ನಕ್ಕು ನಗಿಸೋ ತುಕಾಲಿ ಸಂತುಗಿದೆ ಈ ಗಂಭೀರ ಸಮಸ್ಯೆ, ಬಿಗ್‌ಬಾಸ್ ಮನೆಯಲ್ಲಿ ಇದನ್ನು ಹೇಗೆ ಮ್ಯಾನೇಜ್ ಮಾಡಿದ್ರು ಗೊತ್ತಾ?

ಬೀನ್‌ಬ್ಯಾಗ್‌ ಅನ್ನೇ ತನ್ನ ಸಿಂಹಾಸನ ಮಾಡ್ಕೊಂಡು ಬಿಗ್‌ಬಾಸ್‌ ಮನೇಲಿ ಎಲ್ಲರನ್ನೂ ನಕ್ಕು ನಗಿಸಿದ್ದ ತುಕಾಲಿ ಸಂತುಗೆ ಹೀಗೊಂದು ಗಂಭೀರ ಸಮಸ್ಯೆ ಇದೆಯಂತೆ..

Bigboss kannada contestant Tukali santhosh health issues

ತುಕಾಲಿ ಸಂತೋಷ್ ಅಂದರೆ ಕಾಮಿಡಿ. ಅವರ ಒಂದು ಲುಕ್, ಮ್ಯಾನರಿಸಂ ಸಾಕು ಎದುರಿರೋದರ ಮುಖದಲ್ಲಿ ನಗು ಚಿಮ್ಮಿಸೋದಕ್ಕೆ. ಕಾಮಿಡಿಯನ್ ಆಗಿ ಗುರುತಿಸಿಕೊಂಡಿದ್ದ ತುಕಾಲಿ ಸಂತುಗೆ ಬಿಗ್‌ಬಾಸ್ ಮನೆಗೆ ಹೋದ ಮೇಲೆ ಸಿಕ್ಕಿದ್ದು ನೆಕ್ಸ್ಟ್ ಲೆವೆಲ್ ಮರ್ಯಾದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ತುಕಾಲಿ ಸಂತೋಷ್‌, ಮನೆಯಲ್ಲಿದ್ದಷ್ಟು ದಿನ ಮನೆಮಂದಿಯನ್ನು ತಮ್ಮ ಕಾಮಿಡಿ ಮೂಲಕವೇ ನಗಿಸಿದ್ದಾರೆ. ಆದರೆ ಮನೆಯಲ್ಲಿದ್ದ ಅಷ್ಟೂ ದಿನ ಈ ಕಾಮಿಡಿಯನ್‌ಗೆ ಈ ಒಂದು ಗಂಭೀರ ಸಮಸ್ಯೆ ಇದೆ ಅನ್ನುವುದು ಗೊತ್ತೇ ಇರಲಿಲ್ಲ. ಏಕೆಂದರೆ ತುಕಾಲಿ ಈ ಬಗ್ಗೆ ಏನನ್ನೂ ಬಾಯಿಬಿಟ್ಟು ಹೇಳಿಲ್ಲ. ಹೀಗಾಗಿ ಯಾರಿಗೂ ಈ ಸಮಸ್ಯೆ ಬಗ್ಗೆ ಗೊತ್ತಾಗಲಿಲ್ಲ.

ಅಷ್ಟಕ್ಕೂ ಈ ಸಮಸ್ಯೆ ಇದೆ ಅನ್ನುವುದು ತುಕಾಲಿ ಸಂತು ಅವರಿಗೆ ಗೊತ್ತಾಗಿದ್ದರ ಹಿಂದೆಯೂ ಒಂದು ಇಂಟರೆಸ್ಟಿಂಗ್ ಸಂಗತಿ ಇದೆ. ಸಾಮಾನ್ಯವಾಗಿ ಏನಾದ್ರೂ ಸಮಸ್ಯೆ ಬರುವ ತನಕ ನಾವೆಲ್ಲ ಹೆಲ್ತ್ ಚೆಕ್‌ಅಪ್ ಮಾಡಿಸದೇ ಸುಮ್ಮನಿದ್ದು ಬಿಡುತ್ತೇವೆ. ಆದರೆ ಯಾವುದೋ ಹೊತ್ತಲ್ಲಿ ಮತ್ಯಾವುದೋ ಸಮಸ್ಯೆ ಬಂದಾಗ ಡಾಕ್ಟರ್ ಬಳಿ ಓಡ್ತೀವಿ. ಆಗ ಈ ಸಮಸ್ಯೆ ಏನು ಅಂತ ಪತ್ತೆ ಮಾಡಲು ಡಾಕ್ಟರ್ ಬೇರೆ ಬೇರೆ ಟೆಸ್ಟಿಗೆ ಹೇಳುತ್ತಾರೆ. ಆಗ ಬಾಡಿಯೊಳಗೆಲ್ಲೋ ಅವಿತಿರುವ ಕಳ್ಳ ಸಮಸ್ಯೆ ರಾಕ್ಷಸಾಕಾರ ತಾಳಿ ಎದುರು ನಿಲ್ಲುತ್ತೆ. ಆದರೆ ತುಕಾಲಿ ಅವರಿಗೆ ತನಗಿರುವ ಸಮಸ್ಯೆ ಏನು ಅಂತ ಗೊತ್ತಾಗಿದ್ದು ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡುವ ಕೆಲವು ಕ್ಷಣಗಳ ಹಿಂದೆ.

