ಅವಳ ಡ್ರೆಸ್ಸು, ಆಭರಣ ಇಷ್ಟ ಆಗಲ್ಲ: ಸೀತಾರಾಮದ ವಿಲನ್​ ಭಾರ್ಗವಿಯ ಅಮ್ಮ ಗಿರಿಜಾ ಲೋಕೇಶ್​ ಹೇಳಿದ್ದೇನು?

By Suvarna News  |  First Published Nov 11, 2023, 12:11 PM IST

ಜೀ ಕುಟುಂಬ ಅವಾರ್ಡ್ಸ್​ನಲ್ಲಿ ಪ್ರಶಸ್ತಿ ಗೆದ್ದ ಸೀತಾರಾಮದ ವಿಲನ್​ ಭಾರ್ಗವಿ ಅಲಿಯಾಸ್​ ಪೂಜಾ ಲೋಕೇಶ್​ ಅವರ ಅಮ್ಮ ಗಿರಿಜಾ ಲೋಕೇಶ್​ ಹೇಳಿದ್ದೇನು?
 


ಜೀ ಕುಟುಂಬ ಧಾರಾವಾಹಿಯ ನಟ-ನಟಿಯರಿಗೆ ಹಾಗೂ ಹಿನ್ನೆಲೆ ವರ್ಗದವರಿಗೆ ನೀಡುವ ಜೀ ಕುಟುಂಬ ಅವಾರ್ಡ್ಸ್​ ಕಾರ್ಯಕ್ರಮ ನಿನ್ನೆಯಿಂದ ಶುರುವಾಗಿದ್ದು, ಇವತ್ತೂ ನಡೆಯಲಿದೆ. ಇದಾಗಲೇ ಕೆಲವರಿಗೆ ಅವಾರ್ಡ್​ ನೀಡಲಾಗಿದೆ. ಭರ್ಜರಿಯಾಗಿ ನಡೆದಿರೋ ಈ ಕಾರ್ಯಕ್ರಮದಲ್ಲಿ ಜೀ ವಾಹಿನಿಯ ಎಲ್ಲಾ ಧಾರಾವಾಹಿಗಳ ಬಹುತೇಕ ಕಲಾವಿದರನ್ನು ಒಟ್ಟಿಗೇ ನೋಡುವ ಭಾಗ್ಯವನ್ನು ಧಾರಾವಾಹಿ ಪ್ರಿಯರು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಇದೀಗ ಸೀತಾರಾಮ ಸೀರಿಯಲ್​ ವಿಲನ್​ ಭಾರ್ಗವಿ ಪಾತ್ರಧಾರಿಯಾಗಿರುವ ಪೂಜಾ ಲೋಕೇಶ್​ ಅವರಿಗೂ ಅವಾರ್ಡ್ ಸಿಕ್ಕಿದ್ದು, ಕಾರ್ಯಕ್ರಮದಲ್ಲಿ ಹಾಜರು ಇದ್ದ ಅವರ ಅಮ್ಮ ಗಿರೀಜಾ ಲೋಕೇಶ್​ ಮಗಳ ಬಗ್ಗೆ ಕೆಲವೊಂದು ಹಾಸ್ಯಭರಿತ ಮಾತುಗಳನ್ನಾಡಿದ್ದಾರೆ.
​​
ಅಂದಹಾಗೆ, ಜನಮನ ಗೆದ್ದಿರುವ ಧಾರಾವಾಹಿ ಸೀತಾ ರಾಮ. ಪೂಜಾ ಲೋಕೇಶ್ ಅವರು 'ಸೀತಾ ರಾಮ' ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ನಿರ್ವಹಿಸುತ್ತಿರುವ ಭಾರ್ಗವಿ. ‘ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು ಎಂದಿರುವ ಪೂಜಾ ಅವರು ಎರಡು ಶೇಡ್‌ನಲ್ಲಿ ಪಾತ್ರ ಮಾಡಲು  ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದಿರುವ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದು, ಅವಾರ್ಡ್​ ಪಡೆದುಕೊಂಡಿದ್ದಾರೆ.

ಕ್ಯೂಟ್‌ ಲೇಡಿ ವಿಲನ್ಸ್‌ ಅಬ್ಬರದ ನಗು ಕೇಳಿದ್ರೆ ನೀವೂ ನಗೋದು ಗ್ಯಾರೆಂಟಿ!

