ಮಹಾನಟಿ ರಿಯಾಲಿಟಿ ಷೋ ವಿಜೇತೆ ಪ್ರಿಯಾಂಕಾ ಆಚಾರ್ ಅವರು ಎಲ್ಲೋ ಜೋಗಪ್ಪ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ.
ನಟಿಯರಾಗಬೇಕು ಎಂದು ಕನಸು ಕಂಡುಕೊಳ್ಳುವ ಬಹುದೊಡ್ಡ ವರ್ಗವೇ ಇದೆ. ನಟನೆಯಲ್ಲಿ ಆಸಕ್ತಿ ಇರುವವರು ಒಂದು ವರ್ಗವಾದರೆ, ನಟನೆಯಲ್ಲಿ ಎಲ್ಲರನ್ನೂ ಮೀರಿಸುವವರೂ ಹಲವಾರು ಮಂದಿ ಇದ್ದಾರೆ. ಇವರಿಗೆ ಬಣ್ಣದ ಲೋಕದಲ್ಲಿ ಗುರುತಿಸಿಕೊಳ್ಳುವ ಆಸೆ ಇದ್ದರೂ ಅದಕ್ಕೆ ಸರಿಯಾದ ಮಾರ್ಗ ಯಾವುದು ಎಂದು ಗೊತ್ತಿರುವುದಿಲ್ಲ. ಯಾರನ್ನು ಸಂಪರ್ಕಿಸಬೇಕು, ಹೇಗೆ ಗುರುತಿಸಿಕೊಳ್ಳಬೇಕು, ಸುಲಭದ ಮಾರ್ಗ ಯಾವುದು ಎನ್ನುವುದು ತಿಳಿದಿರುವುದಿಲ್ಲ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಹಂಬಲ ಇರುವವರಿಗೆ ಜೀ ಕನ್ನಡ ವಾಹಿನಿ ಒಂದೊಳ್ಳೆ ಅವಕಾಶವನ್ನು ನೀಡಿತ್ತು. ಹಲವಾರು ಊರುಗಳಿಂದ ಹಲವು ಪ್ರತಿಭೆಗಳನ್ನು ಆರಿಸಿ ತಂದು, ಅವರನ್ನು ಪಳಗಿಸಿ ವಿವಿಧ ರೀತಿಯ ಚಾಲೆಂಜ್ಗಳನ್ನು ನೀಡಲಾಗಿತ್ತು. ಕೊನೆಯಲ್ಲಿ ಐವರು ಉಳಿದುಕೊಂಡಿದ್ದರು. ಹೆಚ್ಚಿನವರು ಊಹೆ ಮಾಡದ ರೀತಿಯಲ್ಲಿ ಮೈಸೂರಿನ ಪ್ರಿಯಾಂಕಾ ಆಚಾರ್ ಮಹಾನಟಿಯಾಗಿ ಹೊರಹೊಮ್ಮಿದ್ದರು.
ಇದೀಗ ಎಲ್ಲೋ ಜೋಗಪ್ಪ ನಿನ್ ಅರಮನೆ...ಹಾಡಿಗೆ ಪ್ರಿಯಾಂಕಾ ರೀಲ್ಸ್ ಮಾಡಿದ್ದು, ಅದನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ. ಅಷ್ಟಕ್ಕೂ ಪ್ರಿಯಾಂಕಾ ಅವರು ಹಲವಾರು ರೌಂಡ್ಸ್ಗಳಲ್ಲಿ ಉತ್ತಮ ರೀತಿಯಲ್ಲಿಯೇ ಅಭಿನಯದ ಮೂಲಕ ತೀರ್ಪುಗಾರರ ಗಮನ ಸೆಳೆದಿದ್ದರು. ತನ್ನ ಕನಸುಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಮನೆಯವರ ಬಲವಂತಕ್ಕೆ ಮದುವೆಯಾದ ಯುವತಿಯ ಕಥೆ ಸಾರುವ 'ಅನುರಾಗ' ಎನ್ನುವ ಶಾರ್ಟ್ ಫಿಲಂನಲ್ಲಿ ನಟಿಸಿ ಎಲ್ಲರ ಹೃದಯ ಗೆದ್ದಿದ್ದರು. ಮೂರು ತಿಂಗಳುಗಳಿಂದ ನಡೆದಿದ್ದ ಈ ಮಹಾನಟಿ ಷೋನಲ್ಲಿ ಪ್ರತಿಬಾರಿಯೂ ಇವರು ಅದ್ಭುತ ಅಭಿನಯವನ್ನೇ ನೀಡುತ್ತಾ ಬಂದಿದ್ದರು. ಕೊನೆಗೆ ಮಹಾನಟಿಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಹೆಸರನ್ನು ಹೇಳುತ್ತಿದ್ದಂತೆಯೇ ಗಳಗಳನೆ ಅತ್ತ ಪ್ರಿಯಾಂಕಾ, ಅಲ್ಲಿಯೇ ಇದ್ದ ತೀರ್ಪುಗಾರಾಗಿರುವ ರಮೇಶ್ ಅರವಿಂದ್ ಅವರನ್ನು ಅಪ್ಪಿ ಕಂಬನಿ ಮಿಡಿದರು.