Latest Videos

ಆಟೋ ರಾಜ ಡ್ರೋನ್​ ಪ್ರತಾಪ್​: ಇದನ್ನೂ ನೀನೇ ರೆಡಿ ಮಾಡಿದ್ದಾ ಅಂತ ಕೇಳೋದಾ ನೆಟ್ಟಿಗರು?

ನಿಮಗೆಲ್ಲ ಗೊತ್ತಿರಬಹುದು, ಬಿಗ್‌ಬಾಸ್‌ಗೆ ಎಂಟ್ರಿಯಾಗುವ ಪ್ರತಿಯೊಬ್ಬ ಸ್ಪರ್ಧಿಗೂ ಆರೋಗ್ಯ ತಪಾಸಣೆ ಮಾಡಿ, ಅವರ ಹೆಲ್ತ್‌ ಕಂಡಿಷನ್‌ ಹೇಗಿದೆ ಎಂದು ಪರೀಕ್ಷೆ ಮಾಡಿ, ಬಂದ ವರದಿಯನ್ನು ಗಮನಿಸಿದ ಬಳಿಕವೇ ಇವರು ಬಿಗ್‌ ಬಾಸ್‌ ಪ್ರವೇಶಕ್ಕೆ ಅರ್ಹ ಎಂದಾಗ ಮಾತ್ರ ಒಳ ಬಿಡುತ್ತಾರೆ. ಅದೇ ರೀತಿ ತುಕಾಲಿ ಸಂತೋಷ್‌ ಅವರಿಗೂ ಹೆಲ್ತ್‌ ಚೆಕ್‌ಅಪ್‌ ಮಾಡಲಾಗಿತ್ತು. ಆ ಪರೀಕ್ಷೆಯಲ್ಲಿ ಅವರೊಳಗಿದ್ದ ಕಳ್ಳ ಸಮಸ್ಯೆಯೊಂದು ರಿವೀಲ್ ಆಗಿದೆ. ಅದು ಮತ್ತೇನೂ ಅಲ್ಲ, ಡಯಾಬಿಟೀಸ್‌.

ಯೆಸ್, ಬಿಗ್‌ಬಾಸ್ ಮನೆಯೊಳಗೆ ಹೋಗುವ ಹೊತ್ತಿಗೆ ತನಗೆ ಡಯಾಬಿಟಿಸ್ ಇದೆ ಅನ್ನೋದು ತುಕಾಲಿ ಅವರಿಗೆ ತಿಳಿದಿದೆ.

ಬಿಗ್‌ಬಾಸ್‌ ಸೀಸನ್‌ 10ರ ಫಿನಾಲೆ ಸ್ಪರ್ಧಿ, ತುಕಾಲಿ ಸಂತೋಷ್‌ ಬಿಗ್‌ ಮನೆಯಲ್ಲಿದ್ದಷ್ಟು ಹೊತ್ತು ಎಲ್ಲರನ್ನು ನಕ್ಕು ನಗಿಸಿದ್ದಾರೆ. ತಮ್ಮ ಕಾಮಿಡಿ ಮ್ಯಾನರೀಸಂನಿಂದಲೇ ತಮಾಷೆ ಮಾಡಿದ್ದಾರೆ. ಆದರೆ, ಹೀಗಿರುವ ತುಕಾಲಿ ಸಂತೋಷ್‌ಗೆ ಡಯಾಬಿಟೀಸ್ ಸಮಸ್ಯೆ ಇದೆ. ಬಿಗ್‌ ಬಾಸ್‌ ಮನೆಗೆ ಹೋಗುವವರೆಗೂ ತನಗೆ ಇಂಥದ್ದೊಂದು ಸಮಸ್ಯೆ ಇದೆ ಅಂತ ಅವರಿಗೆ ಗೊತ್ತೇ ಇರಲಿಲ್ಲ. ಅದರ ಯಾವ ಲಕ್ಷಣಗಳೂ ಅವರಿಗೆ ಕಂಡಿರಲಿಲ್ಲ. ಡಾಕ್ಟರ್‌ ಹೇಳಿದ ಬಳಿಕ ಕುಸಿದು ಬಿದ್ದ ಭಾವ ಅವರನ್ನು ಕಾಡಿತ್ತು. ಅವರೇ ಶಾಕ್‌ಗೆ ಒಳಗಾದರು.

