Seetarama Serial: ಸೀತಾಗೆ ಗೊತ್ತಾಯ್ತು ಸುಬ್ಬಿಯ ಸತ್ಯ: ಸೀತಾರಾಮ ಸೀರಿಯಲ್​ ಮುಕ್ತಾಯ?

Published : May 20, 2025, 03:08 PM ISTUpdated : May 20, 2025, 03:32 PM IST
Seetarama Serial: ಸೀತಾಗೆ ಗೊತ್ತಾಯ್ತು ಸುಬ್ಬಿಯ ಸತ್ಯ: ಸೀತಾರಾಮ ಸೀರಿಯಲ್​ ಮುಕ್ತಾಯ?

ಸಾರಾಂಶ

ಜೀ ಕನ್ನಡದ 'ಸೀತಾರಾಮ' ಧಾರಾವಾಹಿಯಲ್ಲಿ ಸಿಹಿಯ ರೂಪದಲ್ಲಿರುವ ಸುಬ್ಬಿಯ ನಿಜವಾದ ಗುರುತು ಬಯಲಾಗಿದೆ. ಸೀತಾಳಿಗೆ ಸುಬ್ಬಿಯ ನಿಜಸ್ಥಿತಿ ತಿಳಿದಿದ್ದು, ಮುಂದಿನ ಕಥಾವಸ್ತುವಿನ ತಿರುವುಗಳ ಬಗ್ಗೆ ಕುತೂಹಲ ಮೂಡಿದೆ. ಈ ಬೆಳವಣಿಗೆಯ ನಂತರ ಕಥೆ ಹೇಗೆ ಸಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜೀ ಕನ್ನಡದ ಬಹುತೇಕ ಸೀರಿಯಲ್​ಗಳು ಮುಕ್ತಾಯದ ಹಂತದಲ್ಲಿದೆ. ಅತ್ತ ಶ್ರೀರಸ್ತು ಶುಭಮಸ್ತು, ಮತ್ತೊಂದೆಡೆ ಪುಟ್ಟಕ್ಕನ ಮಕ್ಕಳು ಹಾಗೂ ಇದೀಗ ಸೀತಾರಾಮ ಎಲ್ಲ ಸೀರಿಯಲ್​ಗಳೂ ಕ್ಲೈಮ್ಯಾಕ್ಸ್​ ತಲುಪಿವೆ. ಆದರೆ ಸೀರಿಯಲ್​ ಎಂದರೆ ಅಷ್ಟು ಬೇಗ ಮುಗಿಸುವ ವಸ್ತುವಲ್ಲ ಬಿಡಿ.  ಇನ್ನೇನು ಎಲ್ಲವೂ ಗೊತ್ತಾಯಿತು, ವಿಲನ್​ ಬಂಡವಾಳ ಬಯಲಾಯ್ತು. ಇನ್ನೇನು ಎಲ್ಲವೂ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿಯೇ ಅದಕ್ಕೊಂದು ಟ್ವಿಸ್ಟ್​ ಕೊಟ್ಟು ಇನ್ನೊಂದೆರಡು ವರ್ಷ ಟಿಆರ್​ಪಿಗೆ ಅನುಗುಣವಾಗಿ ಚ್ಯೂಯಿಂಗ್​ ಗಮ್​ನಂತೆ ಎಳೆಯುವುದೇ ಸೀರಿಯಲ್​ಗಳು. ಈಗ ಬಹುತೇಕ ಧಾರಾವಾಹಿಗಳ ಸ್ಥಿತಿಯೂ ಅದೇ ಆಗಿದೆ. ವಿಲನ್​ಗಳ ಬಂಡವಾಳ ಬಯಲಾಗಿದ್ದರೂ, ಅದನ್ನು ಪೆದ್ದು ನಾಯಕನಿಗೆ ಹೇಳುವ ಸ್ಥಿತಿಯಲ್ಲಿ ಮನೆಮಂದಿ ಇಲ್ಲ. ಇತ್ತ ಅಮೃತಧಾರೆಯಲ್ಲಿ ಶಕುಂತಲಾ ಬಗ್ಗೆ ಗೌತಮ್​ಗೆ ಇನ್ನೂ ಗೊತ್ತಾಗಿಲ್ಲ, ಸೀತಾರಾಮದಲ್ಲಿ ಭಾರ್ಗವಿ ಬಗ್ಗೆ ರಾಮ್​ಗೆ ವಿಷಯ ತಿಳಿದಿಲ್ಲ, ಶ್ರೀರಸ್ತು ಶುಭಮಸ್ತುವಿನಲ್ಲಿ ಶಾರ್ವರಿ ಬಗ್ಗೆ ಈಗಷ್ಟೇ ಮಾಧ​ವ್​ಗೆ ತಿಳಿದಿದೆ. ಬ್ರಹ್ಮಗಂಟುವಿನಲ್ಲಿ ಸೌಂದರ್ಯ ಬಗ್ಗೆ ಚಿರುಗೆ ವಿಷ್ಯ ಗೊತ್ತಾಗಿಲ್ಲ... ಹೀಗೆ ಹೀರೋಗಳು ಎಂದರೆ ಮೂರ್ಖರು ಎಂದು ತೋರಿಸುವ ಸೀರಿಯಲ್​ಗಳು ಸುತ್ತಿ ಸುತ್ತಿ ಒಂದೇ ರೀತಿಯ ಕಥೆಗಳನ್ನೇ ನೀಡುತ್ತಿವೆ.

