ಸೀತಾರಾಮದ ಸುಲೋಚನಾ ಪಾತ್ರದಿಂದ ಜೀವನದಲ್ಲಿ ಫಸ್ಟ್‌ ಟೈಮ್ ಮಾಸ್ಕ್‌ ಹಾಕ್ಕೊಂಡು ತಿರಗ್ತಾ ಇದ್ದೇನೆ!

By Suchethana D  |  First Published Nov 23, 2024, 9:04 AM IST

ಸೀತಾರಾಮ ಸೀರಿಯಲ್‌ನಲ್ಲಿ ಸುಲೋಚನಾ ಎಂಬ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ತಿರೋ ಜ್ಯೋತಿ ಕಿರಣ್‌, ತಮ್ಮ ಪಾತ್ರದ ಬಗ್ಗೆ ಹೇಳಿದ್ದೇನು?
 


ಟಿವಿ ಸೀರಿಯಲ್‌ಗಳು ಅಂದ್ರೆ ಸುಮ್ನೇನಾ?  ಇಂದು ಧಾರಾವಾಹಿಗಳು ಎಂದ್ರೆ ಅದು ಕೇವಲ ಟಿವಿ ಪರದೆಯ ಮೇಲೆ ಬರೋ ಘಟನೆ, ಕಥೆಯಾಗಿ  ಉಳಿದಿಲ್ಲ. ಬಹುತೇಕ ವೀಕ್ಷರು ಇದನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗ ಅಂದೇ ಅಂದುಕೊಂಡಿದ್ದಾರೆ. ಅಲ್ಲಿ ಬರುವ ಪಾತ್ರಗಳು ಕೇವಲ ಪಾತ್ರಗಳಾಗಿರದೇ ನಿಜ ಜೀವನ ಅಂದುಕೊಳ್ಳುವವರು ಇದ್ದಾರೆ. ಇದೇ ಕಾರಣಕ್ಕೆ ಎಷ್ಟೋ ಸೀರಿಯಲ್​ಗಳು ಇಂದು ಹಲವರಿಗೆ ದಾರಿದೀಪಗಳಾಗಿವೆ. ಅಲ್ಲಿರುವುದನ್ನೇ ಅನುಸರಿಸುತ್ತಾರೆ. ಕೆಲವೊಂದು ನಟ-ನಟಿಯರನ್ನು ತಮ್ಮ ಆದರ್ಶ ಎಂದುಕೊಂಡುಬಿಡುತ್ತಾರೆ. ಇದೇ ಕಾರಣಕ್ಕೆ ಸೀರಿಯಲ್​ಗಳಲ್ಲಿ ಏನೇ ಎಡವಟ್ಟು ಆದರೂ ಅದು ಕೇವಲ ಧಾರಾವಾಹಿ ಎನ್ನುವುದನ್ನು ಮರೆತು ಬೈಯುವುದು ಉಂಟು. ಇನ್ನು ವಿಲನ್​ ಪಾತ್ರಧಾರಿಗಳು ಹೊರಗಡೆ ಹೋದಾಗ ಜನರು ಅವರನ್ನು ನಿಜವಾದ ವಿಲನ್​ಗಳೇ ಅಂದುಕೊಂಡು ಛೀಮಾರಿ ಹಾಕುವುದೂ ಇದೆ.  

