Puttakkana Makkalu Serial BTS: ಫಸ್ಟ್​ ನೈಟ್​ನಲ್ಲಿ ಮಂಚ ಮುರಿದ ಕಂಠಿ: ಶೂಟಿಂಗ್​ ವೇಳೆ ಆಗಿದ್ದೇನು ನೋಡಿ- ವಿಡಿಯೋ ವೈರಲ್​

Published : May 20, 2025, 12:17 PM ISTUpdated : May 20, 2025, 12:20 PM IST
Puttakkana Makkalu Serial BTS: ಫಸ್ಟ್​ ನೈಟ್​ನಲ್ಲಿ ಮಂಚ ಮುರಿದ ಕಂಠಿ: ಶೂಟಿಂಗ್​ ವೇಳೆ ಆಗಿದ್ದೇನು ನೋಡಿ- ವಿಡಿಯೋ ವೈರಲ್​

ಸಾರಾಂಶ

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಕಂಠಿ ಮತ್ತು ಸ್ನೇಹಾಳ ಮದುವೆ ಮತ್ತು ಮೊದಲ ರಾತ್ರಿಯ ದೃಶ್ಯಗಳನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂಬುದನ್ನು ವಿಡಿಯೋ ತೋರಿಸುತ್ತದೆ. ಮೊದಲ ರಾತ್ರಿಯಲ್ಲಿ ಮಂಚ ಮುರಿಯುವ ದೃಶ್ಯದ ಹಿಂದಿನ ತಂತ್ರಜ್ಞಾನ ಮತ್ತು ಸಿಬ್ಬಂದಿಯ ಪಾತ್ರವನ್ನು ವಿವರಿಸಲಾಗಿದೆ. ಸೀರಿಯಲ್‌ನ ಕಥಾಹಂದರ ಮತ್ತು ಸ್ನೇಹಾಳ ಪಾತ್ರದ ಬದಲಾವಣೆಗಳ ಬಗ್ಗೆಯೂ ಚರ್ಚಿಸಲಾಗಿದೆ.

ಸದ್ಯ ಪುಟ್ಟಕ್ಕನ ಮಕ್ಕಳು ಮುಗಿಯುವ ಹಂತದಲ್ಲಿದೆ. ವಿಲನ್​ ಯಾರು ಎಂದು ತಿಳಿದಿದೆ. ಆ ಸ್ನೇಹಾಳ ಹಾರ್ಟ್​ ಹಾಕಿದ್ದು ಈ ಸ್ನೇಹಾಳಿಗೆ ಎನ್ನುವ ವಿಷಯವೂ ಕಂಠಿ ಸೇರಿದಂತೆ ಎಲ್ಲರಿಗೂ ತಿಳಿದಿದೆ. ರಾಧಾ ಹೇಗಾದರೂ ಮಾಡಿ ಕಂಠಿಯನ್ನು ಮೋಸದಿಂದ ಮದುವೆಯಾಗಲು ಹೋಗಿದ್ದಳು. ಅವಳೂ ಪೊಲೀಸ್​ ವಶಕ್ಕೆ ಸೇರಿದ್ದಾರೆ. ಸ್ನೇಹಾ  ಮತ್ತು ಕಂಠಿಯ ಮದುವೆಯಾಗಿದ್ದು, ಮೊದಲ ರಾತ್ರಿಯೂ ಆಗಿದೆ. ಕಂಠಿ ಮತ್ತು ಸ್ನೇಹಾಳ ಮದುವೆಯಾದ ಮೇಲೆ  ಕಂಠಿ ಸಿಟ್ಟುಮಾಡಿಕೊಂಡು ಮನೆಬಿಟ್ಟು ಹೋದ ಹಾಗೆ ತೋರಿಸಲಾಗಿತ್ತು. ಅಯ್ಯೋ ಸೀರಿಯಲ್​ ಅನ್ನು ಮತ್ತಷ್ಟು ಎಳೆಯುತ್ತಾರಾ ಎಂದುಕೊಳ್ಳುವಾಗಲೇ ಇದಕ್ಕೆ ಸುಖಾಂತ್ಯವನ್ನೂ ಹಾಡಲಾಗಿದೆ.

