ಜೀ ಕನ್ನಡ ವಾಹಿನಿಯಲ್ಲಿ ಡಾನ್ಸ್ ಡಾನ್ಸ್ ಕರ್ನಾಟಕ ಡಾನ್ಸ್ ಷೋ ಆರಂಭವಾಗಲಿದ್ದು, ಈ ಬಾರಿ ಸಕತ್ ಇಂಟರೆಸ್ಟಿಂಗ್ ಆಗಿದ್ದು, ಕಿರುತೆರೆ ಕಲಾವಿದರು ಡಾನ್ಸ್ ಮಾಡಲಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿದ್ದ ಡಾನ್ಸ್ ಕರ್ನಾಟಕ ಡಾನ್ಸ್ ಇದಾಗಲೇ ಏಳು ಸೀಸನ್ಗಳನ್ನು ಮುಗಿಸಿದೆ. ಕರ್ನಾಟಕ ಮೂಲೆಮೂಲೆಯಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ, ಅವರನ್ನು ಒಂದೇ ವೇದಿಕೆಯ ಮೇಲೆ ನರ್ತಿಸುವಂತೆ ಮಾಡುವ ಷೋ ಇದೆ. ಆದರೆ ಒಂದೇ ವ್ಯತ್ಯಾಸ ಎಂದರೆ ಇಲ್ಲಿ ಬರುವ ಸ್ಪರ್ಧಿಗಳು ಬಣ್ಣದ ಲೋಕದಲ್ಲಿ ಗುರುತಿಸಿಕೊಂಡವರೇ ಹೆಚ್ಚು. ಕಿರುತೆರೆ, ಹಿರಿತೆರೆ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಸೌಂಡ್ ಮಾಡುತ್ತಿರುವವರನ್ನು ಇದರಲ್ಲಿ ಆಯ್ಕೆ ಮಾಡಲಾಗುತ್ತದೆ.
ರಿಯಾಲಿಟಿ ಷೋಗಳಲ್ಲಿ ಸಕತ್ ಕಾಂಪಿಟೇಷನ್ ಇರುವ ಹಿನ್ನೆಲೆಯಲ್ಲಿ, ವಾಹಿನಿಗಳು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತವೆ. ವೀಕ್ಷಕರನ್ನು ಸೆರೆಹಿಡಿದು ಟಿಆರ್ಪಿ ಗಿಟ್ಟಿಸಿಕೊಳ್ಳುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇದೇ ಕಾರಣಕ್ಕೆ, ಹೊಸ ಹೊಸ ಪ್ರಯೋಗಗಳು ಅನಿವಾರ್ಯವಾಗಿದೆ. ಅದೇ ರೀತಿ ಈ ಬಾರಿಯ ಡಾನ್ಸ್ ಕರ್ನಾಟಕ ಡಾನ್ಸ್ನಲ್ಲಿ ವಿಭಿನ್ನ ಪ್ರಯೋಗ ಮಾಡಲಾಗುತ್ತಿದೆ. ಹೆಚ್ಚಾಗಿ ಕಿರುತೆರೆ ಕಲಾವಿದರನ್ನು ಈ ಬಾರಿ ಡಾನ್ಸ್ ಲೋಕಕ್ಕೆ ಆಹ್ವಾನಿಸಲಾಗಿದೆ. ಆದರೆ ಕುತೂಹಲದ ಸಂಗತಿ ಎಂದರೆ, ಇವರ್ಯಾರೂ ನೃತ್ಯ ಕ್ಷೇತ್ರದಲ್ಲಿ ಅಷ್ಟು ಎಕ್ಸ್ಪರ್ಟ್ ಇಲ್ಲದವರು. ಅವರನ್ನು ಈ ಕಾಂಪಿಟೇಷನ್ನಲ್ಲಿ ಸ್ಪರ್ಧಿಗಳನ್ನಾಗಿ ಮಾಡಲಾಗಿದ್ದು, ಇವರನ್ನು ಇಟ್ಟುಕೊಂಡು ನಾವು ಹೇಗಪ್ಪಾ ಷೋ ನಡೆಸುವುದು ಎಂದು ತೀರ್ಪುಗಾರರು ತಲೆ ಚಚ್ಚಿಕೊಳ್ಳುತ್ತಿರುವ ಪ್ರೊಮೋ ಒಂದನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ನಾನು ಪುರುಷ ಎನ್ನೋದನ್ನೂ ನೋಡದೆ ಆತ ಮಂಚಕ್ಕೆ ಕರೆದ... ಆಮೇಲೆ... ಕಹಿ ಅನುಭವ ಬಿಚ್ಚಿಟ್ಟ ಅನಿಮಲ್ ನಟ!
