ಗಣೇಶನ ಹಬ್ಬಕ್ಕೆ ವಿಜಯ ರಾಘವೇಂದ್ರ ಮತ್ತು ಆ್ಯಂಕರ್ ಅನುಶ್ರೀ ಭರ್ಜರಿ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಥರಹೇವಾರಿ ಕಮೆಂಟ್ಸ್ ಹಾಕಿದ್ದಾರೆ.
ಈಗ ನಾಡಿನಾದ್ಯಂತ ಗೌರಿ-ಗಣೇಶನ ಹಬ್ಬದ ಸಂಭ್ರಮ, ಸಡಗರ. ಇಂದು ಗೌರಿಯನ್ನು ಮನೆತುಂಬಿಸಿಕೊಂಡರೆ, ನಾಳೆ ಗಣೇಶನ ಆಗಮನಕ್ಕೆ ಜನರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಹಬ್ಬ ಎಂದರೆ ಹಾಡು-ಕುಣಿತದ್ದೇ ಸಂಭ್ರಮ. ಅದರಲ್ಲಿಯೂ ಗಣೇಶನ ಹಬ್ಬ ಎಂದರೆ ನೃತ್ಯದ ಸೊಬಗೇ ಬೇರೆ. ಗಣೇಶನನ್ನು ಮೆರೆವಣಿಗೆಯಲ್ಲಿ ತರುವಾಗ ಡಾನ್ಸ್ಗೇ ಹೆಚ್ಚು ಮಹತ್ವ. ಅದೇನೇ ಇರಲಿ. ಇಲ್ಲಿ ಈಗ ಆ್ಯಂಕರ್ ಅನುಶ್ರೀ ಮತ್ತು ನಟ ವಿಜಯ ರಾಘವೇಂದ್ರ ಅವರು ಗೌರಿ-ಗಣೇಶನ ಹಬ್ಬಕ್ಕೂ ಮುನ್ನ ಮಾಡಿರುವ ಡಾನ್ಸ್ ರೀಲ್ಸ್ ಸಕತ್ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಸ್ಟೆಪ್ಗೆ ಭರ್ಜರಿ ಡಿಮಾಂಡ್ ಶುರುವಾಗಿದೆ.
ಹಿನ್ನೆಲೆಯಲ್ಲಿ ಮ್ಯೂಸಿಕ್ ಹಾಕಲಾಗಿದ್ದು, ಅದಕ್ಕೆ ತಕ್ಕಂತೆ ಅನುಶ್ರೀ ಮತ್ತು ವಿಜಯ ರಾಘವೇಂದ್ರ ಸ್ಟೆಪ್ ಮಾಡಿದ್ದಾರೆ. ಇದರಲ್ಲಿ ಗಣೇಶನ ರೀತಿ ಸೊಂಡಿಲಾಡಿಸಿರುವುದೂ ಸೇರಿದಂತೆ ವಿವಿಧ ಹಾಡುಗಳನ್ನು ಸ್ಟೆಪ್ನಲ್ಲಿ ಸೇರಿಸಲಾಗಿದೆ. ಇವರ ಡಾನ್ಸ್ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ. ಇದು ಸ್ಪೆಷಲ್ ಗಣೇಶ ಸ್ಟೆಪ್ಸ್ ಎಂಬ ಶೀರ್ಷಿಕೆ ಕೊಟ್ಟು ಇದನ್ನು ಶೇರ್ ಮಾಡಲಾಗಿದೆ. ಇದಕ್ಕೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ.
