ಪ್ರಿಯಂಗೆ ಕ್ಯಾನ್ಸರ್​, ಸೀತಂಗೆ ಮಗಳು ಕೈತಪ್ಪು ಭಯ: ಆದ್ರೂ ಹೀಗೆ ಕುಣಿಯೋದಾ ಕೇಳಿದ ಫ್ಯಾನ್ಸ್​!

Published : Sep 06, 2024, 03:19 PM IST
ಪ್ರಿಯಂಗೆ ಕ್ಯಾನ್ಸರ್​, ಸೀತಂಗೆ ಮಗಳು ಕೈತಪ್ಪು ಭಯ: ಆದ್ರೂ ಹೀಗೆ ಕುಣಿಯೋದಾ ಕೇಳಿದ ಫ್ಯಾನ್ಸ್​!

ಸಾರಾಂಶ

ಪ್ರಿಯಂಗೆ ಕ್ಯಾನ್ಸರ್​, ಸೀತಂಗೆ ಮಗಳು ಕೈತಪ್ಪು ಭಯ.. ಆದ್ರೂ ಇಬ್ಬರೂ ವಿಲನ್​ ಚಿಕ್ಕಿ ಜೊತೆ ಭರ್ಜರಿ ಸ್ಟೆಪ್​ ಹಾಕಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಹೀಗೆ ಕಾಲೆಳೆಯುತ್ತಿದ್ದಾರೆ!  

ಸಿಹಿ ಸೀತಾಳ ಗರ್ಭದಲ್ಲಿಯೇ ಹುಟ್ಟಿದ್ದರೂ ಸಿಹಿ ಅವಳಿಗೆ ಮಗಳಲ್ಲ, ಏಕೆಂದರೆ ಬಾಡಿಗೆ ತಾಯ್ತನದ ಮೂಲಕ ಹುಟ್ಟಿದ ಮಗು ಈಕೆ. ಸಿಹಿಯ ಅಪ್ಪ ಡಾ.ಮೇಘಶ್ಯಾಮ್​. ಇದೀಗ ಸಿಹಿಯ ಒಡಲ ಗುಟ್ಟು ಬಯಲಾಗಿದೆ. ಇದನ್ನು  ಅರಿಯದ ರಾಮ್​, ಶ್ಯಾಮ್​ಗೆ ನಿನ್ನ ಮಗಳನ್ನು ಹುಡುಕಿ ಕೊಡುವ ಜವಾಬ್ದಾರಿ ನನ್ನದು ಎಂದು ಹೇಳಿದ್ದಾನೆ. ಬಾಡಿಗೆ ತಾಯ್ತನದ ಮೂಲಕ ಪಡೆದ ಮಗುವನ್ನು ಆಕೆ ಹೇಗೆ ಇಟ್ಟುಕೊಳ್ಳಲು ಸಾಧ್ಯ? ಅವಳು ತಪ್ಪು ಮಾಡಿದ್ದಾಳೆ, ಮೋಸ ಮಾಡಿದ್ದಾಳೆ ಎಂದೆಲ್ಲಾ ಸೀತಾಳ ಬಳಿ ಬಂದು ರಾಮ್​  ಚರ್ಚೆ ಮಾಡಿದಾಗ ಸೀತಾಳ ಸಂಕಟ ಯಾರಿಗೂ ಬೇಡ. ಸಿಹಿಯನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಜೀವ ಆಕೆಯದ್ದಲ್ಲ. ಸಿಹಿಗಾಗಿ ಮತ್ತೊಂದು ಮಗುನೇ ಬೇಡ ಎಂದವಳು ಅವಳು. ಅಷ್ಟು ಪ್ರೀತಿ ಮಾಡುತ್ತಿದ್ದ ಮಗಳನ್ನು ಬಿಟ್ಟುಕೊಡಲು ಅಮ್ಮ ಎನಿಸಿದವಳಿಗೆ ಹೇಗೆ ಮನಸ್ಸು ಬಂದೀತು? ಇದೀಗ ಮುಂದೆ ಏನು ಎನ್ನುವ ಕುತೂಹಲ ಘಟ್ಟದಲ್ಲಿ ಸೀರಿಯಲ್​ ನಿಂತಿದೆ. 