ಸ್ನೇಹಾ ನಾಚಿಕೆ ಬಿಟ್ಟು ಫಸ್ಟ್​ನೈಟ್​ ಮಾಡಿದ್ರೆ ಎಲ್ಲಾ ಸರಿಯಾಗುತ್ತೆ ಎಂದಿದ್ದಾಳೆ. ಅದರಂತೆ  ಮನೆಯವರು ಎಲ್ಲರೂ ಒಪ್ಪಿದ್ದಾರೆ. ಈ ಸಮಯದಲ್ಲಿಯೂ ಕಂಠಿ ಸ್ನೇಹಾಳ ಮೇಲೆ ಕೋಪ ತೋರಿದ್ದ. ಕೊನೆಗೆ ಅದು ಹುಸಿ ಮುನಿಸು ಎಂದು ತಿಳಿದಿದೆ. ಇನ್ನೇನು ಮೊದಲ ರಾತ್ರಿಯಲ್ಲಿ ಗಂಟ-ಹೆಂಡತಿ ಒಂದಾಗಬೇಕು ಎನ್ನುವಷ್ಟರಲ್ಲಿ ಮಂಚ ಮುರಿದು ಹೋಗಿದೆ. ಹೊರಗೆ ಇದ್ದವರೆಲ್ಲಾ ಜೋರಾಗಿ ನಕ್ಕಿದ್ದಾರೆ. ಅಷ್ಟಕ್ಕೂ ಮೊದಲ ರಾತ್ರಿಯಲ್ಲಿ ಮಂಚ ಮುರಿಯುವಂತೆ ಮಾಡುವುದನ್ನು ಹಲವು ಸೀರಿಯಲ್​ಗಳು, ಸಿನಿಮಾಗಳಲ್ಲಿ ನೋಡಬಹುದು. ಆಗ ನಿಜಕ್ಕೂ ಮಂಚ ಮುರೀತಾರಾ? ಅಲ್ಲಿ ನಡೆಯುವುದು ಏನು? ಆ ದೃಶ್ಯವನ್ನು ಹೇಗೆ ಶೂಟಿಂಗ್​ ಮಾಡುತ್ತಾರೆ ಎನ್ನುವ ಬಗ್ಗೆ ಡಿವಿ ಡ್ರೀಮ್ಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ತೋರಿಸಲಾಗಿದೆ.

ಮದುಮಗಳು ಸ್ನೇಹಾಳಿಂದ ಭರ್ಜರಿ ಡಾನ್ಸ್​- ಹೃದಯ ಜೋಪಾನ ಕಣೇ ಎಂದ ಫ್ಯಾನ್ಸ್​

ಕಂಠಿ ಮತ್ತು ಸ್ನೇಹಾಳ ಮೊದಲ ರಾತ್ರಿಯ ಶೂಟಿಂಗ್​ ಮಾಡಲಾಗಿದೆ. ಇದರಲ್ಲಿ ಮಂಚ ಮುರಿಯುವ ಸೌಂಡ್​ ಮಾಡಲಾಗಿದೆ. ಸೀರಿಯಲ್​ನಲ್ಲಿ ನಮಗೆ ಕಂಠಿ ಮತ್ತು ಸ್ನೇಹಾ ಮಾತ್ರ ಕಾಣಿಸಿದರೆ, ಈ ಒಂದು ದೃಶ್ಯದ ಶೂಟಿಂಗ್​ ಮಾಡುವಾಗ ಅಲ್ಲಿ ಎಷ್ಟೊಂದು ತಂತ್ರಜ್ಞರು ಇರುತ್ತಾರೆ ಎನ್ನುವುದನ್ನು ನೋಡಬಹುದು. ಕಂಠಿ ಮತ್ತು ಸ್ನೇಹಾ ಮಲಗಿದ್ದ ಮಂಚದ ಸುತ್ತಲೂ ಹಲವು ಸಿಬ್ಬಂದಿ ಇದ್ದು ಅವರು ಮಂಚವನ್ನು ಹಿಡಿದುಕೊಂಡಿರುತ್ತಾರೆ, ಹಾಸಿಗೆ ಮೇಲೆಯೇ ಕ್ಯಾಮೆರಾಮನ್​ ಇರುತ್ತಾರೆ. ಆಗ ಸಿಬ್ಬಂದಿಯೇ ಮಂಚವನ್ನು ಮುರಿಯುವ ಸೌಂಡ್​ ಮಾಡುವುದನ್ನು ನೋಡಬಹುದು. 

