ಸಿಹಿನೋ, ರಾಮ್​ನೊ? ಒಂದನ್ನು ಆಯ್ಕೆ ಮಾಡೋ ಕಾಲ ಸನ್ನಿಹಿತ... ಇತ್ತ ಕುತಂತ್ರಿ ಭಾರ್ಗವಿಗೆ ಕಾಡ್ತಿದ್ದಾಳೆ ಅಕ್ಕ!

By Suvarna News  |  First Published Apr 29, 2024, 4:32 PM IST

ಸಿಹಿಯೋ, ರಾಮ್​ನೋ ಎರಡರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಕಾಲ ಬಂದೇ ಬಿಡ್ತಾ ಸೀತಾಳಿಗೆ? ಮುಂದೇನು? 
 


ಸೀತಾರಾಮ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಸೀತಾಳ ಮನೆ ಹುಡುಕಿಕೊಂಡು ಬಂದಿದ್ದ ತಾತ ದೇಸಾಯಿ ಅವರಿಗೆ ಸೀತಾ-ಸಿಹಿಯ ಸಂಬಂಧ ತಿಳಿದಿದೆ. ಯಾವುದನ್ನು ಮುಚ್ಚಿಡಲು ಭಾರ್ಗವಿ ಸೀತಾಳಿಗೆ ಫೋರ್ಸ್​ ಮಾಡಿ, ಹಾಗೆ ಮಾಡುವಲ್ಲಿ ಸಕ್ಸಸ್​ ಆಗಿದ್ದಳೋ ಆ ಸತ್ಯ ಕೊನೆಗೂ ಬಂದು ಬಿಟ್ಟಿದೆ. ತಾತ ದೇಸಾಯಿಗೆ ಸೀತಾಳಿಗೆ ಓರ್ವ ಮಗಳು ಇದ್ದಾಳೆ ಎನ್ನುವ ಸತ್ಯ ತಿಳಿದುಬಂದಿದೆ. ತಾತನ ಆರೋಗ್ಯದ ಬಗ್ಗೆ ಬ್ಲ್ಯಾಕ್​ಮೇಲ್​  ಮಾಡಿ ಸೀತಾಳಿಂದ ಈ ಸತ್ಯ ಹೇಳದಂತೆ ಯಶಸ್ವಿಯಾಗಿದ್ದ ಭಾರ್ಗವಿಗೆ ಈಗ ಸಂಕಟವೂ ಹೌದು, ಖುಷಿಯೂ ಹೌದು. ಈ ವಿಷಯವನ್ನು ನನ್ನಿಂದ ಯಾಕೆ ಮುಚ್ಚಿಟ್ಟಿದ್ದು ಎಂದು ಭಾರ್ಗವಿಗೆ ತಾತ ಕೇಳಿದ್ದಾರೆ. ಈಗ ಭಾರ್ಗವಿಗೆ ಸೀತಾಳ ಮೇಲೆ ಗೂಬೆ ಕುಳ್ಳರಿಸುವುದು ದೊಡ್ಡ ವಿಷಯವೇ ಅಲ್ಲ. ಆದರೆ ಇದನ್ನು ಎಲ್ಲರ ಎದುರು ಅವಳು ಹೇಗೆ ನಿಭಾಯಿಸುತ್ತಾಳೆ ಎನ್ನುವುದು ಈಗಿರುವ ಪ್ರಶ್ನೆ.

ಸೀತಾಳ ಜೊತೆ ಮಾತನಾಡಲು ತಾತ ಆಕೆಯನ್ನು ಕರೆದಿದ್ದಾನೆ. ಸಿಹಿ ಅಥವಾ ರಾಮ್​ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ ಏನು ಮಾಡುವುದು ಎನ್ನುವ ಆತಂಕದಲ್ಲಿದ್ದಾಳೆ ಸೀತಾ. ಇದೇ ವಿಷಯವನ್ನು ರಾಮ್​ಗೂ ಫೋನ್​ನಲ್ಲಿ ಹೇಳಿದ್ದಾಳೆ. ನನ್ನ ಆಯ್ಕೆ ಯಾವುದು ಎಂದು ನಿಮಗೆ ಗೊತ್ತಾಲ್ವಾ ಎಂದಿದ್ದಾಳೆ. ಅದಕ್ಕೆ ರಾಮ್​ ಕೂಡ ನಿಮ್ಮ ಆಯ್ಕೆ ಸಿಹಿಯೇ ಆಗಿರಬೇಕು. ನಮ್ಮಿಬ್ಬರನ್ನೂ ಒಂದು ಮಾಡಿದ್ದು ಅವಳೇ ಅಲ್ವಾ ಎನ್ನುತ್ತಲೇ ತನ್ನ ಪ್ರೀತಿಯ ನಿವೇದನೆಯನ್ನೂ ಮಾಡಿಕೊಂಡಿದ್ದಾನೆ. ಇದೀಗ ಧರ್ಮ ಸಂಕಟದಲ್ಲಿದ್ದಾಳೆ ಸೀತಾ.

