DKD- ಸೀತಾರಾಮ ಪ್ರಿಯಾ, ಪುಟ್ಟಕ್ಕನ ಮಗಳು ಸಹನಾ ಈ ಪರಿ ಡಾನ್ಸಾ? ಜಡ್ಜ್​ಗಳು ಸುಸ್ತೋ ಸುಸ್ತು!

Published : Jul 21, 2024, 12:48 PM ISTUpdated : Jul 21, 2024, 05:24 PM IST
DKD- ಸೀತಾರಾಮ ಪ್ರಿಯಾ, ಪುಟ್ಟಕ್ಕನ ಮಗಳು ಸಹನಾ ಈ ಪರಿ ಡಾನ್ಸಾ? ಜಡ್ಜ್​ಗಳು ಸುಸ್ತೋ ಸುಸ್ತು!

ಸಾರಾಂಶ

ಡಾನ್ಸ್​ ಕರ್ನಾಟಕ ಡಾನ್ಸ್​ ರಿಯಾಲಿಟಿ ಷೋನಲ್ಲಿ ಸೀತಾರಾಮ ಪ್ರಿಯಾ, ಪುಟ್ಟಕ್ಕನ ಮಗಳು ಸಹನಾ ಹೇಗೆ ಸ್ಟೆಪ್​ ಹಾಕಿದ್ದಾರೆ ನೋಡಿ!   

ರಿಯಾಲಿಟಿ ಷೋಗಳಲ್ಲಿ ಸಕತ್​ ಕಾಂಪಿಟೇಷನ್​ ಇರುವ ಹಿನ್ನೆಲೆಯಲ್ಲಿ, ವಾಹಿನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ವೀಕ್ಷಕರನ್ನು ಸೆರೆಹಿಡಿದು ಟಿಆರ್​ಪಿ ಗಿಟ್ಟಿಸಿಕೊಳ್ಳುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ, ಹೊಸ ಹೊಸ ಪ್ರಯೋಗಗಳು ಅನಿವಾರ್ಯವಾಗಿದೆ. ಅದೇ ರೀತಿ ಈ ಬಾರಿಯ ಡಾನ್ಸ್​ ಕರ್ನಾಟಕ ಡಾನ್ಸ್​ನಲ್ಲಿ ವಿಭಿನ್ನ ಪ್ರಯೋಗ ಮಾಡಲಾಗುತ್ತಿದೆ. ನಿನ್ನೆ ಅಂದರೆ ಜುಲೈ 20ರಿಂದ ಜೀ ಕನ್ನಡದಲ್ಲಿ ಈ ಷೋ ಆರಂಭವಾಗಿದೆ. ಹೆಚ್ಚಾಗಿ ಕಿರುತೆರೆ ಕಲಾವಿದರನ್ನು ಈ ಬಾರಿ ಡಾನ್ಸ್​ ಲೋಕಕ್ಕೆ ಆಹ್ವಾನಿಸಲಾಗಿದೆ. ಆದರೆ ಕುತೂಹಲದ ಸಂಗತಿ ಎಂದರೆ, ಇವರ್ಯಾರೂ ನೃತ್ಯ ಕ್ಷೇತ್ರದಲ್ಲಿ  ಅಷ್ಟು ಎಕ್ಸ್​ಪರ್ಟ್​ ಇಲ್ಲದವರು. ಅವರನ್ನು ಈ ಕಾಂಪಿಟೇಷನ್​ನಲ್ಲಿ ಸ್ಪರ್ಧಿಗಳನ್ನಾಗಿ ಮಾಡಲಾಗಿದೆ.  ಅಂದಹಾಗೆ, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡಾನ್ಸ್​ ಕರ್ನಾಟಕ ಡಾನ್ಸ್​ ಇದಾಗಲೇ ಏಳು ಸೀಸನ್​ಗಳನ್ನು ಮುಗಿಸಿದೆ. 

ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಇದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಇಲ್ಲಿ ಬರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಸಕತ್​ ಸೌಂಡ್​ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ.  ಅಂದಹಾಗೆ ಈ ಷೋನಲ್ಲಿ ಈ ಬಾರಿ ಆರ್ಯವರ್ಧನ್​ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್​, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್​,  ಇದೇ ಸೀರಿಯಲ್​ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್​ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್​ ಶಶಿ ಹೆಗ್ಡೆ​ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುವಾಗಿ ಎಲ್ಲರ ಗಮನ ಸೆಳೆಯುತ್ತಿರುವುದು ಸೀತಾರಾಮ ಸೀರಿಯಲ್ ಸಿಹಿ ಅಂದರೆ ರೀತು ಸಿಂಗ್​.  

