Birthday Girl Sanjana Burli: ನಟಿಯಾಗೋದು ಹೇಗೆಂದು ಗೂಗಲ್​ನಲ್ಲಿ ಸರ್ಚ್​ ಮಾಡ್ತಿದ್ರಂತೆ ಪುಟ್ಟಕ್ಕನ ಮಗಳು!

By Suchethana D  |  First Published May 26, 2024, 5:48 PM IST

ಪುಟ್ಟಕ್ಕನ ಮಗಳು ಸ್ನೇಹಾ ಅರ್ಥಾತ್​ ಸಂಜನಾ ಬುರ್ಲಿ ಅವರು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅವರ ಕುರಿತು ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...
 


ಕಿರುತೆರೆಯ ಮೂಲಕ ಮನೆಮಂದಿಗೆ ಹತ್ತಿರವಾಗುವ ಕೆಲ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಅಂಥವರಲ್ಲಿ ಒಬ್ಬರು ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್​ ಖ್ಯಾತಿಯ ಸ್ನೇಹಾ. ಸ್ನೇಹಾ ಅವರ ಅಸಲಿ ಹೆಸರು ಸಂಜನಾ  ಬುರ್ಲಿ. ಈ ಧಾರಾವಾಹಿಯಲ್ಲಿ ಹೈಲೈಟ್​ ಆಗಿರೋದು ಪುಟ್ಟಕ್ಕನ ಮೂವರು ಹೆಣ್ಣುಮಕ್ಕಳು. ಅದರಲ್ಲಿ ಸ್ನೇಹಾ ನಾಯಕಿಯೇ. ಧಾರಾವಾಹಿ ಪ್ರಿಯರ ಮನಸ್ಸನ್ನು ಗೆದ್ದು, ಕದ್ದು ಬೀಗುತ್ತಿರೋ ನಟಿಯರಲ್ಲಿ ಒಬ್ಬರು ಈಕೆ. ಧಾರಾವಾಹಿಯಲ್ಲಿನ ಸಂಜನಾ ಅವರ ಪಾತ್ರ ಎಷ್ಟೋ ಮಂದಿಗೆ ಮಾದರಿಯಾಗಿದೆ.  ರೌಡಿ ಕಂಠಿಯ ಜೊತೆಗಿನ ಸಂಪ್ರದಾಯಸ್ಥ ಹೆಣ್ಣುಮಗಳು ಸ್ನೇಹಾಳ ಲವ್​ ಸ್ಟೋರಿಯೇ ಈ ಧಾರಾವಾಹಿಯ ಬಂಡವಾಳ. ನಿನ್ನೆ ಅಂದರೆ ಮೇ 25 ಸಂಜನಾ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 2000ನೇ ಇಸವಿಯಲ್ಲಿ ಹುಟ್ಟಿರುವ ಸಂಜನಾ ಅವರಿಗೆ ಈಗ 24 ವರ್ಷ ವಯಸ್ಸು. 

ಈ ಸಂದರ್ಭದಲ್ಲಿ ನಟಿಯ ಕುರಿತು ಕೆಲವೊಂದು ಇಂಟರೆಸ್ಟಿಂಗ್​ ವಿಷ್ಯಗಳ ಹೊರಕ್ಕೆ ಬಂದಿವೆ.  ಚಿಕ್ಕ ವಯಸ್ಸಿನಿಂದಲೇ ನಟಿಯಾಗುವ ಆಸೆ ಇತ್ತು. ಆದರೆ ಸಂಪ್ರದಾಯಬದ್ಧ ಕುಟುಂಬದಲ್ಲಿ ಇದಕ್ಕೆ ಅವಕಾಶ ಇರಲಿಲ್ಲ. ಸದಾ ಸ್ಕೂಲ್​ನಲ್ಲಿ ಟಾಪರ್​ ಆಗಿದ್ದ ಸಂಜನಾ ಅವರನ್ನು ಡಾಕ್ಟರೋ, ಇಂಜಿನಿಯರೋ ಮಾಡುವ ಆಸೆ ಅಪ್ಪ ಅಮ್ಮನಿಗೆ. ಆದರೆ ಅದಾಗಲೇ ಆ್ಯಕ್ಟಿಂಗ್​ ರಕ್ತದಲ್ಲಿ ಹೊಕ್ಕಿತ್ತು. ಶಾಲೆಗಳನ್ನು ಇವರ ಮಾಡುವ ನಟನೆಗೆ ಭಾರಿ ಪ್ರಶಂಸೆ ಸಿಗುತ್ತಿತ್ತು. ಸಂಸ್ಕೃತದಲ್ಲಿ ಅಭಿನಯಿಸಿದರೆ, ಇವರ ನಟನೆ ನೋಡಿ ಪ್ರೇಕ್ಷಕರು ಕಣ್ಣೀರು ಹಾಕಿದ್ದೂ ಇದೆಯಂತೆ. ಇದನ್ನೇ ಮುಂದುವರೆಸಿಕೊಂಡು ಹೋಗುವ ಆಸೆ ಇತ್ತು. ಆದರೆ ಮನೆಯವರು ಕೊನೆಯ ಪಕ್ಷ ಪಿಯುಸಿಯಾದ್ರೂ ಮುಗಿಸು ಎಂದರು. 

