ಸೀತಾರಾಮ: ಸಿಹಿ ಅಪ್ಪ ಅಮ್ಮನ ಪತ್ತೆಯಾಯ್ತು; ಸೀತಾ ಮಗುವನ್ನು ಬಿಟ್ಟು ಕೊಡಬೇಕೋ ಬೆಡ್ವಾ?

Published : Sep 11, 2024, 07:07 PM IST
ಸೀತಾರಾಮ: ಸಿಹಿ ಅಪ್ಪ ಅಮ್ಮನ ಪತ್ತೆಯಾಯ್ತು; ಸೀತಾ ಮಗುವನ್ನು ಬಿಟ್ಟು ಕೊಡಬೇಕೋ ಬೆಡ್ವಾ?

ಸಾರಾಂಶ

ಸೀತಾರಾಮ ಧಾರಾವಾಹಿಯಲ್ಲಿ ಸಿಹಿಯ ಜನ್ಮ ರಹಸ್ಯ ಬಯಲಾಗಿದ್ದು, ಸಿಹಿ ಡಾ.ಮೇಘಶ್ಯಾಮ ಮತ್ತು ಶಾಲಿನಿಯ ಮಗಳು ಎಂಬ ಸತ್ಯ ಹೊರಬಿದ್ದಿದೆ. ಈಗ ಸಿಹಿ ಯಾರಿಗೆ ಸೇರಬೇಕೆಂಬ ಪ್ರಶ್ನೆ ಎದ್ದಿದೆ.

ಬೆಂಗಳೂರು (ಸೆ.11): ಸೀತಾರಾಮ ಧಾರಾವಾಹಿಯಲ್ಲಿ ಇದೀಗ ಸಿಹಿಯ ಜನ್ಮರಹಸ್ಯದ ಕುರಿತು ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಿಹಿ ಡಾ.ಮೇಘಶ್ಯಾಮ ಹಾಗೂ ಶಾಲಿನಿ ದಂಪತಿಯ ಮಗಳು ಎಂದು ಗೊತ್ತಾಗಿದೆ. ಇನ್ನು ಸೀತಾಗೂ ಸಿಹಿ ಮೇಘಶ್ಯಾಮನ ಮಗಳು ಎಂಬುದು ತಿಳಿದಿದ್ದು, ಆತಂಕ ಶುರುವಾಗಿದೆ. ಇದೀಗ ಬಾಡಿಗೆ ತಾಯ್ತನದ ಒಪ್ಪಂದಂತೆ ಸೀತಾ ಸಿಹಿಯನ್ನು ಅವರ ತಂದೆ ತಾಯಿಗೆ ಬಿಟ್ಟುಕೊಡಬೇಕಾ ಎಂಬ ಪ್ರಶ್ನೆ ಕಾಡುತ್ತಿದೆ. 

ಜೀ ಕನ್ನಡದ ಪ್ರಮುಖ ಧಾರಾವಾಹಿಯಲ್ಲಿ ಒಂದಾದ ಸೀತಾರಾಮ ಧಾರಾವಾಹಿಯು ಪ್ರಸ್ತುತ ಎಲ್ಲ ಎಪಿಸೋಡ್‌ಗಳು ಪುಟಾಣಿ ಸಿಹಿ ಜನ್ಮ ರಹಸ್ಯದ ಸುತ್ತಲೂ ಸುತ್ತುತ್ತಿದೆ. ಡಾ. ಅನಂತಲಕ್ಷ್ಮಿ ದೇಸಾಯಿ ಮನೆಗೆ ಬಂದು ಹೋದ ನಂತರ ವೀಕ್ಷಕರಿಗೆ ಸಿಹಿ ಡಾ.ಮೇಘಶ್ಯಾಮ ಮತ್ತು ಶಾಲಿನಿಯ ಮಗಳು ಎಂಬುದು ತಿಳಿದಿದೆ. ಇದೀಗ ಸಿಹಿ ಯಾರಿಗೆ ಸೇರಬೇಕು ಎಂಬುದು ಒದ್ದಾಟ ಶುರುವಾಗಿದೆ. ಒಂದೆಡೆ ಡಾ.ಅನಂತಲಕ್ಷ್ಮಿ ಕರೆ ಮಾಡಿ ಡಾ. ಮೇಘಶ್ಯಾಮನಿಗೆ ನಿಮ್ಮ ಮಗು ಜೀವಂತವಾಗಿದೆ ಎಂಬ ಸತ್ಯವನ್ನು ಹೇಳಿದಾಗಿನಿಂದ ಮಗು ಹುಡುಕಲು ಮುಂದಾಗಿದ್ದಾನೆ. ಮಗು ಪಡೆದುಕೊಳ್ಳಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾನೆ.

