ಬಿಕ್ಕಿ ಬಿಕ್ಕಿ ಅತ್ತ ಸಂತೋಷ್; ತಾಯಿ ಕೊಟ್ಟ ಧೈರ್ಯದಿಂದ 'ಈಗ ಗೇಮ್ ಸ್ಟಾರ್ಟ್‌' ಎಂದ ವರ್ತೂರ್!

By Vaishnavi Chandrashekar  |  First Published Nov 14, 2023, 12:12 PM IST

ತಾಯಿ ಕೊಟ್ಟ ಧೈರ್ಯದಿಂದ ಗೇಮ್ ಶುರು ಮಾಡಿದ ವರ್ತೂರ್ ಸಂತೋಷ್. ಕೈ ಮುಗಿದು ಆಸೆ ಮುಂದಿಟ್ಟ ತಾಯಿ....


ಕನ್ನಡ ಬಿಗ್ ಬಾಸ್ ಸೀಸನ್‌ನಲ್ಲಿ ಇದೇ ಮೊದಲು ಸಲ ಒಬ್ಬ ಸ್ಟ್ರಾಂಗ್ ಸ್ಪರ್ಧಿ ಹೊರ ನಡೆಯಬೇಕು ಎಂದು ತೀರ್ಮಾನ ಮಾಡಿರುವುದು. ಸ್ವತಃ ಕಿಚ್ಚ ಸುದೀಪ್ ಈ ಘಟನೆಯಿಂದ ಶಾಕ್‌ನಲ್ಲಿದ್ದಾರೆ. ಹುಲಿ ಉಗುರು ಘಟನೆ ನಡೆದ ನಂತರ ವರ್ತೂರ್ ಸಂತೋಷ್ ಕೊಂಚ ವೀಕ್ ಆಗಿಬಿಟ್ಟರು. ಸರಿಯಾಗಿ ಗೇಮ್ ಆಡಲು ಆಗುತ್ತಿಲ್ಲ ಗಮನ ಹರಿಸಲು ಆಗುತ್ತಿಲ್ಲ ನನ್ನನ್ನು ಹೊರಗೆ ಕಳುಹಿಸಿ ಎಂದು ಮನವಿ ಮಾಡಿಕೊಂಡರು. 34 ಲಕ್ಷಕ್ಕೂ ಹೆಚ್ಚು ವೋಟ್ ಪಡೆದಿರುವ ಸ್ಪರ್ಧಿ ವರ್ತೂರ್‌ ಯೋಚನೆ ಮಾಡಿ ತೀರ್ಮಾನ ಮಾಡಲಿ ಎಂದು ಬಗ್ ಬಾಸ್ ಅವಕಾಶ ಕೊಟ್ಟಿದ್ದಾರೆ. 

ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿಯೊಬ್ಬ ಸ್ಪರ್ಧಿಗೂ ಅವರವರ ಮನೆಯಿಂದ ಅಡುಗೆ ಸಿಹಿ ತಿಂಡಿಗಳನ್ನು ಕಳುಹಿಸಲಾಗಿತ್ತು ಆದರೆ ವರ್ತೂರ್‌ಗೆ ಏನೂ ಬಂದಿರಲಿಲ್ಲ. ಮತ್ತೆ ಬೇಸರದಲ್ಲಿ ಕಣ್ಣೀರಿಟ್ಟರು. ಕೆಲವು ಸಮಯಗಳ ನಂತರ ವರ್ತೂರ್ ತಾಯಿ ಕೈಯಲ್ಲಿ ತಿನಿಸುಗಳ ಬುಟ್ಟಿ ಹಿಡಿದು ಬಿಬಿ ಮನೆಗೆ ಎಂಟ್ರಿ ಕೊಟ್ಟರು. ತಾಯಿಯನ್ನು ಕಂಡು ಭಾವುಕರಾದ ಸಂತೋಷ್'ನನ್ನ ಕೈಯಲ್ಲಿ ಆಗ್ತಿಲ್ಲ ಅಮ್ಮ ಸತ್ಯವಾಗಲೂ ಆಗಲ್ಲ ಅಮ್ಮ' ಎಂದು ಕಣ್ಣೀರಿಡುತ್ತಾರೆ.

Tap to resize

Latest Videos

ವರ್ತೂರ್ ಸಂತೋಷ್‌ಗೆ ಮದ್ವೆ ಅಗಿದ್ಯಾ?; ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್! 

'ಬೀಡಮ್ಮಿ ಪ್ಲೀಸ್ ಅಳಬೇಡ. ಜನ ನಿನ್ನ ಹಿಂದೆ ಇರುವುದಕ್ಕೆ ಬೆಲೆ ಕೊಡಬೇಕು ನಾವು. ನೀನು ಅಳಬಾರದು. ಹೆಜ್ಜೆ ಮುಂದೆ ಇಟ್ಟಿರುವೆ ಅದಿಕ್ಕೆ ಹಿಂದೆ ಸರಿಯಬೇಡಿ. ಇದೊಂದು ಜಯಿಸಿಕೊಂಡು ಬಂದು ಬಿಡು ಕಂದ. ರಾಜ ಮಹಾರಾಜ ನಂತೆ ಆಗುತ್ತೀಯಾ. ಪ್ಲೀಸ್ ಅಮ್ಮ ಇಲ್ಲ ಅನ್ಬೇಡ' ಎಂದು ವರ್ತೂರ್ ತಾಯಿ ಧೈರ್ಯ ಹೇಳುತ್ತಾರೆ. ಕೆಲವು ಸಮಯಗಳ ಕಾಲ ತಾಯಿ ಜೊತೆ ಮಾತನಾಡಿದ ನಂತರ ವರ್ತೂರ್ ಸಮಾಧಾನ ಮಾಡಿಕೊಂಡು ಸರಿಯಾಗಿ ಯೊಚನೆ ಮಾಡುತ್ತಾರೆ. ತಾಯಿ ಹೊರ ಹೋಗುತ್ತಿದ್ದಂತೆ ಕಾಲಿಗೆ ನಮಸ್ಕಾರ ಮಾಡಿಕೊಂಡು ಕಳುಹಿಸಿ ಕೊಟ್ಟು 'ಈವಾಗ ಗೇಮ್ ಸ್ಟಾರ್ಟ್..' ಎನ್ನುತ್ತಾರೆ ವರ್ತೂರ್. 

'ದಯವಿಟ್ಟು ತಲೆ ಕೆಡಿಸಿಕೊಳ್ಳಬೇಡಿ ಜನರು ನಿಮ್ಮ ಪರವಾಗಿದ್ದಾರೆ. ನಿಮ್ಮ ಮನಸ್ಥಿತಿ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದು ನಮಗೆ ಗೊತ್ತಿದೆ ಆದರೆ ಕೊಂಚ ಧೈರ್ಯ ಮಾಡಿ ಆಟ ಶುರು ಮಾಡಿ. ಬೆಂಗಳೂರಿನಲ್ಲಿ ನಿಮ್ಮಿಂದ ಹಳ್ಳಿಕಾರ್ ನಡೆಯಬೇಕು' ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 

 

click me!