Tap to resize

Latest Videos

35 ಫ್ರೇಮ್​ನಲ್ಲಿ ಕಾಶ್ಮೀರ ದರ್ಶನ ಮಾಡಿಸಿದ ಪುಟ್ಟಕ್ಕನ ಮಕ್ಕಳು ಸ್ನೇಹಾ; ವ್ಹಾರೆವ್ಹಾ ಎಂದ ಫ್ಯಾನ್ಸ್​
  
ಯಾವುದೇ ಗಾಡ್​ಫಾದರ್​ ಇಲ್ಲದಿದ್ದರೆ ನಟನಾ ಕ್ಷೇತ್ರಕ್ಕೆ ಬರುವುದು ಕಷ್ಟವೇ. ಅದಕ್ಕಾಗಿ ನಟಿಯಾಗುವುದು ಹೇಗೆ ಎಂದು ಗೂಗಲ್​ನಲ್ಲಿ ಸರ್ಚ್​ ಮಾಡಿದ್ರಂತೆ ಸಂಜನಾ. ಹೀಗಿತ್ತು ಅವರ ನಟನಾ ಜರ್ನಿ. ಮೊದಲಿಗೆ 'ಲಗ್ನಪತ್ರಿಕೆ' ಸೀರಿಯಲ್​ನಲ್ಲಿ ಅವಕಾಶ ಸಿಕ್ಕಿತು. ಆದರೆ ಕಾರಾಣಾಂತರಗಳಿಂದ  ಪ್ರಸಾರ ನಿಲ್ಲಿಸಿತ್ತು.  ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಎಂಟ್ರಿ ಕೊಟ್ಟಿರುವುದು ಹೇಗೆ ಎಂದು ನ ಟಿ ಹೇಳಿದ್ದಾರೆ.  'ಲಗ್ನಪತ್ರಿಕೆ'. ಕಾರಾಣಾಂತರಗಳಿಂದ  ಪ್ರಸಾರ ನಿಲ್ಲಿಸಿತ್ತು. ನಂತರ ಧಾರಾವಾಹಿಯ ಉಸಾಬರಿ ಬೇಡ ಎಂದು  ವಿದ್ಯಾಭ್ಯಾಸದ ಕಡೆ ಗಮನ ಕೊಟ್ಟೆ ಎಂದಿದ್ದಾರೆ. ಬಳಿಕ ಆರೂರು ಜಗದೀಶ್‌ ಅವರು  'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವಂತೆ ಕೇಳಿದ್ದರೂ ಸ್ನೇಹಾ ಅದಕ್ಕೆ ಒಪ್ಪಿರಲಿಲ್ಲ. ಕೊರೋನಾ ಮುಗಿದು  ಕಾಲೇಜು ಶುರುವಾಗಿದ್ದರಿಂದ ವಿದ್ಯಾಭ್ಯಾಸಕ್ಕೆ ಕಷ್ಟ ಆಗುತ್ತೆ ಎಂದು ಬೇಡ ಎಂದರು. ನಂತರ ಪುನಃ ಕೊರೋನಾದಿಂದ ಆನ್​ಲೈನ್​ ತರಗತಿ ಶುರುವಾದ ಕಾರಣ, ಈ ಧಾರಾವಾಹಿಗೆ ಅವರು ಒಪ್ಪಿದರು.  ನಟನೆ ಮತ್ತು ಓದನ್ನು ಬ್ಯಾಲೆನ್ಸ್‌ ಮಾಡಬಹುದು ಎಂದು ಧೈರ್ಯ ಮಾಡದೇ ಹೋಗಿದ್ದರೆ ಪಾತ್ರದ ಯಶಸ್ಸನ್ನು ನಾನು ಕಳೆದುಕೊಳ್ಳುತ್ತಿದ್ದೆ ಎನ್ನುತ್ತಾರೆ ಸಂಜನಾ. 

ಇನ್ನು ಪುಟ್ಟಕ್ಕನ ಮಕ್ಕಳು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಹಾವು ಮುಂಗುಸಿಯಂತಿದ್ದ ಅತ್ತೆ-ಸೊಸೆ ಬಂಗಾರಮ್ಮ ಮತ್ತು ಸ್ನೇಹಾ ಒಂದಾಗಿದ್ದಾರೆ. ಎಲ್ಲರೂ ಖುಷಿಯಿಂದ ಇದ್ದಾರೆ. ಸೀರಿಯಲ್​ನಲ್ಲಿ ಮುಂದೇನು ತೋರಿಸುತ್ತಾ ಎನ್ನುವ ಕುತೂಹಲ ವೀಕ್ಷಕರಿಗೆ ಇದೆ. ಏಕೆಂದರೆ ಸದ್ಯ ಇರುವ ಸ್ಟೋರಿಯೇ ಇವರಿಬ್ಬರದ್ದಾಗಿತ್ತು. ಇಬ್ಬರೂ ಒಂದಾಗಿಯಾಗಿದೆ. ಮನೆ ಬಿಟ್ಟು ಹೋಗಿರುವ ಸಹನಾ ಸಿಕ್ಕಿರೆ ಇನ್ನೊಂದು ಹಂತ ಮುಗಿಯುತ್ತದೆ. ಮುಂದೆ ಕಥೆ ಯಾವ ರೀತಿಯ ಟರ್ನ್​ ತೆಗೆದುಕೊಳ್ಳುತ್ತದೆ ಎಂಬ ಕಾತರದಲ್ಲಿದ್ದಾರೆ ಸೀರಿಯಲ್​ ಪ್ರೇಮಿಗಳು. 

ಶ್ರೀರಸ್ತು-ಶುಭಮಸ್ತು ಸೀರಿಯಲ್​ನಿಂದ ಔಟ್​ ಆಗುತ್ತಿದ್ದಂತೆಯೇ ಯಕ್ಷಗಾನದಲ್ಲಿ 'ಶಾರ್ವರಿ' ಮಿಂಚಿಂಗ್

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

click me!