Tap to resize

Latest Videos

ಉಪ್ಪಿನಕಾಯಿಗೂ ಜೀವನಕ್ಕೂ ಹೋಲಿಸಿದ ಪುಟ್ಟಕ್ಕಳ ಮಾತಿಗೆ ತಲೆದೂಗಿದ ನೆಟ್ಟಿಗರು: ಇದೆಷ್ಟು ನಿಜ ಅಲ್ವಾ?

ಅದೇ ಇನ್ನೊಂದೆಡೆ, ರಾಮ್​ನ ತಾಯಿ ಭಾರ್ಗವಿಯ ಕನಸಿನಲ್ಲಿ ಕಾಡುತ್ತಿದ್ದಾಳೆ. ನನ್ನನ್ನುಕೊಲೆ ಮಾಡಿ ನನ್ನ ಸ್ಥಾನವನ್ನು ಕಿತ್ತುಕೊಂಡ ನಿನಗೆ ಬುದ್ಧಿ ಕಲಿಸಿ, ನನ್ನ ಮಗ ರಾಮ್​ನನ್ನು ನಿನ್ನಿಂದ ಕಾಪಾಡಲು ನನ್ನ ಸೊಸೆ ಬರುತ್ತಿದ್ದಾಳೆ ಎಂದು ಹೇಳಿದ್ದಾಳೆ. ಈ ಕನಸನ್ನು ನೋಡಿ ಭಾರ್ಗವಿ ಬೆಚ್ಚಿ ಬಿದ್ದಿದ್ದಾಳೆ. ಹಾಗಿದ್ದರೆ ಈ ಸತ್ಯ ಮನೆಯವರಿಗೆ ಗೊತ್ತಾಗುವುದು ಯಾವಾಗ? ತಾತ ತೆಗೆದುಕೊಳ್ಳುವ ನಿರ್ಧಾರ ಯಾವುದು? ಸೀತಾಳ ಜೊತೆ ಸಿಹಿಯನ್ನೂ ಒಪ್ಪಿಕೊಳ್ತಾನಾ ತಾತಾ ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. 

ಅಷ್ಟಕ್ಕೂ, ತನಗೆ ಸಿಹಿ ಎನ್ನುವ ಮಗಳು ಇದ್ದಾಳೆ ಎನ್ನುವ ಸತ್ಯವನ್ನು ತಾತನ ಎದುರು ಹೇಳಲು ಹೋದಾಗ ಅದಕ್ಕೆ ಭಾರ್ಗವಿ ಅಡ್ಡಗಾಲು ಹಾಕಿದ್ದಳು. ಅದರೆ ತಾತ ಮತ್ತು ಸಿಹಿ ನಡುವೆ ಇದಾಗಲೇ ಫೋನ್​ನಲ್ಲಿ ಮಾತುಕತೆ ನಡೆದಿತ್ತು. ಸಿಹಿ ತಾತನನ್ನು ಮನೆಗೆ ಕರೆದಿದ್ದಳು. ಅಲ್ಲಿ ಬಂದ ತಾತನನ್ನು ಸಿಹಿ ಮನೆಗೆ ಕರೆದುಕೊಂಡು ಹೋಗಿ ಸೀತಮ್ಮನ ಮನೆ ಎಂದಿದ್ದಾಳೆ. ನನಗೆ ಸೀತಮ್ಮನ ಮನೆ ಬೇಡ, ನಿನ್ನ ಮನೆ ಬೇಕು ಎಂದಿದ್ದಾನೆ ತಾತ. ಆಗ ಸಿಹಿ ಇದು ಸೀತಮ್ಮನ ಮನೆಯೇ. ನಾನು ಸೀತಮ್ಮನ ಮಗಳು ಎಂದಿದ್ದಾಳೆ. ಈ ವಿಷಯ ತಾತನಿಗೆ ಮುಂಚೆನೇ ಗೊತ್ತಿತ್ತಾ ಅಥವಾ ಮುಚ್ಚಿಟ್ಟ ಗುಟ್ಟು ರಟ್ಟಾಗಿ ಹೋಯ್ತಾ ಎನ್ನುವುದು   ಕುತೂಹಲವಾಗಿತ್ತು. ಇದೀಗ ವಿಷಯ ಬೆಳಕಿಗೆ ಬಂದಿದೆ. ಸೀತಾ ಈ ವಿಷಯವನ್ನು ಮೊದಲೇ ತಾತನಿಗೆ ತಿಳಿಸಿದ್ದಳೋ, ಇಲ್ಲವೋ ಎನ್ನುವ ಸತ್ಯ ಇನ್ನೂ ಬಹಿರಂಗಗೊಳ್ಳಲಿಲ್ಲ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಸೀತಾಳಿಗೆ ಅಗ್ನಿ ಪರೀಕ್ಷೆ ಶುರುವಾಗಿದೆ. 

ಅಮ್ಮನ ಜೊತೆ ನಿವೇದಿತಾ ರೀಲ್ಸ್​: ಮಗಳಿಗೆ ನೀವಾದ್ರೂ ಬುದ್ಧಿ ಹೇಳ್ಬಾರ್ದಾ ಕೇಳ್ತಿದ್ದಾರೆ ನೆಟ್ಟಿಗರು


 

click me!