
ಸದ್ಯ ಜೀ ಕನ್ನಡದ ಎರಡು ಸೀರಿಯಲ್ಗಳು ಮುಕ್ತಾಯ ಹಂತದಲ್ಲಿ ಬಂದಿದೆ. ಅವುಗಳೆಂದರೆ ಒಂದು ಸೀತಾರಾಮ, ಇನ್ನೊಂದು ಶ್ರೀರಸ್ತು ಶುಭಮಸ್ತು. ಎರಡೂ ಸೀರಿಯಲ್ಗಳು ಟಿಆರ್ಪಿಯಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಿರುವ ಕಾರಣ, ಮತ್ತಷ್ಟು ಎಳೆದರೂ ಎಳೆಯಬಹುದು. ಆದರೆ ಅದಕ್ಕೆ ಏನೂ ಟ್ವಿಸ್ಟ್ ಕೊಡದೇ ಈಗಿರುವಂತೆಯೇ ನಡೆದುಕೊಂಡು ಹೋದರೆ ಮುಕ್ತಾಯ ಕಾಣುವ ನಿರೀಕ್ಷೆ ಇದೆ. ಇದಕ್ಕೆ ಕಾರಣ ಸೀತಾರಾಮ ಸೀರಿಯಲ್ನ ಭಾರ್ಗವಿ ಹಾಗು ಶ್ರೀರಸ್ತು ಶುಭಮಸ್ತುವಿನ ಶಾರ್ವರಿ. ಇಬ್ಬರೂ ಲೇಡಿ ವಿಲನ್ಗಳ ಆಟ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಆದ್ದರಿಂದ ಇವರ ಬಂಡವಾಳ ಬಯಲಾಗಲು ನಿರ್ದೇಶಕರು ಮನಸ್ಸು ಮಾಡಿದರೆ ಇನ್ನೊಂದೇ ವಾರ ಸಾಕು. ಇದಾಗಲೇ ಎರಡೂ ಸೀರಿಯಲ್ನ ಪೆದ್ದು ನಾಯಕರಿಗೆ ಚಿಕ್ಕಮ್ಮಂದಿರ ಗುಣ ಗೊತ್ತಾಗಿಲ್ಲ ಬಿಟ್ಟರೆ ಉಳಿದವರಿಗೆ ಗೊತ್ತಾಗಿರುವ ಕಾರಣ, ಇನ್ನೇನು ನಾಯಕರಿಗೆ ಅಸಲಿಯತ್ತು ಗೊತ್ತಾಗುವುದು ಒಂದೇ ಬಾಕಿ.
ಸೀತಾರಾಮ ಸೀರಿಯಲ್ ವಿಷಯಕ್ಕೆ ಬರುವುದಾದರೆ, ಸೀತೆಗೆ ಸಿಹಿಯ ಜೊತೆ ಇನ್ನೊಬ್ಬಳು ಮಗಳು ಹುಟ್ಟಿದ್ದಳು ಎನ್ನುವ ರಹಸ್ಯ ಇದಾಗಲೇ ಸುಬ್ಬಿ ಕೇಳಿಸಿಕೊಂಡಿದ್ದು, ತಾವು ಸೀತಾಳ ಮಗಳೇ ಎನ್ನುವುದು ಆಕೆಗೆ ತಿಳಿದಿದೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತ ಸೀತೆಗೆ ಹುಟ್ಟಿದ್ದು ಅವಳಿ ಮಕ್ಕಳು, ಅವರಲ್ಲಿ ಒಬ್ಬಳು ಸಿಹಿ ಇದಾಗಲೇ ಕಾನೂನುಬದ್ಧವಾಗಿ ಸೀತೆಗೆ ಸಿಕ್ಕೂ ಆಗಿದೆ. ಆಕೆ ಸತ್ತು ಸುಬ್ಬಿಗೆ ಕಾಣಿಸಿಕೊಳ್ತಿರೋದೂ ಆಗಿದೆ. ಇದೀಗ ಸುಬ್ಬಿ ಕೂಡ ಸೀತಾ-ರಾಮ ಮನೆಯನ್ನು ಸೇರಿದ್ದರೂ ಅವಳೇ ಸೀತೆಯ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸುಬ್ಬಿಯನ್ನು ಇದೀಗ ದತ್ತು ಪಡೆದುಕೊಳ್ಳಲು ಬೇರೊಬ್ಬರು ಬಂದಿದ್ದಾರೆ. ಇದೇ ಸಮಯದಲ್ಲಿ ಸುಬ್ಬಿಗೆ ಆತನ ಸಾಕು ತಾತ ತಾನು ಮಗುವನ್ನು ಕದ್ದು ಬಂದಿದ್ದ ವಿಷ್ಯ ಹೇಳಿದ್ದಾನೆ. ಅದೇ ಇನ್ನೊಂದೆಡೆ, ಅಶೋಕ್ಗೆ ಕೂಡ ಸಿಹಿ ಆತ್ಮದ ರೂಪದಲ್ಲಿ ಇರುವುದು ತಿಳಿದಿದೆ. ಆಕೆಯಿಂದ ಭಾರ್ಗವಿಯೇ ಕೊಲೆಗಾತಿ ಎನ್ನುವ ವಿಷಯವೂ ತಿಳಿದಿದೆ. ಇದು ರಾಮ್ಗೆ ಗೊತ್ತಾಗಬೇಕಿದೆಯಷ್ಟೇ.