ಇದನ್ನೂ ಓದಿ: ವರುಣ್ ಆರಾಧ್ಯನಿಂದ ಮಾಜಿ ಪ್ರಿಯತಮೆಗೆ ಖಾಸಗಿ ವಿಡಿಯೋ ವೈರಲ್ ಮಾಡೋ ಬೆದರಿಕೆ; ದೂರು ದಾಖಲು

ಡಾ. ಮೇಘಶ್ಯಾಮನಿಗೆ ಸ್ವತಃ ರಾಮ ನಿಮ್ಮ ಮಗಳನ್ನು ಹುಡುಕುವುದಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಡಾ. ಮೇಘಶ್ಯಾಮನಿಗೆ ತನ್ನ ಮಗಳು ಸಿಗುತ್ತಾಳೆ ಎಂಬ ಭರವಸೆ ಮೂಡಿದೆ. ಇದಕ್ಕೆ ಸೂಕ್ತ ವೇದಿಕೆ ಆಗುವಂತೆ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಡಾ. ಮೇಘಶ್ಯಾಮ ಮತ್ತು ಶಾಲಿನಿ ಇಬ್ಬರೂ ದೇಸಾಯಿ ಮನೆಗೆ ಬಂದಿದ್ದಾರೆ. ಅಲ್ಲಿ ಸೀತಾ, ರಾಮ ಹಾಗೂ ಮಗಳು ಸಿಹಿಯನ್ನು ನೋಡಿದ್ದಾರೆ. ಸಿಹಿಯನ್ನು ತಮ್ಮ ಮಗಳು ಎಂಬಂತೆ ಮುದ್ದಾಡುತ್ತಾ, ತುಂಬಾ ಆತ್ಮೀಯವಾಗಿ ಡಾ.ಮೇಘಶ್ಯಾಮ ಸಮಯ ಕಳೆಯುತ್ತಿದ್ದಾನೆ. ಇನ್ನು ಮೇಘಶ್ಯಾಮ ಮತ್ತು ಸಿಹಿ ಇಬ್ಬರ ಅಭಿರುಚಿಗಳು ಒಂದೇ ಎಂಬುದು ಇಲ್ಲಿ ಕಂಡುಬರುತ್ತಿದೆ. ಈ ಹೋಲಿಕೆಗಳಿಂದ ವೀಕ್ಷಕರಿಗೆ ಸಿಹಿ ಅವರ ಮಗಳು ಎಂಬುದು ತಿಳಿದರೂ, ಧಾರಾವಾಹಿಯಲ್ಲಿ ಸಂಬಂಧಪಟ್ಟವರಿಗೆ ಇನ್ನೂ ಸತ್ಯಾಂಶ ತಿಳಿಯಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಮಗುವನ್ನು ಪಡೆಯದೇ ನಿರಾಕರಿಸಿದ್ದ ಶಾಲಿನಿ: ಸೀತಾರಾಮ ಧಾರಾವಾಹಿಗೆ ಡಾ. ಮೇಘಶ್ಯಾಮ ಎಂಟ್ರಿ ಕೊಟ್ಟ ನಂತರ ಕೆಲವು ದಿನಗಳು ಸಿಹಿ ಮತ್ತು ಡಾಕ್ಟರ್ ಎಪಿಸೋಡ್‌ಗಳು ತುಂಬಾ ಚೆನ್ನಾಗಿ ಮೂಡಿ ಬಂದಿದ್ದವು. ಇದೀಗ ಮೇಘಶ್ಯಾಮನ ಹೆಂಡತಿ ಶಾಲಿನಿ ಕೂಡ ಮುಖ್ಯ ವಾನಿಹಿಗೆ ಬರುತ್ತಿದ್ದಾಳೆ. ಬಾಡಿಗೆ ತಾಯಿಯಿಂದ ಮಗುವನ್ನು ಪಡೆಯುವಾಗ ವೈದ್ಯರ ಫೋನ್ ಕರೆ ಸ್ವೀಕರಿಸದೇ ಹಾಗೂ ಸೀತಾಳ ಪತ್ರಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಿದೇ ಮಗುವನ್ನು ಪಡೆಯುವುದಕ್ಕೆ ನಿರಾಕರಿಸಿರುತ್ತಾಳೆ. ಜೊತೆಗೆ, ತಮ್ಮ ಮಗು ಸತ್ತು ಹೋಗಿದೆ ಎಂದು ಗಂಡನಿಗೆ ಹೇಳಿರುತ್ತಾಳೆ. ಹಲವು ಸತ್ಯವನ್ನು ಗಂಡನಿಂದ ಮುಚ್ಚಿಟ್ಟು ಮಗು ದೂರ ಮಾಡಿದ ಎಲ್ಲ ಸತ್ಯಾಂಶಗಳು ಇದೀಗ ಹೊರ ಬರುವ ಕಾಲ ಸನ್ನಿಹಿತವಾಗಿದೆ.

