ಅಂದುಕೊಂಡದ್ದೆಲ್ಲಾ ಆಗಬೇಕೆ? ನೆಗೆಟಿವ್​ ಎನರ್ಜಿ ಸುಳಿಯಬಾರದೆ? ನಟಿ ವೈಷ್ಣವಿ ಹೇಳಿದ್ದಾರೆ ಸಿಂಪಲ್​ ಟಿಪ್ಸ್​...

By Suvarna News  |  First Published Mar 4, 2024, 11:24 AM IST

ನಮ್ಮ ಆಸೆ ನೆರವೇರಬೇಕು ಎಂದರೆ, ನಮ್ಮ ಸುತ್ತಲೂ ಇರುವ ನೆಗೆಟಿವ್​ ಎನರ್ಜಿಗಳು ನಮಗೆ ಬಾಧಿಸಬಾರದು ಎಂದರೆ ಏನು ಮಾಡಬೇಕು ಎನ್ನುವ ಬಗ್ಗೆ ನಟಿ ವೈಷ್ಣವಿ ವಿಡಿಯೋದಲ್ಲಿ ಹೇಳಿದ್ದಾರೆ ನೋಡಿ...
 


ಮನಸ್ಸಿನಲ್ಲಿ ಅಂದುಕೊಂಡದ್ದೆಲ್ಲಾ ನೆರವೇರಬೇಕು ಎಂದರೆ ಏನು ಮಾಡಬೇಕು ಎನ್ನುವ ಬಗ್ಗೆ ನೀವು ಸಾಕಷ್ಟು ವಿಡಿಯೋಗಳನ್ನು ನೋಡಿರಬಹುದು. ಯೂಟ್ಯೂಬ್​ ಸೇರಿದಂತೆ ಸೋಷಿಯಲ್​ ಮೀಡಿಯಾಗಳಲ್ಲಿ ಈ ರೀತಿಯ ವಿಡಿಯೋಗಳಿಗಂತೂ ಬರವೇ ಇಲ್ಲ. ಕೆಲವರು ತುಂಬಾ ಸ್ಟಡಿ ಮಾಡಿ  ಈ ಬಗ್ಗೆ ಹೇಳುವುದು ಉಂಟು. ಇನ್ನು ಕೆಲವರು ಲೈಕ್ಸ್​, ವ್ಯೂವ್ಸ್​ ಗೋಸ್ಕರ ಏನೇನೋ ಟಿಪ್ಸ್​ ಕೊಡುವುದು ಉಂಟು. ಜನರು ಇಂಥ ವಿಡಿಯೋಗಳನ್ನು ಹೆಚ್ಚು ನೋಡುವ ಕಾರಣ, ಅದನ್ನೇ ಬಂಡವಾಳ ಮಾಡಿಕೊಂಡು ಏನೇನೋ ಹೇಳುವುದು ಉಂಟು. ಆದರೆ ಜ್ಯೋತಿಷಿ, ಭವಿಷ್ಯ, ಮ್ಯಾನಿಫೆಸ್ಟೇಷನ್​ ಎನ್ನುವುದು ಸುಳ್ಳಲ್ಲ ಎನ್ನುವುದು ಕೂಡ ಸಾಬೀತಾಗಿದೆ. 

ಕೆಲವರಿಗೆ ಕೆಲವೊಂದು ವಿಷಯಗಳು ಮೂಢನಂಬಿಕೆ ಎನ್ನಿಸಬಹುದು. ಇಂದಿನ ಕಾಲಕ್ಕೆ ಇವೆಲ್ಲಾ ಅಪ್ರಸ್ತುತ ಎಂದೂ ಎನ್ನಿಸಬಹುದು. ಆದರೆ ತಲೆತಲಾಂತರಗಳಿಂದ ನಮ್ಮ ಮುತ್ತಜ್ಜ ಹಾಗೂ ಅವರ ಹಿರಿಯ ತಲೆಗಳಿಂದ ಬಂದಿರುವ ಅದೆಷ್ಟೋ ಶಾಸ್ತ್ರಗಳು, ನಂಬಿಕೆಗಳು ಇಂದಿಗೂ ಪ್ರಸ್ತುತ. ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟ ವಿಷಯ. ಕೆಲವರು ಇಂಥ ಸಂಪ್ರದಾಯಗಳನ್ನು ನಂಬಿ ತಮಗೆ ಆಗಿರುವ ಅನುಭವಗಳನ್ನು ಹಂಚಿಕೊಂಡರೆ, ಮತ್ತೆ ಕೆಲವರು ಇವೆಲ್ಲಾ ಓಬಿರಾಯನ ಕಾಲದ್ದು, ಇಂದಿನ ಕಾಲಕ್ಕೆ ಅಪ್ರಸ್ತುತ ಎಂದು ಹೇಳುವುದು ಉಂಟು.

Tap to resize

Latest Videos

ಸೀತಾರಾಮ ಸೀರಿಯಲ್​ ಸೀತಾ, ವೈಷ್ಣವಿ ಮನೆಗೆ ಬಂದ ಕಳ್ಳ! ಅವನು ಕೇಳಿದ್ದೇನು? ನಟಿ ಹೇಳಿದ್ದೇನು?

