ಬಿಗ್ ಬಾಸ್ ಮನೆಯಲ್ಲಿ ಮೂರು ಕಾಸಿಗೂ ಬೆಲೆ ಬಾಳದ ಚೈತ್ರಾ ಕುಂದಾಪುರ!

By Sathish Kumar KH  |  First Published Nov 22, 2024, 7:20 PM IST

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಬಿಡ್ಡಿಂಗ್ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಈ ಹರಾಜು ಪ್ರಕ್ರಿಯೆಯಲ್ಲಿ ಚೈತ್ರಾ ಕುಂದಾಪುರ ಅವರು ಮೂರು ಕಾಸಿಗೂ ಹರಾಜಾಗಲಿಲ್ಲ.


ಬೆಂಗಳೂರು (ನ.22): ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ಎರಡು ಗುಂಪುಗಳನ್ನು ಮಾಡಿ, ವಾರದ ಟಾಸ್ಕ್‌ಗಳನ್ನು ನೀಡುತ್ತಿದ್ದಾರೆ. ಅದರಲ್ಲಿ ಬಿಡ್ಡಿಂಗ್ ಮೂಲಕ ತಂಡದ ನಾಯಕರು ಇತರರನ್ನು ಖರೀದಿ ಮಾಡಬೇಕಿತ್ತು. ಹೀಗಾಗಿ, ನಾಯಕರು 8 ಸ್ಪರ್ಧಿಗಳನ್ನು ಕನಿಷ್ಠ 300 ರೂ.ಗಳಿಂದ 2,000 ರೂ.ವರೆಗೆ ಖರೀದಿ ಮಾಡಿದರು. ಆದರೆ, ಚೈತ್ರಾ ಕುಂದಾಪುರ ಅವರು ವೇದಿಕೆಗೆ ಬಮದಾಗ ಯಾರೊಬ್ಬರೂ ಕನಿಷ್ಠ 1 ರೂಪಾಯಿಗೂ ಬಿಡ್ ಕೂಗಲಿಲ್ಲ. ಅಂದರೆ, ಚೈತ್ರಾ ಅವರು ಮೂರು ಕಾಸಿಗೂ ಅಲ್ಲಿ ಬೆಲೆ ಬಾಳಲಿಲ್ಲ.

ಬಿಗ್ ಬಾಸ್ ಮನೆಯಲ್ಲಿನ 14 ಕಂಟೆಸ್ಟೆಂಟ್‌ಗಳನ್ನು ಎರಡು ಗುಂಪು ಮಾಡಲಾಗಿದ್ದು, ಇದರಲ್ಲಿ ಎರಡು ಸ್ಪರ್ಧೆಗಳು ಮುಕ್ತಾಯದ ನಂತರ ತಲಾ ಮೂವರಂತೆ 2 ತಂಡಗಳಲ್ಲಿ ಕೇವಲ 6 ಜನರ 2 ಗುಂಪುಗಳನ್ನು ಮಾಡಲಾಗಿತ್ತು. ಒಂದು ತಂಡಕ್ಕೆ ಭವ್ಯಾ ಗೌಡ ಹಾಗೂ ಮತ್ತೊಂದು ತಂಡಕ್ಕೆ ಶೋಭಾ ಶೆಟ್ಟಿ ನಾಯಕರಾಗಿದ್ದರು. ಇಲ್ಲಿ ಉತ್ತಮ ಆಟಗಾರರು ಹಾಗೂ ತಲಾ ಒಬ್ಬೊಬ್ಬ ಕ್ಯಾಪ್ಟನ್ ಸೇರಿ 6 ಜನರನ್ನು ಬಿಟ್ಟು ಉಳಿದ 8 ಜನರನ್ನು ಹರಾಜಿಗೆ ಇಡಲಾಯಿತು. ಪುನಃ ಎರಡೂ ತಂಡದ ನಾಯಕರು ಬಿಗ್ ಬಾಸ್ ಕೊಟ್ಟ 5000 ರೂ.ಗಳಲ್ಲಿ ನಾಲ್ಕು ಸದಸ್ಯರನ್ನು ಖರೀದಿ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ 8 ಸದಸ್ಯರನ್ನು ಹರಾಜಿಗಿಟ್ಟಾಗ ಒಬ್ಬೊಬ್ಬರಿಗೆ ಅವರ ಆಟದ ಸಾಮರ್ಥ್ಯವನ್ನು ಪರಿಗಣಿಸಿ ಹಣವನ್ನು ನೀಡಿ ಖರೀದಿ ಮಾಡಲಾಯಿತು.