ಈಗ ಅಂಥದ್ದೇ ಘಟನೆಯನ್ನು ವಿವರಿಸಿದ್ದಾರೆ ಸೀತಾರಾಮದಲ್ಲಿ ನೆಗೆಟಿವ್‌ ರೋಲ್‌ ಮಾಡ್ತಿರೋ ಸುಲೋಚನಾ. ಅಂದಹಾಗೆ ಸುಲೋಚನಾ ಪಾತ್ರಧಾರಿಯ ನಿಜವಾದ ಹೆಸರು ಜ್ಯೋತಿ ಕಿರಣ್‌. ಪಂಚಮಿ ಟಾಕ್ಸ್‌ ಯುಟ್ಯೂಬ್ ಚಾನೆಲ್‌ಗೆ ಅವರು ನೀಡಿರುವ ಸಂದರ್ಶದನಲ್ಲಿ ತಮ್ಮ ಸೀರಿಯಲ್‌ ಪಯಣದ ಅದರಲ್ಲಿಯೂ ಸೀತಾರಾಮ ಸೀರಿಯಲ್‌ನ ಕೆಲವೊಂದು ಕುತೂಹಲದ ವಿಷಯಗಳನ್ನು ಶೇರ್‍‌ ಮಾಡಿಕೊಂಡಿದ್ದಾರೆ. ಸೀತಾರಾಮದ ಸುಲೋಚನಾ ಆಸೆಬುರುಕಿ. ಎಲ್ಲವೂ ತನಗೆ ಬೇಕು ಎಂಬಾಕೆ. ಅದರಲ್ಲಿಯೂ ಸಿಹಿಯ ಜೊತೆ ಇವಳ ವಾದ ಬೇರೆ, ಸಿಹಿಯ ಮೇಲೂ ದಬ್ಬಾಳಿಕೆ ಮಾಡುವವಳು. ಇದನ್ನೆಲ್ಲಾ ನೋಡಿ ಸೀರಿಯಲ್‌ ಪ್ರೇಮಿಗಳು ಸುಮ್ನೆ ಇರ್ತಾರಾ? ಇಂಥ ಕ್ಯಾರೆಕ್ಟರ್‍‌ ಬಂದ ತಕ್ಷಣ ಶಪಿಸುತ್ತಲೇ ಸೀರಿಯಲ್‌ ನೋಡುವವರು ಅದೆಷ್ಟೋ ಮಂದಿಇದ್ದಾರೆ. ಇಲ್ಲಿರೋದು ಒಂದು ಪಾತ್ರ ಮಾತ್ರ ಎಂದುಕೊಳ್ಳದೇ ಸೀರಿಯಲ್ ನೋಡುವಾಗಲೇ ಬಿಪಿ ಹೆಚ್ಚಿಸಿಕೊಳ್ಳುವವರೂ ಇದ್ದಾರೆ. ಇನ್ನು ಈ ಪಾತ್ರ ಮಾಡಿದವರು ಹೊರಗಡೆ ಸಿಕ್ಕರೆ ಕಥೆ?

Tap to resize

Latest Videos

ಬ್ರೇನ್ ವಾಷ್ ಮಾಡಿ, ಮಂತ್ರ ಮಾಡ್ಸಿ ವಶ ಮಾಡಿಕೊಂಡಳು: ಅಮೃತಧಾರೆ ಅಪರ್ಣಾ ಪತಿ ಹೇಳಿದ್ದೇನು?

ಇದನ್ನೇ ಜ್ಯೋತಿ ಅವರು ಹೇಳಿದ್ದಾರೆ. ಲೈಫ್‌ನಲ್ಲಿ ಇದೇ ಮೊದಲ ಬಾರಿಗೆ ಮಾಸ್ಕ್‌ ಹಾಕಿಕೊಂಡು ತಿರುಗಾಡುವ ಸ್ಥಿತಿ ಬಂದಿದೆ ಎಂದಿದ್ದಾರೆ ನಟಿ. ಈ ಹಿಂದೆ ಕೆಲವು ಸೀರಿಯಲ್‌ಗಳಲ್ಲಿ ಹಾಸ್ಯಪಾತ್ರ ಮಾಡಿದ್ದೆ. ಆದರೆ ಇದೇ ಮೊದಲ ಬಾರಿಗೆ ನೆಗೆಟಿವ್‌ ರೋಲ್. ಈಪಾತ್ರ ನನಗೆ ಚಾಲೆಂಜಿಂಗ್‌ ಆಗಿದ್ದು ಎಷ್ಟು ಸತ್ಯನೋ, ಹೊರಗಡೆ ಜನ ಎಲ್ಲಿ ಬೈದು ಬಿಡ್ತಾರೋ ಎನ್ನುವ ಭಯದಲ್ಲಿ ಮಾಸ್ಕ್‌ ಹಾಕಿಕೊಂಡು ತಿರುಗುವ ಸ್ಥಿತಿ ಬಂದಿದೆ ಎಂದಿದ್ದಾರೆ. ಇದಾಗಲೇ ಹಲವರು ಬೈದು ಕೂಡ ಆಗಿದೆ. ಆ ಪುಟ್ಟ ಸಿಹಿಯ ಮೇಲೆ ಏನು ನಿಮ್ಮ ದರ್ಬಾರು ಎಂದು ಬೈದಿದ್ದಾರೆ. ನಟನೆ ತುಂಬಾ ಚೆನ್ನಾಗಿ ಮಾಡಿದ್ದೀರಿ ಎಂದು ಪರಿಚಯದವರು ಹೇಳೋದು ಮಾಮೂಲು. ಆದರೆ ಹೊಸಬರು ಮಾತ್ರ ನನ್ನನ್ನು ನೋಡುವ ದೃಷ್ಟಿ ಬೇರೆಯಾಗಿದೆ, ಅದಕ್ಕಾಗಿಯೇ ಭಯ ಎಂದು ತಮಾಷೆ ಮಾಡಿದ್ದಾರೆ. ಇದೇ ವೇಳೆ ಸಿಹಿ ಪಾತ್ರಧಾರಿ ರೀತು ಸಿಂಗ್‌ ಸೆಟ್‌ನಲ್ಲಿ ಹೇಗೆ ಇರುತ್ತಾಳೆ, ಅವಳು ಎಷ್ಟು ಮೆಚ್ಯೂರ್‍‌ ಆಗಿದ್ದಾಳೆ ಎಂಬ ಬಗ್ಗೆಯೂ ಜ್ಯೋತಿ ಮಾತನಾಡಿದ್ದಾರೆ. 