ಶ್ರೀರಸ್ತು ಶುಭಮಸ್ತು ಶೂಟಿಂಗ್ ವೇಳೆ ಸುಧಾರಾಣಿ ಬಳಿ ತುಳಸಿ ಪಾಪು ಹೇಗಿರತ್ತೆ ನೋಡಿ!
ಇನ್ನು ಶ್ರೀರಸ್ತು ಶುಭಮಸ್ತು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಅದೇ ಇನ್ನೊಂದೆಡೆ, ಸಮರ್ಥ್, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ನಾಯಕ ಅವಿ ಮತ್ತು ಮಾಧವ್ಗೆ ಬಿಟ್ಟು ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ. ಅವಿ ಮತ್ತು ಮಾಧವ್ಗೆ ವಿಷಯ ತಿಳಿದರೆ ಅಲ್ಲಿಗೆ ಸೀರಿಯಲ್ ಕಥಮ್.
ಹಾಗಿದ್ದರೆ ಈ ಎರಡೂ ಸೀರಿಯಲ್ಗಳು ಶೀಘ್ರದಲ್ಲಿ ಮುಗಿಯತ್ತಾ ಎನ್ನುವುದು ಪ್ರಶ್ನೆ. ಮೊದಲೇ ಹೇಳಿದ ಹಾಗೆ ಇನ್ನೇನು ವಿಲನ್ಗಳಿಗೆ ಸತ್ಯ ಗೊತ್ತಾಗಬೇಕು ಎನ್ನುವಷ್ಟರಲ್ಲಿ ಒಬ್ಬರ ಅಪಘಾತ ಆಗುವುದು, ಸತ್ಯ ತಿಳಿದವರು ಸಾಯುವುದು ಇಲ್ಲವೇ ಅವರಿಗೆ ನೆನಪಿನ ಶಕ್ತಿ ಹೋಗುವುದು, ವಿಲನ್ಗಳು ಯಾರನ್ನೋ ಅಪಹರಿಸಿ ಸತ್ಯ ಬಾಯಿ ಬಿಡದಂತೆ ಮಾಡುವುದು... ಹೀಗೆ ಸೀರಿಯಲ್ ಎಳೆಯಬೇಕು ಎಂದರೆ ನೂರೆಂಟು ಅಡ್ಡ ಕಥೆಗಳು ಸಿಗುತ್ತವೆಯೆನ್ನಿ. ಹೀಗೆ ಮಾಡದೇ ಈ ಎರಡೂ ಸೀರಿಯಲ್ಗಳನ್ನು ಆದಷ್ಟು ಬೇಗ ಮುಗಿಸಿ ಎನ್ನುವುದು ಸೀರಿಯಲ್ ಪ್ರೇಮಿಗಳ ಅಭಿಮತ.
2-3 ವರ್ಷಗಳ 'ಸೀತಾರಾಮ' ಸಂಪೂರ್ಣ ಸೀರಿಯಲ್ ಎರಡೇ ನಿಮಿಷಗಳಲ್ಲಿ ಕಥಮ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.