ಮುಗುತಿಯಾಗಿದ್ರೆ ಇವ್ಳ ಮೂಗಲ್ಲೇ ಇರ್ತಿದ್ದೆ ಎಂದ ಗಾಯಕ! ಹುಷಾರಪ್ಪಾ, ಬಾಯ್​ಫ್ರೆಂಡ್ ಇದ್ದಾನೆ ಅಂತಿದ್ದಾರೆ ಫ್ಯಾನ್ಸ್​

ಇದಾಗಲೇ ಬಹುತೇಕ ಸ್ಪರ್ಧಿಗಳು ತಮ್ಮ ಟ್ಯಾಲೆಂಟ್​ ತೋರಿಸಲು ಶುರು ಮಾಡಿದ್ದಾರೆ. ಇದೀಗ ಸೀತಾರಾಮ ಪ್ರಿಯಾ ಹಾಗೂ ಪುಟ್ಟಕ್ಕನ ಮಕ್ಕಳ ಸಹನಾ ಕೂಡ ಡಾನ್ಸ್​ ಮಾಡಿದ್ದು, ತೀರ್ಪುಗಾರರೇ ಸುಸ್ತಾಗಿ ಹೋಗಿದ್ದಾರೆ. ಅದರಲ್ಲಿಯೂ ಪ್ರಿಯಾ ಡಾನ್ಸ್​ಗೆ  ತೀರ್ಪುಗಾರರಾಗಿರುವ  ಶಿವರಾಜ್​ ಕುಮಾರ್​, ರಕ್ಷಿತಾ, ವಿಜಯ್ ರಾಘವೇಂದ್ರ ಅಬ್ಬಬ್ಬಾ ಎಂದಿದ್ದಾರೆ.  ಇದರ ಪ್ರೊಮೋ ರಿಲೀಸ್​  ಮಾಡಲಾಗಿದೆ. ಅಂದಹಾಗೆ ಪ್ರಿಯಾ ಪಾತ್ರಧಾರಿಯ ಹೆಸರು ಮೇಘನಾ ಶಂಕರಪ್ಪ. ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.  

ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಸದ್ಯ ಮನೆಯಿಂದ ದೂರ ಇದ್ದು, ಹೆಸರು ಬದಲಿಸಿಕೊಂಡು ಕಲ್ಯಾಣಿ ಕ್ಯಾಂಟೀನ್​ ನಡೆಸುತ್ತಿರುವ ಸಹನಾ ನಿಜವಾದ ಹೆಸರು, ಅಕ್ಷರಾ.  ಪುಟ್ಟಕ್ಕನ ಮಗಳು ಸೀರಿಯಲ್​ನಲ್ಲಿ ಹೆಚ್ಚು ಕಲಿಯದೇ ಇರುವ ಸಹನಾ, ನಿಜ ಜೀವನದಲ್ಲಿ ಫೈನಾನ್ಸ್​ನಲ್ಲಿ ಎಂಬಿಎ ಪದವೀಧರೆ. ಈ ಸೀರಿಯಲ್​ಗೂ ಬರುವ ಮುನ್ನೆ ಕೆಲವು ಧಾರಾವಾಹಿಯಲ್ಲಿ ಅಕ್ಷರಾ ನಟಿಸಿದ್ದಾರೆ.  ‘ಅಮ್ನೋರು’ (Amnoru) ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿ ಸೈ ಎನಿಸಿಕೊಂಡಿರುವ ಇವರಿಗೆ  ‘ಪುಟ್ಟಕ್ಕನ ಮಕ್ಕಳು’ (Puttakana Makkalu) ಸಕತ್​ ಹೆಸರು ತಂದುಕೊಡುತ್ತಿದೆ. ರಕ್ಷಾ ಬಂಧನ ಸೀರಿಯಲ್​ನಲ್ಲಿಯೂ ನಟಿಸಿದ್ದಾರೆ. ಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಹಾಗೂ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಸಿನಿಮಾದಲ್ಲಿ ಅಕ್ಷರಾ ಅವರು ನಟಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರೋ ಇವರು, ಅವರನ್ನು ನೋಡಿಯೇ ತಾನು ಇವರಂತೆ ನಟನಾ ಜಗತ್ತಿನಲ್ಲಿ ಗುರುತಿಸಿಕೊಳ್ಳಬೇಕೆಂದು ಬಯಸಿದರಂತೆ.  

ನಂಬರ್‌ ಎಂದ್ರೆ ನಾನು, ನಾನೆಂದ್ರೆ ನಂಬರ್‌ ಎನ್ನುತ್ತಲೇ ಆರ್ಯವರ್ಧನ್‌ ಗುರೂಜಿ ಭರ್ಜರಿ ಸ್ಟೆಪ್‌! ತೀರ್ಪುಗಾರರೇ ಶಾಕ್‌

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!