ಅದೇ ಇನ್ನೊಂದೆಡೆ, ಪ್ರಿಯಾಳಿಗೆ ಬ್ರೆಸ್ಟ್​ ಕ್ಯಾನ್ಸರ್‌ ಇದೆ. ಇದು ಸೀರಿಯಲ್‌ ಪ್ರೇಮಿಗಳಿಗೆ ನೋವು ಉಂಟು ಮಾಡಿದ್ದಂತೂ ನಿಜ. ಅಮ್ಮನಾಗಲು ಬಯಸಿರುವ ಪ್ರಿಯಾಳಿಗೆ  ಬ್ರೆಸ್ಟ್‌ ಕ್ಯಾನ್ಸರ್‌ ಇರುವಂತೆ ತೋರಿಸಲಾಗಿದೆ. ಈ ಸತ್ಯ ಸದ್ಯ ಗೊತ್ತಿರುವುದು ಪ್ರಿಯಾ ಗಂಡ ಅಶೋಕ್‌ಗೆ ಮಾತ್ರ. ಈ ಸತ್ಯವನ್ನು ಹೇಳಲೂ ಅಗದೇ, ಮುಚ್ಚಿಡಲೂ ಆಗದೇ ಒದ್ದಾಡುತ್ತಿದ್ದಾನೆ ಅಶೋಕ್‌. ಅದೇ ಇನ್ನೊಂದೆಡೆ, ತನ್ನ ಮಗಳು ಗರ್ಭಿಣಿ ಆಗದೇ ಇರಲು ಅಶೋಕೇ ಕಾರಣ ಎಂದುಕೊಂಡಿದ್ದಾಳೆ ಪ್ರಿಯಾ ಅಮ್ಮ.

ಸಮಂತಾ ಎಸ್​ಎಸ್​ಎಲ್​ಸಿ ಅಂಕಪಟ್ಟಿ ವೈರಲ್​: ಇಂಥ ದಾಖಲೆ ಮನುಷ್ಯರಿಂದ ಸಾಧ್ಯನೇ ಇಲ್ಲ ಬಿಡಿ! ಅಷ್ಟಕ್ಕೂ ಆಗಿರೋದೇನು?

