ಮದುವೆಯೇ ಬೇಡ ಎಂದು ನಿರ್ಧರಿಸಿದ್ದಾಳೆ ಸೀತಾ. ನಿನ್ನಂಥೋಳು ರಾಮ್ಗೆ ಬೇಡ ಎನ್ನುತ್ತಿದ್ದಾರೆ ಸೀರಿಯಲ್ ಪ್ರೇಮಿಗಳು. ಇದೇನಿದು ಟ್ವಿಸ್ಟ್?
ಸೀತಾರಾಮರ ಮದುವೆಗೆ ಇದ್ದ ಎಲ್ಲಾ ಅಡೆತಡೆಗಳೂ ಹೋಗಿ ಮದುವೆ ನಿರ್ವಿಘ್ನವಾಗಿ ನಡೆಯುತ್ತಿದೆ. ಇನ್ನೇನು ಸೀತಾ ಮತ್ತು ರಾಮರ ಮದುವೆ ನಡೆಯುವುದೊಂದೇ ಬಾಕಿ. ಇದಾಗಲೇ ಎಲ್ಲಾ ಸಂಪ್ರದಾಯಗಳು ನಡೆದಿವೆ. ಮದುವೆಯ ಸಂಪ್ರದಾಯದಲ್ಲಿ ಒಂದಾಗಿರುವ ಕಾಶಿಯಾತ್ರೆ ಪದ್ಧತಿಯೂ ನಡೆಯುತ್ತಿದೆ. ರಾಮ್ ಕಾಶಿಯಾತ್ರೆಗೆ ಹೊರಡಲು ಸಿದ್ಧನಾಗಿದ್ದಾನೆ. ಎಲ್ಲರೂ ವರನನ್ನು ಅಣಕಿಸುತ್ತಿದ್ದಾರೆ. ಎಲ್ಲೆಡೆ ತಮಾಷೆಯ ವಾತಾವರಣ. ತನ್ನ ಮನದನ್ನೆ ತನಗೆ ಸಿಗುತ್ತಾಳೆ ಎನ್ನುವ ಖುಷಿ ರಾಮ್ಗೆ. ಇಲ್ಲಿಯವರೆಗೆ ಸೀತಾಳೂ ತುಂಬಾ ಖುಷಿಯಾಗಿಯೇ ಇದ್ದಳು. ಆದರೆ ಈಗ ಏಕಾಏಕಿಯಾಗಿ ಸಿಟ್ಟಿಗೆದ್ದಿದ್ದಾಳೆ.ಮದುವೆಯೇ ಬೇಡ ಎನ್ನುತ್ತಿದ್ದಾಳೆ. ಸುಳ್ಳಿನ ಆಧಾರದ ಮೇಲೆ ನಡೆಯುವ ಈ ಮದುವೆ ನನಗೆ ಬೇಡ, ನಾನು ಈ ಮದುವೆಯಾಗಲು ಸಿದ್ಧವೇ ಇಲ್ಲ ಎನ್ನುತ್ತಲೇ ಕನ್ನಡಿಯ ಮುಂದೆ ನಿಂತು ಅಳುತ್ತಿದ್ದಾಳೆ. ಮದುವೆಯ ಮನೆಯಿಂದ ಹೊರಕ್ಕೆ ಹೋಗಲು ಸನ್ನದ್ಧಳಾಗಿದ್ದಾಳೆ. ಅರೆ ಇದೇನಿದು ಟ್ವಿಸ್ಟ್?
ಹೌದು. ಕುತೂಹಲದ ತಿರುವಿನಲ್ಲಿ ಸೀರಿಯಲ್ ನಿಂತಿದೆ. ಅಷ್ಟಕ್ಕೂ ಸೀತಾಳಿಗೆ ಆಗಿದ್ದು ಇನ್ನೇನೂ ಅಲ್ಲ. ಮನೆಯ ಬಂದಿದ್ದ ನೆಂಟರ ಎದುರು ತಾತಾ, ಸೀತಾಳ ಬಳಿ ಒಂದು ವರ್ಷದ ಒಳಗೆ ಸೀತಾ ಮುದ್ದಾದ ಮಗುವನ್ನು ಹೆತ್ತು ಕೊಡುತ್ತಾಳೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಸೀತಾಳಿಗೆ ಬೇಸರವಾಗಿದೆ. ಅಷ್ಟಕ್ಕೂ ಇದು ಭಾರ್ಗವಿ ಮಾಡಿರುವ ತಂತ್ರ. ಇದಾಗಲೇ ತಾನು ಮಗುವನ್ನು ಹೇರುವುದಿಲ್ಲ. ಸಿಹಿಯೇ ತನಗೆ ಎಲ್ಲಾ ಎಂದು ಸೀತಾ ಹೇಳಿದ್ದಳು. ಈ ಬಗ್ಗೆ ರಾಮ್ಗೂ ಸ್ಪಷ್ಟಪಡಿಸಿದ್ಲು. ತಾತನ ಬಳಿಯೂ ಮಾತನಾಡಿದ್ದಳು. ಆದರೆ ಚಿಕ್ಕಿ ಭಾರ್ಗವಿ ಇದನ್ನೇ ತನ್ನ ಬಂಡವಾಳ ಮಾಡಿಕೊಂಡು ತಾತನ ತಲೆಯನ್ನು ತಿರುಗಿಸಿದ್ದಾಳೆ. ಮದುವೆಗೆ ನೆಂಟರು ಬಂದಾಗ ಅವರು ಬೇಗ ಒಂದು ಗಂಡುಮಗು ಹಡೆದು ಕೊಡು ಎಂದಾಗ, ತಾತ ದೇಸಾಯಿ, ಯಾವ ಮಗುವಾದ್ರೂ ಪರವಾಗಿಲ್ಲ... ಒಂದು ವರ್ಷದಲ್ಲಿ ಹಡೆದು ಕೊಡುತ್ತಾಳೆ ಎಂದಿದ್ದಾನೆ.
