀಪಿಕಾ ಮತ್ತು ಶಾರ್ವರಿಯನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಇದು ಶುಭ ಸುದ್ದಿಯಾಗಿದೆ. ಎಲ್ಲರೂ ಖುಷಿ ಪಟ್ಟಿದ್ದಾರೆ. ಇಲ್ಲಿ ದೀಪಿಕಾ ಮತ್ತು ಶಾರ್ವರಿ ಇಬ್ಬರೂ ವಿಲನ್ ಆಗಿರಬಹುದು. ಆದರೆ ಸೀರಿಯಲ್ ಹೀರೋ ಎಂದೇ ಎನ್ನಿಸಿಕೊಂಡಿರುವ ಸಮರ್ಥ್ ಕೂಡ ಕೊತ ಕೊತ ಎಂದು ಕುದಿಯುತ್ತಿದ್ದಾನೆ. ತನ್ನ ಅಮ್ಮನ ಪ್ರೀತಿಯನ್ನು ಬೇರೊಬ್ಬರ ಜೊತೆಯಲ್ಲಿ ಹಂಚಿಕೊಳ್ಳುವುದನ್ನು ಈತನಿಗೆ ನೋಡಲು ಆಗುತ್ತಿಲ್ಲ.
undefined
ಅನುಬಂಧ ಅವಾರ್ಡ್ಗೆ ಭಾಗ್ಯಲಕ್ಷ್ಮಿ ಸೀರಿಯಲ್ ಸುಷ್ಮಾರನ್ನು ರೆಡಿ ಮಾಡಿದ್ದು ಹೀಗೆ ನೋಡಿ...
ಚಿಕ್ಕಮಕ್ಕಳು ತಮ್ಮ ವಸ್ತುವನ್ನು ಬೇರೊಬ್ಬರು ತೆಗೆದುಕೊಂಡು ಹೋದಾಗ ಆದ ಅನುಭವ ಸಮರ್ಥ್ಗೆ ಆಗುತ್ತಿದೆ. ಅವಿ ಮೊದಲೇ ತುಳಸಿಯನ್ನು ಅಮ್ಮ ಎಂದು ಒಪ್ಪಿಕೊಂಡಿದ್ದ. ಈಗ ಅಭಿನೂ ಒಪ್ಪಿಕೊಂಡಿದ್ದಾನೆ. ಇಬ್ಬರೂ ಮಕ್ಕಳಿಗೆ ಅಮ್ಮ ತುತ್ತು ಕೊಡುವುದು, ಅವರು ಅಮ್ಮನನ್ನು ಪ್ರೀತಿ ಮಾಡುವುದು, ಅಮ್ಮನ ಮಡಿಲಲ್ಲಿ ಅವಿ-ಅಭಿ ಮಲಗುವುದು.. ಇವುಗಳನ್ನು ಸಮರ್ಥ್ ಕಣ್ಣಿನಿಂದ ನೋಡಲು ಆಗುತ್ತಿಲ್ಲ. ಅಮ್ಮನ ಪ್ರೀತಿ ಹಂಚಿಹೋಗುವುದನ್ನು ನೋಡಿ ಅವನಿಗೆ ಅಸೂಯೆ ಆಗುತ್ತಿದೆ. ಇದೀಗ ಅಮ್ಮನ ಹೆಸರಿನಲ್ಲಿ ಕಂಪೆನಿಯೊಂದು ತೆರೆಯಲಾಗುತ್ತಿದೆ ಎಂದು ಕೇಳಿ ಅಮ್ಮ ಸಂಪೂರ್ಣ ಈ ಶ್ರೀಮಂತರ ಮನೆಯ ವಶ ಆಗಿಬಿಟ್ಟಳು ಎಂದು ಮತ್ತಷ್ಟು ಕೋಪ ನೆತ್ತಿಗೇರಿದೆ ಸಮರ್ಥ್ಗೆ.
ಅಮ್ಮನ ಕೈ ಹಿಡಿದು ಮನೆಗೆ ವಾಪಸ್ ಕರೆದಿದ್ದಾನೆ. ಎಲ್ಲರೂ ಏನಾಯಿತು ಎಂದು ಪ್ರಶ್ನಿಸಿದಾಗ, ಅವರ ಮೇಲೆ ಸಮರ್ಥ್ ರೇಗಾಡಿದ್ದಾನೆ. ನನ್ನ ಅಮ್ಮ ಇಲ್ಲಿ ಇರುವುದನ್ನು ನೋಡಲು ಆಗುತ್ತಿಲ್ಲ, ಮನೆಗೆ ವಾಪಸ್ ಬರುತ್ತಿಯೋ, ಇಲ್ವೋ ಎಂದು ಪ್ರಶ್ನೆ ಮಾಡಿದ್ದಾನೆ. ಇದನ್ನು ಕೇಳಿ ತುಳಸಿಯೂ ಶಾಕ್ ಆಗಿದ್ದಾಳೆ. ಏನು ಇದೆಲ್ಲಾ ಎಂದು ಪ್ರಶ್ನಿಸಿದ್ದಾಳೆ. ಅದಕ್ಕೆ ಸಮರ್ಥ್ ನಾನು ಬೇಕೋ, ಬೇಡವೋ ಮನೆಗೆ ಬರುತ್ತಿಯೋ ಇಲ್ಲವೋ ಎಂದುಪ್ರಶ್ನಿಸಿದಾಗ ತುಳಸಿ ನಾನು ಅಲ್ಲಿಗೆ ಬರುವುದಿಲ್ಲ ಎಂದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ವಿಭಿನ್ನ ರೀತಿಯ ನಿಲುವು ವ್ಯಕ್ತವಾಗಿದೆ. ಇದರಲ್ಲಿ ಬಹುತೇಕ ಮಂದಿ ಸಮರ್ಥ್ ಪರವಾಗಿದ್ದಾರೆ. ಅವಿ ಮತ್ತು ಅಭಿಗಾಗಿ ತುಳಸಿ ಸಮರ್ಥ್ನನ್ನು ಇಷ್ಟು ನಿಷ್ಠೂರವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ತುಳಸಿ ಮೂವರೂ ಮಕ್ಕಳನ್ನೂ ಸರಿಯಾಗಿಯೇ ಕಾಣುತ್ತಿದ್ದಾಳೆ. ಸಮರ್ಥ್ದು ಅತಿಯಾಯ್ತು ಎನ್ನುತ್ತಿದ್ದಾರೆ. ನಿಮಗೆ ಏನು ಅನ್ನಿಸತ್ತೆ?
ಇಂಥ ಹುಡುಗ ಸಿಕ್ರೆ ಮಾತ್ರ ಮದ್ವೆಯಾಗಿ, ಇಲ್ಲದಿದ್ರೆ ಮತ್ತೊಬ್ರನ್ನ ಹುಡುಕಿ ಅಷ್ಟೇ- ಯುವತಿಯರಿಗೆ ತನಿಷಾ ಕಿವಿಮಾತೇನು?