ಇದೀಗ ಸೀತಾರಾಮ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಸಿಹಿಯ ರೂಪದಲ್ಲಿ ಇರುವ ಸುಬ್ಬಿಯ ಸತ್ಯ ಸೀತಾಗೆ ಗೊತ್ತಾಗುವುದು ಬಾಕಿ ಇತ್ತು. ಇನ್ನು ಸುಬ್ಬಿ ತನಗೆ ಸಿಹಿ ಕಾಣಿಸುವುದು, ಆಕೆ ಭಾರ್ಗವಿ ಬಗ್ಗೆ ಹೇಳಿರುವ ಸತ್ಯ ಇಷ್ಟು ಬಾಯಿಬಿಟ್ಟರೆ ಸೀರಿಯಲ್​ ಅಲ್ಲಿಗೆ ಮುಗಿದಂತೆಯೇ. ಭಾರ್ಗವಿಯ ಸತ್ಯ ರಿವೀಲ್​ ಮಾಡಲು ಹೋದ ಅಶೋಕ್​ ಹಲವು ಬಾರಿ ರಾಮ್​ನಿಂದ ತಿರಸ್ಕಾರಕ್ಕೆ ಒಳಗಾಗಿದ್ದು ಇದೆ. ಇದೇ ಕಾರಣಕ್ಕೆ ಸುಬ್ಬಿ ಎಲ್ಲಾ ಸತ್ಯ ಹೇಳಿಬಿಟ್ಟರೆ ಸೀರಿಯಲ್​ ಅಲ್ಲಿಗೇ ಮುಗಿಯುತ್ತದೆ. ಆದರೆ ನಿರ್ದೇಶಕರು ಅಷ್ಟು ಸುಲಭದಲ್ಲಿ ಇದನ್ನು ಮಾಡಲೊಲ್ಲರು. ಟಿಆರ್​ಪಿ ಇರುವವರೆಗೂ ಸುಬ್ಬಿ ಬಾಯಿ ಬಿಡಲ್ಲ ಎನ್ನುವ ಸತ್ಯ ವೀಕ್ಷಕರಿಗೂ ತಿಳಿದದ್ದೇ. ಆದರೆ ಈ ಸೀರಿಯಲ್​ನಲ್ಲಿ ಇನ್ನೊಂದು ವಿಷಯ ಬಯಲಾಗುವುದು ಬಾಕಿ ಇತ್ತು. ಅದು ಇವಳು ಸಿಹಿ ಅಲ್ಲ ಸುಬ್ಬಿ ಎನ್ನುವ ವಿಷಯ ಸೀತಾಗೆ ತಿಳಿಯುವುದು.

