
ಸಿನಿಮಾ ಹಾಗೂ ಕ್ರೀಡಾ ತಾರೆಯರ ಸಾಲು ಸಾಲು ಡೈವೋರ್ಸ್ ಸುದ್ದಿಗಳ ನಡುವೆ, ಪ್ರಖ್ಯಾತ ಸೀರಿಯಲ್ ನಟ-ನಟಿಯರ ಸಂಸಾರದಲ್ಲೂ ಬಿರುಕು ಬಿದ್ದಿದೆ. ದಂಪತಿಗಳು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ. 'ಸತ್ಯಕ್ಕೆ ಎಂದಿಗೂ ಜಯವಾಗುತ್ತದೆ..' ಎಂದು ನಟಿ ತನ್ನ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಸ್ಟೋರಿ ಹಾಕಿಕೊಂಡಿದ್ದರೆ, 'ನೋ ಕಮೆಂಟ್ಸ್.. ಈ ಹಂತದಲ್ಲಿ ನಾನು ಇದು ಮಾತ್ರ ಹೇಳಲು ಸಾಧ್ಯ' ಎಂದು ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದುಕೊಂಡಿರುವ ಸೀರಿಯಲ್ ನಟ ಹೇಳಿದ್ದಾರೆ.
ಹೌದು ಡೈವೋರ್ಸ್ ಹಾದಿಯಲ್ಲಿರುವ ಈ ಜೋಡಿ ಪ್ರಖ್ಯಾತ ಟಿವಿ ಸೀರಿಯಲ್ ನಟರಾದ ಅಮನ್ ವರ್ಮಾ ಹಾಗೂ ಅವರ ಪತ್ನಿ ವಂದನಾ ಲಾಲ್ವಾನಿ. ಮದುವೆಯಾದ 9 ವರ್ಷಗಳ ನಂತರ ಈ ಜೋಡಿ ಬೇರೆ ಬೇರೆ ಆಗುತ್ತಿದೆ. 2014 ರಲ್ಲಿ 'ಹಮ್ನೆ ಲಿ ಹೈ ಶಾಬಾದ್' ಧಾರಾವಾಹಿಯ ಸೆಟ್‌ನಲ್ಲಿ ಈ ಜೋಡಿ ಭೇಟಿಯಾಗಿತ್ತು. ಆರಂಭದಲ್ಲಿ ಇದ್ದ ಸ್ನೇಹ ಬಳಿಕ ಪ್ರೀತಿ ತಿರುಗಿದ್ದರಿಂದ ಮೊದಲಿಗೆ ನಿಶ್ಚಿತಾರ್ಥ ಮಾಡಿಕೊಂಡು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ತಮ್ಮ 53 ನೇ ವರ್ಷದಲ್ಲಿ ಅಮನ್ ವರ್ಮ ಡೈವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಅಮನ್ ವರ್ಮಾ ಅವರ ಪತ್ನಿ ವಂದನಾ ಲಾಲ್ವಾನಿ ಅವರು ಫೆಬ್ರವರಿ 27, ಶುಕ್ರವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ "ಸತ್ಯ ಗೆಲ್ಲುತ್ತದೆ" ಎಂದು ಹೇಳುವ ಒಂದು ನಿಗೂಢ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ತಂದೆ ಯಾರು? ಅಳಿಯನ ಆದರ್ಶ ಪಾಲಿಸಿದ್ರು ಮಾವ!
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದಂಪತಿಗಳು ಒಂಬತ್ತು ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮಗುವನ್ನು ಮಾಡಿಕೊಳ್ಳುವ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಇದು ಈಗ ರಾಜಿ ಮಾಡಿಕೊಳ್ಳಲಾಗದ ಹಂತಕ್ಕೆ ಹೋಗಿದ್ದು, ಇದೇ ಕಾರಣಕ್ಕೆ ವಂದನಾ ಲಲ್ವಾನಿ ವಿಚ್ಛೇದನಕ್ಕೆ ಅರ್ಜಿ ಸಲ್ಲುಸುವಂತೆ ಆಗಿದೆ ಎನ್ನಲಾಗಿದೆ. ಅಮನ್ ವರ್ಮಾ ಮತ್ತು ವಂದನಾ ಲಾಲ್ವಾನಿ ತಮ್ಮ ಭಿನ್ನಾಭಿಪ್ರಾಯಗಳನ್ನು ಶಮನ ಮಾಡಲು ಪ್ರಯತ್ನಿಸಿದ್ದರು. ಹಾಗೂ ಮಕ್ಕಳನ್ನು ಹೊಂದುವ ಬಗ್ಗೆಯೂ ಪ್ಲ್ಯಾನ್‌ಮಾಡಿದ್ದರು ಎಂದು ದಂಪತಿಗೆ ಹತ್ತಿರವಿರುವ ಮೂಲ ಬಹಿರಂಗಪಡಿಸಿದೆ. ಅವರ ಪ್ರಯತ್ನಗಳ ಹೊರತಾಗಿಯೂ, ಅವರು ಅಂತಿಮವಾಗಿ ಬೇರೆಯಾಗಲು ನಿರ್ಧರಿಸಿದ್ದಾರೆ.
ಸೀರಿಯಲ್‌ನಲ್ಲಿ ಅತ್ತೆ-ಅಳಿಯ, ನಿಜ ಜೀವನದಲ್ಲಿ ಗಂಡ-ಹೆಂಡ್ತಿ, ಮಕ್ಕಳಿಲ್ಲ ಅನ್ನೋದೇ ಕೊರಗು!
ಸೀರಿಯಲ್‌ಗಳಲ್ಲಿ ಯಶಸ್ವಿ ನಟನಾಗಿರುವ ಅಮನ್ ವರ್ಮಾ, "ಮಹಾಭಾರತ ಕಥಾ," "ಸಿಐಡಿ," "ಘರ್ ಏಕ್ ಮಂದಿರ್," "ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ," "ಸಾವಧಾನ್ ಇಂಡಿಯಾ," ಮತ್ತು "ಬಹುರಾನಿ" ನಂತಹ ಜನಪ್ರಿಯ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾಗ್‌ಬನ್ ಸಿನಿಮಾದಲ್ಲಿ ಅಮಿತಾಭ್ ಬಚ್ಛನ್ ಪುತ್ರನಾಗಿ ಇವರು ನಟಿಸಿದ್ದ ಪಾತ್ರ ಇಂದಿಗೂ ಜನಮಾನಸದಲ್ಲಿ ಉಳಿದಿದೆ. ವಂದನಾ ಲಾಲ್ವಾನಿ, ಮತ್ತೊಂದೆಡೆ, ಭರತನಾಟ್ಯ ಮತ್ತು ಕಥಕ್‌ನಲ್ಲಿ ತರಬೇತಿ ಪಡೆದ ಪ್ರತಿಭಾವಂತ ನೃತ್ಯಗಾರ್ತಿ. ಅವರು "ವಾರಿಸ್," "ಇಂಡಿಯಾವಲಿ ಮಾ," "ಬುದ್ಧ: ರಾಜೋಂ ಕಾ ರಾಜ," ಮತ್ತು "ಬಾಂಬೆ" ನಂತಹ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.