ಇನ್ನು ನಟಿ ಜ್ಯೋತಿ ಕಿರಣ್‌ ಕುರಿತು ಹೇಳುವುದಾದರೆ,  ಮೈಸೂರು ಮೂಲದವರು. ಅಂದಿನ ಈ ಟಿವಿ ವಾಹಿನಿಯಲ್ಲಿ 'ಪಂಚರಂಗಿ' ಕಾರ್ಯಕ್ರಮಕ್ಕಾಗಿ ಟ್ಯಾಲೆಂಟ್ ಹಂಟ್ ನಡೆಯುತ್ತಿದ್ದ ಸಂದರ್ಭದಲ್ಲಿ   ಆಯ್ಕೆಯಾಗಿದ್ದರು. ನಂತರ 'ಸಿಲ್ಲಿ ಲಲ್ಲಿ' ಸೀರಿಯಲ್‌ನಲ್ಲಿ  ಕಾಮಿಡಿ ಮಾಡಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.  'ಸಿಲ್ಲಿ ಲಲ್ಲಿ' ಯಲ್ಲಿ  ಸೂಜಿ ಅಂದ್ರೆ  ಸುಜಾತಾ  ಪಾತ್ರದಲ್ಲಿ ಕಾಣಿಸಿಕೊಂಡಿದ್ದರು . ಈಕೆಗೆ ಕಿವಿ ಕೇಳ್ತಿರಲಿಲ್ಲ,  ಪಕ್ಕದ ಮನೆಯ ಪಲ್ಲಿಯನ್ನು  ಪ್ರೀತಿ ಮಾಡಿ ಮಾಡುವ ತರ್ಲೆಗಳಿಂದ ಸಕತ್‌ ಫೇಮಸ್‌ ಆಗಿದ್ದರು.  ನಂತರ 'ಪಾಪ ಪಾಂಡು' ಸೀರಿಯಲ್‌ನಲ್ಲಿಯೂ ಕಾಮಿಡಿ ರೋಲ್.  ಬಳಿಕ ಮದುವೆ, ಮಗು, ಸಂಸಾರ ಎಂದು ಜ್ಯೋತಿ ಕಿರಣ್  ನಾಲ್ಕು ವರ್ಷ ಗ್ಯಾಪ್‌ ಪಡೆದು,   'ರಾಜಾ-ರಾಣಿ' ಸೀರಿಯಲ್‌ ಮೂಲಕ ವಾಪಸಾಗಿದ್ದರು. 'ನಮ್ಮನೆ ಯುವರಾಣಿ'ಯಲ್ಲಿಯೂ ಕಾಣಿಸಿಕೊಂಡರು.  ತೆಲುಗು ಕಿರುತೆರೆಗೂ ಎಂಟ್ರಿ ಕೊಟ್ಟು  'ಉಪ್ಪೆನ' ಸಿರಿಯಲ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ, ಅಮ್ಮನ ರೋಲ್, ಹೀರೋಯಿನ್‌ ರೋಲ್ ಎಲ್ಲವೂ ಆಗಿ ಈಗ ಎಲ್ಲಕ್ಕಿಂತಲೂ ಡಿಫರೆಂಟ್‌ ಕ್ಯಾರೆಕ್ಟರ್‍‌ನಲ್ಲಿ ನೆಗೆಟಿವ್‌ ರೋಲ್‌ನಲ್ಲಿ ಸೀತಾರಾಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

ಸಿನಿಮಾ ಒಪ್ಪಿಕೊಳ್ಳದ್ದಕ್ಕೆ ಕಾರಣ ಕೊಟ್ಟ ಬಿಗ್​ಬಾಸ್​ ನಮ್ರತಾ: ಇದನ್ನು ನಂಬಬೇಕಾ ಕೇಳಿದ ನೆಟ್ಟಿಗರು!

click me!