ರೀಲ್ಸ್ ಮಾಡುವುದಕ್ಕೆಂದೇ ಡಿವೋರ್ಸ್ ಪಡೆದಳಾ ನಟಿ ನಿವೇದಿತಾಗೌಡ!

ಸಿಹಿ ಯಾರಿಗೆ ಸೇರಬೇಕು?
ಬಾಡಿಗೆ ತಾಯ್ತನದ ಕರಾರಿನಂತೆ ಡಾ.ಮೇಘಶ್ಯಾಮ ಹಾಗೂ ಶಾಲಿನಿ ದಂಪತಿಗೆ ಬಾಡಿಗೆ ತಾಯಿಯಾಗಿ ಮಗು ಹೆತ್ತುಕೊಡಲು ಮುಂದಾಗಿದ್ದ ಸೀತಾ, ಮಗುವನ್ನು ಪೋಷಕರು ಪಡೆಯಲಿಲ್ಲವೆಂದು ಆಕೆಯೇ ಕಷ್ಟಪಟ್ಟು ಸಾಕಿದ್ದಾಳೆ. ಸಮಾಜದಲ್ಲಿ ಆಕೆಗೆ ಎಷ್ಟೇ ವಿರೋಧಗಳು ಬಂದಿದ್ದರೂ ಅವುಗಳನ್ನು ಲೆಕ್ಕಿಸಲಿಲ್ಲ. ಇದೀಗ ಸಿಹಿಯ ನಿಜವಾದ ತಂದೆ-ತಾಯಿ ಬಂದಿದ್ದು, ಅವರಿಗೆ ಮಗುವನ್ನು ಬಿಟ್ಟುಕೊಡಬೇಕಾ ಎಂಬ ಆತಂಕದಲ್ಲಿದ್ದಾಳೆ. ಜೊತೆಗೆ ಸೀತಾಳ ಗಂಡ ರಾಮ ಕೂಡ ಡಾ. ಮೇಘಶ್ಯಾಮನಿಗೆ ಅವರ ಮಗಳು ಎಲ್ಲಿದ್ದಾಳೆ ಎಂಬುದನ್ನು ಹುಡುಕಲು ಸಹಾಯ ಮಾಡುವುದಾಗಿ ತಿಳಿಸಿದ್ದಾನೆ. ಈ ವಿಚಾರಕ್ಕೆ ಸೀತಾಳ ಮುಂದೆ ಬಾಡಿಗೆ ತಾಯಿಯೇ ಮೋಸ ಮಾಡಿದ್ದಾಳೆ ಎಂಬ ಅರ್ಥ ಬರುವಂತೆಯೂ ಮಾತನಾಡಿದ್ದಾನೆ. ಒಟ್ಟಾರೆ ಸಿಹಿ ಸೀತಾ ಮಡಿಲಲ್ಲಿಯೇ ಇರಬೇಕಾ ಅಥವಾ ಡಾ.ಮೇಘಶ್ಯಾಮ ದಂಪತಿ ಮಡಿಲಿಗೆ ಸೇರಬೇಕಾ ಎಂಬುದು ಯಕ್ಷ ಪ್ರಶ್ನೆಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!