undefined
ಮಕ್ಕಳನ್ನ ಅಗತ್ಯಕ್ಕಿಂತ ಹೆಚ್ಚು ಮುದ್ದು ಮಾಡಿದ್ರೆ ಹೀಗೇ ಆಗೋದು! ಮೊದ್ಲೇ ಈ ಕೆಲ್ಸ ಮಾಡಿದ್ರೆ ಆಗ್ತಿರಲಿಲ್ವಾ?
ಇದನ್ನು ಕೇಳಿ ಸೀತಾಗೆ ಶಾಕ್ ಆಗಿದೆ. ತಾತನಿಗೆ ಮೊದಲೇ ಸ್ಪಷ್ಟಪಡಿಸಿದ್ದೇನೆ. ಸಿಹಿ ಅಲ್ಲದೇ ನನ್ನ ಬಾಳಲ್ಲಿ ಮತ್ತೊಂದು ಮಗು ಬರುವುದು ತನಗೆ ಇಷ್ಟವಿಲ್ಲ ಎಂದು. ಈಗಲೇ ನಾನು ತಾತನ ಬಳಿ ಮಾತನಾಡುತ್ತೇನೆ ಎಂದು ಮದುವೆ ಶಾಸ್ತ್ರದ ಮಧ್ಯೆಯೇ ಎದ್ದು ಹೋಗಿದ್ದಾಳೆ. ಅವಳನ್ನು ತಡೆದ ಭಾರ್ಗವಿ ಸೀತಾಳಿಗೆ ಚೆನ್ನಾಗಿ ಬಯ್ದು ಬಾಯಿ ಮುಚ್ಚಿಸಿದ್ದಾಳೆ. ಆದರೆ ಮಗುವನ್ನು ಹೆರುವುದು ನನ್ನಿಂದ ಸಾಧ್ಯವಿಲ್ಲ, ಸಿಹಿಯನ್ನು ಬಿಟ್ಟು ಬೇರೆ ಮಗು ನನಗೆ ಬೇಡ. ತಾತನಿಗೆ ಈ ವಿಷಯ ಗೊತ್ತಿಲ್ಲದೇ ಮಗು ಬೇಕು ಎನ್ನುತ್ತಿದ್ದಾರೆ. ಈ ಸುಳ್ಳಿನ ನೆಲೆಯ ಮೇಲೆ ನಾನು ಮದುವೆಯಾಗಲು ಸಾಧ್ಯವಿಲ್ಲ ಎಂದು ಸೀತಾ ಮದುವೆ ಮಂಟಪದಿಂದ ಹೊರಕ್ಕೆ ಬಂದು ಎಲ್ಲರ ಎದುರು ಈ ವಿಷಯ ಹೇಳಲು ಹಾತೊರೆಯುತ್ತಿದ್ದಾಳೆ. ಮದುವೆಗೆ ಸುತರಾಂ ನಾನು ಒಪ್ಪುವುದಿಲ್ಲ. ಈ ಮದುವೆ ಬೇಡ ಎನ್ನುತ್ತಿದ್ದಾಳೆ.
ಇದನ್ನು ಕೇಳಿ ನೆಟ್ಟಿಗರು ಗರಂ ಆಗಿದ್ದಾರೆ. ಥೂ ನಿನ್ನ ಜನ್ಮಕ್ಕೆ ಎಂದು ಸೀತಾಳಿಗೆ ಉಗಿಯುತ್ತಿದ್ದಾರೆ. ನಿನ್ನದು ಓವರ್ ಆಯ್ತು. ಸಿಹಿಗೆ ತಂಗಿನೋ, ತಮ್ಮನೋ ಬಂದ್ರೆ ಏನು ಕಷ್ಟ? ಅವರಿಗೂ ಅವರ ಮನೆಯ ಕರುಳಕುಡಿ ಇರಬೇಕು ಎನ್ನುವ ಆಸೆ ಇರಲ್ವಾ? ರಾಮ್ನಿಂದ ಮಗುವನ್ನು ಪಡೆಯಲು ನಿನಗೇನು ಸಮಸ್ಯೆ? ಇಲ್ಲಿಯವರೆಗೆ ನಿನ್ನ ಬೆರಳ ತುದಿಯಲ್ಲಿ ರಾಮ್ನನ್ನು ಕುಣಿಸಿದ್ದು ಸಾಕಾಗಲಿಲ್ವಾ? ನಿನ್ನಂಥೋಳು ರಾಮ್ಗೆ ಸರಿಯಾಗಲ್ಲ, ಮೊದಲು ತೊಲಗು ಎಂದು ಒಂದೇ ಸಮನೆ ಸೀತಾಳ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮುಂದೇನಾಗುತ್ತದೆಯೋ ಕಾದು ನೋಡಬೇಕಿದೆ.
ನಾಯಕ ತೊಡೆ ಮೇಲೆ ಕೈಯಿಟ್ಟಾಗ ಪವಿತ್ರಾ ಗೌಡ ರಿಯಾಕ್ಷನ್ ಹೇಗಿತ್ತು? ಘಟನೆ ವಿವರಿಸಿದ ನಿರ್ದೇಶಕಿ ಚಂದ್ರಕಲಾ