ಅಷ್ಟಕ್ಕೂ ಆ್ಯಂಕರ್ ಅನುಶ್ರೀ ಮತ್ತು ವಿಜಯ ರಾಘವೇಂದ್ರ ಇಬ್ಬರೂ ಡಾನ್ಸ್ನಲ್ಲಿ ಪಂಟರು. ಭರ್ಜರಿ ಸ್ಟೆಪ್ ಹಾಕಿದ್ದಾರೆ. ಅಂದಹಾಗೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮದಲ್ಲಿ ಅನುಶ್ರೀ ನಿರೂಪಕಿಯಾಗಿದ್ದರೆ, ವಿಜಯ ರಾಘವೇಂದ್ರ ಅವರು ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ. ಇನ್ನು ಅನುಶ್ರೀ ವಿಯಕ್ಕೆ ಬರುವುದಾದರೆ, ಇವರ ಮದುವೆಯ ವಿಷಯ ಸಕತ್ ಚರ್ಚೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಶಿವರಾಜ್ ಕುಮಾರ್ ಅವರು, ನಿನ್ನ ಮನಸ್ಸಲ್ಲಿ ಯಾರಾದ್ರೂ ಇದ್ದಾರೆ ಅಂದ್ರೆ ಹೇಳ್ಬಿಡು, ಅವ್ರ ಹತ್ರನೇ ಡೈರೆಕ್ಟರ್ ಮಾತಾಡಿ ಮದುವೆ ಮಾತುಕತೆ ಮುಗಿಸಿಬಿಡೋಣ ಅಂದಿದ್ದರು. ಅದಕ್ಕೆ ಅನುಶ್ರೀ ಅವರು, 'ಹಾಗೇನಿಲ್ಲ, ಮನಸ್ಸಲ್ಲಿ ಯಾರನ್ನೂ ಬಚ್ಚಿಟ್ಕೊಂಡಿಲ್ಲ.. ಆದ್ರೆ, ಮುಂದಿನ ವರುಷ ಪಕ್ಕಾ ಮದುವೆ ಆಗ್ತೀನಿ. ಆದ್ರೆ, ನಾನು ಮದುವೆಯಾದ್ರೆ ಮಳೆ-ಬೆಳೆ ಎಲ್ಲಾ ಕಡಿಮೆ ಆಗುತ್ತೆ..' ಅಂದು ನಕ್ಕಿದ್ದರು.
ಇಂದು ವಿಜಯ ರಾಘವೇಂದ್ರ ಅವರ ವಿಷಯಕ್ಕೆ ಬರುವುದಾದರೆ, ಪತ್ನಿ ಸ್ಪಂದನಾರ ನಿಧನದ ಕುರಿತು ಈಚೆಗಷ್ಟೇ ಅವರು ಮಾತನಾಡಿದ್ದರು. ಜೀವನದಲ್ಲಿ ಮೂವ್ ಆನ್ ಆಗು ಎಂದು ಒತ್ತಾಯ ಮಾಡುತ್ತಾರೆ. ಆದರೆ ಜೀವನದಲ್ಲಿ ಮುಂದೆ ಹೋಗಲು ನಮ್ಮದು ಮರೆತು ಹೋಗುವ ಸಂಬಂಧವಲ್ಲ, ಬಿಟ್ಟು ಮುಂದಕ್ಕೆ ಹೋಗುವ ಸಮಯ ಇದಲ್ಲ ಎಂದು ನಟ ವಿಜಯ್ ರಾಘವೇಂದ್ರ ಹೇಳಿದ್ದಾರೆ. ಜೀವನದಲ್ಲಿ ಏನು ಬಂದರೂ ಅದನ್ನು ಎದುರಿಸುತ್ತೇನೆ. ಜೀವನದವನ್ನು ಪ್ರಶ್ನೆ ಮಾಡಲು ಹೋಗುವುದಿಲ್ಲ. ಪ್ರಶ್ನೆ ಮಾಡಿದ್ರೆ ಬೇಸರ, ಕಣ್ಣೀರು ಜಾಸ್ತಿ ಆಗುತ್ತದೆ. ಅದಕ್ಕಾಗಿಯೇ ಪ್ರಶ್ನೆ ಮಾಡುವುದನ್ನೇ ಬಿಟ್ಟುಬಿಟ್ಟಿದ್ದೇನೆ. ಜೀವನದಲ್ಲಿ ಅಕ್ಸಪ್ಟೆನ್ಸ್ ಇರಬೇಕು. ಅದನ್ನು ನಾನು ಮಾಡಿಕೊಂಡಿದ್ದೇನೆ. ಜೀವನ ಕೊಡುವ ಉತ್ತರ ಎಂದಿದ್ದರು.
ಬಳಕುವ ಬಳ್ಳಿಯಂತಿರೋ ನಿವೇದಿತಾ ಆ ಭಾಗಕ್ಕೆ ಕತ್ತರಿ ಹಾಕಿಸಿಕೊಂಡ್ರಾ? ಫ್ಯಾನ್ಸ್‌ಗೆ ಇದೆಂಥ ಡೌಟು?