ಪ್ರೇಮಿಗಳ ದಿನದಂದು ರಾಮ್‌ನಿಗೆ ಸೀತಾ ಪ್ರಪೋಸ್ ಮಾಡಿದ್ರೆ ಗಗನ್ ಅಭಿಮಾನಿಗಳು ಹೀಗೆಲ್ಲಾ ಕಾಲೆಳೆಯೋದಾ?
ಸೀತಾ ರಾಮ ಸೀರಿಯಲ್ ಮೂಲಕ ಸಕತ್ ಫೇಮಸ್ ಆಗಿರುವವರು ಎಂದರೆ ಸೀತಾ ಮತ್ತು ರಾಮನ ಪಾತ್ರಧಾರಿಗಳಾಗಿರುವ ವೈಷ್ಣವಿ ಗೌಡ ಮತ್ತು ಗಗನ್ ಚಿನ್ನಪ್ಪ. ಇನ್ನು ಗಗನ್ ಚಿನ್ನಪ್ಪ ಅವರ ಸೀರಿಯಲ್ ಲೈಫ್ ಟಿ.ವಿ.ವೀಕ್ಷಕರಿಗೆ ಗೊತ್ತೇ ಇದೆ. ಇದರಲ್ಲಿ ರಾಮ್ ದೊಡ್ಡ ಬಿಜಿನೆಸ್ಮೆನ್. ಆದರೆ ತನ್ನದೇ ಕಂಪೆನಿಯಲ್ಲಿ ಯಾರಿಗೂ ತಿಳಿಯದಂತೆ ಸಾಮಾನ್ಯ ನೌಕರನಂತೆ ಕೆಲಸ ಮಾಡುತ್ತಿದ್ದು ಇದೀಗ ಸಿಕ್ಕಿಬಿದ್ದಿದ್ದಾನೆ. ಭಗ್ನಪ್ರೇಮಿಯಾಗಿದ್ದ ಈತ ಸದ್ಯ ಮಗಳ ಜೊತೆ ಒಂಟಿಯಾಗಿರುವ ಸೀತಾಳ ಪ್ರೀತಿಯ ಬಲೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾನೆ. ಆದರೆ ಇದೀಗ ಸೀತಾಳಿಗೂ ಒಳಗೊಳಗೇ ಪ್ರೀತಿ ಚಿಗುರಿದೆ. ಪ್ರೇಮಿಗಳ ದಿನವಾದ ಇಂದು ಸೀತಾ, ರಾಮ್ಗೆ ಪ್ರಪೋಸ್ ಮಾಡಿದ್ದಾಳೆ. ಇದರ ವಿಡಿಯೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದೆ.
ಅಸಲಿಗೆ ಇದು ಸೀತಾರಾಮ ಸೀರಿಯಲ್ನಲ್ಲಿ ಪ್ರಪೋಸ್ ಮಾಡಿದ್ದೂ ಅಲ್ಲ, ಕಾರಟಗಿಯಲ್ಲಿ ನಡೆದ ಪ್ರೇಮ ಸಂಗಮ ರಿಯಾಲಿಟಿ ಷೋನಲ್ಲಿ ಸೀತಾ ಮಂಡಿಯೂರಿ ರಾಮನಿಗೆ ಪ್ರೇಮ ನಿವೇದಿಸಿದ್ದಾಳೆ. ಇದರ ಪ್ರೊಮೋ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಸೀತಾ ಮಂಡಿಯೂರಿ ರಾಮ್ಗೆ ಪ್ರಪೋಸ್ ಮಾಡುವುದನ್ನು ನೋಡಬಹುದು. ಇದರಲ್ಲಿ ಸಿಹಿ ಕೂಡ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾಳೆ. ಸೀತಾ ರಾಮ ಸೀರಿಯಲ್ನಲ್ಲಿಯೂ ಹೀಗೇ ಆಗಲಪ್ಪ ಎಂದು ಕೆಲವರು ಆಶಿಸುತ್ತಿದ್ದರೆ, ನೀವಿಬ್ಬರೂ ನಿಜ ಜೀವನದಲ್ಲಿಯೂ ಒಂದೇ ಆಗಿ ಅನ್ನುತ್ತಿದ್ದಾರೆ ಇನ್ನು ಕೆಲವರು. ಆದರೆ ಹೀಗೆ ನೀವು ಪ್ರಪೋಸ್ ಮಾಡಿಬಿಟ್ಟರೆ ಪ್ರಾರ್ಥನಾ ಕಥೆ ಏನು ಎಂದು ರಾಮ್ ಪಾತ್ರಧಾರಿ ಗಗನ್ ಕಾಲೆಳೆಯುತ್ತಿದ್ದಾರೆ ವೀಕ್ಷಕರು.