Puttakkana Makkalu Serial BTS: ಫಸ್ಟ್​ ನೈಟ್​ನಲ್ಲಿ ಮಂಚ ಮುರಿದ ಕಂಠಿ: ಶೂಟಿಂಗ್​ ವೇಳೆ ಆಗಿದ್ದೇನು ನೋಡಿ- ವಿಡಿಯೋ ವೈರಲ್​

ಅಷ್ಟಕ್ಕೂ ತಮ್ಮ ಮಕ್ಕಳ ಜಾಗದಲ್ಲಿ ಬೇರೊಬ್ಬರು ಬಂದು ಇದ್ದಾಗ ಅವರು ಯಾವುದೇ ರೂಪದಲ್ಲಿ ಇದ್ದರೂ ಅವರು ತಮ್ಮ ಮಕ್ಕಳು ಅಲ್ಲ ಎಂದು ತಾಯಿಗೆ ಅದರಲ್ಲಿಯೂ ಸೀತಾಳಂತ ಅಮ್ಮನಿಗೆ ಗೊತ್ತಾಗಲ್ಲ ಎನ್ನುವುದೇ ಸ್ವಲ್ಪ ವಿಚಿತ್ರವೇ ಸರಿ.  ಆದರೂ ಸೀರಿಯಲ್​ ಅಲ್ವಾ, ಇದನ್ನು ಸಹಿಸಿಕೊಳ್ಳಲೇಬೇಕು. ಇವಳು ಸಿಹಿ ಅಲ್ಲ ಸುಬ್ಬಿ ಎನ್ನುವ ಸತ್ಯ ಆದಷ್ಟು ಬೇಗ ಗೊತ್ತಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅಂತೂ ಆ ಗಳಿಗೆ ಬಂದೇ ಬಿಟ್ಟಿದೆ. ನೀನುಯಾರು ಎಂದು ಸೀತಾ ಕೇಳಿದ್ದಾಳೆ. ಅದಕ್ಕೆ ಸಿಹಿ ಇರುವ ಸತ್ಯವನ್ನು ಹೇಳಿದ್ದಾಳೆ. ನನ್ನ ಬಳಿ ಮಾತನಾಡಬೇಡ ಎಂದು ಸೀತಾ ಸಿಟ್ಟಿನಿಂದ ಹೋಗಿದ್ದಾಳೆ. ಆಗ ಸುಬ್ಬಿ ಸೀತಮ್ಮಾ ನಿನಗೆ ನಾನು ಬೇಡ್ವಾ ಕೇಳಿದ್ದಾಳೆ. ಅದನ್ನು ಕೇಳಿ ಸೀತಾಳ ಕರುಳು ಚುರುಕ್​ ಎಂದಿದೆ. ಎಷ್ಟೆಂದರೂ ಅಮ್ಮನ ಕರುಳಲ್ಲವೆ?

ಸುಬ್ಬಿಯ ಸತ್ಯ ಬಯಲಾಗಿದೆ. ಸೀತಾ ಅಂತೂ ಎಲ್ಲರ ಮೇಲೆ ಒಂದಿಷ್ಟು ಕೋಪ ಮಾಡಿಕೊಂಡು ಸುಬ್ಬಿಯನ್ನು ಒಪ್ಪಿಕೊಳ್ಳುವುದು ದಿಟ. ಬಳಿಕ ಸುಬ್ಬಿ ಸೀತಾಮತ್ತು ರಾಮರ ದತ್ತುಪುತ್ರಿಯಾಗುತ್ತಾಳೆ. ಇನ್ನು ಸುಬ್ಬಿ ಇರುವ ವಿಷಯವನ್ನು ಹೇಳಿದರೆ ಅಲ್ಲಿಗೇ ಸೀರಿಯಲ್​ ಮುಕ್ತಾಯ. ಮೊದಲು ಈ ವಿಷಯ ಪೆದ್ದು ಎಂದೇ ಬಿಂಬಿತ ಆಗಿರೋ ರಾಮ್​ಗೆ ತಿಳಿಯಬೇಕು, ಆ ಬಳಿಕ ಸೀತಾಳಿಗೆ ತಿಳಿಯಬೇಕು. ಇಷ್ಟು ತಿಳಿಯಲು ಇನ್ನೆಷ್ಟು ದಿನ, ತಿಂಗಳು, ವರ್ಷ ಎಳೆಯುತ್ತಾರೋ ಬಹುಶಃ ಆ ನಿರ್ದೇಶಕರಿಗೂ ತಿಳಿದಿಲ್ಲ!


ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!