ಶ್ರೀರಸ್ತು-ಶುಭಮಸ್ತು ಸೀರಿಯಲ್​ನಿಂದ ಔಟ್​ ಆಗುತ್ತಿದ್ದಂತೆಯೇ ಯಕ್ಷಗಾನದಲ್ಲಿ 'ಶಾರ್ವರಿ' ಮಿಂಚಿಂಗ್

By Suchethana D  |  First Published May 26, 2024, 4:42 PM IST

ಶ್ರೀರಸ್ತು-ಶುಭಮಸ್ತು ಸೀರಿಯಲ್​ನ ಶಾರ್ವರಿ ಪಾತ್ರಧಾರಿ ನೇತ್ರಾ ಜಾಧವ್​ ಅವರು ಯಕ್ಷಗಾನ ವೇಷದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.
 


ಶಾರ್ವರಿ ಎಂದರೆ ಸಾಕು, ಸೀರಿಯಲ್​ ಪ್ರಿಯರ ಮನದಾಳದಲ್ಲಿ ಮೂಡುವ ಚಿತ್ರಣ ಒಂದೇ. ಅದು ಶ್ರೀರಸ್ತು ಶುಭಮಸ್ತು ಸೀರಿಯಲ್​ನ ವಿಲನ್​. ತಮ್ಮ ಕಣ್ಣುಗಳಿಂದಲೇ ಅಭಿಯನ ಮಾಡುವ ಮುದ್ದು ಮೊಗದ ಸುಂದರಿ ಶಾರ್ವರಿ ಈಗ ಈ ಸೀರಿಯಲ್​ನಿಂದ ಹೊರಕ್ಕೆ ಬಂದು ಸೀರಿಯಲ್​ ಪ್ರೇಮಿಗಳಿಗೆ ಶಾಕ್​ ನೀಡಿದ್ದಾರೆ. ಇವರ ನಿಜವಾದ ಹೆಸರು ನೇತ್ರಾ ಜಾಧವ್​. ಶಾರ್ವರಿ  ಪಾತ್ರಕ್ಕೆ ಹೊಸ ಎಂಟ್ರಿ ಆಗಿದೆ. ಆದರೆ ಒಂದು ಪಾತ್ರದಲ್ಲಿ ಒಬ್ಬರನ್ನೇ ಬಹು ತಿಂಗಳು, ವರ್ಷ ನೋಡುವ ಸೀರಿಯಲ್​ ಪ್ರೇಮಿಗಳಿಗೆ ಅದೇ ಪಾತ್ರಕ್ಕೆ ಹೊಸ ಮುಖವನ್ನು ಕಲ್ಪನೆ ಮಾಡಿಕೊಳ್ಳುವುದು ಬಹು ಕಷ್ಟ. ಅದರಲ್ಲಿಯೂ ಯಾರಿಗೂ ಡೌಟ್​ ಬರದಂತೆ, ಒಳ್ಳೆಯವಳು ಎನಿಸಿಕೊಂಡು ಕುತಂತ್ರ ಬುದ್ಧಿಯ ಶಾರ್ವರಿ ಪಾತ್ರಕ್ಕೆ ನೇತ್ರಾ ಅವರು ನ್ಯಾಯ ಒದಗಿಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆಯೇ ಕಣ್ಣಿನಲ್ಲಿಯೇ ಅಭಿನಯ ಮಾಡುವಲ್ಲಿ ಇವರದ್ದು ಎತ್ತಿದ ಕೈ. ಅದಕ್ಕಾಗಿಯೇ ಇವರು ಸೀರಿಯಲ್​ನಿಂದ ನಿರ್ಗಮಿಸಿರುವುದು ಬಹಳ ಮಂದಿಗೆ ಬೇಸರ ತಂದಿದೆ. ಮತ್ತೊಮ್ಮೆ ಅವರನ್ನು ವಾಪಸ್​  ಕರೆದುಕೊಂಡು ಬರುವಂತೆಯೂ ಹಲವರು ಸೋಷಿಯಲ್​ ಮೀಡಿಯಾದಲ್ಲಿ ಕಮೆಂಟ್​  ಕೂಡ ಹಾಕುತ್ತಿದ್ದಾರೆ.

ಅಂದಹಾಗೆ ನೇತ್ರಾ ಅವರು ಈ ಸೀರಿಯಲ್​ನಿಂದ ಏಕೆ ಹೊರಕ್ಕೆ ಬಂದರು ಎನ್ನುವ ಬಗ್ಗೆ ಸ್ಪಷ್ಟ ಉತ್ತರವಿಲ್ಲ. ಆದರೆ ಸೀರಿಯಲ್​ನಿಂದ ಹೊರಕ್ಕೆ ಬರುತ್ತಿದ್ದಂತೆಯೇ, ಯಕ್ಷಗಾನ ವೇಷಧಾರಿಯಾಗಿ ಕಾಣಿಸಿಕೊಂಡಿರುವ ಫೋಟೋಗಳು ವೈರಲ್​ ಆಗಿವೆ. ತೆಲಂಗಾಣದಲ್ಲಿ ಅಮ್ಮಂದಿರ ದಿನದಂದು ಈ ಯಕ್ಷಗಾನ ಮಾಡಿರುವುದಾಗಿ ಅವರು ಈ ಫೋಟೋಗಳಿಗೆ ಶೀರ್ಷಿಕೆ ಕೊಟ್ಟಿದ್ದಾರೆ. ಕರ್ನಾಟಕ ಸಾಂಸ್ಕೃತಿಕ ಪ್ರದರ್ಶನವಾದ ಯಕ್ಷಗಾನವನ್ನು  ತೆಲಂಗಾಣದಲ್ಲಿ  ತಾಯಂದಿರ ದಿನದ ವಿಶೇಷ ಸಂದರ್ಭದಲ್ಲಿ  ಪ್ರದರ್ಶಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನು ನೋಡಿದಾಗಲೇ ನಟಿ ಯಕ್ಷಗಾನ ಕಲಾವಿದೆ ಕೂಡ ಹೌದು ಎಂದು ಅಭಿಮಾನಿಗಳಿಗೆ ತಿಳಿದು ಬಂದಿದೆ. 