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಮೊದಲೇ ಹೇಳಿದಂತೆ ಸೀರಿಯಲ್​ ಮುಗಿಯುವ ಲಕ್ಷಣಗಳು ಕಾಣಿಸ್ತಿವೆ. ಮೊದಲ ಸ್ನೇಹಾ ಸತ್ತು ಹೋದ ಸಮಯದಲ್ಲಿ  ಪುಟ್ಟಕ್ಕನ ಮಕ್ಕಳು ಟಿಆರ್​ಪಿ ಕಡಿಮೆಯಾಗುತ್ತಾ ಬಂದಿತ್ತು.  ಅಪಘಾತ ಮಾಡಿಸಿ ಸ್ನೇಹಾಳನ್ನು ಸಾಯಿಸಲಾಯಿತು. ಪುಟ್ಟಕ್ಕ ಒಂಟಿಯಾದ ತನ್ನ ಮಕ್ಕಳನ್ನು ಹೇಗೆ ಬೆಳೆಸಿದಳು, ಆ ಪೈಕಿ ಸ್ನೇಹಾ ಹೇಗೆ ಎಲ್ಲ ಸಮಸ್ಯೆಗಳನ್ನೂ ಹಿಮ್ಮೆಟ್ಟಿ ಜಿಲ್ಲಾಧಿಕಾರಿಯಾದಳು ಎಂದು ತೋರಿಸಿ ಇಂಥ ಹೆಣ್ಣುಮಕ್ಕಳಿಗೆ ಮಾದರಿಯಾಗುವ ಹೊತ್ತಿನಲ್ಲಿಯೇ, ಕೊನೆಯಲ್ಲಿ ಸ್ವಲ್ಪ ತರಾತುರಿ ಮಾಡಿ ಏಕಾಏಕಿ ಸ್ನೇಹಾಳನ್ನು ಸಾಯಿಸಿದ್ದು ಏಕೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇಡೀ ಸೀರಿಯಲ್​ನ ಉದ್ದೇಶವನ್ನೇ ನಿರ್ದೇಶಕರು ಬುಡಮೇಲು ಮಾಡಿದರು ಎನ್ನುವ ಮಾತೂ ಸಾಕಷ್ಟು ಕೇಳಿ ಬಂದಿತ್ತು. ಅನಿವಾರ್ಯವಾಗಿ ನಾನು ಸೀರಿಯಲ್​ ಸೆಟ್​ನಿಂದ ಹೊರಕ್ಕೆ ಹೋಗಬೇಕಾಯಿತು. ಇದು ನನ್ನ ವೈಯಕ್ತಿಕ ಕಾರಣ ಎನ್ನುವ ಮೂಲಕ ಉದ್ದೇಶಪೂರ್ವಕವಾಗಿ ಸ್ನೇಹಾಳನ್ನು ಸಾಯಿಸುವ ಸೀನ್​ ಮಾಡಬೇಕಾಯಿತು, ಕಥೆಯನ್ನು ಬದಲಿಸಬೇಕಾಯಿತು ಎಂದೆಲ್ಲಾ ಹೇಳಿದ್ದರು. ಕೊನೆಯ ಬಂದ ಸ್ನೇಹಾಳನ್ನೂ ತೆಗೆದು ಆ ಜಾಗಕ್ಕೆ ಮತ್ತೊಬ್ಬ ಸ್ನೇಹಾಳನ್ನು ತಂದರು. ಒಟ್ಟಿನಲ್ಲಿ ಸೀರಿಯಲ್​ ಸಾಕು, ಮುಗಿಸಿ ಎನ್ನುತ್ತಿದ್ದಾರೆ ವೀಕ್ಷಕರು. 

ಸೀರಿಯಲ್​ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್​ ಶಾಕ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!