ಅಗ್ನಿಸಾಕ್ಷಿ ಮೂಲಕ ಖ್ಯಾತಿ ಪಡೆದಿರುವ ವಿಜಯ್ ಅವರಿಗೆ ಇಂದು ವಿವಾಹ ವಾರ್ಷಿಕೋತ್ಸವ. ಈ ಸಮಯದಲ್ಲಿ ತಮ್ಮ ಎರಡನೆಯ ಮಗುವಿನ ಮುಖವನ್ನೂ ರಿವೀಲ್ ಮಾಡಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸಿದ್ದಾರ್ಥ್ ಅಲಿಯಾಸ್ ವಿಜಯ್ ಅವರು ಇದೇ ಮೊದಲ ಬಾರಿಗೆ ತಮ್ಮ ಮಗುವಿನ ಮುಖವನ್ನು ರಿವೀಲ್ ಮಾಡಿದ್ದಾರೆ. ಪ್ರೇಮಿಗಳ ದಿನದಂದೇ ಚೈತ್ರಾ ಶ್ರೀನಿವಾಸ್ ಜೊತೆ ಮದುವೆಯಾಗಿದ್ದ ವಿಜಯ್ ಸೂರ್ಯ ಅವರಿಗೆ ಇಂದು ಐದನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಸಂದರ್ಭದಲ್ಲಿ ತಮ್ಮ ಎರಡನೆಯ ಮಗುವಿನ ಮುಖವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ವಿಜಯ್ ಮತ್ತು ಚೈತ್ರಾ ಎರಡನೆಯ ಮಗುವಿನ ಪಾಲಕರಾಗಿದ್ದರು. ಅವರಿಗೆ ಇದಾಗಲೇ ಮೂರೂವರೆ ವರ್ಷದ ಸೋಹನ್ ಎಂಬ ಮಗ ಕೂಡ ಇದ್ದಾನೆ. 1 ಜನವರಿ 2020 ರಂದು ವಿಜಯ್ ಸೂರ್ಯ ಪತ್ನಿ ಚೈತ್ರಾ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಈ ಸಂತೋಷದ ವಿಚಾರವನ್ನು ವಿಜಯ್ ಸೂರ್ಯ ತಮ್ಮ ಮೊದಲ ವರ್ಷದ ಮದುವೆ ವಾರ್ಷಿಕೊತ್ಸವದಂದು ಹಂಚಿಕೊಂಡಿದ್ದರು. 2ನೇ ಮಗುವಿನ ಹೆಸರು ಕಾರ್ತಿಕೇಯ ಸೂರ್ಯ ಎಂದು ಹೆಸರು ಇಡಲಾಗಿದೆ. ಇದೀಗ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗಿರುವ ಫೋಟೋ ಶೇರ್ ಮಾಡಿರುವ ನಟ, ಹ್ಯಾಪಿ ಆ್ಯನಿವರ್ಸರಿ ಬಾಬಾ ಎಂದು ಪತ್ನಿಗೆ ವಿಷ್ ಮಾಡಿದ್ದಾರೆ.
undefined
ಅಂದಹಾಗೆ ವಿಜಯ್ ಅವರು ಇದೀಗ ಬೆಳ್ಳಿ ಪರದೆಯ ಮೇಲೆ ಮಿಂಚುತ್ತಿದ್ದರೂ ಇವರಿಗೆ ಸಕತ್ ಹೆಸರು ತಂದುಕೊಟ್ಟದ್ದು, ‘ಅಗ್ನಿಸಾಕ್ಷಿ’ ಸೀರಿಯಲ್. ಅಗ್ನಿಸಾಆಆಆಆಆಆಕ್ಷಿ ಎಂದು ರಾಗ ಎಳೆಯುತ್ತಲೇ ಎಲ್ಲರ ಮನ ಗೆದ್ದಿದ್ದ ಧಾರಾವಾಹಿಯಲ್ಲಿ ಇವರು ನಾಯಕ ಸಿದ್ಧಾರ್ಥ್ ಪಾತ್ರ ಮಾಡಿದ್ದರು. ಧಾರಾವಾಹಿಯಲ್ಲಿ ವಿಜಯ್ ಸೂರ್ಯ ಅವರಿಗೆ ವೈಷ್ಣವಿ ಗೌಡ ನಾಯಕಿಯಾಗಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ನೋಡಿ ವೈಷ್ಣವಿ ಹಾಗೂ ವಿಜಯ್ ಸೂರ್ಯ ಮದುವೆ ಆಗುತ್ತಾರೆ ಎಂದುಕೊಂಡವರೇ ಹೆಚ್ಚು. ವಿಜಯ್ ಸೂರ್ಯ ಅಮ್ಮ ನೋಡಿದ ತಮ್ಮ ದೂರದ ಸಂಬಂಧಿ ಚೈತ್ರಾ ಎಂಬುವರನ್ನು 2019 ಫ್ರೆಬ್ರವರಿಯಲ್ಲಿ ಮದುವೆ ಆಗಿ ತಮ್ಮ ಮದುವೆ ಗಾಸಿಪ್‌ಗೆ ಫುಲ್ ಸ್ಟಾಪ್ ಇಟ್ಟಿದ್ದರು.