ಅದೇನೇ ಇರಲಿ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು. ಇದೀಗ ಸೀತಾರಾಮ ಸೀರಿಯಲ್​ ಖ್ಯಾತಿಯ ಸೀತೆ, ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ವೈಷ್ಣವಿ ಗೌಡ ಅವರು, ಕೆಲವೊಂದು ಟಿಪ್ಸ್​ ನೀಡಿದ್ದಾರೆ. ಅಂದುಕೊಂಡದ್ದು ಆಗಬೇಕು ಎಂದರೆ ಹಾಗೂ ಓಡಾಡುವ ಸ್ಥಳಗಳಲ್ಲಿ ಕೆಟ್ಟ ದೃಷ್ಟಿ, ನೆಗೆಟಿವ್​ ಎನರ್ಜಿ ಬರಬಾರದು ಎಂದರೆ ಏನು ಮಾಡಬೇಕು ಎಂದು ಬರೆದಿದ್ದಾರೆ. ಕುತೂಲಹದ ವಿಷಯವೆಂದರೆ, ಇವರು ಹೇಳಿರುವ ಟಿಪ್ಸ್​ಗಳನ್ನು ಇದಾಗಲೇ ಫಾಲೋ ಮಾಡಿವರು ತಮಗೂ ಇದರ ಅನುಭವವಾಗಿದೆ. ತಾವೂ ಹೀಗೆಯೇ ಮಾಡಿ ಸಕ್ಸಸ್​ ಆಗಿರುವುದಾಗಿ ಹೇಳಿಕೊಂಡಿದ್ದಾರೆ. 

ಈ ವಿಡಿಯೋದಲ್ಲಿ ಆರಂಭದಲ್ಲಿ ಜಾಹೀರಾತಿನ ಭಾಗವಾಗಿ ಒಂದು ಕ್ರೀಂ ಬಗ್ಗೆ ಮಾತನಾಡಿದ್ದಾರೆ ನಟಿ. ಐದು ನಿಮಿಷಗಳ ಬಳಿಕ ಕುತೂಹಲವಾಗಿರುವ ಕೆಲವೊಂದು ಟಿಪ್ಸ್​ಗಳನ್ನು ನೀಡಿದ್ದಾರೆ. ತಾವು ಎಲ್ಲಿಗೆ ಹೋಗುವುದಾದರೂ ಕೆಟ್ಟ ದೃಷ್ಟಿ, ನೆಗೆಟಿವ್​ ಎನರ್ಜಿ ಬಳಿಗೆ ಸುಳಿಯಬಾರದು ಎನ್ನುವ ಕಾರಣಕ್ಕೆ, ಲವಂಗ, ಏಲಕ್ಕಿ ಹಾಗೂ ಚಕ್ಕೆಯ ಚೂರುಗಳನ್ನು ಚಿಕ್ಕ ಪರ್ಸ್​ನಲ್ಲಿ ಇಟ್ಟುಕೊಂಡು ಹೋಗುವುದಾಗಿ ಹೇಳಿದ್ದಾರೆ. ಇದರ ಮಹತ್ವವನ್ನೂ ಅವರು ತಿಳಿಸಿಕೊಟ್ಟಿದ್ದಾರೆ. ಇದರ ಜೊತೆ ವಿಶೇಷವಾದ ಎಲೆಯ ಪರಿಚಯ ಅವರು ಮಾಡಿದ್ದಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಇರುವ ಪಲಾವಿನ ಎಲೆ ಇದು. ಬೇ ಲೀಫ್​ ಎಂದು ಇಂಗ್ಲಿಷ್​ನಲ್ಲಿ ಕರೆಯಲಾಗುತ್ತದೆ. ಅದರ ಮೇಲೆ ತನಗೆ ಏನು ಆಗಬೇಕು ಎನ್ನುವ ವಿಷ್​ಗಳನ್ನು ಬರೆದು, ಒಂದು ಪ್ಲೇಟ್​ನಲ್ಲಿ ಅವುಗಳಿಗೆ ಬೆಂಕಿ ಹಚ್ಚಿ ಬೂದಿ ಮಾಡಿ, ಅದನ್ನು ಗಾಳಿಯಲ್ಲಿ ಬಿಡುವಂತೆ ಹೇಳಿದ್ದಾರೆ. ಇದರಿಂದ ಯಾವುದೋ ರೂಪದಲ್ಲಿ ವಿಷ್​ ನೆರವೇರುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಉಗುರುಬೆಚ್ಚಗಿನ ನೀರಿನಲ್ಲಿ ಕಲ್ಲು ಉಪ್ಪು ಹಾಕಿಕೊಂಡು ಒಂದು ಬಕೆಟ್​ನಲ್ಲಿ ಸ್ವಲ್ಪ ಸಮಯ ಕಾಲನ್ನು ಹಾಕಿ ಕುಳಿತುಕೊಂಡರೆ ನೆಗೆಟಿವ್​ ಎನರ್ಜಿ ಹೋಗುವುದಾಗಿ ಹೇಳಿದ್ದಾರೆ. ಇದನ್ನು ಇದಾಗಲೇ ತಾವು ಟ್ರೈ ಮಾಡಿದ್ದು, ಸಕ್ಸಸ್​ ಆಗಿರುವುದಾಗಿ ಕೆಲವರು ಕಮೆಂಟ್​  ಮಾಡಿದ್ದಾರೆ. 

ಕಣ್ಣು ಮುಚ್ಚಿಕೊಂಡು ಮೇಕಪ್​ ಮಾಡಿಕೊಂಡ ಸೀತಾರಾಮ ಸೀತಾ: ವೈಷ್ಣವಿ ಗೌಡ ಹೊಸ ಲುಕ್​ ಹೇಗಿದೆ?

click me!