ಮಾಲಿವುಡ್‌ ನಟನ ಜೊತೆ ಅನುಶ್ರೀ ಮದ್ವೆ? ಕೊನೆಗೂ ಮೌನ ಮುರಿದ ಉನ್ನಿ ಮುಕುಂದನ್ ಹೇಳಿದ್ದೇನು?

'ನಾನು ದಡ್ಡ. ಒಳಗಡೆ ಹೋದಮೇಲೆಯೇ ನನಗೆ ಗೊತ್ತಾಯ್ತು ನನಗೆ ಶುಗರ್‌ ಇದೆ ಅಂತ. ಡಾಕ್ಟರ್‌ ಸರ್ಟಿಫಿಕೇಟ್‌ ಕೊಟ್ಟ ತಕ್ಷಣ ಒಂದು ಕ್ಷಣ ಕುಸಿದು ಬಿದ್ದೆ. ಬಿಗ್‌ ಬಾಸ್‌ಗೆ ಹೋಗೋದು ಹೇಗೆ? ಈ ಲೆವೆಲ್‌ಗೆ ಶುಗರ್‌ ಇದೆ ಅಂತ. ನನಗೆ ಶಾಕ್.‌ ದೇವ್ರಾಣೆಗೂ ನನಗೆ ಅದರ ಲಕ್ಷಣಗಳಿರಲಿಲ್ಲ. ಆಮೇಲೆ ಡಾಕ್ಟರ್ ಹೇಳಿದ್ರು, ಶುಗರ್‌ ಮನುಷ್ಯನಿಗೆ ಇದ್ದೇ ಇರುತ್ತೆ. ಸ್ವಲ್ಪ ರೈಸ್‌ ಆಗಿದೆ. ಮೆಡಿಸಿನ್‌ ಬರೆದು ಕೊಡ್ತೀನಿ. ಹುಷಾರಾಗ್ತೀರಿ ಅಂದ್ರು. ದೈರ್ಯವಾಗಿ ಹೋದೆ” ಎಂದು ತುಕಾಲಿ ತಮ್ಮ ಆ ಅನುಭವವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ 'ಮನುಷ್ಯನಿಗೆ ಎಂಥ ಕಾಯಿಲೆ ಕಸಾಲೆ ಇದ್ರೂ ಬಿಗ್‌ ಬಾಸ್‌ಗೆ ಹೋಗಿ ಹುಷಾರ್‌ ಮಾಡಿಕೊಂಡು ಬರಬಹುದು. ಬಿಗ್‌ ಬಾಸ್‌ ಒಂದು ದೊಡ್ಡ ಆಸ್ಪತ್ರೆ ಇದ್ದಂಗೆ. ಹೆಲ್ತ್‌ ಬಗ್ಗೆ ಎಷ್ಟು ಕೇರ್‌ ಮಾಡ್ತಾರೆ ಗೊತ್ತಾ? ನನ್ನ ಹೆಂಡತಿನೂ ಟೈಮ್‌ಗೆ ಸರಿಯಾಗಿ ಮಾತ್ರೆ ತರಲ್ಲ. ಬಿಗ್‌ಬಾಸ್‌ನಲ್ಲಿ ಇನ್‌ ಟೈಮ್‌ಗೆ ಮಾತ್ರೆಗಳು ಬರುತ್ತಿದ್ವು. ನನಗೆ ತಲೆ ತಿರುಗುತ್ತಿದೆ. ಆಗ್ತಾಯಿಲ್ಲ. ನನಗೆ ಕುಡಿಯೋಕೆ ಹಾಲು ಕಳಿಸಿಕೊಡಿ ಅಂದ್ರೆ, 4 ಲೀಟರ್‌ ಹಾಲು ಬರ್ತಿತ್ತು. ಆರೋಗ್ಯದ ಬಗ್ಗೆ ಅತೀ ಕಾಳಜಿ. ಸಣ್ಣ ಪುಟ್ಟ ಸಮಸ್ಯೆಯಾದ್ರೂ ಟ್ರೀಟ್‌ಮೆಂಟ್‌ ಕೊಡುತ್ತಿದ್ದರು' ಎಂದು ಬಿಗ್‌ಬಾಸ್ ಮನೆಯ ಕಾಳಜಿ ಬಗ್ಗೆ ಮಾತನಾಡಿದ್ದಾರೆ ತುಕಾಲಿ.

vuukle one pixel image
click me!
vuukle one pixel image vuukle one pixel image