ಇವೆಲ್ಲವುಗಳ ನಡುವೆಯೇ ಸೀತಾರಾಮ ಸೀರಿಯಲ್​ ಟೀಮ್​ನವರು ಭರ್ಜರಿ ರೀಲ್ಸ್​ ಮಾಡಿದ್ದಾರೆ. ಇದರಲ್ಲಿ ಸೀತಾ, ಪ್ರಿಯಾ, ಭಾರ್ಗವಿ ಚಿಕ್ಕಿಯನ್ನು ನೋಡಬಹುದು. ಒಬ್ಬಳಿಗೆ ಕ್ಯಾನ್ಸರ್​, ಇನ್ನೊಬ್ಬಳ ಮಗು ಕೈತಪ್ಪಿ ಹೋಗುವ ಚಿಂತೆಯಲ್ಲಿದ್ರೂ ಹೀಗೆ ಡಾನ್ಸ್​ ಮಾಡ್ತಿದ್ದೀರಾ ಎಂದು ಅಭಿಮಾನಿಗಳು ನಟಿಯರ ಕಾಲೆಳೆದಿದ್ದಾರೆ. ಅಂದಹಾಗೆ ಇಲ್ಲಿ ರೀಲ್ಸ್​ ಮಾಡಿರುವ ಭಾರ್ಗವಿ ಹೆಸರು ಪೂಜಾ ಲೋಕೇಶ್​. ನಟ ಲೋಕೇಶ್​ ಹಾಗೂ ಗಿರಿಜಾ ಲೋಕೇಶ್​ ಅವರ ಪುತ್ರಿ ಪೂಜಾ ಲೋಕೇಶ್ ಅವರ ಪುತ್ರಿ. ಸೀತಾ ರಾಮ’ ಧಾರಾವಾಹಿಯಲ್ಲಿ ಪೂಜಾ ಲೋಕೇಶ್ ಅವರು ಎರಡು ಶೇಡ್​ನ ಪಾತ್ರ ಮಾಡುತ್ತಿದ್ದಾರೆ. ಒಮ್ಮೆ ಕೆಟ್ಟವರಾಗಿ ಕಾಣಿಸುವ ಅವರು ಮತ್ತೊಮ್ಮೆ ಒಳ್ಳೆಯವರಂತೆ ನಟಿಸುತ್ತಾರೆ. ನೆಗೆಟಿವ್ ಪಾತ್ರಗಳಿಗೆ ಯಾವುದೇ ಸೀಮಾ ರೇಖೆ ಇಲ್ಲ. ಹೇಗೆ ಬೇಕಿದ್ದರೂ ಅದನ್ನು ಮಾಡಬಹುದು. ಕನ್ನಡದಲ್ಲಿ ನಾನು ಈ ರೀತಿ ಪಾತ್ರ ಮಾಡುತ್ತಿರುವುದು ಇದೇ ಮೊದಲು ಎಂದಿರುವ ಪೂಜಾ ಅವರು ಎರಡು ಶೇಡ್‌ನಲ್ಲಿ ಪಾತ್ರ ಮಾಡಲು  ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೂ ಏರುಪೇರು ಆಗದಂತೆ ನೋಡಿಕೊಳ್ಳಬೇಕಿತ್ತು ಎಂದಿರುವ ಅವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದು, ಇತ್ತೀಚಿಗೆ ಅವರು ಜೀ ಕುಟುಂಬ  ಅವಾರ್ಡ್ಸ್​ನಲ್ಲಿ  ಬೆಸ್ಟ್​ ವಿಲನ್​ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  ಸೀತಾಳ ಹೆಸರು ವೈಷ್ಣವಿ ಗೌಡ ಹಾಗೂ ಪ್ರಿಯಾ ಹೆಸರು ಮೇಘನಾ ಶಂಕರಪ್ಪ. ಮೇಘನಾ ಶಂಕರಪ್ಪ  'ಸೀತಾರಾಮ' ಸೀರಿಯಲ್​ಗೂ ಮುನ್ನ ಅವರು,  ನಟಿಸಿದ್ದು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.  ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು 'ಕಿನ್ನರಿ' ಧಾರಾವಾಹಿಯ ನಂತರ. ಮುಂದೆ 'ಕೃಷ್ಣ ತುಳಸಿ', 'ರತ್ನಗಿರಿ ರಹಸ್ಯ', 'ದೇವಯಾನಿ', 'ಸಿಂಧೂರ' ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ.  

ಇನ್ನು ವೈಷ್ಣವಿ ಗೌಡ   ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.  ಇವರ ಕಾಲೇಜು ಶಿಕ್ಷಣದ ಕುರಿತು ಹೇಳುವುದಾದರೆ, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ್ದಾರೆ.  ಪದವಿ ಅರ್ಧಕ್ಕೆ ಬಿಟ್ಟು, ಬಳಿಕ  ಬೆಂಗಳೂರು ವಿಶ್ವವಿದ್ಯಾನಿಲಯದ ದೂರಶಿಕ್ಷಣ ಮೂಲಕ ಪದವಿ ಪಡೆದಿದ್ದಾರೆ.  ಭರತನಾಟ್ಯ, ಕುಚಿಪುಡಿ ಮತ್ತು ಬೆಲ್ಲಿ ಡ್ಯಾನ್ಸಿಂಗ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ.  `ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ.  `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ   ನಿರೂಪಣೆ ಕೂಡ ಮಾಡಿದ್ದಾರೆ.  `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ನಟ ಹಗ್​ ಮಾಡಿದ ಖುಷಿ ತಾಳಲಾಗದೇ ಕುಸಿದು ಬಿದ್ದ ಕಾಲೇಜು ಯುವತಿ: ಶಾಕಿಂಗ್​ ವಿಡಿಯೋ ವೈರಲ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Aadi Lakshmi Purana Serial: ವಿರುದ್ಧ ದಿಕ್ಕಿನಲ್ಲಿ ಸಾಗುವ, ಒಬ್ಬರನ್ನೊಬ್ಬರು ಕಂಡರೆ ಆಗದವ್ರು ಮದುವೆಯಾಗುವ ಕಥೆ
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?