ಸೀತಾರಾಮ ಸೀರಿಯಲ್ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ತಮ್ಮ ಭಾವಿ ಪತಿಯ ಪರಿಚಯ ಮಾಡಿಸಿದ್ದಾರೆ. ವಿಡಿಯೋ ವೈರಲ್ ಆಗಿದೆ.
ಸೀತಾರಾಮದ ಪ್ರಿಯಾ ಇದಾಗಲೇ ಸೀರಿಯಲ್‌ನಲ್ಲಿ ತನ್ನ ಮನಮೆಚ್ಚಿದ ಪ್ರಿಯಕರ ಅಶೋಕ್‌ನನ್ನು ಮದುವೆಯಾಗಿದ್ದಾಳೆ. ಆದರೆ ರಿಯಲ್ ಲೈಫ್‌ನ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ನಿಜ ಜೀವನದಲ್ಲಿ ಹಸೆಮಣೆಯೇರಲು ಸಜ್ಜಾಗಿದ್ದಾರೆ. ಈ ಬಗ್ಗೆ ನಟಿ ಈ ಹಿಂದೆಯೇ ಕ್ಲೂ ಕೊಟ್ಟಿದ್ದರೂ ಪತಿಯ ಮುಖವನ್ನು ಪರಿಚಯಿಸಿರಲಿಲ್ಲ. ಅದನ್ನು ಗುಟ್ಟಾಗಿ ಇಟ್ಟಿದ್ದರು. ತಮ್ಮ ಬಾಯ್‌ಫ್ರೆಂಡ್ ಬರ್ತಡೇ ವಿಶ್ ಮಾಡಿದ ಫೋಟೋವೊಂದನ್ನು ಹಂಚಿಕೊಂಡಿದ್ದರಷ್ಟೆ. ಇಬ್ಬರೂ ಒಂದೇ ತರಹದ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟು ಫೋಟೋ ತೆಗೆದುಕೊಂದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ವಿಶ್ ಮಾಡಿದ್ದರು.
ಆದರೆ ಇದೀಗ ವಿಶೇಷ ವಿಡಿಯೋ ಮಾಡುವ ಮೂಲಕ ಭಾವಿ ಪತಿಯ ಮುಖ ಪರಿಚಯವನ್ನು ಮಾಡಿಸಿದ್ದಾರೆ. ಒಂದೊಳ್ಳೆ ಹಿನ್ನೆಲೆ ಗಾಯನದ ಮೂಲಕ ರೆಸ್ಟೋರೆಂಟ್ ಒಂದರಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿಯೇ ಪತಿಯನ್ನು ತೋರಿಸಿದ್ದಾರೆ ನಟಿ. ಅವರ ಹೆಸರು ಜಯಂತ್ ಎನ್ನುವುದನ್ನು ಕ್ಯಾಪ್ಷನ್ ಮೂಲಕ ತಿಳಿಸಿದ್ದಾರೆ. One step closer to Forever, Meet Jayanth ಎಂದು ಬರೆದುಕೊಂಡಿದ್ದಾರೆ. ಆದರೆ ಅವರ ಬಗ್ಗೆ ಯಾವುದೇ ಮಾಹಿತಿಯನ್ನು ಶೇರ್ ಮಾಡಲಿಲ್ಲ. ಅದಕ್ಕಾಗಿ ಇನ್ನೊಂದು ವಿಡಿಯೋ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಈ ಸಂದರ್ಶನ ಹೆಂಡ್ತಿಗೆ ತೋರಿಸ್ಬೇಡಿ ಅಂತಲೇ ಐವರು ಪ್ರೇಯಸಿಯರ ಹೆಸ್ರು ಥಟ್ ಅಂತ ಹೇಳಿದ ನಾ. ಸೋಮೇಶ್ವರ್!
ಇನ್ನು ಮೇಘನಾ ಶಂಕರಪ್ಪ ಅವರ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್ಗೂ ಮುನ್ನ ಅವರು, ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.
ಕೆಲ ತಿಂಗಳ ಹಿಂದಷ್ಟೇ ಹೊಸ ಮನೆಯಲ್ಲಿ ಖರೀದಿಸಿದ್ದ ಮೇಘನಾ ಅವರು, ಗೃಹ ಪ್ರವೇಶದ ವಿಡಿಯೋವನ್ನು ನಟಿ ಮೇಘಾನಾ ಶಂಕರಪ್ಪ ತಮ್ಮ ಯ್ಯೂಟೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಈಗಲೂ ನಟಿಗೆ ಸಿಕ್ಕಾಪಟ್ಟೆ ಅಭಿನಂದನೆಗಳ ಸುರಿಮಳೆಯಾಗುತ್ತಿದೆ. ಸೀತಾರಾಮ ಸೀರಿಯಲ್‌ನಲ್ಲಿ ಸದ್ಯ ಪ್ರಿಯಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವಂತೆ ತೋರಿಸಲಾಗಿದೆ. ಆದರೆ ಈ ಕಥೆಯನ್ನು ಅಲ್ಲಿಗೇ ಬಿಟ್ಟು ಸಿಹಿಯ ಸಾವಿನ ಕಡೆ ಕಥೆ ಹೊರಳಿದೆ. ಇನ್ನು ಮೇಘನಾ ಅವರ ಭಾವಿ ಪತಿ ಏನು ಮಾಡುತ್ತಾರೆ, ಮದುವೆಯಾವಾಗ ಎನ್ನುವ ಡಿಟೇಲ್ಸ್ ಇನ್ನಷ್ಟೇ ಗೊತ್ತಾಗಬೇಕಿದೆ.
ತಪ್ಪಿಸಿಕೊಂಡು ಹೋಗ್ತಿದ್ದವನ ಪೊಲೀಸರಿಗೆ ಒಪ್ಪಿಸಿತ್ತು ಸತ್ತವಳ ಆತ್ಮ: ರೋಚಕ ಘಟನೆ ವಿವರಿಸಿದ ಡಿವೈಎಸ್‌ಪಿ ರಾಜೇಶ್!