ದಾವಣಗೆರೆ ಗರಿಗರಿ ಚುರುಮುರಿ ಹೇಗೆ ಮಾಡೋದು? ಸೀತಾರಾಮ ಪ್ರಿಯಾ ಅಮ್ಮ ಮಾಡಿದ್ರು ಟೇಸ್ಟಿ ಟೇಸ್ಟಿ ರೆಸಿಪಿ

By Suvarna News  |  First Published Apr 26, 2024, 11:23 AM IST

ದಾವಣಗೆರೆ ವಿಶೇಷ ಮಂಡಕ್ಕಿ ಚುರುಮುರಿಯನ್ನು ಮಾಡುವ ವಿಧಾನ ಹೇಳಿಕೊಟ್ಟಿದ್ದಾರೆ ಸೀತಾರಾಮ ಸೀರಿಯಲ್​ ಪ್ರಿಯಾ ಅವರ ಅಮ್ಮ. 
 


ಸೀತಾರಾಮ ಸೀರಿಯಲ್​ ಪ್ರಿಯಾ ಕೆಲ ದಿನಗಳ ಹಿಂದೆ ಯೂಟ್ಯೂಬ್​ ಚಾನೆಲ್​ ಓಪನ್​ ಮಾಡಿದ್ದು, ಅದರಲ್ಲಿ ಇದಾಗಲೇ ಹಲವಾರು ವಿಡಿಯೋಗಳನ್ನು ಹಾಕಿದ್ದಾರೆ. ಇದೇ ಮೊದಲ ಬಾರಿಗೆ ಅಮ್ಮನ ಕೈರುಚಿಯನ್ನು ಅವರ ಫ್ಯಾನ್ಸ್​ಗೆ ಉಣಬಡಿಸಿದ್ದಾರೆ. ಇದರಲ್ಲಿ ಅವರು ದಾವಣಗೆರೆ ಸ್ಪೆಷಲ್​ ಚುರುಮುರಿ ಮಾಡುವುದು ಹೇಗೆ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಅಮ್ಮ ಇದರ ಸಂಪೂರ್ಣ ಅಡುಗೆ ಮಾಡಿದ್ದು, ಅದರ ವಿಡಿಯೋ ಅಪ್​ಲೋಡ್​ ಆಗಿದೆ. ಅಂದಹಾಗೆ ಪ್ರಿಯಾ ಅವರ ನಿಜವಾದ ಹೆಸರು ಮೇಘನಾ ಶಂಕರಪ್ಪ. ಇದೀಗ ಮೇಘನಾ ಅವರು ತಮ್ಮದೇ ಆದ ಸ್ಟೈಲ್​ನಲ್ಲಿ ಅಮ್ಮನ ಅಡುಗೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಚುರುಮುರಿ ಮಾಡುವ ವಿಧಾನವೆಂದರೆ: ಮೊದಲಿಗೆ ಪಾತ್ರಯಲ್ಲಿ ಎಣ್ಣೆ ಹಾಕಿ  ಸಾಸಿವೆ ಹಾಕಬೇಕು. ಸಾಸಿಗೆ ಚಟಪಟ ಅಂದ ನಂತರ ಅದಕ್ಕೆ ಇಂಗು ಹಾಕಬೇಕು. ನಂತರ ಕಡಲೆ ಬೀಜ ಹಾಕಿ ಕೈಯಾಡಿಸಬಹುದು. ನಂತರ ಜೀರಿಗೆ ಹಾಕಬೇಕು. ಜೀರಿಗೆಯನ್ನು ಮುಂಚೆನೇ ಹಾಕಿದರೆ ಸೀದು ಹೋಗುತ್ತದೆ. ಆದ್ದರಿಮದ ಕಡಲೆಕಾಯಿ ಬೀಜ ಹಾಕಿದ ಮೇಲೆ ಹಾಕಬೇಕು. ನಾಟಿ ಬೆಳ್ಳುಳ್ಳಿ ಹಾಕಬೇಕು. ನಂತರ ಖಾರದ ಪುಡಿ, ಉಪ್ಪು, ಅರಿಶಿಣ ಹಾಕಬೇಕು. ಆಮೇಲೆ ಸ್ವಲ್ಪ ಹುಡಿಗಡ್ಲೆ ಹಾಕಬೇಕು. ನಂತರ ಸಕ್ಕರೆ ಹಾಕಬೇಕು. ಸಕ್ಕರೆ ಕರಗುವವರೆಗೆ ಕಾದು ನಂತರ ಮಂಡಕ್ಕಿ (ಕಡ್ಲೆಪುರಿ) ಹಾಕಿ ಮಿಕ್ಸ್​ ಮಾಡಬೇಕು. ಇಷ್ಟು ಮಾಡಿದರೆ ಮುಗಿಯಿತು. 

Latest Videos

ಸೀತಾರಾಮ ಸೀರಿಯಲ್​ ಸೀತಾ-ಪ್ರಿಯಾ ಭರ್ಜರಿ ರೀಲ್ಸ್​: ವಿಡಿಯೋಗೆ ಹಾರ್ಟ್​ ಇಮೋಜಿಗಳ ಸುರಿಮಳೆ

ಅಂದಹಾಗೆ, ಮೇಘನಾ ಅವರು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಹತ್ತಿರ ಪಾಂಡವಮಟ್ಟಿ ಊರು. ಇಲ್ಲಿ ಕಡ್ಲೆಪುರಿಗೆ ಮಂಡಕ್ಕಿ ಎಂದು ಹೇಳಲಾಗುತ್ತದೆ. ಮಂಡಕ್ಕಿಗೆ ಈ ಊರು ಸಕತ್​ ಫೇಮಸ್​ ಆಗಿರೋ ಕಾರಣ, ಅದನ್ನು ಹೇಗೆ ಮಾಡುವುದು ಎಂದು ತೋರಿಸಿಕೊಟ್ಟಿದ್ದಾರೆ. ಇನ್ನು ಮೇಘನಾ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, 'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. 

ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ನಟಿ ಅದಿತಿ ಪ್ರಭುದೇವ ಮೊದಲ ಮಗಳಿಗೆ ಮೊದಲ ವರ್ಷದ ಹುಟ್ಟುಹಬ್ಬ! ಸೆಲಬ್ರೇಷನ್​ ಹೇಗಿದೆ ನೋಡಿ...


click me!