ಮಹಾನಟಿ ರಿಯಾಲಿಟಿ ಷೋ ಶೂಟಿಂಗ್ ಹೇಗೆಲ್ಲಾ ನಡೆದಿದೆ? ರೋಚಕ ಪಯಣದ ವಿಡಿಯೋ ರಿಲೀಸ್...
ಅಂದಹಾಗೆ, ಪ್ರಿಯಾಂಕಾ ಅವರು ಮೈಸೂರಿನವರು. ಈ ಷೋನಲ್ಲಿ ಇವರು ಜೈಲಿನಲ್ಲಿರುವ ದರ್ಶನ್ ಕುರಿತು ಹೇಳಿಕೊಂಡಿದ್ದರು. ತಮ್ಮ ತಂದೆ ಹಾಗೂ ದರ್ಶನ್ ಕ್ಲೋಸ್ ಫ್ರೆಂಡ್ಸ್. ನಾನು ಈ ಷೋಗೆ ಆಯ್ಕೆ ಆಗಿದ್ದ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದರು, ಚೆನ್ನಾಗಿ ಹೇಳುವುದನ್ನು ಕೇಳು ಎಂದು ವಿಶ್ ಮಾಡಿದ್ದರು ಎಂಬುದಾಗಿ ಹೇಳಿದ್ದರು. ಮಹಾನಟಿಯಲ್ಲಿ ಸೆಲೆಕ್ಟ್ ಆದ ಬಳಿಕ ತಾವು ದರ್ಶನ್ ಅವರನ್ನ ಖುದ್ದು ಭೇಟಿಯಾಗಿ ಆಶೀರ್ವಾದ ಪಡೆದಿರುವುದಾಗಿಯು ಹೇಳಿಕೊಂಡಿದ್ದರು.
ಇನ್ನು ಪ್ರಿಯಾಂಕಾ ಅವರು ಮಹಾನಟಿ ವಿನ್ನರ್ ಆದ ಮೇಲೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಪಡೆದುಕೊಂಡಿದ್ದಾರೆ. ಧನ್ಯಶ್ರೀ ಮೊದಲ ರನ್ನರ್ ಅಪ್ ಆಗಿದ್ದು, ಅವರಿಗೆ 10 ಲಕ್ಷ ರೂಪಾಯಿ ಸಿಕ್ಕಿದೆ. 3ನೇ ಸ್ಥಾನವನ್ನು ಚಿತ್ರದುರ್ಗದ ಗಗನಾ, 4ನೇ ಸ್ಥಾನವನ್ನು ಆರಾಧನಾ ಭಟ್, 5ನೇ ಸ್ಥಾನವನ್ನು ಶ್ವೇತಾ ಭಟ್ ಪಡೆದಿದ್ದು, ಅವರಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿಯೂ ಪ್ರಿಯಾಂಕಾ ಆ್ಯಕ್ಟೀವ್ ಆಗಿದ್ದು, ಎಲ್ಲೋ ಜೋಗಪ್ಪ ಹಾಡಿಗೆ ರೀಲ್ಸ್ ಮಾಡಿದ್ದಾರೆ. ರೀಲ್ಸ್ಗೆ ಹಾರ್ಟ್ ಇಮೋಜಿಗಳ ಸುರಿಮಳೆಯಾಗಿದೆ. ಆದಷ್ಟು ಬೇಗ ಸಿನಿಮಾದಲ್ಲಿ ನಟಿಯಾಗುವ ಅವಕಾಶ ಸಿಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ನೀವೇ ನಮ್ಮ ಹೀರೊಯಿನ್ ಎಂದು ಮತ್ತೆ ಕೆಲವರು ಹೊಗಳುತ್ತಿದ್ದಾರೆ.
ನಟಿ ನಿಶ್ವಿಕಾ ನಾಯ್ಡು ವಿಶೇಷ ವಿಡಿಯೋ ರಿಲೀಸ್: ಮಹಾನಟಿಯಲ್ಲಿ ಚೆಂದುಳ್ಳಿ ಚೆಲುವೆ ಕಂಡಿದ್ದು ಹೀಗೆ....