Tap to resize

Latest Videos

undefined

ಇಲ್ಲಿ ಎಲ್ಲ ಸ್ಪರ್ಧಿಗಳನ್ನು ಹರಾಜು ಮಾಡುವಾಗ ಚೈತ್ರಾ ಅವರನ್ನು ಬಿಡ್ಡಿಂಗ್ ವೇದಿಕೆ ನಿಲ್ಲಿಸಿದಾಗ ಎರಡೂ ತಂಡದ ಸದಸ್ಯರು ಬಿಡ್ ಕೂಗಲೇ ಇಲ್ಲ. ಕನಿಷ್ಠ 100 ರೂ.ಗೆ ಕೂಡ ಬಿಡ್ ಕೂಗದೇ ಎರಡೂ ತಂಡದ ಸದಸ್ಯರು ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದರು. ಯಾರೊಬ್ಬರೂ ಮೂರು ಕಾಸಿಗೂ ಹರಾಜು ಕೂಗದ ಕಾರಣ, ಬಿಡ್ ವೇದಿಕೆಗೆ ಬಂದು ಯಾರೊಬ್ಬರೂ ಖರೀದಿ ಮಾಡದ್ದರಿಂದ ವಾಪಸ್ ಹೋಗಿ ಕುಳಿತುಕೊಂಡರು. ಹರಾಜಿಗಿದ್ದ 8ರಲ್ಲಿ 7 ಸದಸ್ಯರು ಹರಾಜಾದ ನಂತರ ಕೊನೆಗೆ ಭವ್ಯಾ ತಂಡ ಸಂಪೂರ್ಣವಾಯಿತು. ಒಬ್ಬ ಸದಸ್ಯರ ಕೊರತೆ ಅನುಭವಿಸುತ್ತಿದ್ದ ಶೋಭಾ ಶೆಟ್ಟಿ ತಂಡಕ್ಕೆ ಅನಿವಾರ್ಯವಾಗಿ ಚೈತ್ರಾ ಅವರನ್ನು ಸೇರಿಸಿಕೊಳ್ಳಬೇಕಾದ ಅನಿವಾರ್ಯತೆ ಇತ್ತು.

ಇದನ್ನೂ ಓದಿ: ಕನಸಿನ ಹುಡುಗನಿಗಾಗಿ ಕಾಯ್ತಿರೋ ಬಿಗ್‌ಬಾಸ್‌ ಅನುಷಾ: ನಿಮ್ಮಲ್ಲಿ ಈ ಕ್ವಾಲಿಟಿ ಇದ್ರೆ ಟ್ರೈ ಮಾಡ್ಬೋದು!

ಕೊನೆಯದಾಗಿ ಪುನಃ ಬಿಗ್ ಬಾಸ್ ಚೈತ್ರಾಳನ್ನು ಹರಾಜಿನ ಬಿಡ್ ವೇದಕೆ ಮೇಲೆ ನಿಲ್ಲಿಸಿದರು. ಆಗಲೂ ಶೋಭಾ ಶೆಟ್ಟಿ 100 ರೂ.ಗೆ ಹರಾಜು ಕೂಗಿದರು. ಆಗ ಬಿಗ್ ಬಾಸ್ ನೀವು ಹರಾಜು ಕೂಗುವಂತಿಲ್ಲ. ಹೀಗಾಗಿ, ಅವರಿಗೆ ಎಷ್ಟು ಹಣ ಕೊಟ್ಟು ಖರೀದಿ ಮಾಡುತ್ತೀರಿ ಎಂದು ಕೇಳಿದಾಗ 300 ರೂ. ಕೊಟ್ಟು ಖರೀದಿ ಮಾಡುವುದಾಗಿ ಹೇಳಿದರು. ಆಗ ಅನಿವಾರ್ಯವಾಗಿ ಕೊನೆಯದಾಗಿ ಆಯ್ಕೆ ಇಲ್ಲದೇ ಶೋಭಾ ಶೆಟ್ಟಿ ತಂಡಕ್ಕೆ ಚೈತ್ರಾ ಹೋಗಬೇಕಾಯಿತು. ತನಗೆ ತಂಡದ ಸದಸ್ಯರಿಂದ ಅವಮಾನ ಆಯಿತು ಎಂಬ ಕೋಪದಲ್ಲಿ ನಾನು ಯಾವುದೇ ಸ್ಪರ್ಧೆಯಲ್ಲಿಯೂ ಆಡುವುದಿಲ್ಲ, ಬೇಕಾದರೆ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಉಳಿಯುತ್ತೇನೆ ಎಂದು ಚೈತ್ರಾ ಕೋಪ ಹೊರಗೆ ಹಾಕಿದರು.

ಇದನ್ನೂ ಓದಿ: ಸ್ನಾನ ಮಾಡದ ಹನುಮಂತುಗೆ 3 ಸಾವಿರದ ಚಡ್ಡಿ ಜೊತೆ ಭರ್ಜರಿ ಗಿಫ್ಟ್! ಕುಣಿದು ಕುಪ್ಪಳಿಸಿದ ಬಿಗ್‌ಬಾಸ್ ಸ್ಪರ್ಧಿಗಳು

ಯಾರಾರಿಗೆ ಎಷ್ಟು ಬಿಡ್ ಮಾಡಲಾಯಿತು:
ಧನರಾಜ್ - 300
ಗೌತಮಿ - 450
ಧರ್ಮ - 450
ಐಶ್ವರ್ಯಾ - 800
ಗೋಲ್ಡ್ ಸುರೇಶ್ - 1250
ಉಗ್ರಂ ಮಂಜು - 1750
ಶಿಶಿರ್ - 2000
ಚೈತ್ರಾ ಕುಂದಾಪುರ 300

click me!