ಅತ್ತ ಸೀತಾಗೆ ಹೆಚ್ಚಾದ ಮದ್ವೆ ಒತ್ತಡ, ಇತ್ತ ಭಾರ್ಗವಿ ಮುಂದೆ ಬಯಲಾಯ್ತು ರಾಮನಾಟ: ಮುಂದೇನು?

Published : Nov 14, 2023, 01:54 PM IST
ಅತ್ತ ಸೀತಾಗೆ ಹೆಚ್ಚಾದ ಮದ್ವೆ ಒತ್ತಡ, ಇತ್ತ ಭಾರ್ಗವಿ ಮುಂದೆ ಬಯಲಾಯ್ತು ರಾಮನಾಟ: ಮುಂದೇನು?

ಸಾರಾಂಶ

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಸೀತಾ ರಾಮ ಸೀರಿಯಲ್​ ಕುತೂಹಲ ಘಟ್ಟಕ್ಕೆ ತಲುಪಿದೆ. ಅತ್ತ ಸೀತಾಳಿಗಾಗಿ ರಾಮ ವಿಲವಿಲ ಎನ್ನುತ್ತಿದ್ದರೆ, ಇತ್ತ ಸೀತಾಳ ಮದ್ವೆಗೆ ಒತ್ತಡ ಹೆಚ್ಚಾಗಿದೆ. ಮುಂದೇನು?  

ಕನ್ನಡ ಕಿರುತೆರೆಯ ಅತಿ ಹೆಚ್ಚು ಟಿಆರ್‌ಪಿ ಪಡೆದ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾ ರಾಮ ಧಾರಾವಾಹಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರಾವಾಹಿ ಸ್ವಲ್ಪ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಒಂಟಿಯಾಗಿ ಮಗಳೊಂದಿಗೆ ಸ್ವಾಭಿಮಾನದಿಂದ ಜೀವನ ನಡೆಸ್ತಿರೋ ಸೀತಾ, ಶ್ರೀಮಂತನಾದ್ರೂ ಸರಳ ಬದುಕನ್ನು ಇಷ್ಟಪಡುವ ರಾಮನ ಸ್ಟೋರಿ ಎಲ್ಲರಿಗೂ ಇಷ್ಟವಾಗ್ತಿದೆ. ಮಾತ್ರವಲ್ಲದೆ, ಈ ಧಾರಾವಾಹಿಯಲ್ಲಿ ಸಮಾಜಕ್ಕೆ ಹಲವಾರು ಉತ್ತಮ ಸಂದೇಶಗಳನ್ನು ನೀಡುತ್ತಿರುತ್ತಾರೆ. ಮಾತ್ರವಲ್ಲ ಕೆಲವೊಂದು ಅರ್ಥಗರ್ಭಿತ ಮಾತುಗಳು ಮನಮುಟ್ಟುವಂತಿರುತ್ತದೆ. ಸದ್ಯ ಸೀತಾರಾಮ ಸೀರಿಯಲ್‌ನಲ್ಲಿ ನಾಯಕಿ ಸೀತಾ ಹೆಣ್ಣಿನ ಜೀವನದ ಬಗ್ಗೆ ಹೇಳಿರೋ ಮಾತು ಎಲ್ಲರ ಮನ ಮುಟ್ಟುವಂತಿದೆ.

 ಸಿಂಗಲ್​ ಪೇರೆಂಟ್​ ಆಗಿರುವ ಸೀತಾ, ತನ್ನ ಕಾಯಿಲೆ ಪೀಡಿತ ಮಗಳನ್ನು ಸಾಕುವುದು ಒಂದೆಡೆಯಾದರೆ, ಈಕೆಗೆ ತನ್ನದೇ ಕಂಪೆನಿಯಲ್ಲಿ ಕೆಲಸ ಮಾಡುವ ರಾಮನ​ ಜೊತೆ  ಸ್ನೇಹವಿರುತ್ತದೆ. ರಾಮನಿಗೂ ಸೀತಾಳ ಮಗಳು ಸಿಹಿ ಎಂದರೆ ಅಪಾರ ಪ್ರೀತಿ. ಆದರೆ ರಾಮ ಬಿಲೇನಿಯರ್​ ಎನ್ನುವ ಸತ್ಯ ಸೀತಾಗೆ ತಿಳಿದಿಲ್ಲ. ಒಟ್ಟಿನಲ್ಲಿ ಸೀತಾ-ರಾಮ ಮತ್ತು ಸೀತಾಳ ಮಗಳು ಸಿಹಿಯ ನಡುವೆ ಸುತ್ತುವ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.  ನಾಯಕಿ ಸೀತಾ ಹಾಗೂ ನಾಯಕ ರಾಮ್ ಜೊತೆಗೆ ಮುದ್ದು ಪುಟಾಣಿ ಸಿಹಿಯೂ ಕೂಡಾ ಕಿರುತೆರೆ ವೀಕ್ಷಕರ ಮನಸ್ಸು ಕದ್ದು ಬಿಟ್ಟಿದ್ದಾಳೆ.