Tap to resize

Latest Videos

ಮಗಳಿಗೆ ಅವಾರ್ಡ್​ ಸಿಕ್ಕಿರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಗಿರಿಜಾ ಲೋಕೇಶ್​ ಅವರು, ಅವಳಿಗಿಂತಲೂ ನನಗೆ ಹೆಚ್ಚು ಖುಷಿಯಾಗುತ್ತಿದೆ. ಈಕೆಯನ್ನು ಕನ್ನಡ ಚಿತ್ರರಂಗವಾಗಲೀ, ಕಿರುತೆರೆಯಾಗಲೀ ಗುರುತಿಸುತ್ತಿರಲಿಲ್ಲ. ಈಗ ಈಕೆಗೆ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ. ಈಕೆ ಪಾತ್ರ ಮಾಡಿದಾಗ ಅವಳ ತಂದೆ ಲೋಕೇಶ್​ ಅವರನ್ನು ಜನರು ನೆನಪಿಸಿಕೊಳ್ಳುತ್ತಾರೆ. ಅದಕ್ಕಿಂತ ಹೆಚ್ಚಿನ ಪ್ರಶಸ್ತಿ ಏನು ಬೇಕು ಎಂದು ಗಿರಿಜಾ ಲೋಕೇಶ್​ ಕೇಳಿದ್ದಾರೆ. ಪೂಜಾ ನಟಿ ಮಾತ್ರವಲ್ಲ, ಇದಾಗಲೇ ನಿರ್ದೇಶನ ಮಾಡಿದ್ದಾಳೆ, ಸ್ಕ್ರಿಪ್ಟ್​ ರೈಟಿಂಗ್​ ಮಾಡುತ್ತಾಳೆ. ಜೀ ಕನ್ನಡದ ಹಲವು ಸೀರಿಯಲ್​ಗಳಿಗೆ ಸ್ಕ್ರಿಪ್ಟ್​ ಬರೆದಿದ್ದಾಳೆ ಎಂದು ಮಗಳನ್ನು ಕೊಂಡಾಡಿರುವ ಗಿರಿಜಾ ಅವರು, ಈಕೆ ಏನು ಕೆಲಸ ಕೊಟ್ಟರೂ ಶ್ರದ್ಧೆಯಿಂದ ಮಾಡುತ್ತಾಳೆ, ನಿಜ ಹೇಳಬೇಕು ಎಂದರೆ ನನಗೂ  ನನಗೆ ಅಷ್ಟು ಶ್ರದ್ಧೆ ಇಲ್ಲ ಎಂದು ತಮಾಷೆ  ಮಾಡಿದ್ದಾರೆ. 

ನಂತರ ನಿರೂಪಕಿ ಶ್ವೇತಾ ಚಂಗಪ್ಪ ಅವರು, ನಿಮ್ಮ ಮಗಳಲ್ಲಿ ನಿಮಗೆ ಬೇಡ ಅನ್ನಿಸಿದ್ದು ಏನು ಎಂದು ಪ್ರಶ್ನಿಸಿದಾಗ, ಗಿರಿಜಾ ಅವರು ಮಗಳು ಎದುರೇ ಇದ್ದಾಳೆ, ಹೇಗೆ ಹೇಳಲಿ ಎಂದು ನಗುತ್ತಲೇ  ಆಕೆ ಡ್ರೆಸ್​  ನನಗೆ ಇಷ್ಟ ಆಗಲ್ಲ, ಆ ರೀತಿ  ಒಡವೆ ಹಾಕಿಕೊಳ್ತಾಳೆ, ಅದುನೂ ಇಷ್ಟ ಆಗಲ್ಲ, ಯಾರು ಹಾಗೆಲ್ಲಾ ಒಡವೆ ಹಾಕಿಕೊಳ್ತಾರೆ ಎಂದು ಕೇಳಿದರು. ಆಗ ಶ್ವೇತಾ ಅವರು ವಿಲನ್​ ಪಾರ್ಟ್​ಗೆ ಅದೆಲ್ಲಾ ಇರಬೇಕು ಎಂದಾಗ, ಮಧ್ಯೆ ಪ್ರವೇಶಿಸಿ ಅಮ್ಮನಿಗೆ ತಮಾಷೆ ಮಾಡಿದ ಪೂಜಾ, ನಿನ್ನ ಕ್ಯಾರೆಕ್ಟರ್​ ಬಡವರದ್ದು, ನಿನಗೆ ಒಡವೆ ಬೇಡ (ಸತ್ಯ ಸೀರಿಯಲ್​ನಲ್ಲಿ ಗಿರಿಜಾ ಲೋಕೇಶ್​ ನಟಿಸುತ್ತಿದ್ದಾರೆ), ನನ್ನ  ಕ್ಯಾರೆಕ್ಟರ್​ಗೆ ಬೇಕಾದಷ್ಟು ದುಡ್ಡು. ನಾವು ಹೆಲಿಕ್ಯಾಪ್ಟರ್​ನಲ್ಲೇ ಬರೋರು, ಅದಕ್ಕೇ ಇಷ್ಟೆಲ್ಲಾ ಒಡವೆ ಬೇಕು ಎಂದರು. ಅದಕ್ಕೆ ಎಲ್ಲರೂ ಗೊಳ್ಳೆಂದು ನಕ್ಕರು. ನಂತರ ಗಿರಿಜಾ ಅವರು, ನನಗೆ ಆ ಪಾತ್ರ ಕೊಟ್ಟಿದ್ರೆ ಇನ್ನೂ ಚೆನ್ನಾಗಿ ಮಾಡ್ತಾ ಇದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಮಗಳಿಗೆ ಶುಭವಾಗಲಿ ಎಂದು ಹಾರೈಸಿದರು.

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!

click me!