ಅಂದಹಾಗೆ ಈ ಷೋನಲ್ಲಿ ಈ ಬಾರಿ ಆರ್ಯವರ್ಧನ್ ಗುರೂಜಿ, ಒಳ್ಳೆ ಹುಡುಗ ಎಂದೇ ಹಾಕಿಕೊಳ್ಳುವ ಪ್ರಥಮ್, ಪುಟ್ಟಕ್ಕನ ಮಕ್ಕಳು ಕಂಠಿ ಅಂದರೆ ಧನುಷ್, ಇದೇ ಸೀರಿಯಲ್ನ ಸಹನಾ ಅಂದರೆ ಅಕ್ಷರ, ಸೀತಾರಾಮ ಸೀರಿಯಲ್ ಖ್ಯಾತಿಯ ಪ್ರಿಯಾ ಅಂದರೆ ಮೇಘನಾ ಶಂಕರಪ್ಪ, ಗಗನ, ರೆಮೊ, ವಿಶ್ವ, ಅಮೃತಧಾರೆ ಜೀವನ್ ಅರ್ಥಾತ್ ಶಶಿ ಹೆಗ್ಡೆ ಮುಂತಾದವರು ಈ ಷೋನಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುವಾಗಿ ಎಲ್ಲರ ಗಮನ ಸೆಳೆಯುತ್ತಿರುವುದು ಸೀತಾರಾಮ ಸೀರಿಯಲ್ ಸಿಹಿ ಅಂದರೆ ರೀತು ಸಿಂಗ್. ಈ ಬಗ್ಗೆ ಪ್ರೊಮೋ ರಿಲೀಸ್ ಆಗುತ್ತಿದ್ದಂತೆಯೇ ತಮ್ಮ ನೆಚ್ಚಿನ ತಾರೆಯರನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ಅಂದಹಾಗೆ ಈ ಷೋನಲ್ಲಿ ನಟರಾದ ಶಿವರಾಜ್ ಕುಮಾರ್, ರಕ್ಷಿತಾ, ವಿಜಯ್ ರಾಘವೇಂದ್ರ ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಈ ಬಾರಿಯ ಸ್ಪರ್ಧಿಗಳನ್ನು ನೋಡಿ ಎಲ್ಲರೂ ತಲೆ ಚಚ್ಚಿಕೊಳ್ಳುವುದನ್ನು ನೋಡಬಹುದು. ಸುಮಾರಾಗಿ ಡಾನ್ಸ್ ಬಲ್ಲ ಈ ಸೆಲೆಬ್ರಿಟಿಗಳು ಜನರನ್ನು ಹೇಗೆ ರಂಜಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅಂದಹಾಗೆ ಈ ಷೋ ಇದೇ ಶನಿವಾರ ಅಂದರೆ ಜುಲೈ 20ರಿಂದ ಶುರುವಾಗಲಿದೆ.
ಲಿಪ್ಲಾಕ್ಗೆ ಒಲ್ಲೆ ಎನ್ನುತ್ತಲೇ ಸಿನಿಮಾ ರಿಜೆಕ್ಟ್ ಮಾಡ್ತಿದ್ದ ನಟಿಗೆ ಇದೇನಾಗೋಯ್ತು? ಅಯ್ಯೋ ಕೀರ್ತಿ ಹೀಗೆಕಾದೆ?