ಇದೀಗ ತೆಲುಗು ಸೀರಿಯಲ್ ಜೊತೆಗೆ ಸಿನಿಮಾ ಮಾಡುತ್ತಾ ಆ್ಯಕ್ಟೀವ್ ಆಗಿದ್ದಾರೆ. ಸದ್ಯ ‘ನಮ್ಮ ಲಚ್ಚಿ’ ಎಂಬ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ. ಇದಾಗಲೇ ಬೆಳ್ಳಿ ಪರದೆಗೂ ಎಂಟ್ರಿ ಕೊಟ್ಟಿರೋ ವಿಜಯ್, ‘ಡಿಟೆಕ್ಟಿವ್ ತೀಕ್ಷ್ಣ’ ಎಂಬ ಸಿನಿಮಾದಲ್ಲಿ ವಿಜಯ್ ನಟಿಸಿದ್ದಾರೆ. ವಿಜಯ್ ಸೂರ್ಯ 2012ರಲ್ಲಿ ಕ್ರೇಜಿ ಲೋಕ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಪದಾರ್ಪಣೆ ಮಾಡಿ ನಂತರ ಇಷ್ಟಕಾಮ್ಯ, ಕದ್ದುಮುಚ್ಚಿ, ಗಾಳಿಪಟ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ವಿಜಯ್ ಅವರು ಎರಡನೆಯ ಮಗು ಹುಟ್ಟಿದ್ದ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಶೂಟಿಂಗ್ನಲ್ಲಿದ್ದರು. ಈ ಬಗ್ಗೆ ಮಾಹಿತಿ ನೀಡಿದ್ದ ಅವರು, ನನ್ನ ಬಾವ ಫೋನ್ ಮಾಡಿ ಚೈತ್ರಾಗೆ ಸ್ವಲ್ಪ ನೋವು ಶುರುವಾಗಿದೆ. ಮೈನರ್ ಚೆಕಪ್‌ಗೋಸ್ಕರ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದರು. 15 ನಿಮಿಷ ಆದಮೇಲೆ ನನ್ನ ಶೂಟಿಂಗ್ ಮುಗಿದಿತ್ತು. ಆಗ ಅವರು ಗಂಡು ಮಗು ಹುಟ್ಟಿದೆ ಅಂತ ಮೆಸೇಜ್ ಮಾಡಿದ್ರು. ಆ ಸಮಯದಲ್ಲಿ ನಾನು ಚೈತ್ರಾ ಜೊತೆ ಇರಬೇಕು ಎನ್ನೋದಿತ್ತು. ಡೆಲಿವರಿ ದಿನಾಂಕ ಇನ್ನೂ ಲೇಟ್ ಇದ್ದಿದ್ದರಿಂದ ಆ ಅವಕಾಶ ನನಗೆ ಸಿಗಲಿಲ್ಲ ಎಂದಿದ್ದರು.
ಆಟೋ ರಾಜ ಡ್ರೋನ್ ಪ್ರತಾಪ್: ಇದನ್ನೂ ನೀನೇ ರೆಡಿ ಮಾಡಿದ್ದಾ ಅಂತ ಕೇಳೋದಾ ನೆಟ್ಟಿಗರು?