ಅಷ್ಟಕ್ಕೂ ಪ್ರಾರ್ಥನಾ ಯಾರೆಂದು ಕೆಲವರಿಗೆ ತಿಳಿಯದೇ ಇರಬಹುದು. ಪ್ರಾರ್ಥನಾ ಎಂದರೆ ಗಗನ್ ಅವರ ಪ್ರೇಯಸಿ. ಕೆಲ ವರ್ಷಗಳಿಂದ ಇಬ್ಬರೂ ಡೇಟಿಂಗ್ನಲ್ಲಿ ಇದ್ದಾರೆ. ಈ ಹಿಂದೆ ಇಬ್ಬರೂ ಒಟ್ಟಿಗಿದ್ದ ಫೋಟೋ ಅನ್ನು ಗಗನ್ ಶೇರ್ ಮಾಡಿದ್ದರು. ಆಗ ಬೇಗ ಮದ್ವೆಯಾಗಿ ಎಂದು ಎಲ್ಲರೂ ಹಾರೈಸಿದ್ದರು. ಆಗ ಗಗನ್ ಅವರು, ನಾವಿಬ್ಬರೂ ಒಟ್ಟಿಗೆ ಇನ್ನಷ್ಟು ವರ್ಷ ಕಳೆಯೋದು ಬಾಕಿಯಿದೆ ಎಂದಿದ್ದರು.
ಅಂದಹಾಗೆ ಪ್ರಾರ್ಥನಾ ನಾಣಯ್ಯ ಅವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ನಟಿ ಶುಭ್ರಾ ಅಯ್ಯಪ್ಪ, ಶ್ವೇತಾ ಶ್ರೀವಾಸ್ತವ ಸೇರಿದಂತೆ ಅನೇಕ ನಟಿಯರಿಗೆ ಅವರು ಮೇಕಪ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. "ನನ್ನ ಹೃದಯಕ್ಕೆ ಖುಷಿ ತಂದೆ ವಿಶೇಷ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿನ್ನಷ್ಟೇ, ನಿನ್ನ ನಗುವಿನಷ್ಟೇ ಈ ದಿನ ಸುಂದರವಾಗಿರಲಿ. ನೀನು ನೀಡಿದ ಎಲ್ಲ ನೆನಪಿನ ಬುತ್ತಿಗಳಿಗೂ ಧನ್ಯವಾದಗಳು. ನಮಗೆ ಎಷ್ಟೇ ವಯಸ್ಸಾದರೂ, ಎಷ್ಟೇ ಹುಟ್ಟುಹಬ್ಬವನ್ನು ಆಚರಿಸಿದರೂ ಕೂಡ ನಾನು ಸದಾ ನಿನ್ನ ಜೊತೆಗೆ ಇರುತ್ತೇನೆ. ಇದು ನಮ್ಮ ಮೊದಲ ಫೋಟೋ. ನಾನು, ನೀನು ಭೇಟಿಯಾಗಿ 5 ವರ್ಷ ಆಯ್ತು" ಎಂದು ಗಗನ್ ಚಿನ್ನಪ್ಪ 2022ರ ಫೆಬ್ರುವರಿ ತಿಂಗಳಿನಲ್ಲಿ ಪೋಸ್ಟ್ ಹಾಕಿದ್ದಾಗಲೇ ಇವರಿಬ್ಬರ ಸ್ನೇಹ ಸಂಬಂಧ ಗುಟ್ಟಾಗಿತ್ತು. ಇದನ್ನೇ ಇಟ್ಟುಕೊಂಡು ಈಗ ನಟನ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು.
ಪ್ರೇಮಿಗಳ ದಿನದಂದೇ ವಿವಾಹ ವಾರ್ಷಿಕೋತ್ಸವ: 2ನೇ ಮಗನ ಮುಖ ರಿವೀಲ್ ಮಾಡಿದ ಅಗ್ನಿಸಾಕ್ಷಿ ನಟ...