ಅಂಕಲ್​ ನಿಮ್ಗೆ ಯಾವ ಪಟಾಕಿ ಇಷ್ಟ? ಸೀತಾರಾಮ ಪುಟಾಣಿ ಸಿಹಿ ಪ್ರಶ್ನೆಗೆ ಡಿಕೆಶಿ ಹೇಳಿದ್ದೇನು?

ಸದ್ಯ ರಾಮನ ಚಿಕ್ಕಮ್ಮನಿಂದಾಗಿ ಸಿಹಿ ಕಿಡ್ನಾಪ್‌ ಆಗಿದ್ದಳು.  ಪಟಪಟ ಎಂದು ಅರಳು ಹುರಿದಂತೆ ಮಾತನಾಡುವ ಸಿಹಿ  ತನ್ನನ್ನು ಕಿಡ್ನಾಪ್‌ ಮಾಡಿದವರ ತಲೆ ತಿನ್ನುತ್ತಿದ್ದಳು. ಆದರೆ ಈಕೆಯನ್ನು ಹುಡುಕುವಲ್ಲಿ ರಾಮ ಸಫಲನಾಗಿದ್ದು, ಎಲ್ಲರೂ ಖುಷಿಯಿಂದ ಇರುವಾಗಲೇ ಸೀತಾ-ರಾಮರ ನಡುವಿನ ಲವ್​ ಸ್ಟೋರಿ ಶುರುವಾಗಿದೆ. ಇತ್ತ ಗರ್ಲ್​ಫ್ರೆಂಡ್​ ಮಾಡಿದ ಮೋಸದಿಂದ ಮದುವೆಯೇ ಬೇಡ ಎಂದು ಕುಳಿತಿದ್ದ ರಾಮನಿಗೆ ಸೀತಾಳ ಮೇಲೆ ತನಗೆ ಅರಿವಿಲ್ಲದಂತೆಯೇ ಪ್ರೀತಿ ಶುರುವಾಗಿದೆ. ಸೀತಾಳಿಗೆ ಇದ್ಯಾವುದರ ಅರಿವೇ ಇಲ್ಲದೇ, ಮಗಳ ಜೊತೆ ಖುಷಿಯಾಗಿದ್ದಾಳೆ. 

ರಾಮನ ಚಿಕ್ಕಮ್ಮ ಭಾರ್ಗವಿ ಇಲ್ಲಿ ವಿಲನ್​. ಆಕೆಗೆ ರಾಮ, ಸೀತಾಳನ್ನು ಪ್ರೀತಿಸುವ ವಿಷಯ ತಿಳಿದಿದೆ. ಆದ್ದರಿಂದ ಇದನ್ನು ತಪ್ಪಿಸಲು ಸಾಕಷ್ಟು ಹೆಣಗಾಟ ನಡೆಸಿದ್ದಾಳೆ. ಸೀತಾಳನ್ನು ಕಚೇರಿಯಿಂದ ವರ್ಗಾವಣೆ ಮಾಡುವ ಹುನ್ನಾರ ನಡೆಸಿದ್ದಾಳೆ. ಅತ್ತ ಸೀತಾ ಒಂಟಿತನಕ್ಕೆ ಬ್ರೇಕ್​ ಹಾಕಲು ಇಚ್ಛಿಸಿರೋ ಸೀತಾಳ ಅಪ್ಪ-ಅಮ್ಮ, ಆಕೆಯ ಮೇಲೆ ಇನ್ನೊಂದು ಮದುವೆಯ ಒತ್ತಡ ಹಾಕುತ್ತಿದ್ದಾರೆ. ತಮ್ಮ ಮೇಲೆ ಪ್ರೀತಿ ಇದ್ದರೆ, ನಾವು ನಿನಗೆ ಅಪ್ಪ-ಅಮ್ಮ ಆಗಿದ್ದೇ ಹೌದಾದರೆ ಮದ್ವೆಯಾಗು ಅಂತ ಹೇಳುತ್ತಿದ್ದಾರೆ. ಇದಕ್ಕೆ ಸೀತಾಳಿಗೆ ಮನಸ್ಸಿಲ್ಲ. ಒಟ್ಟಿನಲ್ಲಿ ಒಂದೆಡೆ ಸೀತಾಳಿಗೆ ಮದ್ವೆಯ ಒತ್ತಡ ಹೆಚ್ಚಾಗಿದ್ದರೆ, ಅತ್ತ ರಾಮ ಸೀತಾಳನ್ನು ಪ್ರೀತಿಸುತ್ತಿರುವುದನ್ನು ಬಯಲಾಗ್ತಿದೆ. ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ. 

ಕಿಡ್ನಾಪ್‌ ಆಗಿರೋ 'ಸೀತಾ-ರಾಮ' ಪುಟಾಣಿ ಸಿಹಿ ಬಣ್ಣಬಣ್ಣದ ಹೆಲಿಕಾಪ್ಟರ್‌ನಲ್ಲಿ ಪ್ರತ್ಯಕ್ಷ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