Tap to resize

Latest Videos

ಹಣ ಕಂಡ್ರೆ ಹೆಣ ಬಾಯಿ ಬಿಡ್ಲೇಬೇಕಂತಿಲ್ಲ ಸ್ವಾಮಿ... ಸ್ವಾಭಿಮಾನವೇ ಹೆಚ್ಚೆನ್ನುವ ಪಾತ್ರಗಳಿಗೆ ಫ್ಯಾನ್ಸ್​ ಮೆಚ್ಚುಗೆ...

ಅಂದಹಾಗೆ ನೇತ್ರಾ ಅವರು, ಈ ಹಿಂದೆ  ಸುಧಾರಾಣಿ ಅವರ ಜೊತೆ  ರಥಸಪ್ತಮಿ ಧಾರಾವಾಹಿಯಲ್ಲಿ ಅವರ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ನಂತರ ಅವರದ್ದೇ ಜೊತೆ  ನೆಗಟಿವ್ ರೋಲ್​ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.  ಈ ಹಿಂದೆ ಉದಯ ಟಿವಿಯಲ್ಲಿ ಆಕೃತಿ ಎನ್ನುವ ಧಾರವಾಹಿಯಲ್ಲಿ ನಟಿಸುತ್ತಿದ್ದರು. ನಂತರ  ಸುಂದರಿ ಧಾರವಾಹಿಯಲ್ಲಿಯೂ ಬಣ್ಣ ಹಚ್ಚಿದ್ದರು.  ಅಂದಹಾಗೆ ಶಾರ್ವರಿ ಅವರ ಮಕ್ಕಳು ಇನ್ನೂ ಚಿಕ್ಕವರು. ಶ್ರೀರಸ್ತು ಶುಭಮಸ್ತು ಸೀರಿಯಲ್​ನಲ್ಲಿ  ಮಕ್ಕಳಿಗೆ ಮದುವೆಯಾಗಿದ್ದರೆ  ರಿಯಲ್​ ಲೈಫ್​ನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಆಗಾಗ್ಗೆ ಮಾಡರ್ನ್​ ಫೋಟೋಶೂಟ್​ ಮಾಡಿಸಿಕೊಂಡು ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡುತ್ತಿರುತ್ತಾರೆ.  

 ಇತ್ತೀಚೆಗೆ ನಡೆದ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಜನ ಮೆಚ್ಚಿದ ಖಳ ನಟಿ ಪ್ರಶಸ್ತಿಯನ್ನು ಕೂಡ ನೇತ್ರಾ ಜಾಧವ್ ಪಡೆದುಕೊಂಡಿದ್ದರು. ಸೀರಿಯಲ್​ನಲ್ಲಿ  ನಟಿಸಲು ಬಳಸುವ ಕಾಸ್ಟ್ಯೂಮ್, ಆಕ್ಟಿಂಗ್ ಎಲ್ಲವನ್ನೂ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಒಳ್ಳೊಳ್ಳೆಯ ಸೀರೆ ಉಡುತ್ತಾ, ಡಿಫರೆಂಟ್ ಆಗಿ ಜ್ಯುವೆಲರಿಗಳನ್ನು ಧರಿಸಿ ತಮ್ಮದೇ ವಿಶೇಷ ಅಭಿಮಾನಿ ವರ್ಗವನ್ನು ರೂಪಿಸಿಕೊಂಡವರು ನೇತ್ರಾ.  ತಮ್ಮನ್ನು ತಾವು ಬಹಳ ಸ್ಟೈಲಿಶ್ ಆಗಿ ಮ್ಯಾನೇಜ್ ಮಾಡುತ್ತಾರೆ. ಇತರೆ ಖಳ ನಟಿಯರಿಗೆ ಹೋಲಿಸಿಕೊಂಡರೆ, ನೇತ್ರಾ ಬಹಳ ಡಿಸೆಂಟ್ ಆಗಿ ಕಾಣುವುದಲ್ಲದೇ, ಇವರ ಅಂದ ಗೌರವಿಸುವಂತಿದೆ ಎನ್ನುವುದು ಇವರ ಅಭಿಮಾನಿಗಳ ಮಾತು. 

ನೀ ಬಂದು ನಿಂತಾಗ... ಬಾರಾ.. ಬಾರಾ... ಎಂದ ಸತ್ಯ: ಈ ನಗುವಿಗೆ ನಾನು ಸೋತೆ ಸೋತೆ ಅಂತಿದ್ದಾರೆ ಫ್ಯಾನ್ಸ್​

 

click me!